Difference between revisions 1119319 and 1119322 on knwiki

''' ಸಿರ್ಸಿ ಮಾರಿಕಾಂಬಾ ಜಾತ್ರೆ''' [[ಉತ್ತರ ಕನ್ನಡ]] ಜಿಲ್ಲೆಯ [[ಸಿರ್ಸಿ|ಸಿರ್ಸಿಯಲ್ಲಿ]] ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಮಹೋತ್ಸವ. ಸಾಮಾನ್ಯವಾಗಿ [[ಮಾರ್ಚ್]] ತಿಂಗಳಿನಲ್ಲಿ ನಡೆಯುತ್ತದೆ. ಮುನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದು ಬರುತ್ತಿರುವ ಈ ಜಾತ್ರೆಯನ್ನು [[ಭಾರತ|ಭಾರತದ]] ಅತಿ ದೊಡ್ಡ ಜಾತ್ರೆ ಎಂದು ಹೇಳಲಾಗುತ್ತದೆ.

== ಇತಿಹಾಸ ==
ಅಂದಿನ ''ವಿರಾಟ ನಗರ''ವಾಗಿದ್ದ ಈಗಿನ [[ಹಾನಗಲ್|ಹಾನಗಲ್‌ಲಿನಲ್ಲಿ]] [[ಧರ್ಮರಾಯ|ಧರ್ಮರಾಯನು]] ದೇವಿಯನ್ನು ಸ್ತುತಿಸಿದನು ಎಂದು [[ಮಹಾಭಾರತ|ಮಹಾಭಾರತದಲ್ಲಿ]] ಹೇಳಲಾಗಿದೆ. [[ಚಾಲುಕ್ಯ|ಚಾಲುಕ್ಯರ]] ಕಾಲದ ಶಾಸನದಲ್ಲಿ ಕೂಡ ಇದರ ಉಲ್ಲೇಖವಿದೆ.

ಹಾನಗಲ್ಲಿನಲ್ಲಿ ಜಾತ್ರೆ ಮುಗಿದ ನಂತರ ಆಭರಣಗಳ ಸಮೇತವಾಗಿ ದೇವಿಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಇಟ್ಟಿದ್ದರು. ಅದನ್ನು ಕೆಲವು ಕಳ್ಳರು ಅಪಹರಿಸಿ ಶಿರಸಿಗೆ ತಂದರು. ಆಭರಣಗಳನ್ನು ಹಂಚಿಕೊಂಡ ನಂತರ ಆ ವಿಗ್ರಹವನ್ನು ಪೆಟ್ಟಿಗೆಯಲ್ಲಿಟ್ಟು ಕೆರೆಗೆ ಎಸೆದರು. ಆ ಕೆರೆಯು [[ಸಿರ್ಸಿ|ಸಿರ್ಸಿ]]ಯ ''ದೇವಿಕೆರೆ'' ಎಂದು ಹೆಸರಾಗಿದೆ.

''ಬಸವ'' ಎಂಬ ಭಕ್ತನೊಬ್ಬ ಪ್ರತಿ ವರ್ಷ [[ಚಂದ್ರಗುತ್ತಿ|ಚಂದ್ರಗುತ್ತಿಯ]] ಜಾತ್ರೆಗೆ ಹೋಗುತ್ತಿದ್ದ. ಆದರೆ ಒಂದು ಬಾರಿ ಅವನನ್ನು ಜನರು ತಡೆದು ಪೀಡಿಸಿದರು. ಅದರಿಂದ ಬೇಸರಗೊಂಡು ಅವನು ಮುಂದಿನ ವರ್ಷ ಜಾತ್ರೆಗೆ ಹೋಗದೆ ಿರಸಿಯಲ್ಲಿಯೇ ದೇವಿಯ ಆರಾಧನೆ ಮಾಡಿದನು. ಒಂದು ರಾತ್ರಿ ದೇವಿ ಅವನಿಗೆ ''ನಾನು ದ್ಯಾಮವ್ವ. ನಾನು ನಿಮ್ಮ ಊರಿನ ಕೆರೆಯಲ್ಲಿದ್ದೇನೆ. ನನ್ನನ್ನು ಮೇಲೆತ್ತು'' ಎಂದು ಹೇಳಿದಂತೆ [[ಕನಸು]] ಬಿತ್ತು. ಅವನು ಅದನ್ನು ಆ ಊರಿನ ಪ್ರಮುಖರಿಗೆ ತಿಳಿಸಿದನು. ಅದರಂತೆ ಊರವರು ಕೆರೆಯ ಸುತ್ತ ಸೇರಲಾಗಿ ಬಸವನು ಮೂರು ಸುತ್ತು ಕೆರೆಯನ್ನು ಸುತ್ತಿ ದೇವಿಯನ್ನು ಸ್ತುತಿಸಿದನು. ಕೆರೆಯ ಮೇಲೆ ತೇಲುತ್ತಿರುವ ಪೆಟ್ಟಿಗೆಯು ಕಂಡುಬಂದಿತು. ಅದರಲ್ಲಿನ ವಿಗ್ರಹದ ಭಾಗಗಳನ್ನು ಒಟ್ಟು ಸೇರಿಸಲಾಗಿ ದೇವಿಯ ವಿಗ್ರಹವು ಮೂಡಿಬಂದಿತು.

[[ನಂದಿಕೇಶ್ವರ ಮಠ|ನಂದಿಕೇಶ್ವರ ಮಠದ]] ಸ್ವಾಮಿಗಳು ದೇವಿಯ ವಿಗ್ರಹವನ್ನು ಿರಸಿಯಲ್ಲಿ ಸ್ಥಾಪಿಸಲು ಅನುಮತಿ ಕೋರಿ [[ಸೋಂದಾ]] ಸಂಸ್ಥಾನದ ರಾಜರಾಗಿದ್ದ [[ಮಹಾರಾಜಾ ಸದಾಶಿವರಾವ್ ೨]] ಅವರನ್ನು ಕೇಳಿದರು. ಅದರಂತೆ ಕ್ರಿ.ಶ. [[೧೬೮೯|೧೬೮೯ರಲ್ಲಿ]], ಅಂದರೆ [[ಶಾಲಿವಾಹನ ಶಕೆ]] ೧೬೧೧ರ ಶುಕ್ಲ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿಯಂದು, ಮಂಗಳವಾರ ದೇವಿಯನ್ನು ಈಗಿನ ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.<ref>http://kanarasaraswat.in/Admin/Master/MagzineDocs.aspx?MagzineID=9b867d28-3a80-417c-a38a-6231b61a7c0f&FileName=sep2010.pdf{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>

(contracted; show full)==ಜಾತ್ರೆಯ ವಿಶೇಷ==
ಅನೇಕ ಯಕ್ಷಗಾನ ಮೇಳಗಳು, ಸರ್ಕಸ್ ಕಂಪೆನಿಗಳು, ಜಾತ್ರೆಯ ಸಮಯದಲ್ಲಿ ಬರುತ್ತವೆ. ಖಾನಾವಳಿಗಳು, ದರ್ಶಿನಿಗಳು, ಹಾಗೂ ಹಲವಾರುಬಗೆಯ ಮನರಂಜನೆಯ ಸಾಧನಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ.

==ಉಲ್ಲೇಖಗಳು ==
{{reflist}}
{{ಚುಟುಕು}}

[[ವರ್ಗ:ಜಾತ್ರೆ]]