Difference between revisions 707544 and 707567 on knwiki

'''ದೈತ್ಯ ಪಾಂಡ''' ಕರಡಿಯ ಆಕಾರ ಹೊಂದಿದೆ. ಇವು [[ಬೆಕ್ಕು]]ವಿನ ವರ್ಗಕ್ಕೆ ಸೇರುತ್ತದೆ. ಪಾಂಡ ಎಂಬ ಪದ ಫ್ರೆಂಚ್ ಭಾಷೆಯಿಂದ ತೆಗೆದುಕೊಳ್ಳಲಾಗಿದೆ. ಇವು  ಸಾಮಾನ್ಯವಾಗಿ ದಕ್ಷಿನ ಚೀನಾಭಾಗದಲ್ಲಿ ಕಂಡುಬರುತ್ತದೆ. ಇವು ಕೇಂದ್ರ ಚೀನಾ ಶ್ರೇಣಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ಸಿಚಿವಾನ್ ಪ್ರಾಂತ್ಯ ಹಾಗೂ ನೆರೆಯ ಪ್ರಾಂತ್ಯವಾದ ಶಾಂಕ್ಸಿ ಮತ್ತು ಗನ್ಸುಗಳಲ್ಲಿ ಕಂಡುಬರುತ್ತವೆ. ದೈತ್ಯ ಪಾಂಡ ಎಂಬ ಹೆಸರು ಕೆಲವೊಮ್ಮೆ ಸಂಬಂಧವಿಲ್ಲದ ''ಕೆಂಪು ಪಾಂಡ'' ಗಳಿಂದ ಭಿನ್ನಮಾಡಲು ಬಳಸಲಾಗುತ್ತದೆ. ಚೀನಾದ ರಾಷ್ತ್ರೀಯ ಚಿಹ್ನೆ ಡ್ರಾಗನ್ ಎಂದರೂ ದೈತ್ಯ ಪಾಂಡ ಕನಿಷ್ಠವಾಗಿ ಕಾಣಿಸಿಕೊಳ್ಳ(contracted; show full)

