Difference between revisions 638779 and 670908 on knwiki

{{delete|ಅರವಿಂದ ಘೋಷ್}}
{{Infobox ಧಾರ್ಮಿಕ ವ್ಯಕ್ತಿ|
|name= ಶ್ರೀ ಅರವಿಂದರು
|image= Sri aurobindo.jpg|right|thumb
|caption= ಪುದುಚೇರಿಯಲ್ಲಿ ಶ್ರೀ ಅರವಿಂದರು
|birth-date= {{birth date|1872|08|15}}
|birth-place= [[ಕಲಕತ್ತ]]
|birth-name= ಒರೊಬಿಂದೋ ಅಕ್ರಾಯ್ಡ್ ಘೋಷ್
|death-date= {{death date and age|1950|12|05|1872|08|15|df=y}}
(contracted; show full) ಎಂಬ ಯೋಗಿಯನ್ನು ಸಂಧಿಸಿದರು: ಈ ಯೋಗಿಯು ತಿಳಿಸಿಕೊಟ್ಟ ಕೆಲವು ವಿಧಾನಗಳನ್ನು ಅನುಸರಿಸಿ ನಿರ್ಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡರೆಂದು ಶ್ರೀ ಅರವಿಂದರು ಹೇಳಿದರು. ಅದೇ ವರ್ಷ, ಅವರು ಅಲೀಪುರದ ವಿಸ್ಫೋಟದ ಪ್ರಕರಣದಲ್ಲಿ ಬಂಧಿತರಾಗಿ, ಒಂದು ವರ್ಷದ  ನಡೆದ ವಿಚಾರಣೆಯ ಕಾಲವನ್ನು ಅಲೀಪುರದ ಸೆರೆಯಲ್ಲಿ ಕಳೆದರು: ಈ ಕಾಲದಲ್ಲಿಯೇ ಅವರು ಸಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡರೆಂದು ಹೇಳಿರುವರು. ೧೯೦೯ರಲ್ಲಿ ಖುಲಾಸೆಯಾಗಿ ಇವರ ಬಿಡುಗಡೆಯಾಯಿತು. ಆನಂತರ, ತಮ್ಮ ಅಂತರಾತ್ಮದ ಆದೇಶವನ್ನು ಅನುಸರಿಸಿ ೧೯೧೦ರಲ್ಲಿ ಪುದುಚೇರಿಗೆ ಬಂದು ನೆಲೆಸಿದರು ಮತ್ತು ತಮ್ಮ ಶೇಷಾಯುಷ್ಯವನ್ನು ಅಲ್ಲಿಯೇ ಯೋಗ ಸಾಧನೆಯಲ್ಲಿ ಕಳೆದರು.

=
'''ಯೋಗ'''=ಯೋಗ==
ಶ್ರೀ ಅರವಿಂದರು [[ಅತೀತ ಮಾನಸ ಯೋಗ|ಅತೀತ ಮಾನಸ ಯೋಗದ]] ಪ್ರವರ್ತಕರು.  ಈ ಕೆಲಸದಲ್ಲಿ ಅವರ ಸಹಕಾರ್ಯಕಾರಿಯಾದವರು [[ಮೀರಾ ಅಲ್ಫಾಸ]] ರವರು (ಇವರನ್ನು [[ಶ್ರೀ ಅರವಿಂದ ಆಶ್ರಮ|ಶ್ರೀ ಅರವಿಂದಾಶ್ರಮದ]] ಶ್ರೀ ಮಾತೆಯವರೆಂದೂ ಕರೆಯುವ ಪ್ರತೀತಿ). ಇವರೂ ಕೂಡ ಶ್ರೀ ಅರವಿಂದರಂತೆಯೇ ಸ್ವತಂತ್ರವಾಗಿ ಸಾಕ್ಷಾತ್ಕಾರಗಳನ್ನು ಪಡೆದು ಕೊಂಡಿದ್ದು, ಅತೀತ ಮಾನಸ ಯೋಗವು ಪೃಥ್ವಿಯ ಮುಂದಿನ ವಿಕಸವನ್ನು ತ್ವರಿತಗೊಳಿಸುದೆಂದು ಪ್ರತಿಪಾದಿಸಿದರು. ಶ್ರೀ ಅರವಿಂದರು ಪ್ರಕೃತಿಯ ವಿಕಸನವು ಅಧ್ಯಾತ್ಮಿಕ ದೃಷ್ಟಿಕೋನದಿಂದ ಪ್ರಜ್ಙೆಯ ವಿಕಸನವೆಂದೂ, ಭೌತಿಕ, ಪ್ರಾಣ, ಮತ್ತು ಮನಸ್ಸುಗಳು ಕ್ರಮವತ್ತಾಗಿ ಜಡಜಗತ್ತು, ಸಸ್ಯ ಮತ್ತು ಪಶುಗಳು, ಮತ್ತು ಮನುಷ್ಯನಲ್ಲಿ ಅಭಿವ್ಯಕ್ತಿಯನ್ನು ಪಡೆದುಕೊಂಡಿತೆಂದೂ, ಮುಂದಿನ ವಿಕಸನವು ಮನಸ್ಸನ್ನು ಮೀರಿಸಿದ ಪ್ರಜ್ಙೆಯ ಸ್ಥಿತಿಯ ಅಭಿವ್ಯಕ್ತಿಯೆಂದು ಹೇಳುವರು. ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಅಧ್ಯಾತ್ಮಿಕ ಪರಂಪರೆಗಳು ಸೂಚಿಸುವಂತೆ, ಮನಸ್ಸಿನಾಚೆಯ ಅತಿ ಪ್ರಜ್ಙೆಯಲ್ಲಿಯೇ ಸಂತೃಪ್ತರಾಗಿ, ಭೌತಿಕ ಜಗತ್ತಿಗೆ ಈ ಅನ್ವೇಷಣೆಯ ಗೆಲುವುಗಳನ್ನು ಕೆಳ ತರದೆ ಅತೀತದಲ್ಲಿ ಲೀನವಾಗಿಹೋಗುವುದು ತರವಲ್ಲದ್ದೆಂದೂ, ಅತಿಪ್ರಜ್ಙೆಯ ಪ್ರಾಪ್ತಿಗಳನ್ನು ಮಾನಸಿಕ, ಪ್ರಾಣಿಕ ಮತ್ತು ಭೌತಿಕಗಳಿಗೆ ಇಳಿಸಬೇಕೆಂದೂ, ಈ ರೀತಿ ನವೀನ ಜೀವಜಾತಿಯನ್ನು, ಅತಿಮಾನವತೆಯನ್ನು ಅಭಿವ್ಯಕ್ತಗೊಳಿಸಬೇಕೆಂದು ಅಭಿಪ್ರಾಯ ಪಡುವರು.

