Difference between revisions 1031920 and 1031921 on knwiki

{{Infobox Writer
<!-- For template details please see Template:Infobox Writer -->
| name        = ಜಿ. ವೆಂಕಟಸುಬ್ಬಯ್ಯ
| image       = G_Venkatasubbaiah.jpg
| imagesize   =200px
| caption      =
| pseudonym   =
| birth_date  = ೨೩-೦೮-೧೯೧೩
| birth_place = [[ಮೈಸೂರು]]
| death_date  = ೧೯ ಏಪ್ರಿಲ್, ೨೦೨೧
| death_place = ಬೆಂಗಳೂರು
| occupation  = ಭಾಷಾತಜ್ಞ, ಕನ್ನಡ ನಿಘಂಟು ತಜ್ಞ, ಬರಹಗಾರ, ಸಂಶೋಧಕ, ಶಿಕ್ಷಕ, ಚಿಂತಕ,
| nationality = ಭಾರತೀಯ
| period      = 20ನೇ ಶತಮಾನ
| genre       = 
| subject     = [[ಕನ್ನಡ ಸಾಹಿತ್ಯ]] 
| movement    = 
| debut_works = 
| notableworks  = [[ಇಗೋ ಕನ್ನಡ]]
| spouse      =  ಲಕ್ಷ್ಮಿ 
| children    =  ೪
| influences  = [[ಪು.ತಿ.ನರಸಿಂಹಾಚಾರ್]], [[ಬಿ.ಎಂ.ಶ್ರೀ]], [[ಕುವೆಂಪು]]
| influenced  =
| awards     = [[ಪದ್ಮಶ್ರೀ]] (೨೦೧೭), [[ಭಾಷಾ ಸಮ್ಮಾನ್‌]](೨೦೧೮)
| signature   = 
| website     = 
| footnotes   = 
}}

'''ಪ್ರೊ|| ಜಿಗಂಜಾಂ ವೆಂಕಟಸುಬ್ಬಯ್ಯ''' (೨೩,ಆಗಸ್ಟ್,೧೯೧೩-೧೯,ಏಪ್ರಿಲ್,೨೦೨೧) ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ತಜ್ಞರು. ಇವರ '[[ಇಗೋ ಕನ್ನಡ]]' ಎಂಬ [[ಪ್ರಜಾವಾಣಿ]] ಅಂಕಣ ಸಮಸ್ತ ಕನ್ನಡಿಗರಿಗೆ ಪರಿಚಿತವಾಗಿದೆ. ೧೯೯೧ ರಿಂದ ವೆಂಕಟಸುಬ್ಬಯ್ಯನವರು ಈ ಅಂಕಣದ ಮೂಲಕ ಕನ್ನಡ ಭಾಷೆಯ ಪದಗಳನ್ನು ಓದುಗರಿಗೆ ಹತ್ತಿರಗೊಳಿಸಿದವರು. ಇವರ ಭಾಷಾ ಸಾಹಿತ್ಯ ಕೊಡುಗೆಗೆ ೨೦೦೫ರಲ್ಲಿ, ಹಂಪೆ ವಿಶ್ವವಿದ್ಯಾಲಯವು ಇವರಿಗೆ ಪ್ರತಿಷ್ಠಿತ [[ನಾಡೋಜ ಪ್ರಶಸ್ತಿ]]ಯನ್ನು ನೀಡಿದೆ. ಇವರು ಬೆಂಗಳೂರಿನಲ್ಲಿ ನಡೆದ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. <ref>[https://starofmysore.com/kannada-linguist-grammarian-teacher-writer-and-lexicographer-g-venkatasubbiah-turns-107/ Kannada Linguist, Grammarian, Teacher, Writer And Lexicographer… G. Venkatasubbiah Turns 107 Aug 23, 2020] </ref>

==ಜೀವನ==
೧೯೧೩ರಲ್ಲಿ ಮೈಸೂರಿನಲ್ಲಿ ಜನಿಸಿದ ವೆಂಕಟಸುಬ್ಬಯ್ಯನವರು, ಮೈಸೂರಿನಲ್ಲಿಯೆ ಬೆಳೆದವರು. ಇವರ ತಂದೆ [[ಗಂಜಾಂ ತಿಮ್ಮಣ್ಣಯ್ಯ]]ನವರು  ಸಂಸ್ಕೃತ ಹಾಗು ಕನ್ನಡದ ವಿದ್ವಾಂಸರಾಗಿದ್ದರು. ೧೯೩೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿಯನ್ನು ಪಡೆದ ಇವರಿಗೆ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ [[ಸುವರ್ಣಪದಕ]]ವನ್ನು ಬಹುಮಾನವಾಗಿ ಕೊಡಲಾಯಿತು. ಮುಂದೆ ಇವರು ಬಿ.ಟಿ. ಪದವಿಯನ್ನೂ ಕೂಡ ಪಡೆದರು. ೧೯೩೯ ರಿಂದ ಪ್ರಾರಂಭಿಸಿ ಸುಮಾರು ೪೦ ವರ್ಷಗಳ ಕಾಲ ಇವರು [[ಶಿಕ್ಷಣ]] ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವರು.<ref>[http://www.deccanherald.com/content/276167/teacher-par-excellence.html  Teacher par(contracted; show full)

[[ವರ್ಗ:ಸಾಹಿತಿಗಳು|ಜಿ.ವೆಂಕಟಸುಬ್ಬಯ್ಯ]]
[[ವರ್ಗ:ನಾಡೋಜ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು]]
[[ವರ್ಗ:೧೯೧೩ ಜನನ]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು]]