Difference between revisions 736035 and 736036 on knwiki

[[File:Sacred lotus Nelumbo nucifera.jpg|thumb|ಪವಿತ್ರ ಕಮಲ ಪುಷ್ಪ (Nelumbo nucifera)]]
==ಒಳ್ಳೆಯ ಮಾತು==
*ಚೆನ್ನಾಗಿ ಆಡಿದ ಮಾತಿಗೆ ಸಂಸ್ಕೃತದಲ್ಲಿ ‘ಸುಭಾಷಿತ’ ಎನ್ನುತ್ತಾರೆ (ಸು:ಚೆನ್ನಾಗಿ, ಭಾಷಿತ:ಹೇಳಿದ್ದು). ‘ಚೆನ್ನಾಗಿ’ ಎಂದರೆ ಕೇಳುವುದಕ್ಕೆ ಇಂಪಾಗಿಯೋ, ಸುಂದರವಾದ ಪದಗಳನ್ನು ಪೋಣಿಸಿರುವುದೋ ಅಥವಾ ಆಕರ್ಷಕವಾಗಿಯೋ ಆಡಿದ್ದು. ಮತ್ತು ಬದುಕನ್ನು ಸಾರವನ್ನು ಸುಂದರವಾಗಿ, ಅರ್ಥಪೂರ್ಣವಾಗಿ ನೋಡಿ ಹೇಳಿದ ವಿವೇಕದ ವಚನ.
*ಹೀಗಾಗಿಯೇ ಸಂಸ್ಕೃತದಲ್ಲಿ ‘ಸುಭಾಷಿತ’ ಎಂಬ ವಿಶಿಷ್ಟ ಸಾಹಿತ್ಯಪ್ರಕಾರವೇ ಅಪಾರವಾಗಿ ಬೆಳೆದಿದೆ. ಸುಭಾಷಿತಗಳ ಬಗ್ಗೆ ‘ಸುಭಾಷಿತರತ್ನಭಾಂಡಾಗಾರ’ದ ಮಾತೊಂದು ಹೀಗಿದೆ:
::'ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ /
::ತಸ್ಮಾದ್ಧಿ ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಮ್‌//

*ಭಾಷೆಯ ಬಗ್ಗೆ ಒಂದು ಸುಭಾಷಿತ; ಭಾಷೆಗಳಲ್ಲಿ ಮುಖ್ಯವೂ ಮಧುರವೂ ದಿವ್ಯವೂ ಆದುದು ಸಂಸ್ಕೃತಭಾಷೆ; ಅದರಿಂದಾಗಿ ಆ ಭಾಷೆಯಲ್ಲಿರುವ ಕಾವ್ಯ ಮಧರವಾಗಿದೆ; ಅದಕ್ಕಿಂತಲೂ ಸುಭಾಷಿತ ಇನ್ನೂ ಮಧುರ’ ಎನ್ನುವುದು ಈ ಶ್ಲೋಕದ ಭಾವ.

*ನಮ್ಮ ಜೀವನವು ಮಾತನ್ನು ಆವಲಂಬಿಸಿಕೊಂಡಿದೆ; ನಮ್ಮ ಜೀವನ ಮಾತಿಲ್ಲದೆ ನಡೆಯದು. ನಮ್ಮ ಜೀವನದ ಸೊಗಸಿಗೂ, ಸುಖಕ್ಕೂ,  ನೋವಿಗೂ ನಾವಾಡುವ ಮಾತು ಕಾರಣವಾಗಿರುತ್ತದೆ.

==ಸುಭಾಷಿತದ ವ್ಯಾಖ್ಯೆ==
[[File:കദംബം.JPG|3260px|right |thumb|ಸುಗಂಧರಾಜ (Genus-[[:en:Polianthes|Polianthes]]--]]
*ನಾವಾಡುವ ಮಾತು ನಮ್ಮ ಬದುಕಿಗೆ ಪೂರಕವಾಗಿ ಒದಗಬೇಕು; ಬದುಕಿನ ಆಳವನ್ನೂ ವಿಸ್ತಾರವನ್ನೂ ಅದು ತೋರಿಸುವಂತಿರಬೇಕು; ನಮ್ಮ ಹಿತವನ್ನೂ ಅಹಿತವನ್ನೂ ಪ್ರಕಟಿಸುವಂತಿರಬೇಕು; ಇಷ್ಟೆಲ್ಲ ಇದ್ದರೂ ಆ ಮಾತು ಕೇಳಲು ಸಿಹಿಯಾಗಿರಲೂ ಬೇಕು. ಇಷ್ಟು ಗುಣಗಳನ್ನೂ ಒಳಗೊಂಡಿರುವುದೇ ‘ಸುಭಾಷಿತ’. ಇದನ್ನೇ ಸುಭಾಷಿತವೊಂದು ತನ್ನ ಬಗ್ಗೆ ತಾನೇ ಹೀಗೆ ಹೇಳಿಕೊಂಡಿದೆ:
::ದ್ರಾಕ್ಷಾಮ್ಲಾನಾಮುಖೀ ಜಾತಾ ಶರ್ಕಾರಾ ಚಾಶ್ಮತಾಂ ಗತಾ/
::ಸುಭಾಷಿತರಸಸ್ಯಾಗ್ರೇ ಸುಧಾ ಭೀತಾ ದಿವಂ ಗತಾ//
(contracted; show full){{under construction}}

==ಉಲ್ಲೇಖ==
{{Reflist|2}}


[[ವರ್ಗ:ಸಾಹಿತ್ಯ]]
[[ವರ್ಗ:ಜಾನಪದ]]