Difference between revisions 332536 and 332539 on knwiki

=== ಮಕ್ಕಳ ಸಾಹಿತ್ಯ ===
------------------
ಮಕ್ಕಳ ಕವನ ವನ್ನು  ಮಕ್ಕಳ ಕಥೆ ಮೊದಲಾದವುಗಳನ್ನು ಬರೆದು ಮಕ್ಕಳ ಸಾಹಿತ್ಯ ಬೆಳಸಿದವರಲ್ಲಿ [[ದೇವುಡು ನರಸಿಂಹ ಶಾಸ್ತ್ರಿ]] , [[ಜಿ.ಪಿ.ರಾಜರತ್ನಂ]].[[ ಕೆ.ವಿ.ಪುಟ್ಟಪ್ಪ ]], [[ಹೊಯಿಸಳ]],[[ ಟಿ.ಎಂ.ಆರ್.ಸ್ವಾಮಿ]], ಕಲಾಕುಮಾರ ([[ಡಾ.ದೊಡ್ಡೇರಿ ವೆಂಕಟಗಿರಿರಾವ್]]. ) [[ಸಿದ್ದಯ್ಯ ಪುರಾಣಿಕ]] ಮೊದಲಾದವರು ಪ್ರಮುಖರು. ಪುರಂದರದಾಸರು ಚಿಕ್ಕಮಕ್ಕಳಿಗಾಗಿ ಕೆಲವು ಸಣ್ಣ -ಸರಳ ಹಾಡುಗಳನ್ನು ರಚಿಸಿದ್ದಾರೆ. 
*ಇಲ್ಲಿ ಕೆಲವು ಜನಪ್ರಿಯ  ಮಕ್ಕಳ ಕವನಗಳನ್ನು  ಉದಾಹರಣೆಗಾಗಿ ಕೊಟ್ಟಿದೆ :
(contracted; show full)  ಒಂದರಿಂದ ಹತ್ತು, ಊಟದ ಆಟವು ಮುಗಿದಿತ್ತು|| 
--  ಜಿ.ಪಿ ರಾಜರತ್ನಂ.||
</poem>
* ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ

=== ಗೋವಿನ ಹಾಡು ಅಥವಾ ಪುಣ್ಯಕೋಟಿಯ ಕಥೆ ===
------------------------------------------

ಗೋವಿನ ಹಾಡು
(ಅಜ್ಞಾತ ಕವಿ )
ಈಗೋವಿನ ಹಾಡು ಕನ್ನಡನಾಡಿನಲ್ಲಿ ಪ್ರಸಿದ್ಧವಾದ ವಾದ ಒಂದು ಜನಪದ ಮಕ್ಕಳ ಕಾವ್ಯ . ಇದನ್ನು ಹಿಂದೆ ಪ್ರಾಥಮಿಕ ಶಾಲೆಯ ಮಕ್ಕಳ ಪಠ್ಯದಲ್ಲಿ ಸೇರಿಸಲಾಗಿತ್ತು . ಪ್ರತಿಯೊಬ್ಬರೂಇದನ್ನು ಕಲಿತು ಮಕ್ಕಳುದೊಡ್ಡವರು ಆದಿಯಗಿ ಇದರ ಕರುಣ ರಸದ ಕಾವ್ಯಾನಭವ ಪಡೆಯುತ್ತಿದ್ದರು. ಮಕ್ಕಳು ಸತ್ಯವನ್ನೇ ಹೇಳಬೇಕೆಂಬ ಆದರ್ಶವನ್ನ ಹೋದುತ್ತಿದ್ದರು . ಆದೆ ಈಗಿನ ವಿಚಾರ ವಂತರಾದ ಶಿಕ್ಷಣ ತಜ್ಞರು ಇದು ಮಕ್ಕಳಿಗೆ ಅತ ಆದರ್ಶವಾದ ಒಳ್ಲೆಯದಲ್ಲವೆಂದು ಮಕ್ಕಳ ಪಠ್ಯದಿಂದ ತೆಗೆದು ಹಕಿದಂತೆಎ ತೋರುತ್ತದೆ. ಈ ಗೋವನ ಹಾಡನ್ನೇ ಆಧಾರವಗಿಟ್ಟಕೊಂಡು ತಬ್ಬಲಿಯು ನೀನಾದೆ ಮಗನೆ ಎಂಬ ಚಲನಚಿತ್ರ ತೆಗೆಯಲಾಗಿದೆ (ಪುಣ್ಯಕೋಟಿ) . ಅದಕ್ಕೆ ಸಾಹಿತಿಗಳಾದ ಡಾ||ಎಲ್. ಎಸ್. ಭೈರಪ್ಪನವರ ಅದೇ ಹೆಸರಿನ ಕಾದಂಬರಿ ಆಧಾರ. ಅದನ್ನು ಬಿ.ವಿ.ಕಾರಂತ ಮತ್ತು ಗಿರೀಶ ಕಾರ್ನಾಡ್ ರವರು ಜಂಟಿಯಾಗಿ ನಿರ್ದೇಶಿಸಿದ್ದರು. ಅದಕ್ಕೆ ಭಾಸ್ಕರ ಚಂದಾವರ್ಕರವರ ಸಂಗೀತ ನಿರ್ದೇಶನ.   ಆ ಚಿತ್ರ ಬಹಳ ಜನಪ್ರಿಯತೆ ಹೊಂದಿತ್ತು.

