Difference between revisions 1037645 and 1047559 on knwiki

{{ಚುಟುಕು}}
[[Image:India Karnataka Raichur district.svg|thumb|ರಾಯಚೂರು, [[ಕರ್ನಾಟಕ]]]]

'''ರಾಯಚೂರು''' [[ಕರ್ನಾಟಕ]] ರಾಜ್ಯದ  ಉತ್ತರ ಭಾಗದಲ್ಲಿರುವ ಪ್ರಮುಖ [[ಜಿಲ್ಲೆ]]. ರಾಯಚೂರು ಜಿಲ್ಲೆಯ ಜನಸಂಖ್ಯೆ [[೨೦೧೧]] ರ ಜನಗಣತಿಯಂತೆ ೧೯,೨೮,೮೧೨. ರಾಯಚೂರು ಜಿಲ್ಲೆಯಲ್ಲಿ 8 ತಾಲೂಕುಗಳಿವೆ: ರಾಯಚೂರು, [[ದೇವದುರ್ಗ]], [[ಸಿಂಧನೂರು]], [[ಮಾನವಿ]] ಸಿರವಾರ, ಮಸ್ಕಿ.,  ,[[ಲಿಂಗಸೂಗೂರು]]. ಮತ್ತು ಅರಕೇರಾ ತಾಲೂಕು ಗಳು,  ಈ ಜಿಲ್ಲೆಯ [[ಜಿಲ್ಲಾಕೇಂದ್ರ]] ರಾಯಚೂರು ನಗರ. ಇದು [[ಬೆಂಗಳೂರು|ಬೆಂಗಳೂರಿನಿಂದ]] ೪೦೯ [[ಕಿಮೀ]] ದೂರದಲ್ಲಿದೆ.  

== ಇತಿಹಾಸ ==
ಭಾರತದ ಸ್ವಾತಂತ್ರ ಹೋರಾಟ ಮತ್ತು ನಂತರದ  ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಈ ಜಿಲ್ಲೆಯ ಜನತೆಯ ಪಾತ್ರ ಪ್ರಮುಖವಾದುದು.  ರಾಯಚೂರು ಕೋಟೆ ರಾಯಚೂರು ನಗರದ ಚಾರಿತ್ರಿಕ ಆಕರ್ಷಣೆಗಳಲ್ಲಿ ಒಂದು - ಇದನ್ನು ೧೨೯೪ ರಲ್ಲಿ ಕಟ್ಟಲಾಯಿತು. ರಾಯಚೂರಿನ ಇನ್ನೊಂದು ವಿಶೇಷತೆಯೆಂದರೆ ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ಸಾಮ್ರಾಜ್ಯಗಳ ಅರಸರ ಕಾಲದಲ್ಲಿ ಈ ಪ್ರದೇಶ ಹೋರಾಟದ ಅಂಗಳವೂ ಆಗಿತ್ತೆನ್ನಬಹುದು.

== ಭೌಗೋಳಿಕ ಲಕ್ಷಣಗಳು ==
ಜಿಲ್ಲೆಯ ದಕ್ಷಿಣದಲ್ಲಿ ತುಂಗಭದ್ರಾ ನದಿ ಹಾಗೂ ಉತ್ತರದಲ್ಲಿ ಕೃಷ್ಣಾ ನದಿಯು ಹರಿಯುತ್ತಿದ್ದು, ಬಹುತೇಕ ಬಯಲು ಪ್ರದೇಶವನ್ನು ಹೊಂದಿದೆ. ಲಿಂಗಸೂಗೂರು, ದೇವದುರ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಚಿನ್ನದ ಅದಿರಿನ ನಿಕ್ಷೇಪಗಳಿವೆ.

== ಹವಾಗುಣ ==
ಜಿಲ್ಲೆಯ ಹವಾಗುಣವು ಬಹುತೇಕ  ಒಣ  ಹವೆ ಇರುತದೆ ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ೪೫ ಡಿಗ್ರಿವರೆಗೆ ಉಷ್ಣತೆ ಇರುತ್ತದೆ.

==ಜಿಲ್ಲೆಯ ಪ್ರಮುಖರು==  
*ಶ್ರೀ ಚನ್ನಬಸವಪ್ಪ ಬೆಟ್ಟದೂರು, ಹಿರಿಯ  ಸ್ವಾತಂತ್ರ ಹೋರಾಟಗಾರರು, ರೈತ ಹೋರಾಟಗಾರರು, ವಿಚಾರವಾದಿಗಳು
*ಶ್ರೀ ಶಂಕರಗೌಡ ಬೆಟ್ಟದೂರು, ಹಿರಿಯ  ಸ್ವಾತಂತ್ರ ಹೋರಾಟಗಾರರು, ಚಿತ್ರ ಕಲಾವಿದರು
*ಶ್ರೀ ಶಿವರಾಜ ಪಾಟೀಲ್ , ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರು
*ಶ್ರೀ ಜೆ.ಎಚ್.ಪಾಟೀಲ್,ನಿವೃತ್ತ ಕಾನೂನು ಉಪಕುಲಪತಿಗಳು.
*ಶ್ರೀ ಡಾ. ಪಂ. ನರಸಿಂಹಲು ವಡವಾಟಿ, ವಿಶ್ವ ವಿಖ್ಯಾತ ಕ್ಲಾರಿಯೋನೆಟ್ ವಾದಕರು, ಮಾಜಿ ಅಧ್ಯಕ್ಷರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ.
*ಶ್ರೀಮತಿ ವಡವಾಟಿ ಶಾರದಾ ಭರತ್, ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರು, ರಾಜ್ಯದ ಖ್ಯಾತ ವಚನ ಸಂಗೀತ ಗಾಯಕರು, ಸದಸ್ಯರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ.

== ಪ್ರಾಮುಖ್ಯತೆ  ==
* ರಾಯಚೂರು ಜಿಲ್ಲೆಯ [[ಶಕ್ತಿನಗರ|ಶಕ್ತಿನಗರದಲ್ಲಿ]] ಇರುವ [[ಶಾಖೋತ್ಪನ್ನ ವಿದ್ಯುತ್|ಶಾಖೋತ್ಪನ್ನ ವಿದ್ಯುತ್‌ಸ್ಥಾವರ]] [[ಕರ್ನಾಟಕ|ಕರ್ನಾಟಕದಲ್ಲಿ]] ಬಳಸಲ್ಪಡುವ [[ವಿದ್ಯುಚ್ಛಕ್ತಿ | ವಿದ್ಯುಚ್ಛಕ್ತಿಯ]] ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. 
* [[ಲಿಂಗಸೂಗೂರು]] ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯು ದೇಶದಲ್ಲಿಯೇ ಅತಿ ಹೆಚ್ಚು ಚಿನ್ನದ ಅದಿರು ಹೊಂದಿರುವ ಗಣಿಯಾಗಿದೆ. ಅಶೋಕನ ಕಾಲದ ಮಸ್ಕಿ ಶಾಸನ ದೊರೆತಿರುವುದು ಇದೇ ತಾಲೂಕಿನ ಮಸ್ಕಿಯಲ್ಲಿದೆ. ಇದೇ ಶಾಸನದಲ್ಲಿ ''ದೇವನಾಂಪ್ರಿಯಸ ಅಸೋಕಸ'' ಎನ್ನುವ ಪ್ರಸಿದ್ಡ ಸಾಲಿದೆ. 
* [[ಸಿಂಧನೂರು]] ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಭತ್ತ ಬೆಳೆಯುವ ಪ್ರದೇಶವಾಗಿದೆ. 
* ಲಿಂಗಸೂಗೂರು ತಾಲ್ಲೂಕಿನ [[ಮುದುಗಲ್]] ನಲ್ಲಿ ಐತಿಹಾಸಿಕ ಕೋಟೆ ಇದ್ದು, ಮೊಹರಂ ಆಚರಣೆ ವಿಜೃಂಭಣೆಯಿಂದ ಜರಗುತ್ತದೆ.ಹಾಗೂ  ಲಿಂಗಸೂಗೂರು ತಾಲ್ಲೂಕಿನ ಮಸ್ಕಿ ಗ್ರಾಮದಲ್ಲಿ ಅಶೋಕನ ಶೀಲಾಶಾಸನ ದೊರತಿದೆ.
* [[ಜಲದುರ್ಗ|ಜಲದುರ್ಗದಲ್ಲಿರುವ]] ಕೋಟೆ, ಅತ್ಯಂತ ವಿಶೇಷವಾಗಿ ನಿರ್ಮಿಸಲಾದ ಕೋಟೆಗಳಲ್ಲಿ ಒಂದಾಗಿದೆ.
* [[ಮಂತ್ರಾಲಯ|ಮಂತ್ರಾಲಯವು]] ರಾಯಚೂರಿನಿಂದ ಹತ್ತಿರದಲ್ಲಿದೆ.
* [[ಮಾನವಿ]]ಕೊನೆಯ ತಾಲೂಕು.ಈ ಮಾನವಿಯಲ್ಲಿ ದಾಸ ಸಾಹಿತ್ಯ ಉಗಮವಾಗಿದ್ದು. ವಿಜಯ ದಾಸರು ಮಾನವಿ ತಾಲೂಕಿನವರು.

==ಇದನ್ನೂ ನೋಡಿ==
*[[ರಾಯಚೂರು (ಲೋಕ ಸಭೆ ಚುನಾವಣಾ ಕ್ಷೇತ್ರ)]]

== ಬಾಹ್ಯ ಅಂತರ್ಜಾಲ ಸಂಪರ್ಕಗಳು ==
{{commons category|Raichur}}
*[http://www.raichur.nic.in ರಾಯಚೂರು ಜಿಲ್ಲೆಯ ಅಧಿಕೃತ ತಾಣ]
*[http://www.raichurcity.gov.in  ರಾಯಚೂರು ನಗರದ  ಅಧಿಕೃತ ತಾಣ]
*[http://www.mapsofindia.com/maps/karnataka/districts/raichur.htm ರಾಯಚೂರು ಜಿಲ್ಲೆಯ ನಕ್ಷೆ]

[[Category: {{ಕರ್ನಾಟಕದ ಜಿಲ್ಲೆಗಳು}}

[[ವರ್ಗ:ಕರ್ನಾಟಕದ ಜಿಲ್ಲೆಗಳು]]
[[ವರ್ಗ:  ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ:  ರಾಯಚೂರು ಜಿಲ್ಲೆ]]
{{ಕರ್ನಾಟಕದ ಜಿಲ್ಲೆಗಳು}}
[[ವರ್ಗ:ಚುಟುಕು]]