Difference between revisions 329204 and 329410 on knwiki

ಶಶಿಕುಮಾರ್ ಎಂದು ಹೆಸರಾದ ಶಶಿಕುಮಾರ್ ನಾಯಕ್ ಅವರು  ಕರ್ನಾಟಕದ ನಟ  ಮತ್ತು ರಾಜಕಾರಣಿ.  ಅವರ ಅನೇಕ  ಚಿತ್ರಗಳು ವಾಣಿಜ್ಯಕವಾಗಿ ಯಶಸ್ವಿವಾಗಿವೆ. ಚಿತ್ರಗಳ ಒಂದು ದೊಡ್ಡ ಸಂಖ್ಯೆಯ ಅವರನ್ನು ಕನ್ನಡ ಚಿತ್ರೋದ್ಯಮದಲ್ಲಿ ೧೯೯೦ ರ ದಶಕದ  ಪ್ರಮುಖ ನಟರಲ್ಲಿ  ಒಬ್ಬರು ಎಂದು ಪರಿಗಣಿಸಲಾಗುತ್ತದೆ. ಅವರು ತಮ್ಮ  ವಿಶಿಷ್ಟ ನೃತ್ಯ ಕೌಶಲಕ್ಕೆ ಹೆಸರಾಗಿದ್ದಾರೆ.   ಕನ್ನಡವಷ್ಟೇ ಅಲ್ಲದೆ  ಅವರು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

== ಆರಂಭಿಕ ಜೀವನ ಮತ್ತು ವೃತ್ತಿಜೀವನ ==
ಮೊದಲಿಗೆ ಶಶಿಕುಮಾರ್ ಎನ್ಐಐಟಿ ಸಂಸ್ಥೆಯಲ್ಲಿ ಕೆಲಸವನ್ನು ಮಾಡುತ್ತಿದ್ದರು.  ಅವರ ಮೊದಲ  ಚಿತ್ರವಾದ  ''[[ಯುದ್ಧಕಾಂಡ]]'' 1989 ರಲ್ಲಿ ಬಿಡುಗಡೆಯಾಯಿತು. ಅದರಲ್ಲಿ     [[ವಿ. ರವಿಚಂದ್ರನ್]] ಮತ್ತು [[ಪೂನಮ್ ದಿಲ್ಲೋನ್]] ನಟಿಸಿದ್ದರು . ನಂತರ ಅವರು ''[[ಬಾ ನನ್ನ ಪ್ರೀತಿಸು]]'',''[[ಗಂಧರ್ವ]]'' ಮತ್ತು ''[ಕೊಲ್ಲೂರ ಕಾಳ]] ದಂತಹ   ಕೆಲವು ಅಯಶಸ್ವಿ ಚಿತ್ರಗಳಲ್ಲಿ ನಟಿಸಿದರು.  ೧೯೯೦ ರ ''[[ರಾಣಿ ಮಹಾರಾಣಿ]]''  ಚಿತ್ರವು ಅವರನ್ನು  ಯಶಸ್ವಿ ತಾರೆಯನ್ನಾಗಿಸಿತು.   ನಂತರ ಅವರು ಅತ್ಯಂತ ಬೇಡಿಕೆಯ  ತಾರೆಗಳಲ್ಲಿ ಒಬ್ಬರಾದರು.  ಶಶಿಕುಮಾರ್ ಮತ್ತು  [[ಮಾಲಾಶ್ರೀ]]  ಜೋಡಿಯು  [[ಕನ್ನಡ]] ಚಲನಚಿತ್ರಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಜೋಡಿ ಎಂದು ಹೆಸರಾಗಿದೆ.  ಇತರ ನಟಿಯರಾದ  [[ಸುಧಾರಾಣಿ]], [[ತಾರಾ ]] ಮತ್ತು [[ಶ್ರುತಿ ]] ಇವರುಗಳು   ನಾಯಕಿಯರಾಗಿ ಅನೇಕ ಚಿತ್ರಗಳಲ್ಲಿ ಅವರೊಂದಿಗೆ ಅಭಿನಯಿಸಿದ್ದಾರೆ.
ಅವರು ಅನೇಕ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. [[ರಜನಿಕಾಂತ್]] ಅಭಿನಯದ  ''ಬಾಷಾ''  ಚಲನಚಿತ್ರವು ಅವುಗಳಲ್ಲಿ ಪ್ರಮುಖವಾಗಿದೆ.





{{ಚುಟುಕು}}