Difference between revisions 328566 and 328570 on knwiki



ಆ ಕೊಲೆ ಹೇಗೆ ಮಾಡಿದರು ಅಂತಾ ತೋರಸ್ತೀವಿ(ಕಲಸ್ತೀವಿ) ಒಂದು ಬ್ರೆಕ್ ನ ನಂತರ"
 
                          :ನಾವು ಭಾರತೀಯರು ತುಂಬಾ ಮುಂದುವರಿಯುತ್ತಿದ್ದೇವೆ ಅಲ್ಲವೆ? ಇದು ಸತ್ಯವಾದ ಮಾತು ಪ್ರತಿಯೊಂದು ರಂಗದಲ್ಲೂ ಯಶಸ್ವಿ ಸಾಧಿಸಿ ಮುನ್ನುಗ್ಗುತ್ತಿದ್ದೇವೆ. ಯಾರನ್ನು ಕೇಳದೆ ಸಾಗುತ್ತಿದ್ದೇವೆ. ಎಲ್ಲಾ ಕ್ಷೇತ್ರಗಳಿಗಿಂತ ವಿಭಿನ್ನವಾಗಿ ನನಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿರುವುದು ಈ ಸಮೂಹ ಮಾದ್ಯಮ ಕ್ಷೇತ್ರ.  ಇಷ್ಟೊಂದು ಮುಂದುವರೆಯುವ ಅವಶ್ಯಕತೆ ಇದೆಯೆ ಅತಿಯಾದ ಮುಂದುವರಿಕೆ ನಮಗೆ ಮಾರಕವಾಗಿ ಕಾಣುತ್ತಿದೆಯೆ? ಈ ಮಾದ್ಯಮಗಳ ಕುರಿತು ಹೀಗೊಂದು ಚಿಂತನೆ ಅವಶ್ಯಕತೆ ಇದೆ ಬನ್ನಿ  ಒಮ್ಮೆ ಹೀಗೆ ಚಿಂತಿಸೂಣ .  
                                  :ಈಗ ಸದ್ಯಕ್ಕೆ  ನಮ್ಮ ರಾಜ್ಯದ ಬಗ್ಗೆ  ಮಾತ್ರ ಯೋಚಿಸುವುದಾದರೆ ಕರ್ನಾಟಕದಲ್ಲಿ ಈಗ ಸದ್ಯಕ್ಕೆ  ದಿನ ಪತ್ರಿಕೆಗಳು ತುಂಬಿ ತುಳುಕುತ್ತಿವೆ .ಮೊನ್ನೆ ನಾನು ಒಬ್ಬ ಪೇಪರ್ ಮಾರುವವನ ಅಂಗಡಿಗೆ ಬೇಟಿಕೊಟ್ಟಿದ್ದೆ, ಅಲ್ಲಿ ಹೋದ ತಕ್ಷಣ ವಿಚಿತ್ರ ಅನುಭವ . ಆ ಅಂಗಡಿಯಲ್ಲಿ ನಮ್ಮ ರಾಜ್ಯದ ಎಲ್ಲಾ ಪ್ರತಿಷ್ಠಿತ ಪತ್ರಿಕೆಗಳು ಇದ್ದವು .ನನಗೆ ತಿಳಿಯದಾಯಿತು ಯಾವ ಪತ್ರಿಕೆ ಆರಿಸಿಕೊಳ್ಳಲಿ ಎಂದು ಅಲ್ಲಿರುವ ಪತ್ರಿಕೆ ಒಂದೆ ಎರಡೆ ದಿನ ಪತ್ರಿಕೆ,ವಾರಪತ್ರಿಕೆ,ಮಾಸಪತ್ರಿಕೆ ಅವುಗಳ ಜೊತಗೆ ಎಷ್ಟೊಂದು ಪುರವಣಿಗಳು. ಅವುಗಳ ವಿಚಿತ್ರವಾದ ತಲೆಬರಹ ಬೇರೆಬೇರೆಯಾಗಿದ್ದರು ಅವುಗಳ ತಾತ್ಪರ್ಯ ಮಾತ್ರ ಒಂದೆ  ಆಗಿದೆ.  ಎಲ್ಲಾ ಪತ್ರಿಕೆಗಳು ಒಂದೆ ವಿಷಯವನ್ನು  ಆ ದಿನಕ್ಕೆ ಬೇರೆ ರಿತಿಯಲ್ಲಿ ತೆಲೆಬರಹ ಮಾಡಿಕೊಳ್ಳುವುದು ತುಂಬಾ ಸ್ಪಷ್ಟವಾಗಿ ಕಂಡುಬರುತ್ತದೆ.  
