Difference between revisions 318382 and 328121 on knwiki

{{ಚುಟುಕು}}
'''ನಮಾಜ್''' ([[ಖುರಾನ್]] [[ಅರಬ್ಬಿ ಭಾಷೆ|ಅರಬ್ಬಿ ಭಾಷೆಯಲ್ಲಿ]]: صلوة - ಸಲಾಹ್) [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮದಲ್ಲಿ]] [[ಅಲ್ಲಾಹ|ಅಲ್ಲಾಹನ]] ಪ್ರಮುಖ ಆರಾಧನೆಗಳಲ್ಲೊಂದು. ಈ ಆರಾಧನೆಯನ್ನು ದಿನಕ್ಕೆ ಐದು ಬಾರಿ ಪ್ರತಿಯೊಬ್ಬ [[ಮುಸಲ್ಮಾನ|ಮುಸಲ್ಮಾನನು]] ಮಾಡಲೇಬೇಕೆಂದು ಸೂಚಿಸಲಾಗಿದೆ.

ಇಸ್ಲಾಮಿನ ಮಹಾ ಸೌಧವು ಐದು ಅಧಾರ ಸ್ತಂಭಗಳ ಮೇಲೆ ನಿಂತಿದೆ. ಅವುಗಳಲ್ಲಿ ಎರಡೆನೆಯ ಕರ್ಮ ನಮಾಜ್ ನಿರ್ವಹಿಸುವುದಾಗಿದೆ. ಪ್ರತಿ ದಿನ ಹಗಲು ರಾತ್ರಿ ಯಾಗಿ  ಐದುಬಾರಿ ತನ್ನ ಸ್ರಷ್ಟಿಕರ್ತನೊಂದಿಗೆ ನೇರಸಂಪರ್ಕ ಸಾಧಿಸ ಬಹುದಾದ ಆರಾಧನೆಯಾಗಿದೆ ಈ ನಮಾಜ್. ನಿಜ ಜೀವ ನದ ಪ್ರತಿ ಘಳಿಗೆಯಲ್ಲೂ ಅಲ್ಲಾಹನೊಂದಿಗೆ ನಿರಂತರ ಸಂಪರ್ಕ ಸಾಧಿಸುವುದೂ ಇದರ ಮೂಲೋದ್ದೇಶ ಗಳಲ್ಲೊಂದು. ನಮಾಜ್  ಮನುಷ್ಯನ  ಅಂತರಂಗವನ್ನೂ  ಬಹಿರಂಗವನ್ನೂ  ಕೊಳಕು  ಮತ್ತು ಮಾಲಿನ್ಯ ಗಳಿಂದ ಶುಚಿಗೊಳಿಸುವ ಸಾಧನವೂ ಹೌದು. ಅಂಗಾಂಗಗಳನ್ನು ಶುಚಿಗೊಳಿಸದೆ ನಮಾಜ್ ನಿರ್ವಹಿಸಲು ಸಾಧ್ಯವೇ ಇಲ್ಲ. ಪವಿತ್ರ ಕುರ್ಆನ್ ಹೇಳುತ್ತದೆ:
{{Quote|
"ಓ,ಸತ್ಯ ವಿಶ್ವಾಸಿಗಳೇ!ನೀವು ನಮಾಜಿಗೆಂದು ಹೊರಟಾಗ ನಿಮ್ಮಮುಖಗಳನ್ನು ಮತ್ತು ಮೊಣಕೈ ಗಂಟುಗಳವರೆಗೆ ಕೈಗಳನ್ನು ತೊಳೆದು ಕೊಳ್ಳಿರಿ. ಜನಾಬತ್ ಅಥವಾ ವೀರ್ಯಸ್ಖಲನಾ ನಂತರದ ಮಾಲಿನ್ಯದ  ಸ್ಥಿತಿಯಲ್ಲಿದ್ದರೆ ಸ್ನಾನ  ಮಾಡಿ ಶುದ್ಧ ರಾಗಿ ಕೊಳ್ಳಿರಿ.  ನೀವು ಅನಾರೋಗ್ಯದಿಂದಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲಾರಾದರೂ ಮಲ ಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತ್ರೀಯರನ್ನು ಸ್ಪರ್ಶಿಸಿದ್ದರೆ ಮತ್ತು ಆಬಳಿಕ ನೀರು ಸಿಗದೇ ಹೋದರೆ ಶುದ್ಧ ಮಣ್ಣನ್ನು ಉಪಯೋಗಿಸಿ ಕೊಳ್ಳಿರಿ. ಅದರ ಮೇಲೆ ಹಸ್ತಗಳನ್ನು ಬಡಿದು ನಿಮ್ಮ ಮುಖ ಮತ್ತು ಕೈಗಳ ಮೇಲೆ ಸವರಿಕೊಳ್ಳಿರಿ. ಅಲ್ಲಾಹ್ ನಿಮ್ಮ ಜೀವನ ವನ್ನು ಸಂಕುಚಿತಗೊಳಿಸಲಿಚ್ಚಿಸುವುದಿಲ್ಲ.ಬದಲಾಗಿನೀವು ಕ್ರತಜ್ಞರಾಗಲೆಂದು.ಅವನು ನಿಮ್ಮನ್ನು ಪರಿಶುದ್ಧಗೊಳಿಸಲಿಕ್ಕೂ ನಿಮ್ಮಮೇಲೆ ತನ್ನ ಕೊಡುಗೆಗಳನ್ನು  ಪರಿಪೂರ್ಣಗೊಳಿಸಲಿಕ್ಕೂಇಚ್ಚಿಸುತ್ತಾನೆ."<br />
(ಪವಿತ್ರಕುರ್ಆನ್:ಅಧ್ಯಾಯ5ಸೂಕ್ತ 6)
}}

