Difference between revisions 329411 and 329891 on knwiki

ಶಶಿಕುಮಾರ್ ಎಂದು ಹೆಸರಾದ ಶಶಿಕುಮಾರ್ ನಾಯಕ್ ಅವರು  ಕರ್ನಾಟಕದ ನಟ  ಮತ್ತು ರಾಜಕಾರಣಿ.  ಅವರ ಅನೇಕ  ಚಿತ್ರಗಳು ವಾಣಿಜ್ಯಕವಾಗಿ ಯಶಸ್ವಿವಾಗಿವೆ.   ಅವರನ್ನು ಕನ್ನಡ ಚಿತ್ರೋದ್ಯಮದಲ್ಲಿ ೧೯೯೦ ರ ದಶಕದ  ಪ್ರಮುಖ ನಟರಲ್ಲಿ  ಒಬ್ಬರು ಎಂದು ಪರಿಗಣಿಸಲಾಗುತ್ತದೆ. ಅವರು ತಮ್ಮ  ವಿಶಿಷ್ಟ ನೃತ್ಯ ಕೌಶಲಕ್ಕೆ ಹೆಸರಾಗಿದ್ದಾರೆ.   ಕನ್ನಡವಷ್ಟೇ ಅಲ್ಲದೆ  ಅವರು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

== ಆರಂಭಿಕ ಜೀವನ ಮತ್ತು ವೃತ್ತಿಜೀವನ ==
ಮೊದಲಿಗೆ ಶಶಿಕುಮಾರ್ ಎನ್ಐಐಟಿ ಸಂಸ್ಥೆಯಲ್ಲಿ ಕೆಲಸವನ್ನು ಮಾಡುತ್ತಿದ್ದರು.  ಅವರ ಮೊದಲ  ಚಿತ್ರವಾದ  ''[[ಯುದ್ಧಕಾಂಡ]]'' 1989 ರಲ್ಲಿ ಬಿಡುಗಡೆಯಾಯಿತು. ಅದರಲ್ಲಿ     [[ವಿ. ರವಿಚಂದ್ರನ್]] ಮತ್ತು [[ಪೂನಮ್ ದಿಲ್ಲೋನ್]] ನಟಿಸಿದ್ದರು . ನಂತರ ಅವರು ''[[ಬಾ ನನ್ನ ಪ್ರೀತಿಸು]]'',''[[ಗಂಧರ್ವ]]'' ಮತ್ತು ''[ಕೊಲ್ಲೂರ ಕಾಳ]] ದಂತಹ   ಕೆಲವು ಅಯಶಸ್ವಿ ಚಿತ್ರಗಳಲ್ಲಿ ನಟಿಸಿದರು.  ೧೯೯೦ ರ ''[[ರಾಣಿ ಮಹಾರಾಣಿ]]''  ಚಿತ್ರವು ಅವರನ್ನು  ಯಶಸ್ವಿ ತಾರೆಯನ್ನಾಗಿಸಿತು.   ನಂತರ ಅವರು ಅತ್ಯಂತ ಬೇಡಿಕೆಯ  ತಾರೆಗಳಲ್ಲಿ ಒಬ್ಬರಾದರು.  ಶಶಿಕುಮಾರ್ ಮತ್ತು  [[ಮಾಲಾಶ್ರೀ]]  ಜೋಡಿಯು  [[ಕನ್ನಡ]] ಚಲನಚಿತ್ರಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಜೋಡಿ ಎಂದು ಹೆಸರಾಗಿದೆ.  ಇತರ ನಟಿಯರಾದ  [[ಸುಧಾರಾಣಿ]], [[ತಾರಾ ]] ಮತ್ತು [[ಶ್ರುತಿ ]] ಇವರುಗಳು   ನಾಯಕಿಯರಾಗಿ ಅನೇಕ ಚಿತ್ರಗಳಲ್ಲಿ ಅವರೊಂದಿಗೆ ಅಭಿನಯಿಸಿದ್ದಾರೆ.
ಅವರು ಅನೇಕ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. [[ರಜನಿಕಾಂತ್]] ಅಭಿನಯದ  ''ಬಾಷಾ''  ಚಲನಚಿತ್ರವು ಅವುಗಳಲ್ಲಿ ಪ್ರಮುಖವಾಗಿದೆ.





{{ಚುಟುಕು}==ಅಪಘಾತ ಮತ್ತು ವೃತ್ತಿಜೀವನದ ಮೇಲೆ ಅದರ ಪರಿಣಾಮ==

ಶಶಿಕುಮಾರ್ ಅವರನ್ನು  ಸಮರ್ಥ, ಯೋಗ್ಯ ಹಾಗೂ ಸುಂದರವಾಗಿರುವ ಕೆಲವೇ  ನಾಯಕನಟರಲ್ಲೊಬ್ಬರು ಎಂದು ಪರಿಗಣಿಸಲಾದ ಸಮಯದಲ್ಲಿ, ಅವರು ದುರದೃಷ್ಟಕರವಾದ  ವಾಹನ ಅಪಘಾತವೊಂದಕ್ಕೆ ಒಳಗಾದರು.  ಅವರು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಗಿ ಬಂದು   ಮುಂದೆ ದೊಡ್ಡ ಬ್ಯಾನರ್ ನ  ಪ್ರಮುಖ ಪಾತ್ರಗಳಿಗೆ ಅವರನ್ನು ಪರಿಗಣಿಸಲಿಲ್ಲ.  ಇದು ಅವರು ರಾಜಕೀಯಕ್ಕೆ  ಧುಮುಕುವಂತೆ ಮಾಡಿತು. ಒಂದು ಸುದೀರ್ಘ ಸಮಯದ  ನಂತರ, ಅವರು ಚಿತ್ರರಂಗಕ್ಕೆ   ಮರಳಿ ಬಂದು  [[ಯಜಮಾನ]], [[ಹಬ್ಬ]] ಮತ್ತು [[ಯಾರಿಗೆ ಸಾಲುತ್ತೆ ಸಂಬಳ]]  ರೀತಿಯ ಬಹುತಾರಾ ಚಿತ್ರಗಳಲ್ಲಿನ   ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.