='''=ವಾಙ್ಮಯ'''==
ಶ್ರೀ ಅರವಿಂದರ ಸಮಗ್ರ ವಾಙ್ಮಯವನ್ನು [[ಶ್ರೀ ಅರವಿಂದ ಆಶ್ರಮ|ಶ್ರೀ ಅರವಿಂದಾಶ್ರಮವು]] ವು ೩೫ ಸಂಪುಟಗಳಲ್ಲಿ ಪ್ರಕಟಿಸಿದೆ. ಅವರ ಕೆಲವು ಕೃತಿಗಳೆಂದರೆ:
*'''[[ದಿವ್ಯ ಜೀವನ]]''': ಶ್ರೀ ಅರವಿಂದರ ಪ್ರಮುಖ ತತ್ತ್ವಶಾಸ್ತ್ರ ಕೃತಿ. ಈ ಗ್ರಂಥವು ವಿಶ್ಲೇಷಿಸುವ ಕೆಲವು ವಿಷಯಗಳನ್ನು ಮುಂದೆ ಕೊಟ್ಟಿದೆ: ವಿಕಸನ, ವಿಶ್ವ ಅಭಿವ್ಯಕ್ತಿಯ ಹಲವು ಸ್ತರಗಳು, ಅತೀತ ಮಾನಸ ವಿಕಸನದ ಸಾಧ್ಯತೆಗಳು, ಸನ್ನಿವೇಶಗಳು, ಸೃಷ್ಟಿ-ಸ್ಥಿತಿ-ಲಯ, ಇತ್ಯಾದಿ
(contracted; show full)
*'''ಯೋಗ ಪತ್ರಗಳು''' - ಶ್ರೀ ಅರವಿಂದರು ಬರೆದ ಪತ್ರಗಳನ್ನು ಹಲವು ಸಂಪುಟಗಳಲ್ಲಿ ಬೇರೆ ಬೇರೆ ಶೀರ್ಷಿಕೆಗಳಡೆ ವಿಂಗಡಿಸಲಾಗಿದೆ
='''ಪ್ರಭಾವ'''=
ಪಂಡಿತ [[ಮದನ ಮೋಹನ ಮೌಲವೀಯ]], [[ಸುಭಾಸಚಂದ್ರ ಭೋಸ್]], [[ರವೀಂದ್ರ ನಾಥ್ ಠಾಕೂರ್]] ಇತ್ತ್ಯಾದಿ ಮಹಾನ್ ವ್ಯಕ್ತಿಗಳು ಶ್ರೀ ಅರವಿಂದರ ಪ್ರಭಾವಕ್ಕೆ ಒಳಗಾದರು. ದ.ರಾ.ಬೇಂದ್ರೆ, ಕುವೆಂಪು, ಮಧುರ ಚೆನ್ನರು, ಶಂ.ಬಾ.ಜೋಶಿ, ಸ.ಸ,ಮಾಳವಾಡ, ಶಾಂತಾದೇವಿ ಮಾಳವಾಡ, ಮುಂತಾದ ಮಹಾನ್ ಕನ್ನಡಿಗರೂ ಕೂಡ ಇವರ ಕೃತಿಗಳಿಂದ ಪ್ರಭಾವಿತರಾದರು.

[[ವರ್ಗ:ಸ್ವಾತಂತ್ರ್ಯ ಹೋರಾಟಗಾರರು]]
[[ವರ್ಗ:ಭಾರತದ ತತ್ವಶಾಸ್ತ್ರಜ್ಞರು]]