Difference between revisions 316415 and 333986 on knwiki

{| border="1" cellpadding="2" cellspacing="0" align="right" width="250px" style="margin-left:10px"
|-
| align="center" colspan="2" | <font size="+1">'''ಮುಂಬೈ'''</font><br />
[[ಚಿತ್ರ:Gateway.jpg|thumb|none|ಗೇಟ್‍ವೇ ಅಫ್ ಇ೦ಡಿಯಾ]]
|- 
| ವರ್ಗೀಕರಣ
| ಮೆಟ್ರೊಪಾಲಿಟನ್ ನಗರ
|- 
(contracted; show full)
 
ಮುಂಬಯಿಯ ಖಾದ್ಯಸಂಸ್ಕೃತಿಯ ಸಂಕೇತವೆಂದರೆ [[ವಡಾಪಾವ್]] ಎನ್ನಬಹುದು. ಪಾನೀಪುರಿ, ಪಾವ್ ಭಾಜಿ, ಭೇಳ್ ಪುರಿ, ದಕ್ಣಿಣ ಭಾರತೀಯ, ಪಂಜಾಬೀ, ಚೈನೀಸ್ ತಿನಿಸುಗಳೂ ಮುಂಬಯಿ ಯಲ್ಲಿ ಬಹಳ ಜನಪ್ರಿಯವಾಗಿವೆ. [[ಶ್ರೀಕೃಷ್ಣ ಬಟಾಟವಡ ಅಂಗಡಿ, ದಾದರ್ (ಪ), ಮುಂಬೈ]], ದಾದರ್ ಪಶ್ಚಿಮ ದಲ್ಲಿದೆ. ಇಲ್ಲಿ ಬಿಸಿ-ಬಿಸಿ, ಬಟಾಟಾವಡ ತಿಂದು, ಚಹ- ಸೇವನೆಮಾಡುವ ಮಜವನ್ನು ಅನುಭವಿಸಬೇಕು. 

[[UNESCO]] ಮುಂಬಯಿಗೆ ಮೂರು ಹೆರಿಟೇಜ್ ಪ್ರಶಸ್ತಿಗಳನ್ನು ಕೊಡಮಾಡಿದೆ. 

[[ಚಿತ್ರ:B 028.JPG|thumb|right|250px|'ಏಶಿಯಾಟಿಕ್ ಲೈಬ್ರೆರಿ']]
ಭಾರತೀಯ ಚಿತ್ರರಂಗದ ಜನ್ಮಸ್ಥಾನವೇ ಮುಂಬಯಿ ಎನ್ನಬಹುದು. [[ದಾದಾಸಾಹೇಬ್ ಫಾಳಕೆ]] ಭಾರತದ ಮೊಟ್ಟಮೊದಲ ಚಲನಚಿತ್ರ ತಯಾರಿಸಿದ್ದು ಮುಂಬಯಿಯಲ್ಲಿ. ವಿಪುಲವಾಗಿದ್ದ ಚಿತ್ರಮಂದಿರಗಳು ಕಳೆದ ದಶಕಗಳಲ್ಲಿ , ಕಿರುತೆರೆಯ ದಾಳಿಯಿಂದ, ತಮ್ಮ ವರ್ಚಸ್ಸು ಕಳೆದುಕೊಂಡಿದ್ದರೂ,ಮಲ್ಟಿಪ್ಲೆಕ್ಸ್ ಗಳ ರೂಪದಲ್ಲಿ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿವೆ. ರಸಿಕರಿಗಾಗಿ ನಾಟ್ಯಮಂದಿರಗಳು, ಚಿತ್ರ-ಶಿಲ್ಪ-ಕರಕುಶಲ ವಸ್ತುಗಳ ಪ್ರದರ್ಶನಕ್ಕಾಗಿ ಸರಕಾರೀ ಹಾಗೂ ಖಾಸಗೀ ರಂಗದ ಆರ್ಟ್ ಗ್ಯಾಲರಿಗಳು ಇಲ್ಲಿವೆ. ಇವುಗಳಲ್ಲಿ ಕೆಲವು ಪ್ರಸಿದ್ಧ ತಾಣಗಳೆಂದರೆ [[ಜಹಾಂಗೀರ್ ಆರ್ಟ್ ಗ್ಯಾಲರಿ]], [[ಏಶಿಯಾಟಿಕ್ ಸೊಸೈಟಿ|ಏಶಿಯಾಟಿಕ್ ಸೊಸೈಟಿಯ]] ವಾಚನಾಲಯ ಮತ್ತು [[ಛತ್ರಪತಿ ಶಿವಾಜಿ ವಸ್ತು ಸಂಗ್ರಹಾಲಯ]](ಹಳೆಯ ಹೆಸರು [[ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್]]).

[[ಬರ್ಲಿನ್]], [[ಲಂಡನ್]] , [[ಲಾಸ್ ಏಂಜಲೀಸ್]], [[ಸೆಯಿಂಟ್ ಪೀಟರ್ಸ್ ಬರ್ಗ್]],[[ಸ್ಟುಟ್ ಗರ್ಟ್]],[[ಯೋಕೋಹಾಮ]] ಈ ನಗರಗಳನ್ನು ಮುಂಬಯಿಯ ಭಗಿನಿ ನಗರಗಳೆಂದು (sister cities) ಪರಿಗಣಿಸಲಾಗಿದೆ.


== ಪ್ರಸಾರ ಮಾಧ್ಯಮಗಳು ==


ಅನೇಕ ಪ್ರಕಾಶನ ಸಂಸ್ಥೆಗಳು, ವೃತ್ತ ಪತ್ರಿಕೆಗಳು, ಕಿರುತೆರೆ ವಾಹಿನಿಗಳು ಮುಂಬಯಿಯಿಂದ ಕಾರ್ಯನಿರ್ವಹಿಸುತ್ತಿವೆ.ಇಂಗ್ಲೀಷ್ ಪತ್ರಿಕೆಗಳಲ್ಲಿ ಮುಖ್ಯವಾದವುಗಳೆಂದರೆ,[[ಟೈಮ್ಸ್ ಆಫ್ ಇಂಡಿಯಾ]], [[ಇಂಡಿಯನ್ ಎಕ್ಸ್ ಪ್ರೆಸ್]], [[ಡಿ.ಎನ್.ಏ]], [[ಹಿಂದೂಸ್ತಾನ್ ಟೈಮ್ಸ್]] , [[ಮಿಡ್ ಡೇ]] ಇತ್ಯಾದಿ. [[ಮಹಾರಾಷ್ಟ್ರ ಟೈಮ್ಸ್]] , [[ಸಕಾಳ]], [[ಲೋಕಸತ್ತಾ]] , [[ಸಾಮನಾ]] ಮತ್ತು [[ನವಾಕಾಳ]] ಮುಖ್ಯ [[ಮರಾಠಿ]] ಪತ್ರಿಕೆಗಳು. ಇವಲ್ಲದೆ [[ಗುಜರಾತಿ]], [[ಕನ್ನಡ]], [[ತಮಿಳು]] ಮುಂತಾದ ಇತರೇ ಭಾಷೆಗಳ ಪತ್ರಿಕೆಗಳೂ ಮುಂಬಯಿಯಿಂದ ಹೊರಡುತ್ತವೆ. [[ಕರ್ನಾಟಕ ಮಲ್ಲ]] ಎಂಬ ಕನ್ನಡ ಪತ್ರಿಕೆ ಮುಂಬಯಿಂದ ಪ್ರಕಟವಾಗುತ್ತಿದೆ. ಭಾರತದ ಅತಿ(contracted; show full)[[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]]
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಭೂಗೋಳ]]

{{Link FA|en}}
{{Link FA|es}}
{{Link FA|mr}}
{{Link FA|zh}}