==ರಾಜಕೀಯ ಜೀವನ==
ಅವರು  ಚಿತ್ರದುರ್ಗ ಸಂಸತ್  ಕ್ಷೇತ್ರದಿಂದ ಸ್ಪರ್ದಿಸಿ ಯಶಸ್ವಿಯಾಗಿ   ಸಂಸತ್ ಸದಸ್ಯರಾದರು. 
==ಆಯ್ದ ಚಲನಚಿತ್ರಗಳ ಪಟ್ಟಿ==
{| border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;"
|- bgcolor="#CCCCCC" align="center"
! Year !! Film !!  Notes
|-
| 1988 || ''ಚಿರಂಜೀವಿ ಸುಧಾಕರ'' || ಖಳನಾಗಿ ಪ್ರವೇಶ
|-
| 1989 || ''[[ಯ್ಯುದ್ಧಕಾಂಡ]]'' ||
|-
| 1990 || ''ಮೃತ್ಯುಂಜಯ'' ||
|-
| 1990 || ''[[ರಾಣಿ ಮಹಾರಾಣಿ]]'' ||
|-
| 1991 || ''ಇಬ್ಬರು ಹೆಂಡಿರ ಮುದ್ದಿನ ಪೋಲೀಸ್'' ||
|-
| 1991 || ''ರೆಡಿಮೇಡ್ ಗಂಡ'' ||
|-
| 1992 || ''ಕನಸಿನ ರಾಣಿ'' ||
|-
| 1992 || ''[[ಶಾಂಭವಿ]]'' ||
|-
| 1992 || ''ಎದುರ್ಮನೆ ಗಂಡ ಪಕ್ಕದ್ಮನೆ ಹೆಂಡತಿ'' ||
|-
| 1993 || ''[[ಮುದ್ದಿನ ಮಾವ]]'' ||
|-
| 1994 || ''ಮುತ್ತಣ್ಣ'' ||
|-
| 1994 || ''ಸಮ್ಮಿಲನ' ||
|-
| 1994 || ''ಕುಂತಿಪುತ್ರ'' ||
|-
| 1995 || ''[[ಬಾಷಾ]]'' || ತಮಿಳು ಚಿತ್ರ
|-
| 1995 || ''ತುಂಬಿದ ಮನೆ'' ||
|-
| 1999 || ''ಖಳನಾಯಕ'' ||
|-
| 1999 || ''ಸ್ನೇಹಲೋಕ'' ||
|-
| 1999 || ''ಕೂಲಿರಾಜ'' ||
|-
| 2000 || ''ಯಾರಿಗೆ ಸಾಲುತ್ತೆ ಸಂಬಳ'' ||
|-
| 2000 || ''[[ಯಜಮಾನ]]'' ||
|-
| 2001 || ''ಬಹಳ ಚೆನ್ನಾಗಿದೆ'' ||
|-
| 2002 || ''ಬಾನಲ್ಲು ನೀನೆ ಭುವಿಯಲ್ಲು ನೀನೆ'' ||
|-
| 2004 || ''ಸಾಹುಕಾರ'' ||
|-
| 2007 || ''ಶೃಂಗಾರಂ'' || ತಮಿಳು ಚಿತ್ರ
|-
| 2007 || ''ಮಾಸ್ತಿ (ಚಲನಚಿತ್ರ)|ಮಾಸ್ತಿ" ||
|-
| 2008 || ''ಸ್ಲಂ ಬಾಲ'' ||
|-
| 2010 || ''ಲಿಫ್ಟ್ ಕೊಡ್ಲಾ'' ||
|-
| 2010 || ''ನಾರದ ವಿಜಯ' ||
|-
| 2010 || ''ರಾಮೇಗೌಡ Vs ಕೃಷ್ಣರೆಡ್ಡಿ'' ||
|-
| 2011 || ''[[ಶ್ರೀ ನಾಗಶಕ್ತಿ]]'' ||
|-
| 2011 || ''[[ಟೇಕ್ ಇಟ್ ಈಝಿ (ಚಲನಚಿತ್ರ)|ಟೇಕ್ ಇಟ್ ಈಝಿ]]'' ||
|-
| 2012 || ''[[ಸಂಗೊಳ್ಳಿ ರಾಯಣ್ಣ (ಚಲನಚಿತ್ರ)|ಸಂಗೊಳ್ಳಿ ರಾಯಣ್ಣ]]'' ||
|-
| 2013 || ''[[ಗಲಾಟೆ]]'' || 
|-
| 2013 || ''[[ವಿರಾಟ್]]'' || ತಯಾರಿಕೆಯ ಕೊನೆ ಹಂತದಲ್ಲಿದೆ
|-
| 2013 || ''ವಿಘ್ನ'' || ಚಿತ್ರೀಕರಣ ನಡೆದಿದೆ
|-
| 2013 || ''ನಾ ಮಹಾಬುದ್ಧಿವಂತ'' || ಘೋಷಿಸಲಾಗಿದೆ-
|}