ಪ್ರವಾದಿ ಮುಹಮ್ಮದ್(ಸ)ಈ ರೀತಿ ಹೇಳಿರುವರು:
{{Quote|
"ನಿಮ್ಮ ಪೈಕಿ ಒಬ್ಬಾತನ ಮನೆಯ ಮುಂದೆ ಒಂದು ನದಿ ಹರಿಯುತ್ತಿದೆ ಅದರಲ್ಲಿ ಅವನು ಪ್ರತಿ ದಿನ ಐದುಬಾರಿ ಸ್ನಾನ ಮಾಡುತ್ತಾನೆಂದಾದರೆ  ಅವನ ಕುರಿತು ನಿಮ್ಮ ಅಭಿಪ್ರಾಯವೇನು?ಆತನ ಶರೀರದಲ್ಲಿ ಅಲ್ಪವಾದರೂ ಮಲಿನತೆ ಅಥವಾ ಕೊಳಕು ಬಾಕಿಯಿರುವುದೇ? ಸಹಚರರು ಉತ್ತರಿಸಿದರು, ಇಲ್ಲ, ಅವನ ಶರೀರದಲ್ಲಿ ಸ್ವಲಪವೂ ಮಲಿನತೆ ಅಥವಾ ಕೊಳಕು ಬಾಕಿಯಿರ ಲಾರದು. ಆಗ ಪ್ರವಾದಿ(ಸ) ಹೇಳಿದರು ಇದೇತರ ಐದು ಸಮಯದ ನಮಾಜ್ ಗಳಿಂದಲೂ ಅಲ್ಲಾಹನು ವ್ಯಕ್ತಿಯ ಪಾಪಗಳನ್ನು ಕ್ಷಮಿಸಿ ಬಿಡುತ್ತಾನೆ"
}}

[[ವರ್ಗ:ಇಸ್ಲಾಂ ಧರ್ಮ]]
[[ವರ್ಗ:ಚುಟುಕು]]

[[zh:礼拜 (伊斯兰教)]]