                          :ಇವು ಜನರಿಗೆ ಸುದ್ದಿಯನ್ನು ಹೊತ್ತು ತರುತ್ತಿರುವವೊ,ಮಾಹಿತಿ ನೀಡುತ್ತಿರುವವೂ  ಅಥವಾ ಜನರಿಗೆ ಹಾದಿ ತಪ್ಪಿಸುತ್ತಿರುವವೊ ತಿಳಿಯದಾಗಿದೆ. ಇನ್ನು ಜಲ್ಲಾ ಮಟ್ಟದ ವರದಿಯಂತು ತುಂಬಾನೆ ವಿಚಿತ್ರ ಸಣ್ಣ ಉದಾಹರಣೆಯೆಂದರೆ ಮೊನ್ನೆ  ಒಂದೆ ಸುದ್ದಿಯನ್ನು  ಎರಡು ಪತ್ರಿಕೆಗಳು ಒಂದೆ ರಿತಿಯಾಗಿ ಬರೆದಿದ್ದವು. ಆದರೆ ಅವುಗಳ ತಲೆಬರಹ ಮಾತ್ರ ಬೇರೆ ಬೇರೆ ಯಾಗಿದ್ದವು. ವಿಷಯ ಒಂದೆ  ಅದರ ತಾತ್ಪರ್ಯವು ಒಂದೆ ಆಗಿತ್ತು. ಹಾಗಾದರೆ ಓದುವವರನ್ನು  ದಡ್ಡರೆಂದು ಬಾವಿಸಿದ್ದಾರೆಯೆ?  ಈ ಪತ್ರಿಕೆಯವರು. ಇನ್ನು ಪತ್ರಿಕೆಯ ಒಳಗಡೆ ಹೋದರೆ ಪತ್ರಿಕೆ ತುಂಬಾ ಕೆಲವು  ಅಂಕಣಗಳು ಚರ್ಚೆಗಳಿಗೆ ಮಿಸಲಾಗಿವೆ. ಅಲ್ಲಿನ ವಿಷಯ ನೋಡಿದರೆ ಬರಿ ಕಚ್ಚಾಟ ಮತ್ತು ಇದು ಒಂದು ಹುಚ್ಚಾಟವಾಗಿ ಪರಿಣಮಿಸಿದೆ ಆ ವಿಷಯ ಒಂದೆ ಪತ್ರಿಕೆ ಅಲ್ಲಾ,ಎಲ್ಲಾ ಪತ್ರಿಕೆಗೂ ಹರಡಿ ಎಲ್ಲಾ ಪತ್ರಿಕೆಯಲ್ಲು ಒಂದೆ ವಾಸನೆ ಹರಡುತ್ತದೆ. ಒಂದೊಂದು ವಾರಗಟ್ಟಲೆ ಅದೊಂದೆ ದೊಡ್ಡ ಚರ್ಚೆ ಆ ಪತ್ರಿಕೆಯ ಪ್ರಮುಖ ಸುದ್ದಿಗಳೆಲ್ಲಾ ಮೂಲೆಗುಂಪಾಗಿ ಹೋಗುತ್ತವೆ. ಆ ಹುಚ್ಚು ಚರ್ಚೆಯ ನಡುವೆ ಇನ್ನು ಪತ್ರಿಕೆಗಳಲ್ಲಿ ಕೆಲವು ಹೇಳಿಕೆಗಳು ಕೊಡುತ್ತಾರೆ. ಅವು ನಾವು ಸುಕ್ಷ್ಮವಾಗಿ ಗಮನಿಸಬೇಕು ಆ ಮಾತಿನಲ್ಲಿ ಯಾವುದು ಸಮಾಜಿಕ ಕಳಕಳಿ ಅಲ್ಲಾ ಬರಿ ಅವರು ಇವರಿಗೆ ಬೈದರು , ಇವರು ಅವರಿಗೆ ವಿರುದ್ದವಾಗಿ ಬೈದರು. ಇವೆಲ್ಲಾ ನಮಗೆ ಬೇಕೆ? ಇಲ್ಲಿ ಎಲ್ಲರ ಸ್ವಾರ್ಥ ಅಡಗಿದೆ ಎಂಬುವದು ಸ್ಪಷ್ಟವಾದ ಮಾತು . 
