Difference between revisions 750430 and 750431 on knwiki

<big><big><big>'''''ತೋಮಸ್ ಲಿನ್ದಾಲ್'''''</big></big></big>
[[ಚಿತ್ರ:Tomas Lindahl 0209.jpg|thumb|right|ತೋಮಸ್ ಲಿನ್ದಾಲ್]]
                                                                      
ತೋಮಸ್ ರಾಬರ್ಟ್ ಲಿನ್ದಾಲ್, ಎಫ್.ಆರ್.ಎಸ್, ಎಫ್.ಮೆಡ್.ಸೈ  ಒಬ್ಬ ಸ್ವೀಡನ್ ಮೂಲದ ಬ್ರಿಟಿಷ್ [[ವಿಜ್ಞಾನಿ]]. ಪ್ರಸ್ತುತ ತಮ್ಮ ಕ್ಯಾನ್ಸರ್ ಸಂಶೋಧನೆಯನ್ನು ಮುಂದುವರಿಸುತ್ತಿದಾರೆ. ೨೦೧೫ರಲ್ಲಿ, ಅಮೆರಿಕದ ರಸಾಯನಶಾಸ್ತ್ರಜ್ಞ ಪಾಲ್ ಎಲ್ ಮೊಡ್ರಿಚ್ ಮತ್ತು ಟರ್ಕಿಯ ರಸಾಯನಶಾಸ್ತ್ರಜ್ಞ ಅಜೀಜ್ ಸನಕಾರೊಡನೆ ಡಿಎನ್ಎ ದುರಸ್ತಿಯ ಯಾಂತ್ರಿಕ ಅಧ್ಯಯನಕ್ಕೆ ನೋಬೆಲ್ ಪ್ರಶಸ್ತಿಯನ್ನು ಪಡೆದರು.

'''''ವಿದ್ಯಾಭ್ಯಾಸ''



'''



ಫೋಕ್ ರಾಬರ್ಟ್ ಲಿನ್ದಾಲ್ ಮತ್ತು ಎಥೆಲ್ ಹಲದಾ ಹಲ್ತ್ ಬರ್ಗ್ ದಂಪತಿಗಳಿಗೆ ೨೮ ಜನವರಿ, [[೧೯೩೮]]ರಂದು ತೋಮಸ್ ಲಿನ್ದಾಲ್ ಜನಿಸಿದರು. ಅವರ ಜನ್ಮಸ್ಥಳ ಕುಂಗಸೊಲ್ಮೆನ್, ಸ್ಟಾಕ್ಹೋಮ್, ಸ್ವೀಡನ್. [[೧೯೬೭]]ರಲ್ಲಿ ಅವರು ಸ್ಟಾಕ್ಹೋಮಿನ ಕರೋಲಿನ್ಸ್ಕಾ ಸಂಸ್ಥೆಯಲ್ಲಿ ಓದುತ್ತಿದಾಗ ತಮ್ಮ ಡಾಕ್ಟರೇಟ್ ಪದವಿ ಪಡೆದ ನಂತರ ೧೯೭೦ರಲ್ಲಿ ಎಂ.ಡಿ ಪದವಿಯನ್ನು ಪಡೆದರು. ಅವರು ತಮ್ಮ ಮುಂದಿನ ಡಾಕ್ಟರೇಟ್ ಸಂಶೋಧನೆಯನ್ನು ನ್ಯೂಜೆರ್ಸಿಯ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಮತ್ತು ನ್ಯೂಯೊರ್ಕಿನ್ ರಾಕ್ಫೆಲ್ಲರ್ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ಡಾಹ್ಟರೇಟ್ ಸಂಶೋಧನೆಯ ನಂತರ  ಗೋಥೆನ್ಬರ್ಗ್ ಯುನಿವರ್ಸಿಟಿ, ಸ್ವೀಡನಲ್ಲಿ ವೈದ್ಯಕೀಯ ಮತ್ತು ಶಾರೀರಿಕ ರಸಾಯನಶಾಸ್ತ್ರದ ಪ್ರಾಧ್ಯಾಪಕರಾದರು. [[೧೯೮೧]]ರಿಂದ ಅವರು  ಕ್ಲೇರ್ ಹಾಲ್ ಲ್ಯಾಬೋರೇಟರೀಸಿನಲ್ಲಿರುವ ಕ್ಯಾನ್ಸರ್ ರಿಸರ್ಚ್ ಯುಕೆಗೆ (ಹರ್ಟ್ಫೋರ್ಡ್ಶೈರ್, ಯುನೈಟೆಡ್ ಕಿಂಗ್ಡಮ) ಕೆಲಸ ಮಾಡಿದ್ದಾರೆ.

'''''ಸಂಶೋಧನೆ ಹಾಗು ವೃತ್ತಿ ಜೀವನ'''''

ತಮ್ಮ ಸಂಶೋಧನೆಯ ಡಾಕ್ಟರೇಟ್ ಹಾಗು ಎಂ.ಡಿ ಪದವಿ ಗಳಿಸಿದ ನಂತರ ಲಿನ್ದಾಲ್ ಗೋಥೆನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ೧೯೭೮ರಿಂದ ೧೯೮೨ವರೆಗೂ ವೈದ್ಯಕೀಯ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಯುನೈಟೆಡ್ ