Difference between revisions 290894 and 290895 on knwiki{{merge from|ಪುಟ}} <big>'''ಈಶೋಪನಿಷತ್ತು'''</big> ((ಕನ್ನಡ ಭಾವಾನುವಾದ ಮತ್ತು ವ್ಯಾಖ್ಯಾನ : [[ಬಿ.ಎಸ್.ಚಂದ್ರಶೇಖರ]] [[ಸಾಗರ]] ; ೨೨-೯-೨೦೦೯/2-1-2012) ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು [[ಉಪನಿಷತ್ತುಗಳು]], ವೇದದ ಅಂಗಗಳಾದ [[ಬ್ರಾಹ್ಮಣ]],ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ [[ಈಶಾವಾಸ್ಯೋಪನಿಷತ್ತು]] ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು. ಅದಕ್ಕೆ ಈಶೋಪನಿಷತ್ತು ಎಂಬ ಹೆಸರೂ ಇದೆ. ಇದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ. [[ಭಗವದ್ಗೀತೆ]] ಇದರ ವಿಸ್ತಾರ ರೂಪ ಎಂಬ ಅಭಿಪ್ರಾಯವಿದೆ. (contracted; show full) === ಮಂತ್ರ ೧೮ :=== ---------------- * ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ | * ವಿಶ್ವಾನಿ ದೇವ ವಯುನಾನಿ ವಿದ್ವಾನ್ || * ಯುಯೋದ್ಧ್ಯಸ್ಮಜ್ಜುಹುರಾಣುಮೇನೋ | * ಭೂಯಿಷ್ಠಾಂತೇ ನಮಃ ಉಕ್ತಿಂ ವಿಧೇಮ || * ಪದ್ಯ ೧೮ ; ⏎ *ಓ ಬೆಳಕೆ, ನಡೆಸೆಮ್ಮ ಸನ್ಮಾರ್ಗದಲಿ | * ಜಗದ ಜೀವನವು ಒಳಿತು ಕೆಡುಕುಗಳಾಗರವು || * ವಿಶ್ವ ತತ್ವಜ್ಞನು ನೀನು, ದುರಿತವನು ದೂರವಿಡು | * ನಾವೆರಗುವೆವು ನೆಲಬಗ್ಗಿ ವಿನಯದಲಿ ನಿನಗೆ || * (ಓ ಬೆಳಕೆ ನಡೆಸು ಎಮ್ಮ-ಎಮ್ಮನು-ನಮ್ಮನ್ನು, ಸನ್ಮಾರ್ಗದಲಿ , ಜಗದ ಜೀವನವು ಒಳಿತು ಕೆಡಕುಗಳ ಆಗರವು,ವಿಶ್ವ ತತ್ವಜ್ಞನು ನೀನು, ದುರಿತವನು-ಕೆಟ್ಟದ್ದನ್ನು ದೂರವಿಡು, ನಾವು ಎರಗುವೆವು ನೆಲಬಗ್ಗಿ-ಸಾಷ್ಟಾಂಗ, ವಿನಯದಲಿ ನಿನಗೆ) * ಅಗ್ನೇ ಎಂಬುದನ್ನು ಓ ಬೆಳಕೇ ಎಂದು ಅನುವಾದಿಸಿದೆ. ಸಾಧಕನು ಅಮೃತದೆಡೆಗೆ ದೇಹಾತೀತನಾಗಿ ಹೋಗುವಾಗ ಮಾಡುವ ಪ್ರಾರ್ಥನೆ ಎಂದು ಅರ್ಥ ಮಾಡುತ್ತಾರೆ. ಆದರೆ ಸಾಧಕ ಅದೇ ನಾನು ಎಂಬ ಜ್ಞಾನ ವಾದಮೇಲೆ ಮಾಡುವ ಸಾಮೂಹಿಕ ಪ್ರಾರ್ಥನೆ ಎನ್ನಬಹುದು. ಜಗದ ಹಿತ ಸಾಧನೆಗ ಜ್ಞಾನಿಯಾದವನು ನೂರುಕಾಲ ಬಾಳಲು ತನ್ನನ್ನೂ ತನ್ನ ಜೊತೆಯಲ್ಲಿರುವವರನ್ನೂ ಇನ್ನು ಮುಂದೆಯೂ ಸನ್ಮಾರ್ಗದಲ್ಲಿ, ಸತ್ಯ ಧರ್ಮದ ಮಾರ್ಗದಲ್ಲಿ ನಡೆಸ ಬೇಕೆಂದು ಅಗ್ನಿಯನ್ನೇ ಶರೀರವಾಗಿ ಹೊಂದಿರುವ ಅಥವಾ ಬೆಳಕಿನ ರೂಪವಾಗಿರುವ ಭಗವಂತನಿಗೆ, ಮಾಡಿದ ಸಾಮೂಹಿಕವಾದ ಪ್ರಾರ್ಥನೆ ಇದು. ವಿಶ್ವದ ಸಕಲ ತತ್ವಗಳನ್ನೂ ತಿಳಿದಿರುವ ಭಗವಂತನಿಗೆ ಶರಣಾಗತಿಯ ಸಾಷ್ಟಾಂಗ ನಮಸ್ಕಾರ. ಭಕ್ತನು ಜ್ಞಾನಿಯಾದರೂ, ಪರಮಾತ್ಮನಲ್ಲಿ ಏಕೀಭಾವ ಹೊಂದಿದರೂ ಆತನು ಜಗದೀಶ್ವರನಾಗಲು ಸಾಧ್ಯವಿಲ್ಲ. ಯಜ್ಞದ ಕೊನೆಯಲ್ಲಿ ಸಾಮೂಹಿಕವಾಗಿ ಈ ಪ್ರಾರ್ಥನೆ ಮಾಡುವುದು ಸಾಮಾನ್ಯವಾಗಿದೆ. ಕೊನೆಯ ಸಾಲನ್ನು ಎರಡು ಬಾರಿ ಹೇಳವುದು ವಾಡಿಕೆ. ಕೊನಯಲ್ಲಿ ಪುನಃ ಶಾಂತಿ ಮಂತ್ರ ವನ್ನು ಹೇಳಿ ಮಕ್ತಾಯ ಮಾಡುವುದು ಪದ್ಧತಿ. * ( ಈಮಂತ್ರಗಳ ಮೊದಲ ದೃಷ್ಟಾರ ಶತರೂಪಾದೇವಿಯ ಪತಿಯಾದ ಋಷಿ ಸ್ವಾಯಂಭೂ ಮನುವೆಂದೂ, ನಂತರ ಅಥರ್ವಣ, ಯಾಜ್ಞವಲ್ಕ್ಯ , ಕಣ್ವ, ಮಾಧ್ಯಂದಿನ ಮುನಿಗಳು ಈ ಮಂತ್ರಗಳ ಉಪದೇಶ, ದರ್ಶನ ಪಡೆದರೆಂದು ಹೇಳುತ್ತಾರೆ. - ಬನ್ನಂಜೆ ಗೋವಿಂದಚಾರ್ಯ ರು) ⏎ ⏎ === ಶಾಂತಿ ಮಂತ್ರ ಪುನರ್ವಾಚನ === --------------------------- * ಓಂ ಪೂರ್ಣಮದಃ ಪೂರ್ಣಮಿದಂ * ಪೂರ್ಣಾತ್ಪೂರ್ಣಮುದಚ್ಯತೇ | * ಪೂರ್ಣಸ್ಯ ಪೂರ್ಣಮಾದಾಯ || * ಪೂರ್ಣಮೇವಾವಶಿಷ್ಯತೇ | * ಓಂ ಶಾಂತಿಃ ಶಾಂತಿಃ ಶಾಂತಿಃ || ===== ಆಧಾರ:===== ---------- * ೧. ಈಶಾವಾಸ್ಯೋಪನಿಷತ್ , ಶಂಕರ ಭಾಷ್ಯ. * ೨. ಈಶಾವಾಸ್ಯ ವೃತ್ತಿ - ಶ್ರೀ ವಿನೋಬಾ ಭಾವೆ * ೩. ಅನುವಾದ ಮತ್ತು ವ್ಯಾಖ್ಯಾನ [[ಬಿ.ಎಸ್.ಚಂದ್ರಶೇಖರ]] [[ಸಾಗರ]] (ಕಾಪೀ ರೈಟಿನಿಂದ ಮುಕ್ತ) ===== ನೋಡು:===== -------------- ಈಶಾವಾಸ್ಯೋಪನಿಷತ್ - ಸ್ವಾಮಿ ಆದಿದೇವಾನಂದ ------------ [[ಈಶಾವಾಸ್ಯೋಪನಿಷತ್]] [[Wikipedia:ಈಶಾವಾಸ್ಯ ಉಪನಿಷತ್]] Bschandrasgr ೦೭:೩೬, ೬ ಜನವರಿ ೨೦೧೨ (UTC) * ವರ್ಗ: [[ಹಿಂದೂ ಧರ್ಮ]] | [[ಉಪನಿಷತ್ತುಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=290895.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|