                                              :ಇನ್ನು ಪುರವಣಿಗಳ ಮಾತೆ ಬೇರೆ ದಿನಕ್ಕೊಂದು ಪುರವಣಿ ಎಲ್ಲಾ ಪತ್ರಿಕೆಗೂ ಕಡ್ಡಾಯ ಓದುಗ ಯಾವುದನ್ನು ಓದಬೇಕು,ಯಾವುದನ್ನ ಬಿಡಬೇಕು ಎನ್ನುವ ಗೊಂದಲದಲ್ಲಿದ್ದಾನೆ .ಇನ್ನು ಓದಿದರೆ ಎಲ್ಲವು ಗೊಂದಲಮಯವಾಗಿ ಕಾಣುತ್ತದೆ. 
ವಿಜಯಕರ್ನಾಟಕ,ಕನ್ನಡಪ್ರಭ,ಉದಯವಾಣಿ,ಸಂಯುಕ್ತಕರ್ನಾಟಕ,ಪ್ರಜಾವಾಣಿ, ಹೊಸಧಿಗಂತ , ವಿಜಯವಾಣಿ , ವಿಜಯ ನೆಕ್ಸ್ಟ್ ,ಕಣ್ಣು ಪತ್ರಿಕೆ, ಹಾಯ್ ಬೆಂಗಳೂರು , ಅಗ್ನಿ ,ಪೋಲಿಸ್ನ್ಯೂಸ್,ಜಾಬ್ ನ್ಯೂಸ್,ಉದ್ಯೋಗವಾರ್ತೆ,ಸುಧಾ,ಸಖಿ,ಕರ್ಮವೀರ ರೂಪತಾರಾ, ಅರಗಿಣಿ, ಚಿತ್ರಸೌರಭ, ಸಂಡೆ ಇಂಡಿಯಾ, ಮಯೂರ,ಮಾನಸ , ಓ ಮನಸೆ , ಪ್ರಿಯಾಂಕ, ಸಂಜೆವಾಣಿ, ಸಂದ್ಯಾಕಾಲ , ಸುವರ್ಣಟೈಮ್ಸ್ ಆಫ್ ಕರ್ನಾಟಕ , ಮುಂಜಾವು ,ವಿಶಲಾ ವಿಶ್ವ, ನಿಮ್ಮಕಿಡಿ, ಲಂಕೆಶ ಪತ್ರಿಕೆ ,ಪ್ರೇರಣಾ, ಸತ್ಯಕಾಮ , ವಾರ್ತಾಭಾರತಿ, ಪ್ರಜಾಪ್ರಗತಿ, ಸುದ್ಧಿಮೂಲ,ಬಿರುಗಾಳಿ. ಅಬ್ಬಾ ಈ ಪತ್ರಿಕೆಗಳ ಹೆಸರು ಹೇಳೋದರಲ್ಲೆ ಸುಸ್ತಾಗೊಯಿತು ಇವುಗಳು  ಹೇಗೆ  ಓದೊದು? ಎಷ್ಟು ಕಷ್ಟ ಇನ್ನು ಅವುಗಳನ್ನು ದಿನಾಲು ಓದಿ ಮುಗಿಸಬೇಕಾದರೆ ಎಷ್ಟು ಕಷ್ಟ ಆಗಬಹದು ಹೇಳಿ . ಈ ಎಲ್ಲಾ ಪತ್ರಿಕೆ ಒಬ್ಬ ಮನುಷ್ಯ ಓದಿ ಮುಗಿಸಲು ಸಾದ್ಯವೆ ಹೇಳಿ? ಹೀಂಗಂತ ಪರವಾನಿಗೆ ನೀಡಿರುವ ಪತ್ರಿಕೆಗಳ ಇಲಾಖೆ ಸಂಬಂದಿಸಿದ ಅಧಿಕಾರಿಗಳು ಯೋಚಿಸಿಲ್ಲವೆ? 
