Difference between revisions 301438 and 320921 on knwiki

'''ಶ್ರೀ ಅರವಿಂದ ಆಶ್ರಮವು''' [[ಪುದುಚೇರಿ]]ಯಲ್ಲಿರುವ [[ಶ್ರೀ ಅರವಿಂದ]]ರು ಮತ್ತು [[ಮೀರಾ ಅಲ್ಫಾಸ|ಶ್ರೀ ಮಾತೆಯವರ]] ಆಶ್ರಮ. 

= '''ಸ್ಥಾಪನೆ''' =
ಶ್ರೀ ಅರವಿಂದರು ತಮ್ಮ ೨೪ ನವೆಂಬರ್ ೧೯೨೬ರ ಆಧ್ಯಾತ್ಮಿಕ ಅನುಭವದ ನಂತರ, ಯೋಗ ಸಾಧನೆಗಾಗಿ ತಮ್ಮ ಹೊರಸಂಪರ್ಕವನ್ನು ಸೀಮಿತಗೊಳಿಸಿದರು ಮತ್ತು ಮುಂದಿನಿಂದ [[ಮೀರಾ ಅಲ್ಫಾಸ|ಶ್ರೀ ಮಾತೆಯವರಿಂದಲೇ]] ಎಲ್ಲ ಶಿಷ್ಯರೂ ಸಾಧನೆಯನ್ನು ಸ್ವೀಕರಿಸಬೇಕೆಂದು ಹೇಳಿದರು. ಹೀಗೆ, ಅಂದಿನ ೨೪ ಮಂದಿಯ ಶಿಷ್ಯಗಣವು ಶ್ರೀ ಮಾತೆಯವರ ನೇತೃತ್ವದಡಿ ಆಶ್ರಮದ ರೀತಿಯಲ್ಲಿ ಏರ್ಪಟ್ಟಿತು. ಶಿಷ್ಯರ ಸಂಖ್ಯೆ ಹೆಚ್ಚಾದಂತೆ ಮತ್ತು ಎರಡನೇ ಜಾಗತಿಕ ಯುದ್ಧದ ಕಾರಣದಿಂದಾಗಿ ಹೆಚ್ಚಾದ ಶಿಷ್ಯ-ಶರಣಾರ್ಥಿಗಳು ಬಂದಂತೆ, ಆಶ್ರಮಕ್ಕೆ ಹಲವು ವಿಭಾಗಗಳು ಸೇರಿಕೊಂಡವು: ಮುದ್ರಣಾಲಯ, ಕರಕುಶಲ ವಿಭಾಗ, ಯಂತ್ರ ವಿಭಾಗ, ಒಂದು ಶಾಲೆ, ಭೋಜನಾಲಯ, ಇತ್ಯಾದಿ. ಶ್ರೀ ಅರವಿಂದರ ಮತ್ತು ಶ್ರೀ ಮಾತೆಯವರ ದೇಹಾಂತವಾದ ನಂತರ ಆಶ್ರಮದ ಆಡಳಿತವನ್ನು ಶ್ರೀ ಅರವಿಂದ ಆಶ್ರಮ ಟ್ರಸ್ಟ್ ವಹಿಸಿಕೊಂಡಿದೆ
= '''ಆಶ್ರಮದ ಧ್ಯೇಯ''' =
ಶ್ರೀ ಅರವಿಂದರು ತಮ್ಮ ಆಶ್ರಮದ ಧ್ಯೇಯದ ವಿಷಯವಾಗಿ ಹೀಗೆ ಬರೆದಿರುವರು: "ಈ ಆಶ್ರಮವನ್ನು ಜಗತ್ತಿನಿಂದ ಸಂನ್ಯಾಸವನ್ನು ತೆಗೆದುಕೊಳ್ಳಲು ಅಲ್ಲ, ಮತ್ತೊಂದು ರೀತಿಯ ಮತ್ತು ರೂಪದ ಜೀವನದ ವಿಕಸನದ ಒಂದು ಕೇಂದ್ರ ಮತ್ತು ಅಭ್ಯಾಸಭೂಮಿಯಾಗಿ ರಚಿಸಲಾಗಿದೆ"

[[bg:Ашрам Шри Ауробиндо]]
[[de:Sri Aurobindo Ashram]]
[[en:Sri Aurobindo Ashram]]
[[fr:Ashram de Sri Aurobindo]]
[[hi:श्री अरविन्द आश्रम]]
[[pl:Sri Aurobindo Ashram]]
[[ru:Ашрам Шри Ауробиндо]]
[[sa:अरविन्दाश्रमः]]