Difference between revisions 333987 and 342536 on knwiki{| border="1" cellpadding="2" cellspacing="0" align="right" width="250px" style="margin-left:10px" |- | align="center" colspan="2" | <font size="+1">'''ಮುಂಬೈ'''</font><br /> [[ಚಿತ್ರ:Gateway.jpg|thumb|none|ಗೇಟ್‍ವೇ ಅಫ್ ಇ೦ಡಿಯಾ]] |- | ವರ್ಗೀಕರಣ | ಮೆಟ್ರೊಪಾಲಿಟನ್ ನಗರ |- (contracted; show full) == ಪ್ರಸಾರ ಮಾಧ್ಯಮಗಳು == ಅನೇಕ ಪ್ರಕಾಶನ ಸಂಸ್ಥೆಗಳು, ವೃತ್ತ ಪತ್ರಿಕೆಗಳು, ಕಿರುತೆರೆ ವಾಹಿನಿಗಳು ಮುಂಬಯಿಯಿಂದ ಕಾರ್ಯನಿರ್ವಹಿಸುತ್ತಿವೆ.ಇಂಗ್ಲೀಷ್ ಪತ್ರಿಕೆಗಳಲ್ಲಿ ಮುಖ್ಯವಾದವುಗಳೆಂದರೆ,[[ಟೈಮ್ಸ್ ಆಫ್ ಇಂಡಿಯಾ]], [[ಇಂಡಿಯನ್ ಎಕ್ಸ್ ಪ್ರೆಸ್]], [[ಡಿ.ಎನ್.ಏ]], [[ಹಿಂದೂಸ್ತಾನ್ ಟೈಮ್ಸ್]] , [[ಮಿಡ್ ಡೇ]] ಇತ್ಯಾದಿ. [[ಮಹಾರಾಷ್ಟ್ರ ಟೈಮ್ಸ್]] , [[ಸಕಾಳ]], [[ಲೋಕಸತ್ತಾ]] , [[ಸಾಮನಾ]] ಮತ್ತು [[ನವಾಕಾಳ]] ಮುಖ್ಯ [[ಮರಾಠಿ]] ಪತ್ರಿಕೆಗಳು. ಇವಲ್ಲದೆ [[ಗುಜರಾತಿ]], [[ಕನ್ನಡ]], [[ತಮಿಳು]] ಮುಂತಾದ ಇತರೇ ಭಾಷೆಗಳ ಪತ್ರಿಕೆಗಳೂ ಮುಂಬಯಿಯಿಂದ ಹೊರಡುತ್ತವೆ. [[ಕರ್ನಾಟಕ ಮಲ್ಲ]] ಎಂಬ,ಉದಯವಾಣಿ ಕನ್ನಡ ಪತ್ರಿಕೆ ಮುಂಬಯಿಂದ ಪ್ರಕಟವಾಗುತ್ತಿದವೆ. ಭಾರತದ ಅತಿ ಹಳೆಯ ದಿನಪತ್ರಿಕೆ ಎಂದು ಹೆಸರಾಗಿರುವ [[ಬಾಂಬೇ ಸಮಾಚಾರ್]] ಎಂಬ ಪತ್ರಿಕೆ [[ಗುಜರಾತಿ]] ಮತ್ತು ಇಂಗ್ಲೀಷಿನಲ್ಲಿ ಮುಂಬಯಿಯಿಂದ ೧೮೨೨ರಿಂದಲೂ ಪ್ರಕಟವಾಗುತ್ತಿದೆ. ಅನೇಕ ಕಿರುತೆರೆ ವಾಹಿನಿಗಳ ಕೇಂದ್ರ ಮತ್ತು ಪ್ರಾದೇಶಿಕ ಕಚೇರಿಗಳು ಮುಂಬಯಿಯಲ್ಲಿವೆ. ದೂರದರ್ಶನದ ಎರಡು ಕಿರುತೆರೆ ವಾಹಿನಿಗಳೊಂದಿಗೆ, ಮೂರು ಮುಖ್ಯ ಕೇಬಲ್ ಟಿವಿ ಜಾಲಗಳು ಮುಂಬಯಿಯ ಬಹುತೇಕ ಮನೆಗಳನ್ನು ತಲುಪಿವೆ.