                                :ಈ ಪತ್ರಿಕೆಗಳು ಸಾಮಾನ್ಯವಾಗಿ   ಜನರಿಗೆ ಸುದ್ದಿಮಾಹಿತಿ ನೀಡುವ ಕೆಲಸವಾಗಬೇಕು ಆದರೆ ಕೆಲವು ಪತ್ರಿಕೆಗಳಂತು ಬರಿ ಎಲ್ಲರಿಗೂ ಹೆದರಿಸಿ ಟಾರ್ಗೆಟ್ ಮಾಡಿ ದುಡ್ಡು ವಸೂಲಿಗೆ ಬಿದ್ದಿರುವ ಸತ್ಯ ಗೊತ್ತಿದ್ದರು ಬೆಳಕಿಗೆ ಬರುತ್ತಿಲ್ಲಾ. ಇಂತಹ ಹೀನಾಯ ಕೆಲಸಕ್ಕೆ ಎಷ್ಟೊ ಪತ್ರಿಕೆಗಳು ಮುಗಿಬಿದ್ದಿವೆ  ಎಂಬುದು ಗೊತ್ತಿರದೆ ಇದ್ದರು ಸತ್ಯವಾದ ಮಾತು . ತಾವು ಕೇಳಿದಷ್ಟು ಹಣ  ಕೊಟ್ಟರೆ ಮಾತ್ರ ಸುದ್ದಿ ಮುಚ್ಚಿಹಾಕುತ್ತೇವೆ. ಇಲ್ಲವಾದಲ್ಲಿ ಅದನ್ನು ಜನರ ಮುಂದೆ ಬೈಲಿಗೆ ಎಳೆಯುತ್ತೇವೆ ಎನ್ನುವ ಮಾತುಗಳು ಒಳಗಡೆ ಮಾತ್ರ ಇರುತ್ತೆ ಎಲ್ಲಿಯು ಹೊರಗೆ ಬಂದಿಲ್ಲಾ ಅಷ್ಟೆ  ಅನೇಕ ಪತ್ರಿಕೆಗಳು ಹೆದರಿಸುವ ಕೆಲಸದಲ್ಲಿ ನಿರತವಾಗಿವೆ ಎಲ್ಲವು ಬರಿ ನೋಟಿನಲ್ಲಿ ಅದರ ನೋಟದಲ್ಲಿ ಕಳಿದುಹೊಗಿದೆ. ಈ ಪತ್ರಿಕೊದ್ಯಮ ಹಾಗಾಗಿ ಕೊನೆಗೆ ಎಲ್ಲಾ ಬರಹಗಳು ಸುದ್ದಿಗಳು  ಮೂಲೆಗೆ ಕಸವಾಗಿ ಬಿಡುತ್ತವೆ . ಅರೆಗರಿಗೆ ಒಮ್ಮೆ ಸತ್ಯವನ್ನು ಒರೆಗೆಚ್ಚಿನೋಡುವ ಕಾರ್ಯ ಸದ್ಯ ಪತ್ರಿಕೆಯಲ್ಲಿ ನಡೆಯುತ್ತಿಲ್ಲಾ ಎಂಬುವುದು ವಿಪರ್ಯಾಸದ ಸಂಗತಿ ಇದರಿಂದ ನಮ್ಮ ಪತ್ರಿಕೆಯ ಬಗ್ಗೆ  ಪತ್ರಕರ್ತರ ಬಗ್ಗೆ ಗೌರವ ಕಡಿಮೆಯಾಗಿದೆ . ಅಂದು ಪತ್ರಕರ್ತರೆಂದರೆ ಭಯ ಗೌರವ ಎರಡು ಇತ್ತು. ಆದರೆ ಈಗ ಇರಲಿ ಬಿಡು ಎನ್ನುತ್ತಾರೆ. ಯಾಕೆಂದರೆ  ಯಾರು ಸಾಚಾ ಆಗಿ ಉಳಿದಿಲ್ಲಾ ಮಾದ್ಯಮದವರು ಕೂಡಾ ಭ್ರಷ್ಟರೆ ಎನ್ನುವ ನಿಟ್ಟಿನಲ್ಲಿ ಮಾತಾಡುತ್ತಿದ್ದಾರೆ.  ಒಬ್ಬ ಖ್ಯಾತ ಅಂಕಣಕಾರ ಒಬ್ಬ ಭ್ರಷ್ಠ ರಾಜಕಾರಣಿಯೆಂದು ನಾಡೆ ಒಪ್ಪಿರುವವುನನ್ನು  ಅವನು ತಪ್ಪೆ ಮಾಡಿಲ್ಲಾ,ಆತನು ಜನರ ಉದ್ಧಾರಕ್ಕಾಗಿ ಭ್ರಮಣೆಗೆ ಒಳಗಾದ ಎಂದು ಬಿಂಬಿಸುವುದು ಅವನು ಒಳ್ಳೆಯವನು ಎಂದು ಹೇಳುವುದು ಎಂದರೆ ನಮ್ಮ ಪತ್ರಿಕೊದ್ಯಮ ಎಲ್ಲಿಗೆ ಬಂದು ನಿಂತಿದೆ ಯೋಚಿಸಿ. 
