Difference between revisions 309810 and 309822 on knwiki{{ಹಿಂದೂ ತತ್ವಶಾಸ್ತ್ರ}} '''ದ್ವೈತ''' ಮತವು [[ಮಧ್ವಾಚಾರ್ಯ]]ರಿಂದ ಪ್ರವರ್ತಿತವಾಗಿದೆ.ಇದರ ಸಿದ್ಧಾಂತಗಳು ಮೊದಲೇ ಇದ್ದುವಾದರೂ ಅದನ್ನು ಕ್ರೋಡೀಕರಿಸಿ ಸಿದ್ದಾಂತ ರೂಪದಲ್ಲಿ ಮಂಡಿಸಿದವರು ಮಧ್ವಾಚಾರ್ಯರು.ದ್ವೈತ ಎಂದರೆ ಎರಡು ಎಂದರ್ಥ.ಈ ಮತದಲ್ಲಿ [[ಜೀವ]],[[ಜಗತ್ತು]],[[ಪರಮಾತ್ಮ]]ಇವರ ಒಳಗೆ ಇಹ ಮತ್ತು ಪರಗಳಲ್ಲಿ ಪಾರಮಾರ್ಥಿಕವಾದ ಭೇದವಿದೆ ಎಂಬುದನ್ನು ಪ್ರತಿಪಾದಿಸಲಾಗಿದೆ. ==ದ್ವೈತಮತದ ತತ್ವಗಳು== ==ದ್ವೈತಮತದ ಸಿದ್ಧಾಂತಗಳು== ದ್ವೈತಮತದ ಸಿದ್ಧಾಂತಗಳನ್ನು ಸ್ಥೂಲವಾಗಿ ಹೀಗೆ ಹೇಳಬಹುದು. ೧) [[ಭಗವಂತ]]ನು ಸರ್ವಶಕ್ತನೂ,ಸರ್ವೋತ್ತಮನೂ ಆಗಿದ್ದು [[ಜೀವ]]-[[ಜಗತ್ತು]]ಗಳ ನಿಮಿತ್ತಕಾರಕನಾಗಿದ್ದರೂ ಅವುಗಳಿಂದ '''ಪ್ರತ್ಯೇಕ'''ನಾಗಿರುತ್ತಾನೆ. ೨) [[ಜೀವ]]ರುಗಳು(ಆತ್ಮ) ಅಸಂಖ್ಯಾತ ಮತ್ತು ಅನಾದಿಯಾಗಿದ್ದು ಭಗವಂತನಿಂದ ಬೇರೆಯೇ ಆಗಿರುತ್ತಾರೆ. ಜೀವರುಗಳು ಯಾವಕಾಲಕ್ಕೂ ಭಗವಂತನೊಡನೆ (ಪರಮಾತ್ಮ)ನೊಡನೆ ಒಂದಾಗುವುದಿಲ್ಲ.ಭಗವಂತನು ಜೀವಿಗಳ ಅಂತರ್ಯಾಮಿಯಾಗಿರುತ್ತಾನೆ.ಜೀವಿಗಳ ಒಳಗೆ ಪರಸ್ಪರ ಭೇದವಿದೆ. ೩) ದ್ವೈತಮತದ ಪ್ರಕಾರ [[ಮೋಕ್ಷ]] ಎಂದರೆ ಜೀವನಿಗೆ ತನ್ನ ಅನಾದಿ ಅಜ್ಞಾನವು ಹೋಗಿ ಸ್ವಭಾವ ಜ್ಞಾನವಾಗುವುದೇ ಆಗಿದ್ದು ಸಂಸಾರದ ಬಂಧನದಿಂದ ಬಿಡುಗಡೆಯಾಗಿದೆ.ಜೀವರುಗಳೆಲ್ಲಾ ಮುಕ್ತಿಗೆ ಅರ್ಹರಾಗಿರದೆ ಅವರವರ ಯೋಗ್ಯತೆಗೆ ಅನುಗುಣವಾಗಿ ಮುಕ್ತಿ ಪ್ರಾಪ್ತವಾಗುತ್ತದೆ. ಮುಕ್ತಿಯ ನಂತರ ಜೀವನು ಭಗವಂತನಲ್ಲಿ ಲೀನವಾಗದೆ ಬೇರೆಯೇ ಆಗಿ ಉಳಿದು ಮುಕ್ತಿಯ ಸುಖ-ಆನಂದಗಳನ್ನು ತನ್ನ ಗುಣ ಯೋಗ್ಯತೆ ಅನುಗುಣವಾಗಿ ಅನುಭವಿಸುತ್ತಾನೆ. ೪) ದ್ವೈತ ಮತ ಅನುಸಾರ [[ಕರ್ಮ]],[[ಜ್ಞಾನ]],[[ಭಕ್ತಿ]]ಗಳು ಬೇರೆ ಬೇರೆಯಾಗಿರದೆ ಮೋಕ್ಷ ಸಾಧನೆಯ ಮೂರು ಹಂತಗಳಾಗಿವೆ.ಕರ್ಮ,ಜ್ಞಾನಗಳಿಂದ ಭಕ್ತಿ ಮೂಡಿ ಭಕ್ತಿಯಿಂದ ಮೋಕ್ಷ ಪ್ರಾಪ್ತಿಯಾಗುವುದು. ==ಬಾಹ್ಯ ಸಂಪರ್ಕಗಳು== http://www.dlshq.org/download/hinduismbk.htm#_VPID_96 === ನೋಡಿ === ----------------------------------- *[[ಮಧ್ವಾಚಾರ್ಯ]]⏎ *[[ದ್ವೈತಮತ]] == ಆಧಾರ ಗ್ರಂಥಗಳು== ೧.ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್ [[ವರ್ಗ:ಹಿಂದೂ ಧರ್ಮ]] [[ವರ್ಗ:ತತ್ವಶಾಸ್ತ್ರ]] [[ವರ್ಗ:ಆಧ್ಯಾತ್ಮ]] [[bn:দ্বৈত]] [[en:Dvaita]] [[es:Dvaita]] [[fr:Dvaita]] [[id:Dvaita]] [[it:Dvaita]] [[ml:ദ്വൈതം]] [[pt:Dvaita]] [[ru:Двайта-веданта]] [[sa:मध्वसिद्धान्तः]] [[sv:Dvaita]] [[ta:துவைதம்]] [[te:ద్వైతం]] [[uk:Двайта]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=309822.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|