Difference between revisions 293540 and 294988 on knwiki


ಮಕ್ಕಳ ಸಾಹಿತ್ಯ

=== ಕಥೆ ===
*ಮಕ್ಕಳ ಕಥೆಗಳಲ್ಲಿ ಬಹಳ ಹಿಂದಿನಿಂದ ಮಕ್ಕಳಿಗೆ ಹೇಳುತ್ತಾ ಬಂದ ಜಾನಪದ ಕಥೆ ,ಕಾಗಕ್ಕ ಗುಬ್ಬಕ್ಕನ ಕಥೆ ಬಹಳ ಪ್ರಸಿದ್ಧವಾದುದು. ಮತ್ತು ಜನಪ್ರಿಯವಾದುದು.  ಈಕಥೆಯನ್ನು ೩ ರಿಂದ ೬-೭ ವಯಸ್ಸಿನವರೆಗಿನ ಮಕ್ಕಳು ಬಹಳ ಇಷ್ಟ ಪಡುತ್ತಾರೆ.  ಮಕ್ಕಳಿಗೆ ವಾಸ್ತವತೆಗಿಂತ ರಸ ಭಾವಗಳೇಮುಖ್ಯ. ಸಂಭಾಷಣೆ ಇದ್ದರೆ ಮಕ್ಕಳಿಗೆ ಕೇಳಲು ಇಷ್ಟ. ಕೇಳಿದ್ದನೇ ಮತ್ತೆ ಮತ್ತೆ ಕೇಳುವುದು ಚಿಕ್ಕ ಮಕ್ಕಳಿಗೆ ಬಹಳ ಇಷ್ಟ .  ಆದರೆ ಮಕ್ಕಳು ಈ ಕಥೆಯನ್ನು ಪೂರ್ತಿಯಾಗಿ ಕೇಳಿರುವುದು ವಿರಳ. ಈಬಗೆಯ ಕಥೆಗಳನ್ನು ಮಕ್ಕಳಿಗೆ ಮಲಗಿಸಿ ನಿದ್ದೆ ಬರುವವರೆಗೆ ಹೇಳುವುದು ರೂಢಿ. ಸಾಮಾನ್ಯವಾಗಿ ಕಥೆಯು ಅರ್ಧಆಗಿರುವಾಗಲೇ ಮಕ್ಕಳಿಗೆ ನಿದ್ದ(contracted; show full)
*ಪುನಃ ಗುಬ್ಬಕ್ಕ : ಕಾಗಕ್ಕಾ ಅದೇನುಸದ್ದು -ಢಬ್ - ಎಂದಿತಲ್ಲಾ ಎಂದು  ಕೋಣೆ ಯಿಂದ ಕೂಗಿ ಕೇಳಿತು.
*ಕಾಗಕ್ಕ : ನಾನು ಬರುವಾಗ ಮೂರು ಹಲಸಿನ ಬೀಜ ತಂದಿದ್ದೆ ಎರಡನೇ ಬೀಜ ಒಲೆಗೆ ಹಾಕಿದಾಗ, ಅದು ಢಬ್ ಎಂದಿತು ಎಂದು ಹೇಳಿತು.
*ಮತ್ತೆ ಒಂದು ತಾಸು ಬಿಟ್ಟು . ಕಾಗಕ್ಕ ಇನ್ನೊಂದು ಮೊಟ್ಟೆಯನ್ನ ಒಲೆಗೆ ಹಾಕಿತು  ಅದು -ಢಬ್ ಎಂದು ಸದ್ದು ಮಾಡಿತು.
*ಪುನಃ ಗುಬ್ಬಕ್ಕ : ಕಾಗಕ್ಕಾ ಅದೇನು ಸದ್ದು -ಢಬ್ - ಎಂದಿತಲ್ಲಾ ಎಂದು  ಕೋಣೆ ಯಿಂದ ಕೂಗಿ ಕೇಳಿತು.
*ಕಾಗಕ್ಕ : ನಾನು ಬರುವಾಗ ಮೂರು ಹಲಸಿನ ಬೀಜ ತಂದಿದ್ದೆ ಮೂರನೇ ಬೀಜ ಒಲೆಗೆ ಹಾಕಿದಾಗ, ಅದು ಢಬ್ ಎಂದಿತು ಎಂದು ಹೇಳಿತು.
*ಬೆಳಿಗ್ಗೆ ಮುಂಚೆ ಗುಬ್ಬಕ್ಕ ಏಳುವ
್ಯದರೊಳಗೆ ಕಾಗಕ್ಕ ಎದ್ದು ಬಾಗಿಲು ತೆಗೆದುಕೊಂಡು ಹಾರಿ ಹೋಯಿತು. 
*ಗುಬ್ಬಕ್ಕ ಬೆಳಿಗ್ಗೆ ಎದ್ದು ನೋಡಿದರೆ ಮೂರೂ ಮೊಟ್ಟೆ ಇಲ್ಲ . ಅದಕ್ಕೆ ಈ ಕಾಗಕ್ಕನೇ ತನ್ನ ಮೂರೂ ಮೊಟ್ಟೆಗಳನ್ನ ತಿಂದು ಹಾಕಿದೆ ಎಂದು ಗೊತ್ತಾಯಿತು. ದುಃಖದಿದ ಕಣ್ಣೀರು ಹಾqಕಿತು
*ಮಾರನೇ ದಿನ ಕಾಗಕ್ಕ  ಬಂದು ಗುಬ್ಬಕ್ಕಾ ಹೇಗಿದ್ದೀಯಾ ಎಂದು ಕೇಳಿತು. ಆಗ ಗುಬ್ಬಕ್ಕ ಕಾಗಕ್ಕಾ ಸ್ವಲ್ಪ ಕಷಾಯ ಮಾಡಿದ್ದೇನೆ ಶೀತಕ್ಕೆ ಒಳ್ಳೆಯದು ಕೊಡಲಾ ಎಂದಿತು. ಕಾಗಕ್ಕ ಕೊಡು ನನಗೆ ಅದು ಇಷ್ಟ ಎಂದಿತು. ಗುಬ್ಬಕ್ಕ ಒಳಗೆ ಹೋಗಿ ಒಂದು ಸೌಟಿನಲ್ಲಿ ಎಣ್ಣೆ ಮೆಣಸಿನಕಾಯಿ ಹಾಕಿ ಕಾಯಿಸಿತು. ನಂತರ ತಂದು ಸ್ವಲ್ಪವೇ ಬಾಗಿಲು ತೆಗೆದು ಕಾಗಕ್ಕಾ ಬಾಯಿ ಕಳಿ(ತೆರೆ) ಎಂದಿತು. 
*ಕಾಗಕ್ಕ ಬಾಯಿ ಕಳೆಯಿತು (ತೆರೆಯಿತು). ಗುಬ್ಬಕ್ಕ ಕಾಯಿಸಿದ ಒಗ್ಗರಣೆಯನ್ನ ಅದರ ಬಾಯಿಯ ಒಳಗೆ ಹಾಕಿಬಿಟ್ಟಿತು. ಕಾಗಕ್ಕ ಅಯ್ಯೋ ಉರಿ ಉರಿ ಎನ್ನುತ್ತಾ ಕೂಗಿಕೊಂಡಿತು. *ಗುಬ್ಬಕ್ಕ ನೀನು ನನ್ನ ಮೊಟ್ಟೆಗಳನ್ನು ಕದ್ದು ತಿಂದಿದ್ದಕ್ಕೆ ಈ ಶಿಕ್ಷೆ ಎಂದು ಹೇಳಿ ಬಾಗಿಲು ಹಾಕಿಕೊಂಡಿತು. ಕಾಗಕ್ಕನ ಬಾಯಿ ನಾಲಗೆ ಸುಟ್ಟು ಕೆಂಪಾಯಿತು . *ಅದು ಈಗಲೂ ಹಾಗೆಯೇ ಕೆಂಪಾಗಿದೆ.

ಆಧಾರ : 
---------------
*ಜಾನಪದ ಸಂಗ್ರಹ : [[ಬಿ.ಎಸ್.ಚಂದ್ರಶೇಖರ]] ಸಾಗರ
*[[ಕನ್ನಡ ಸಾಹಿತ್ಯ ಪ್ರಕಾರಗಳು]]
ವರ್ಗ: [[ಕನ್ನಡ ಸಾಹಿತ್ಯ]]