                                                        :ಇನ್ನು ಸ್ವಲ್ಪ ನಾವು ಈ ಟಿವಿ ಮಾದ್ಯಮದ ಕಡೆಗೆ ಹೊರಳುವುದಾದರೆ ಅವು ಕೂಡಾ ನಾಯಿಕೊಡೆಯಂತೆ ಬೆಳೆದು ನಿಂತಿವೆ.ಅವು ಕೂಡಾ ಒಂದೆ ಎರಡೆ ಸುಮಾರು ಚಾನಲ್ ಗಳು ಬಂದಿವೆ. ನಮ್ಮ ಸರ್ಕಾರದ ಚಾನಲ್ ಆದ ಡಿಡಿ ೧ ಎಲ್ಲಿ ಮರೆಯಾಗಿ ಹೋಗಿದೆ ತಿಳಿಯುತ್ತಿಲ್ಲಾ. ಈ ಬೆಳೆದಿರುವ ಎಲ್ಲಾ ಚಾನಲ್ ಗಳ ಸಂದೇಶವೇನು? ಒಂದು   ಸಣ್ಣ ಉದಾಹರಣೆ  ಬೆಳಿಗಿನ  ಜಾವ ಎಲ್ಲಾ ಚಾನಲ್ ಗಳಲ್ಲಿ ಒಂದು ಕಾರ್ಯಕ್ರಮ ಬರುತ್ತೆ ಅದೆನೆಂದರೆ ಒಬ್ಬ ಸ್ವಾಮಿಜಿ ಬರುತ್ತಾನೆ ಆತ ಎಲ್ಲರ ರಾಶಿ  ಜಾತಾಕ ಕೇಳಿ ಅವರ ಇಂದಿನ ಭವಿಷ್ಯ ಹೇಳುತ್ತಾನೆ.  ಅದನ್ನು ಕೇಳಿ ನಾವು ನಮ್ಮ ಮುಂದಿನ ದಿನವನ್ನು ಪ್ರಾರಂಭಿಸುತ್ತೇವೆ ಮೊನ್ನೆ ನಾನು ಬೆಳೆಗ್ಗೆ  ಎದ್ದು ಮೂರು ಚಾನಲ್ ನಲ್ಲಿಯ  ಇದೆ ಒಂದ(contracted; show full)ಿಯ ಕವನ ಓದುಗರು ಸಿಗುವುದು ಮುಜಿಗರ ಯಾರಾದರು ಓದಿದರೆ ಅವರು ಹಳೆ ಮನುಷ್ಯ ಎಂಬ ಪಟ್ಟ ಈಗ ಏನಿದ್ದರು ಭಟ್ಟರ ಕಾಲ    " ಕತ್ತಲಲ್ಲಿ ಕರಡಿಗೆ ಜಾಮೂನು ತಿನಿಸೊಕೆ" ಎಲ್ಲಾ ಕಿಚಿಡಿ ಕನ್ನಡ ಸಾಹಿತ್ಯ ನಮ್ಮ ಓದಾಗಿದೆ. ಇನ್ನು ಈ ಪೇಪರ್ ದವರಿಗೂ ಟಿ.ವಿ. ಮಾದ್ಯಮದವರಿಗೂ ತುಂಬಾ ಸಂಬಂಧವಿದೆ. ರಾತ್ರಿ ಟಿ.ವಿ.ಯಲ್ಲಿ ನಡೆದ ಸಂದರ್ಶನ ಬೆಳೆಗ್ಗೆ ಪೇಪರ್ ನಲ್ಲಿ ಕೊಟ್ಟಿರುತ್ತಾರೆ. ಮತ್ತೆ ಈ ಮಾದ್ಯಗಳಲ್ಲಿ ಜಾತಿಯತೆ ಕೋಮುವಾದತೆ ಅತಿಯಾಗಿದೆ. ಮತ್ತೊಬ್ಬರ ಐಡಿಯಾ ಕದ್ದು ಬರೆಯುವ ಹವ್ಯಾಸ ಬೆಳೆದಿದೆ. ನಾವು ಒಮ್ಮೆ  ದಿನಪತ್ರಿಕೆಯನ್ನು ತೆಗೆದು ನೋಡಿದರೆ ಈ ಅನುಭವ ತಾನಾಗಿಯೆ ಆಗುತ್ತದೆ.  ಇಂತಹ ಮಾದ್ಯಮ ನಮಗೆ ಬೇಕೆ? ಒಮ್ಮೆ ಯೋಚಿಸಿ.
 







ಕೆ.ಎಂ.ವಿಶ್ವನಾಥ (ಮಂಕವಿ ) ಮರತೂರ .
ಹವ್ಯಾಸಿ ಬರಹಗಾರರು. 
9620633104