== ಲಕ್ಷಣಗಳು ==
ಇವುಗಳ ಕಣ್ಣಿನ ಸುತ್ತ, ಕಿವಿಯ ಮೇಲೆ ಹಾಗೂ ದೇಹದ ಸುತ್ತಲೂ ದೊಡ್ಡ, ಕಪ್ಪು ಪಟ್ಟೆಗಳಿಂದ ಗುರುತಿಸಲ್ಪಡುತ್ತದೆ. ಇವುಗಳಿಗೆ ಕಪ್ಪು ಮತ್ತು ಬಿಳಿಯ ದಪ್ಪವಾದ ತುಪ್ಪಳವಿರುತ್ತದೆ. ಇವು ೧.೨ ರಿಂದ ೧.೩ ಮೀಟರ್ ಉದ್ದವಿರುತ್ತದೆ, ಬಾಲ ಸುಮಾರು ೧೦-೧೫ ಸೆಂಟಿಮೀಟರಷ್ಟಿರುತ್ತವೆ, ಹಾಗೂ ೬೦ ರಿಂದ ೯೦ ಸೆಂಟಿಮೀಟರ್ ಎತ್ತರವಿರುತ್ತದೆ. ಗಂಡು ೧೬೦ ಕೆಜಿಯಷ್ಟು ತೂಕವಿರುತ್ತದೆ ಹಾಗು ಹೆಣ್ಣು ೭೦ ಕೆಜಿಯಷ್ಟು ತೂಕವಿರುತ್ತದೆ.<ref>http://www.arkive.org/giant-panda/ailuropoda-melanoleuca/#text=Facts</ref> ದೈತ್ಯ ಪಾಂಡದ ಆಕಾರ 
[[ಕರಡಿ]]ಯ ದೇಹಾಕಾರವನ್ನು ಹೋಲುತ್ತದೆ. ದಪ್ಪವಾದ ಕಪ್ಪು ತುಪ್ಪಳ ಇವುಗಳ ಕಿವಿ, ಕಣ್ಣು, ಬಾಯಿ,ಕಾಲು, ತೋಳು ಹಾಗು ಭುಜಗಳ ಮೇಲಿರುತ್ತದೆ, ಬೇರೆಲ್ಲಾ ಭಾಗಗಳು ಬಿಳಿಯಾಗಿರುತ್ತದೆ. ತಂಪಾದ ವಾತವರಣಗಳಲ್ಲಿ ಇವುಗಳನ್ನು ದಪ್ಪಗಿನ ತುಪ್ಪಳ ಬೆಚ್ಚಗಿಡುತ್ತದೆ. ದೈತ್ಯ ಪಾಂಡದ ತಲೆಬುರುಡೆಯೂ ಡ್ಯೂರೊಫೆಗಸೆ ಎಂಬ ಮಾಂಸಹಾರಿ ಪ್ರಾಣಿಯಂತಿರುತ್ತದೆ. ಇವು ದೊಡ್ಡ ದವಡೆಯನ್ನು ಪ್ರದರ್ಶಿಸುವುದಕ್ಕೆ ಹೆಚ್ಚಿನ ಸಂಕೀರ್ಣತೆಯಿಂದ ವಿಕಾಸಗೊಂಡಿವೆ. <ref>http://onlinelibrary.wiley.com/doi/10.1111/evo.12059/abstract;jsessionid=D835500BF45B42B6629AE1550A9E3125.f01t02</ref>ಇವುಗಳಿಗೆ ಹೆಬ್ಬೆರಳ ಜೊತೆ ಐದುಬೆರಳುಗಳಿರುತ್ತವೆ. ಹೆಬ್ಬೆರಳು ಮಾರ್ಪಡಿಸಿದ ತಿಲಾಸ್ಥಿಯಾಗಿ, ಬಿದುರುಗಳನ್ನು ತಿನ್ನುವಾಗ ಗಟ್ಟಿಯಾಗಿ ಹಿಡಿದುಕೊಳ್ಳಲು ಉಪಯೋಗವಾಗುತ್ತದೆ. ಸ್ಟೀಫನ್ ಜೇ ಗೌಲ್ಡ್ ತಮ್ಮ 'ವಿಕಾಸನ ಮತ್ತು ಜೀವಶಾಸ್ತ್ರ' ಎಂಬ ಪುಸ್ತಕದಲ್ಲಿ ಇದರ ಬಗ್ಗೆ ಚರ್ಚಿಸಿದ್ದಾರೆ. ದೈತ್ಯ ಪಾಂಡದ ಬಾಲ ೧೦ ರಿಂದ ೧೫ ಸೆಂಟಿಮೀಟರ್ ಉದ್ದವಿದ್ದು, ಕರಡಿಯ ವರ್ಗದಲ್ಲಿ ಎರಡನೆಯ ಸ್ಥಾನ ಹೊಂದಿದೆ. ಪಾಂಡಗಳು ದಿನಕ್ಕೆ ಎರಡು ಬಾರಿ, ನಸಕು ಮತ್ತು ಮಸುಕುನಲ್ಲಿ ಚುರುಕಾಗಿರುವುದರಿಂದ ಇವು ಕ್ರೆಪುಸ್ಕುಲರ್ ವರ್ಗಕ್ಕೆ ಸೇರಿದ್ದೆಂದು ಭಾವಿಸಲಾಗುತ್ತದೆ. 
[[ಚಿತ್ರ:Giant Panda eating Bamboo.JPG|thumb|ಅಡಿಲೇಡ್ ಮೃಗಾಲಯದಲ್ಲಿ ಬಿದಿರು ತಿನ್ನುವ ವಾಂಗ್ ವಾಂಗ್]]

== ವಾಸ ಮತ್ತು ಆಹಾರ ==
ಇವು ಮಾಂಸಹಾರಿ ವರ್ಗಕ್ಕೆ ಸೇರಿದ್ದರೂ, ತೊಂಬತ್ತೊಂಬತ್ತು ಪ್ರತಿಶದಷ್ಟು [[ಬಿದಿರನ್ನೇು]] ಸೇವಿಸುತ್ತದೆ.<ref>http://www.factslides.com/s-Panda</ref> ದೈತ್ಯ ಪಾಂಡ ಕಾಡುಗಳಲ್ಲಿ ಕೆಲವೊಮ್ಮೆ ಹುಲ್ಲು,ಗೆಡ್ಡೆಗಳು, ಪಕ್ಷಿಗಳನ್ನು ಸೇವಿಸುತ್ತದೆ. ಸೆರೆಯಲ್ಲಿರುವಾಗ ಜೇನು, ಮೊಟ್ಟೆ, ಮೀನು,ಮುಡಿಗೆಣಸುಗಳು, ಪೊದೆ ಎಲೆಗಳು, ಕಿತ್ತಳೆ ಹಾಗು ಬಾಳೆಹಣ್ಣುಗಳನ್ನು ಸೇವಿಸುತ್ತವೆ.<ref>https://nationalzoo.si.edu/animals/giant-panda</ref>  ಕೃಷಿ, ಅರಣ್ಯ ನಾಶ ಮತ್ತಿತರ ಅಭಿವೃದ್ದಿಗಳಿಂದಾಗಿ ಒಮ್ಮೆ ವಾಸಿಸುತ್ತಿದ್ದ ತಗ್ಗು ಪ್ರದೇಶಗಳಿಂದ ಕಾಣೆಯಾಗಿವೆ. ಪ್ರಾಥಮಿಕವಾಗಿ ಸಸ್ಯಹಾರಿಯಾಗಿದ್ದರೂ, ಮಾಂಸ, ಮೀನು,ಮೊಟ್ಟೆಗಳನ್ನು ತಿನ್ನುತ್ತದೆ. ಸೆರೆಯಲ್ಲಿ, ಪ್ರಾಣಿಸಂಗ್ರಹಾಲಗಳಲ್ಲಿ ಪ(contracted; show full)

== ಜೈವಿಕ ಇಂಧನ ==
ಪಾಂಡದ ತ್ಯಾಜ್ಯ ವಸ್ತುಗಳಲ್ಲಿರುವ ಸೂಕ್ಷ್ಮಜೀವಿಗಳಿಂದ,ಬಿದಿರು,ಇತರ ಸಸ್ಯಗಳಿಂದ ಜೈವಿಕ ಇಂಧನ ನಿರ್ಮಿಸಲು ತನಿಖೆಮಾಡಲಾಗುತ್ತಿದೆ.<ref>http://news.nationalgeographic.com/news/energy/2013/09/130910-panda-poop-might-help-turn-plants-into-fuel/</ref>
[[ಚಿತ್ರ:Chengdu-pandas-d18.jpg|thumb|ಪಾಂಡ ಮರಿ]]

== ಸಂತಾನಾಭಿವೃದ್ಧಿ ==
ಆವಾಸಸ್ಥಾನದ ನಷ್ಟ ಮತ್ತು 
ವಿಧಛಿದ್ರೀಕರಣ, ಕಡಿಮೆ ಜನನ ಪ್ರಮಾಣಗಳ ಕಾರಣದಿಂದಾಗಿ, ದೈತ್ಯ ಪಾಂಡ ಅಳಿವಿನಂಚಿನಲ್ಲಿರುವ ಕೆಂಪು ಪಟ್ಟಿಯ ಪ್ರಾಣಿಯ ವರ್ಗಕ್ಕೆ ಸೇರಿದ್ದು.  ಒಮ್ಮೆ ಸೆರೆಹಿಡಿದಲ್ಲಿ, ಮಿಲನದ ಆಸಕ್ತಿಯನ್ನು ಕಳೆದುಕೊಳ್ಳುವುದರಿಂದ ಸೆರೆಯಲ್ಲಿ ದೈತ್ಯ ಪಾಂಡದ ತಳಿ ವಿಧಾನ ಕೃತಕ ಗರ್ಭಧಾರಣೆಯ ಮೂಲಕವಾಗಿರುತ್ತದೆ. ೨೦೦೯ ರಲ್ಲಿ ಇಲ್ಯುಮಿನಾ ಡೈ ಸೀಕ್ವೆನ್ಸಿಂಗ್ ಎಂಬ ರೀತಿಯ ಮೂಲಕ ದೈತ್ಯ ಪಾಂಡಗಳ ಜೀನೋಮ್ಗಳು ಪರಿವಿಡಿ ಮಾಡಲಾಗಿತ್ತು.<ref>https://www.ncbi.nlm.nih.gov/pmc/articles/PMC3951497/</ref> ಇವು ಇಪ್ಪತ್ತು ಜೋಡಿ ಅಲಿಂಗಗಳು ಹಾಗು ಒಂದು ಜೋಡಿ ಲಿಂಗ ನಿರ್ಧಾರಕ ವರ್ಣತುಂತುರಗಳಿಂದ ಕೂಡಿರುತ್ತದೆ. ಪ್ರಚಲಿತ ಸಂತಾನೋತ್ಪತ್ತಿ(contracted; show full)

== ಸಂರಕ್ಷಣೆ ==
ದೈತ್ಯ ಪಾಂಡ, ಅಳಿವಿನಂಚಿನಲ್ಲಿದ್ದು ಸಂರಕ್ಷಣೆ ಮಾಡಬೇಕಾದ ಪ್ರಾಣಿ. ಆವಾಸಸ್ಥಾನದ ನಷ್ಟ ಮತ್ತು ಆವಾಸಸ್ಥಾನ ಛಿದ್ರೀಕರಣ ಬೆದರಿಕೆ ಇವುಗಳಲ್ಲಿ ಮುಂದುವರೆಯುತ್ತಿದೆ.<ref>http://www.sciencedirect.com/science/article/pii/S0006320714004625</ref> ಇವು, ದಕ್ಷಿಣ ಮತ್ತು ಪೂರ್ವ ಚೀನಾ ಹಾಗೂ ಉತ್ತರ ಮ್ಯಾನ್ಮಾರ್ ಮತ್ತು ಉತ್ತರ ವಿಯೆಟ್ನಾಂ ಭಾಗಗಳಲ್ಲಿ ಸೀಮಿತಗೊಂಡಿವೆ.<ref>http://www.iucnredlist.org/details/712/0</ref>
==ಬಾಹ್ಯ ಸಂಪರ್ಕಗಳು==