Difference between revisions 662933 and 664004 on knwikiಅಡಿಕೆ ಮತ್ತು ಆಯುರ್ವೇದ⏎ ಆಯುರ್ವೇದ ವೈದ್ಯಕದಲ್ಲಿ ಕಾಸರಕ, ಉಮ್ಮತ ಕರವೀರ, ಅರ್ಕ, ಜಾಪಾಲ, ಕಳ್ಳಿ , ಆಫೀಮು ಮೊದಲಾದ ತೀಕ್ಣ ಸಸ್ಯ ದ್ರವ್ಯಗಳನ್ನು ಶುದ್ದೀಕರಿಸಿ ಔಷಧಗಳಿಗಾಗಿ ಯಾವುದೇ ದುಃಷ್ಪರಿಣಾಮಗಳಾಗದಂತೆ ಬಳಸುತ್ತಾರೆ. ಆದರೆ ಅಡಿಕೆಯು ಅತ್ಯಂತ ತೀಕ್ಷ್ಣ ವರ್ಗಕ್ಕೆ ಸೇರದೆ 'ಸುಗಂಧ ಪಂಚಕ'ಗಳಲ್ಲಿ ಒಂದಾದ ರಸಾಯನ ಫಲವಾಗಿದ್ದು ಅದರಲ್ಲಿರುವ ಸೊಕ್ಕು ಹಾಗು ಚೊಗರು ಗುಣ (ಟ್ಯಾನಿನ್) ಅದರ ಪರೋಕ್ಷ ಗುಣಗಳೇ ಆಗಿವೆ. ಅವೆರಡೂ ಇಲ್ಲದೇ ಹೋಗಿದ್ದರೆ ಅಡಿಕೆಯು ಇತರ ಅನೇಕ ಸಸ್ಯ ಬೀಜಗಳಂತೆ ನಿರುಪಯೋಗಿ ಆಗಿರುತ್ತದೆ. ಅಡಿಕೆಯ ಔಷಧಿಯ ಗುಣಗಳಿಗಾಗಿ ಅದನ್ನು ಆಹಾರ ನಂತರ ಹಾಗೂ ಪೂರ್ವದ ನಿತ್ಯ ಸೇವನ ಯೋಗ್ಯವಾಗಿ ತಾಂಬೂಲದೊಂದಿಗೆ ಸೇವಿಸಲು ವಿಧಿಸಿದ್ದಾರೆ ಎಂದ ಮೇಲೆ ಅದರ ನಿರ್ಧೋಷತ್ವದ ಬಗ್ಗೆ ಬೇರೆ ಪ್ರಮಾಣ ಪಾತ್ರಗಳೇ ಬೇಡ. ಋಗ್ವೇದ ಕಾಲದಿಂದಲೂ ಅಡಿಕೆಯನ್ನು ಜನರು ಬಳಸುತ್ತಿದ್ದಾರೆ. ಋಗ್ವೇದದಲ್ಲಿ 'ಸಪತ್ನೀ ಬಾಧನ'ಎಂಬಲ್ಲಿ ಅಡಿಕೆಯ ವಾಜೀಕಾರಕ ಗುಣಗಳನ್ನು ಉಲ್ಲೇಖಿಸುತ್ತಾರೆ. ಆದರೂ ಸಮಯ ಸಂದರ್ಭಗಳ ವಿಧಿ ನಿಷೇಧಗಳು ಭೋಜನದಂತೆ ತಾಂಬೂಲ ಸೇವನೆಗೂ ಅನ್ವಯಿಸುತ್ತದೆ. ತೆಂಗನ್ನು ವೇದವಿದರು ಕಲ್ಪವೃಕ್ಷವೆಂದು ಹೇಗೆ ಕರೆದರೋ ಹಾಗೆಯೇ ಅಡಿಕೆಯನ್ನು ಬ್ರಹ್ಮವೃಕ್ಷವೆಂದರು. ಪ್ರಸ್ತುತ ಕಾಲಮಾನಕ್ಕೆ ಅನುಗುಣವಾಗಿ ಅಡಿಕೆಯನ್ನು ಬಹುಪಯೋಗಿ ಬಳಕೆಯು ಹೆಚ್ಚಬೇಕಾಗಿದೆ. ಅಡಿಕೆಯ ಸಾಂಪ್ರದಾಯಿಕ ಮಿಖಗಯವಾಗಿ ಅದರ ಜಗಿದು ಉಗುಳುವ ಬಳಕೆಗಳನ್ನು