ಧರಣಿ ಮಂಡಲ ಮಧ್ಯದೊಳಗೆ 
ಮೆರೆಯುತಿಹ ಕರ್ನಾಟ ದೇಶದೊ
ಳಿರುವ ಕಾಳಿಂಗ ನೆಂಬ ಗೊಲ್ಲನ 
ಪರಿಯ ನಾನೆಂತು ಪೇಳ್ವೆನು ||೧||

ಉದಯ ಕಾಲದೊಳೆದ್ದು ಗೊಲ್ಲನು 
ನದಿಯ ಸ್ನಾನವ ಮಾಡಿಕೊಂಡು 
ಮುದದಿ ತಿಲಕವ ಹಣೆಯೊಳಿಟ್ಟು 
ಚದುರ ಶಖೆಯನು ಹಾಕಿದ  ||೨||

ಎಳೆಯ ಮಾವಿನ ಮರದ ಕೆಳಗೆ 
ಕೊಳಲನೂದುತ ಗೊಲ್ಲ ಗೌಡನು 
ಬಳಸಿ ನಿಂದಿಹ ತುರುಗಳನ್ನು 
ಬಳಿಗೆ ಕರೆದನು ಹರುಷದಿ ||೩||

ಗಂಗೆ ಬಾರೆ ಗೌರಿ ಬಾರೇ 
ತುಂಗ ಭದ್ರೇ ತಾಯಿ ಬಾರೇ
ಕಾಮಧೇನು ನೀನು ಬಾರೆಂದು 
ಪ್ರೇಮದಲಿ ಗೊಲ್ಲ ಕರೆದನು ||೪||

ಗೊಲ್ಲ ಕರೆದಾ ದನಿಯ ಕೇಳಿ 
ಎಲ್ಲ ಹಸುಗಳು ಬಂದು ನಿಂತು
ಚಲ್ಲಿ ಸೂಸಿ ಹಾಲ ಕರೆಯಲು 
ಅಲ್ಲಿ ತುಂಬಿತು ಬಿಂದಿಗೆ ||೫||

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತನೆಚಿದೆಂಬ ವ್ಯಾಘ್ರನು 
ಅಬ್ಬರಿಸಿ ಹಸಿ ಹಸಿದು ಬೆಟ್ಟದ 
ಕಿಬ್ಬಿಯೊಳು ತಾನಿರ್ದನು (ತಾನಿದ್ದನು)  ||೬||

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ 
ತುದುಕಲೆರಗಿದ ರಭಸಕಂಜಿ 
ಚದುರಿ ಹೋದವು ಹಸುಗಳು  ||೭||

ಪುಣ್ಯಕೋಟಿ ಎಂಬ ಗೋವು 
ತನ್ನ ಕಂದನ ನೆನೆದುಕೊಂಡು 
ಮುನ್ನ ಹಾಲನು ಕೊಡುವೆನೆನುತ 
ಚೆನ್ನನೇ (ಚೆನ್ನಾಗಿ) ತಾ ಬರುತಿರೆ  ||೮||
ಇಂದೆನಗೆ ಆಹಾರ ಸಿಕ್ಸಿತು  
ಎಂದು ಬೇಗನೆ ದುಷ್ಟ ವ್ಯಾಘ್ರನು 
ಬಂದು ಬಳಸಿ ಅಡ್ಡಗಟ್ಟಿ 
ನಿಂದನಾ ಹುಲಿರಾಯನು || ೯||

