Difference between revisions 330345 and 330347 on knwiki

ಈ ಪುಟಕ್ಕೆ ನೀವು ಮಾಹಿತಿ ಸೇರಿಸ=ನನ್ನ ಬೆಳವಣಿಗೆ ಮತ್ತು ಯಕ್ಷಗಾನದಲ್ಲಾದ  ಬದಲಾವಣೆ=

ನಾನು ಹುಟ್ಟಿ ಬೆಳೆದದ್ದು ಕರ್ನಾಟಕದ ದಕ್ಷಿಣ ಕರಾವಳಿಯಲ್ಲಿ. ಹಾಗಾಗಿ ನನ್ನ ಯಕ್ಷಗಾನ ನಂಟು ಬಲು ಸಹಜ. ನನ್ನ ಶಾಲಾ ಶಿಕ್ಷಣದ ಜೊತೆಗೇ ನನಗೆ ಯಕ್ಷಗಾನದ ಪರಿಚಯವಾಯಿತು. ಹಾಗಂತ ಶಾಲೆಯಲ್ಲಿ ಯಕ್ಷಗಾನ ಕಲೆಗೆ ಪ್ರಾಮುಖ್ಯತೆ ನೀಡುತ್ತಿದ್ದರು ಎಂದರ್ಥವಲ್ಲ.ಬಹುಶಃ  ಆ ದಿನಗಳಲ್ಲಿ  (ನಾನು ಆಗ ಆರೇಳು ವರ್ಷದ ಮಗು) ಯಕ್ಷಗಾನವನ್ನು ಒಂದು ಕಲೆಯಾಗಿ ನೋಡುವಷ್ಟು ಪಕ್ವನಾಗಿದ್ದೆ. ನನ್ನ ಆರಂಭದ ನಂಟು ಕೇವಲ ಯಕ್ಷಗಾನದ ಒಂದು ಪ್ರಭೇದಕಷ್ಟೇ ಸೀಮಿತವಾಗಿತ್ತು.  ಅದು ತೆಂಕುತಿಟ್ಟಿನ 'ಬಯಲಾಟ' ಕಷ್ಟೇ.. ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳು ಯಕ್ಷಗಾನದ ಪ್ರಮುಖ ಎರಡು ಶೈಲಿಗಳು (ತಿಟ್ಟುಗಳೆಂದರೆ ಶೈಲಿಗಳು). ಈ ಶೈಲಿಯನ್ನು ಆ ಆ ತಿಟ್ಟುಗಳು ಅನುಸರಿಸುವ ಸಂಗೀತ, ವೇ‌ಷಭೂಷಣ, ನಾಟ್ಯ ಶೈಲಿಗಳಿಂದ ಸುಲಭವಾಗಿ ಪ್ರತ್ಯೇಕಿಸಬಹುದು. ಕಾಸರಗೋಡುನಿಂದ (ಆಗ  ಅದು ಕೇರಳ ರಾಜ್ಯದ ಭಾಗ) ಸುಮಾರು ಉಡುಪಿಯ ವರೆಗೆ ತೆಂಕು ತಿಟ್ಟಾದರೆ,   ಬ್ರಹ್ಮಾವರದಿಂದ ಕುಂದಾಪುರ, ತೀರ್ಥಹಳ್ಳಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲ ಬಡಗು ತ್ತೀಟ್ಟಿನ ಪ್ರಭಾವ್. ಹಾಗಾಗಿ, ಯಕ್ಷಗಾನದ  ಈ ಪ್ರಬೇಧವನ್ನು ಭೌಗೋಳಿಕವಾಗಿ ನೋಡಲು ಸಾಧ್ಯ ಕೂಡ. ನಾನು ಈ ಮೊದಲೇ ಹೇಳಿದಂತೆ, ನನ್ನ ಯಕ್ಷಗಾನದ ನಂಟು ಬಯಲಾಟಕಷ್ಟೇ ಸೀಮಿತವಾಗಿರಲು ಪ್ರಮುಖ ಕಾರಣ ನನಗಿದ್ದ ಸ್ವಾತಂತ್ರ್ಯ, ಕುತೂಹಲ, ಪ್ರೋತ್ಸಾಹ, ಶಾಲಾ ವಿದ್ಯಾಭ್ಯಾಸದ ಬಗ್ಗೆ ನನ್ನ ಸಹೋದರ ಬಂಧುಗಳು ಮತ್ತು ತಂದೆ ತಾಯಿಯರಿಗಿದ್ದ ಅತೀ ನಿರೀಕ್ಷೆಗಳು ಕಾರಣವಿರಬಹುದು. ಹಾಗಾಗಿ ಸುಮಾರು ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಯುವರೆಗೆ ಯಕ್ಷಗಾನ ಕಲೆಯ ಇತರ ಪ್ರಬೇಧಗಳ ಪರಿಚಯ ನನಗಾಗಲಿಲ್ಲ. ಬಯಲಾಟದಲ್ಲೂ ನನ್ನ ತೆರೆದಿಡುವಿಕೆ ಎರಡು ಮೇಳಗಳಿಗಷ್ೞೇ (ಕಟೀಲು ಮತ್ತು ಮುಂಡ್ಕೂರು ಮೇಳಗಳು) ಸೀಮಿತವಾಗಿತ್ತು. ಏಕೆಂದರೆ, ಈ ಮೇಳಗಳ ಪ್ರದರ್ಶನಗಳು (ಯಕ್ಷಗಾನದ ಭಾ‍ಷೆಯಲ್ಲಿ ಇದು  'ಆಟ'ಗಳು) ನನ್ನ ಊರಿನಲ್ಲಿ ಮತ್ತು ಸಮೀಪದ ಊರಿನಲ್ಲಿ ನಡೆಯುತ್ತಿದ್ದವು. ಏಕೆಂದರೆ ಈ ಪ್ರದರ್ಶನಗಳು ರಾತ್ರಿ ಪೂರ್ತಿ ನಡೆಯುವುದರಿಂದ ಬಹಳ ದೂರಕ್ಕೆ ಹೋಗಿ ಆಟ ನೋಡುವ ಅವಕಾಶ ನನಗಿರಲಿಲ್ಲ. ಇದಕ್ಕೆ ತಂದೆ ತಾಯಿಯ ಒಪ್ಪಿಗೆ ಸಿಗುತ್ತಿರಲಿಲ್ಲ. ಅದಕ್ಕೆ ಅವರ ಭಯ ಆತಂಕಗಳೂ ಕಾರಣವಿರಬಹುದು.