[[ಉಪಗ್ರಹ ಟಿವಿ]] (DTH) ಈಗಿನ್ನೂ (೨೦೦೬ರಲ್ಲಿ) ಪ್ರವೇಶಮಾಡುತ್ತಿದ್ದು ಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯವಾಗುವ ಸಂಭವವಿದೆ. ೨೦೦೬ರ ಕೊನೆಯಿಂದ ನಗರದ ಅನೇಕ ಕಡೆಗಳಲ್ಲಿ [[Conditional Access System]] (CAS) ಮೂಲಕವೇ ಟಿವಿ ವಾಹಿನಿಗಳ ಪ್ರಸಾರವನ್ನು ಕಡ್ಡಾಯ ಮಾಡಲಾಗಿದೆ. ಕೇಬಲ್ ಟಿವಿ ಜಾಲಗಳ ಮೇಲೆ DTH ಮತ್ತು CASಗಳ ಪರಿಣಾಮ ಏನೆಂದು ಈಗಲೇ ಊಹಿಸುವುದು ಅಸಾಧ್ಯವಾದರೂ, ಈ ಉದ್ಯಮ ಇನ್ನು ಕೆಲವರ್ಷಗಳಲ್ಲಿ ಮಹತ್ತರ ಬದಲಾವಣೆಯನ್ನು ಹೊಂದುವುದರಲ್ಲಿ ಏನೂ ಸಂಶಯವಿಲ್ಲ. ಮುಂಬಯಿಯಲ್ಲಿ ಒಂಭತ್ತು ರೇಡಿಯೋ ಸ್ಟೇಷನುಗಳಿದ್ದು , ಇದರಲ್ಲಿ ಆರು FM ತರಂಗಗಳಲ್ಲಿ ಪ್ರಸಾರಮಾಡಿದರೆ, ಬಾಕಿ ಮೂರು [[ಆಕಾಶವಾಣಿ|ಆಕಾಶವಾಣಿಯ]] AM ತರಂಗಗಳಲ್ಲಿ ಪ್ರಸಾರವಾಗುತ್ತಿದೆ. FM ಕೇಂದ್ರಗಳು ಕಳೆದ ಕೆಲ ವರ್ಷಗಳಲ್ಲಿ ಪ್ರಾರಂಭವಾಗಿದ್ದು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿವೆ. ⏎ ⏎ == ಶಿಕ್ಷಣ == ಮುಂಬಯಿ ಮಹಾನಗರಪಾಲಿಕೆ “ಮುನಿಸಿಪಲ್ ಶಾಲೆ”ಗಳನ್ನು ನಡೆಸುತ್ತದೆಯಾದರೂ, ಉತ್ತಮ ಶೈಕ್ಷಣಿಕ ಮಟ್ಟ ಮತ್ತು ಇಂಗ್ಲೀಷ್ ಮಾಧ್ಯಮದ ಕಲಿಕೆಯಿಂದ, ಜನಸಾಮಾನ್ಯರು ಅನೇಕ ಖಾಸಗೀ ಸಂಘ ಸಂಸ್ಥೆಗಳು ನಡೆಸುವ ಶಾಲಾಕಾಲೇಜುಗಳಿಗೆ ಪ್ರಾಧಾನ್ಯ ಕೊಡುತ್ತಾರೆ. ಇವುಗಳಲ್ಲಿ ಸರಕಾರೀ ಅನುದಾನ ಪಡೆಯುವ ಹಾಗೂ ಪಡೆಯದ ಶಾಲೆಗಳು ಸೇರಿವೆ. ಶಾಲೆಗಳು ಬಹುತೇಕ ರಾಜ್ಯ ಸರಕಾರದ ಎಸ್ ಎಸ್ ಸಿ ಬೋರ್ಡಿನ ಪಠ್ಯವನ್ನು ಅನುಸರಿಸುತ್ತವೆಯಾದರೂ, ಅಖಿಲ ಭಾರತ ಪಠ್ಯಕ್ರಮಗಳಾದ ಸಿ ಬಿ ಎಸ್ ಇ ಮತ್ತು ಐ ಸಿ ಎಸ್ ಇ ಪದ್ಧತಿಯನ್ನು ಅನುಸರಿಸುವ ಶಾಲೆಗಳೂ ಸಾಕಷ್ಟಿವೆ. [[ಸಿ ಬಿ ಎಸ್ ಇ]] ಮತ್ತು [[ಐ ಸಿ ಎಸ್ ಇ]] ಶಾಲೆಗಳಲ್ಲಿ ನೋಂದಣಿಗೆ ಹೆಚ್ಚು ಬೇಡಿಕೆಯಿದೆ.(contracted; show full)[[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]] [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಭೂಗೋಳ]] {{Link FA|en}} {{Link FA|es}} {{Link FA|mr}} {{Link FA|zh}} All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=342536.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|