Difference between revisions 330367 and 330368 on knwiki

=ನನ್ನ ಬೆಳವಣಿಗೆ ಮತ್ತು ಯಕ್ಷಗಾನದಲ್ಲಾದ  ಬದಲಾವಣೆ=

          ನಾನು ಹುಟ್ಟಿ ಬೆಳೆದದ್ದು ಕರ್ನಾಟಕದ ದಕ್ಷಿಣ ಕರಾವಳಿಯಲ್ಲಿ. ಹಾಗಾಗಿ ನನ್ನ ಯಕ್ಷಗಾನ ನಂಟು ಬಲು ಸಹಜ. ನನ್ನ ಶಾಲಾ ಶಿಕ್ಷಣದ ಜೊತೆಗೇ ನನಗೆ ಯಕ್ಷಗಾನದ ಪರಿಚಯವಾಯಿತು. ಹಾಗಂತ ಶಾಲೆಯಲ್ಲಿ ಯಕ್ಷಗಾನ ಕಲೆಗೆ ಪ್ರಾಮುಖ್ಯತೆ ನೀಡುತ್ತಿದ್ದರು ಎಂದರ್ಥವಲ್ಲ.ಬಹುಶಃ  ಆ ದಿನಗಳಲ್ಲಿ  (ನಾನು ಆಗ ಆರೇಳು ವರ್ಷದ ಮಗು) ಯಕ್ಷಗಾನವನ್ನು ಒಂದು ಕಲೆಯಾಗಿ ನೋಡುವಷ್ಟು ಪಕ್ವನಾಗಿದ್ದೆ. ನನ್ನ ಆರಂಭದ ನಂಟು ಕೇವಲ ಯಕ್ಷಗಾನದ ಒಂದು ಪ್ರಭೇದಕಷ್ಟೇ ಸೀಮಿತವಾಗಿತ್ತು.  ಅದು ತೆಂಕುತಿಟ್ಟಿನ 'ಬಯಲಾಟ' ಕಷ್ಟೇ.. ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳು ಯಕ್ಷಗಾನದ ಪ್ರಮುಖ ಎರಡು ಶೈಲಿಗಳು (ತಿಟ್ಟುಗಳೆಂದರೆ ಶೈಲಿಗಳು). ಈ ಶೈಲಿಯನ್ನು ಆ ಆ ತಿಟ್ಟುಗಳು ಅನುಸರಿಸುವ ಸಂಗೀತ, ವೇ‌ಷಭೂಷಣ, ನಾಟ್ಯ ಶೈಲಿಗಳಿಂದ ಸುಲಭವಾಗಿ ಪ್ರತ್ಯೇಕಿಸಬಹುದು. ಕಾಸರಗೋಡುನಿಂದ (ಆಗ  ಅದು ಕೇರಳ ರಾಜ್ಯದ ಭಾಗ) ಸುಮಾರು ಉಡುಪಿಯ ವರೆಗೆ ತೆಂಕು ತಿಟ್ಟಾದರೆ,   ಬ್ರಹ್ಮಾವರದಿಂದ ಕುಂದಾಪುರ, ತೀರ್ಥಹಳ್ಳಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಡಗು ತ್ತೀಿಟ್ಟಿನ   ಪ್ರಭಾವ.   ಹಾಗಾಗಿ, ಯಕ್ಷಗಾನದ  ಈ ಪ್ರಬೇಧವನ್ನು ಭೌಗೋಳಿಕವಾಗಿ ನೋಡಲು ಸಾಧ್ಯ ಕೂಡ. ನಾನು ಈ ಮೊದಲೇ ಹೇಳಿದಂತೆ, ನನ್ನ ಯಕ್ಷಗಾನದ ನಂಟು ಬಯಲಾಟಕಷ್ಟೇ ಸೀಮಿತವಾಗಿರಲು ಪ್ರಮುಖ ಕಾರಣ ನನಗಿದ್ದ ಸ್ವಾತಂತ್ರ್ಯ, ಕುತೂಹಲ, ಪ್ರೋತ್ಸಾಹ, ಶಾಲಾ ವಿದ್ಯಾಭ್ಯಾಸದ ಬಗ್ಗೆ ನನ್ನ ಸಹೋದರ ಬಂಧುಗಳು ಮತ್ತು ತಂದೆ ತಾಯಿಯರಿಗಿದ್ದ ಅತೀ ನಿರೀಕ್ಷೆಗಳು ಕಾರಣವಿರಬಹುದು. ಹಾಗಾಗಿ ಸುಮಾರು ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಯುವರೆಗೆ ಯಕ್ಷಗಾನ ಕಲೆಯ ಇತರ ಪ್ರಬೇಧಗಳ ಪರಿಚಯ ನನಗಾಗಲಿಲ್ಲ. ಬಯಲಾಟದಲ್ಲೂ ನನ್ನ ತೆರೆದಿಡುವಿಕೆ ಎರಡು ಮೇಳಗಳಿಗಷ್ೞೇ (ಕಟೀಲು ಮತ್ತು ಮುಂಡ್ಕೂರು ಮೇಳಗಳು) ಸೀಮಿತವಾಗಿತ್ತು. ಏಕೆಂದರೆ, ಈ ಮೇಳಗಳ ಪ್ರದರ್ಶನಗಳು (ಯಕ್ಷಗಾನದ ಭಾ‍ಷೆಯಲ್ಲಿ ಇದು  'ಆಟ') ನನ್ನ ಊರಿನಲ್ಲಿ ಮತ್ತು ಸಮೀಪದ ಊರಿನಲ್ಲಿ ನಡೆಯುತ್ತಿದ್ದವು. ಏಕೆಂದರೆ ಈ ಪ್ರದರ್ಶನಗಳು ರಾತ್ರಿ ಪೂರ್ತಿ ನಡೆಯುವುದರಿಂದ ಬಹಳ ದೂರಕ್ಕೆ ಹೋಗಿ ಆಟ ನೋಡುವ ಅವಕಾಶ ನನಗಿರಲಿಲ್ಲ. ಇದಕ್ಕೆ ತಂದೆ ತಾಯಿಯ ಒಪ್ಪಿಗೆ ಸಿಗುತ್ತಿರಲಿಲ್ಲ. ಅದಕ್ಕೆ ಅವರ ಭಯ ಆತಂಕಗಳೂ ಕಾರಣವಿರಬಹುದು. ಈ ಹುಡುಗ ಆಟಕ್ಕೆ (ಯಕ್ಷಗಾನಕ್ಕೆ) ಹೋದರೆ ರಾತ್ರಿ ಯಾವುದಾದರೂ ತೊಂದರೆಗಳಿಗೆ ಒಳಗಾಗಬಹುದು ಎನ್ನುವ ಅವರ ಭಯ ಇದಕ್ಕೆ ಕಾರಣವಿರಬಹುದು. 

        ನನಗೆ ಯಕ್ಷಗಾನದ ಪ್ರಾಥಮಿಕ ಪರಿಚಯ ಮಾಡಿಸಿದವರು  ನನ್ನ ತೀರ್ಥರೂಪರವರು. ಅವರ ವಿಶ್ರಾಂತಿ ಸಮಯದಲ್ಲಿ (ಅವರು ಕೃ‍‍‍‍ಷಿಕ) ಪ್ರಸಿದ್ಧ ಯಕ್ಷಗಾನ ಭಾಗವತರು, ಚೆಂಡೆವಾದಕರು, ಮದ್ದಳೆವಾದಕರು (ಯಕ್ಷಗಾನ ಮೃದಂಗ), ವೇ‍ಷಧಾರಿಗಳ ಹಿನ್ನೆಲೆ, ವ್ಯಕ್ತಿಪರಿಚಯ ಮತ್ತು ವಿಶಿ‍‍ಷ್ಟತೆಗಳನ್ನು ಹೇಳುತಿದ್ದರು. ಇದನ್ನು ಕೇಳುತ್ತಾ, ಆಟ ನೋಡುತ್ತಾ ನನ್ನ ಯಕ್ಷಗಾನದ ಅಭಿರುಚಿ ಹೆಚ್ಚುತ್ತಾ ಹೋಯಿತು. ಇದರ ಜೊತೆ ನಮ್ಮ ತಂದೆ ಯಕ್ಷಗಾನದ ಪೂರ್ವರಂಗದ ಹಾಡುಗಳನ್ನು ಗುನುಗುತ್ತಿದ್ದರು. ಬಹಳ ಮುಖ್ಯವಾಗಿ ಮಂಗಳೂರು ಆಕಾಶವಾಣಿಯಿಂದ ವಾರಕ್ಕೊಮ್ಮೆ  ಪ್ರಸಾರವಾಗುತ್ತಿದ್ದ ಯಕ್ಷಗಾನ ತಾಳಮದ್ದಳೆ (ಆಗ ನನಗೆ ಯಕ್ಷ್ಗಗಾನ ಮತ್ತು ತಾಳಮದ್ದಳೆಯ ವ್ಯತ್ಯಾಸ ತಿಳಿದಿರಲಿಲ್ಲ!)  