ಮೇಲೆ ಬಿದ್ದು ನಿನ್ನನೀಗಲೆ 
ಬೀಳ ಹೊಯ್ವೆನು ನಿನ್ನ ಹೊಟ್ಟೆಯ  
ಸೀಳಿ ಬಿಡುವೆನು ಎನುತ ಕೋಪದಿ 
ಖೂಳ ವ್ಯಾಘ್ರನು ಕೂಗಲು  ||೧೦||

 ಒಂದು ಬಿನ್ನಹ ಹುಲಿಯೆ ಕೇಳು 
ಕಂದನಿರುವನು ದೊಡ್ಡಿಯೊಳಗೆ 
ಒಂದು ನಿಮಿಷದಿ ಮೊಲೆಯ ಕೊಟ್ಟು 
ಬಂದು ಸೇರುವೆನಿಲ್ಲಿಗೆ       ||೧೧||

ಹಸಿದ ವೇಳೆಗೆ ಸಿಕ್ಕಿದೊಡವೆಯ 
ವಶವ ಮಾಡದೆ ಬಿಡಲು -ನೀನು 
ನುಸುಳಿಹೋಗುವೆ ಮತ್ತೆ ಬರುವೆಯ 
ಹುಸಿಯನಾಡುವೆ ಎಂದಿತು ||೧೨||

ಸತ್ಯವೇ ನಮ್ಮ ತಾಯಿ ತಂದೆ 
ಸತ್ಯವೇ ನಮ್ಮ ಬಂಧು ಬಳಗ 
ಸತ್ಯ ವಾಕ್ಯಕೆ ತಪ್ಪಿ ನಡೆದರೆ 
ಮೆಚ್ಚನಾ ಜಗದೀಶನು (ಪರಮಾತ್ಮನು) ||೧೩||

ಕೊಂದು ತಿನ್ನುವೆನೆಂ ಹುಲಿಗೆ 
ಚೆಂದದಿಂದಲಿ ಭಾಷೆಯಿತ್ತು 
ಕಂದ ನಿನ್ನು ನೋಡಿ ಹೋಗುವೆ 
ನೆಂದು ಬಂದಿತು  ದೊಡ್ಡಿಗೆ  ||೧೪|| 
  
ಆಮ್ಮ ನೀನು ಸಾಯಲೇಕೆ 
ನಮ್ಮ ತಬ್ಬಲಿ ಮಾಡಲೇಕೆ 
ಸುಮ್ಮನಿಲ್ಲಿಯೆ ನಿಲ್ಲೆನುತ್ತ 
ಅಮ್ಮನಿಗೆ ಕರು ಹೇಳಲು  ||೧೫|| 

ಕೊಟ್ಟ ಭಾಷೆಗೆ ತಪ್ಪಲಾರೆನು 
ಕೆಟ್ಟಯೋಚನೆ ಮಾಡಲಾರೆನು 
ನಿಷ್ಠೆಯಿಂದಲಿ ಪೋಪೆನಲ್ಲಿಗೆ 
ಕಟ್ಟಕಡೆಗಿದು ಖಂಡಿತ  || ೧೬||

ಆರ ಮೊಲೆಯನು ಕುಡಿಯಲಮ್ಮ 
ಆರ ಸೇರಿ ಬದುಕಲಮ್ಮ 
ಆರ ಬಳಿಯಲಿ ಮಲಗಲಮ್ಮ 
ಆರು ನನಗೆ ಹಿತವರು || ೧೭||

ಆಮ್ಮಗಳಿರಾ ಅಕ್ಕಗಳಿರಾ 
ನಮ್ಮ ತಾಯೊಡಹುಟ್ಟುಗಳಿರ 
ನಿಮ್ಮ ಕಂದ ನೆಂದು ಕಾಣಿರಿ
ತಬ್ಬಲಿಯನೀ ಕರುವನು   ||೧೮||

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ 
ಕಂದ ನಿಮ್ಮವನೆಂದು ಕಾಣಿರಿ 
ತಬ್ಬಲಿಯನೀ ಕರುವನು   ||೧೯||

ಕಟ್ಟ ಕಡೆಯಲಿ ಮೇಯಬೇಡ 
ಬೆಟ್ಟದೊತ್ತಿಗೆ ಹೋಗಬೇಡ 
ದುಷ್ಟ ವ್ಯಾಘ್ರನು ಹೊಂಚುತಿರುವನು 
ನಟ್ಟ ನಡುವಿರು ಕಂದನೆ   ||೨೦|| 