ಹೊರತುಪಡಿಸಿ ಔಷಧ ತಯಾರಿಕೆ ಹಾಗೂ ಇತರ ಮೌಲ್ಯವರ್ಧಿಕ ತಯಾರಿಕೆಗಳಿಗೆ ಕಚ್ಚಾವಸ್ತುಗಳಾಗಿ ಉಪಯೋಗಿಸುವ ಸಾಧ್ಯತೆಗಳನ್ನು ಕಂಡುಕೊಳ್ಳುವಲ್ಲಿ ಈ ಸಂಶೋಧನಾತ್ಮಕ ಪ್ರಯತ್ನ ಈಗಾಗಲೇ ವಿವಿಧ ಸಂಶೋಧನಾಲಯಗಳ ಮೂಲಕ ಅನೇಕ ವಿಜ್ಞಾನಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಂಶೋಧನೆ ನಡೆಸುತ್ತಿದ್ದಾರೆ. ಚರಕ ಸಂಹಿತೆಯಲ್ಲಿ ಅಡಿಕೆ ಸೇರಿದ 'ಮಧ್ವಾಸವ' ವನ್ನು ಮಧುಮೇಹಕ್ಕೆ ಔಷಧವಾಗಿ ಹೇಳಿದೆ. ಹಾಗೆಯೇ ಮಧುಮೇಹಕ್ಕೆ ಔಷಧವಾಗಿ ಅಡಿಕೆ ಸೇರಿದ ಕೆಲವು ಕಷಾಯ, ಯೋಗಗಳು ವೈದ್ಯಕ ಗ್ರಂಥಗಳಲ್ಲಿವೆ. 'ಯೋಗರತ್ನಾಕರ'ದಲ್ಲಿ ಎಲ್ಲಾಶ ತರಹದ ಪ್ರಮೇಹಗಳಿಗೂ ಸ್ತ್ರೀಯರ ರಕ್ತರ್ಶಸ್ಸಿಗೂ 'ಪೂಗಪಾಕ'ಲೇಹದ ಸೇವನೆಯು ಹೇಳಲ್ಪಟ್ಟಿದೆ. ಭೈಷಜ ರತ್ನಾವಳಿಯಲ್ಲಿ 'ಪೂಗಖಂಡ'ದ ಉಲ್ಲೇಖವಿದೆ. ಗದನಿಗ್ರಹಕದಲ್ಲಿ ಹೇಳಲ್ಪಟ್ಟ 'ಬೃಹನ್ಮೂಲಾಸ'ವು ಕ್ಷಯರೋಗ, ದಮ್ಮು, ಆಮವಾತ, ಪಾಂಡುರೋಗ, ಪ್ಲೀಹ, ಉದರರೋಗ, ಕ್ರಿಮಿರೋಗ, ಗುಲ್ಮ, ಪ್ರಮೇಹ ರೋಗಗಳಿಗೆ ಹಿತಕಾರಿ. ಜಠರಾಗ್ನಿವರ್ಧಕ 'ಲೋದ್ರಾಸವ'ವೂ ವಿವಿಧ ಪ್ರಮೇಹಗಳಿಗೂ ಗುಣಕಾರಿಯಾಗಿದ್ದು ಇವುಗಳಲ್ಲಿ ನಿಶ್ಚಿತ ಪ್ರಮಾಣದಲ್ಲಿ ಅಡಿಕೆ ಸೇರಿದೆ. ಅಡಿಕೆಯು ಉದ್ವೇಗವುಂಟು ಮಾಡುತ್ತದೆಯಾದರೂ ಅದರಲ್ಲಿ ರಕ್ತದ ಒತ್ತಡ ಕಡಿಮೆ ಮಾಡುವ ಗುಣವಿದೆ. ವೀಳ್ಯೆದೆಲೆ ಮತ್ತಿತರ ವಸ್ತುಗಳು ಸೇರಿದಾಗ ಶಾಮಕವಾಗಿ ವರ್ದಿಸುತ್ತದೆ. All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=664004.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|