ನನ್ನ ಯಕ್ಷ್ಗಗಾನದ ಕುರಿತ ತಿಳಿವಳಿಕೆ ಮತ್ತು ಆಸಕ್ತಿಯನ್ನು ಮತ್ತ‍‍ಷ್ಟು ಕೆರಳಿಸಿತು. ನನಗೆ ಯಕ್ಷಗಾನದಲ್ಲಿ ಪ್ರಥಮ ಪರಿಚಯಗೊಂಡ ಕಲಾವಿದರು - ಕಿರಿಯ ಬಲಿಪ ನಾರಾಯಣ ಭಾಗವತರು, ಗೋಪಾಲಕೃ‍ಷ್ಣ ಭಟ್ (ಭಾಗವತರು), ಕೋಳ್ಯೂರು ರಾಮಚಂದ್ರರಾಯರು (ಸ್ತ್ರೀವೇಷ) ತಿವಿಕ್ರಮ ಶೆಣೈ, ಅರುವ ಕೊರಗಪ್ಪ ರೈ, ಕದ್ರಿ ಮನೋಹರ್  (ಖಳನಾಯಕ, ರಾಜವೇ‍‍ಷ)  ಜಯರಾಮ ಶೆಟ್ಟಿ, ಪರಮೇಶ್ವರ, ಮುಖ್ಯಪ್ರಾಣ ಕಿನ್ನಿಗೋಳಿ, ಮಿಜಾರು ಅಣ್ಣಪ್ಪ, ಪುಳಿಂಚೆ ರಾಮಯ್ಯ ರೈ (ಹಾಸ್ಯಗಾರರು), ಶೇಣಿ ಗೋಪಾಲಕೃ‍ಷ್ಣ ಭಟ್ (ಆಗ ಶೇಣಿಗೂ , ಶ್ರೇಣಿಗೂ ವ್ಯತ್ಯಾಸ ತಿಳಿದಿರಲಿಲ್ಲ ಹಾಗಾಗಿ ನಾನು ಅವರನ್ನು ಶ್ರೇಣಿ ಎಂದೇ ಕರೆಯುತ್ತಿದ್ದೆ) , ಮಲ್ಪೆ  ಶಂಕರನಾರಾಯಣ ಸಾಮಗ (ದೊಡ್ಡ ಸಾಮಗರು)  ರಾಮದಾಸ್ ಸಾಮಗ (ಸಣ್ಣ ಸಾಮಗರು), ವಾಸುದೇವ ಸಾಮಗ,   ಕುಂಬ್ಳೆ  ಶ್ರೀಧರ ರಾವ್ (ಸ್ತ್ರೀವೇಷ),ಬಣ್ಣದ  ಮಾಲಿಂಗ (ಮಹಾಲಿಂಗ). ಸಾಮಾನ್ಯವಾಗಿ ಎಲ್ಲ ಕಲಾವಿದರೂ ತಮ್ಮ ಊರಿನು ಅಥವಾ ಅವರ ಮನೆತನದ ಹೆಸರಿನ ಉಪಾಧಿಯನ್ನು ಹೊಂದಿರುತ್ತಿದ್ದರು - ಕುಂಬ್ಳೆ, ಶೇಣಿ, ಸಂಪಾಜೆ, ಬಲಿಪ, ಸಾಮಗ, ಅರುವ, ಬೋಳಾರು, ಅಡ್ವೆ ,ಇತ್ಯಾದಿ. ಇವರೆಲ್ಲ ಈ ಉಪಾಧಿಗಳಿಂದಲೇ ಗುರುತಿಸಲ್ಪಟ್ಟವರು.

ನಾನು ಹೈಸ್ಕೂಲ್ ಓದುವಾಗ ಟಿಂಟ್ ಮೇಳಗಳು, ತಾಳಮದ್ದಳೆ ಪ್ರಕಾರದ ಪರಿಚಯವಾಯಿತು. ಬಯಲಾಟಗಳು ಉಚಿತವಾಗಿ, ಅದರ ವೀಕ್‍‍ಷಣೆ ಎಲ್ಲರಿಗೂ ಮುಕ್ತವಾಗಿರುತ್ತದೆ ಮತ್ತು ಅದು ಬಯಲಿನಲ್ಲಿ ನಡೆಯುವ ಪ್ರದ್