 ತಬ್ಬಲಿಯು ನೀನಾದೆ ಮಗನೆ 
ಹೆಬ್ಬುಲಿಯ  ಬಾಯನ್ನು ಹೊಗುವೆನು 
ಇಬ್ಬರಾ ಋಣ ತೀರಿತೆಂದು 
ತಬ್ಬಿಕೊಂಡಿತು ಕಂದನ   ||೨೧|| 

ಗೋವು ಕರುವನು ಬಿಟ್ಟು ಬಂದು 
ಸಾವಕಾಶವ ಮಾಡದಂತೆ 
ಗವಿಯ ಬಾಗಿಲ ಸೇರಿನಿಂತು 
ತವಕದಲಿ ಹುಲಿಗೆಂದಿತು  ||೨೨||

ಖಂಡವಿದೆ ಕೋ ಮಆಂಸವಿದೆ ಕೋ 
ಗುಂಡಿಗೆಯ ಬಿಸಿರಕ್ತವಿದೆ ಕೋ 
ಚಂಡ ವ್ಯಾಘ್ರನೆ ನೀದೆಲ್ಲವ 
ನುಂಡು ಸಂತಸದಿಂದಿರು  ||೨೩||

ಪುಣ್ಯ ಕೋಟಿಯ ಮಾತ ಕೇಳಿ 
ಕಣ್ಣ ನೀರನು  ಸುರಿಸಿ ನೊಂದು 
ಕನ್ನೆ ಯಿವಳನು ಕೊಂದು ತಿಂದರೆ 
ಎನ್ನ ಮೆಚ್ಚನು ದೇವನು (ಮೆಚ್ಚಾನಾ ಪರಮಾತ್ಮನು) ||೨೪||

ಎನ್ನ ಒಡಹುಟ್ಟಕ್ಕ ನೀನು 
ನಿನ್ನ ಕೊಂದು ಏನ ಪಡೆವೆನು 
(ನಿನ್ನ ಕೊಂದು ನಾನೇನ ಪಡೆವೆನು)
ಎನ್ನುತಾ ಹುಲಿ ಹಾರಿ ನೆಗೆದು 
ತನ್ನ ಪ್ರಾಣವ ಬಿಟ್ಟತು   ||೨೫||

*ಟಿಪ್ಪಣಿ : ಶಬ್ದಾರ್ಥ : -ಪರಿ =ಸಂಗತಿ, ರೀತಿ, ; ತಿಲಕ = ಹಣೆ ಬೊಟ್ಟು. ; ಶಿಖೆ =ಜುಟ್ಟು, ; ಬಳಸಿ =ಸುತ್ತುವರಿದು ; ತುರು =ಹಸು, ; ಮಲೆ = ಕಾ ಡಿನಿಂದ ಕೂಡಿದ  ಬೆಟ್ಟ, ; ಕಿಬ್ಬಿ =ಬೆಟ್ಟದ ಇಳಿಜಾರು ; ಮೊರೆ ಗರ್ಜಿಸು , ; ತುಡುಕು = ಹಿಡಿ, ; ಮುನ್ನ = ಮೊದಲು ; ಬೀಳ ಹೊಯ್ = ಬೀಳುವಂತೆ ಹೊಡೆಯುವುದು ; ಖೂಳ =ದುಷ್ಟ ; ದೊಡ್ಡಿ =ಕೊಟ್ಟಿಗೆ ; ವಡವೆ =ವಸ್ತು ; ಹುಸಿ = ಸುಳ್ಳು ; ತಬ್ಬಲಿ ಅನಾಥ (ತಾಯಿ ಇಲ್ಲದವ ) ಒತ್ತಿಗೆ = ಹತ್ತಿರಕ್ಕೆ , ಪಕ್ಕಕ್ಕೆ ; ತವಕ = ಅವಸರ ; ಬೇಗ ; ಕೋ =ಕೊಳ್ಳು , ತೆಗೆದುಕೋ ; ಚಂಡ =ಉಗ್ರ , ಭಯಂಕರ . 
*[[ಗೋವಿನ ಹಾಡು]] ಇನ್ನೂ ಹೆಚ್ಚಿನ ವಿವರಕ್ಕೆ

=== ಆಧಾರ : === 
-------------
ಹಿಂದಿನ ಮೈಸೂರು ಸರ್ಕಾರದ ಪ್ರಾಥಮಿಕ ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ.
*[[ಕನ್ನಡ ಸಾಹಿತ್ಯ ಪ್ರಕಾರಗಳು]]

ವರ್ಗ : [[ಕನ್ನಡ ಸಾಹಿತ್ಯ]]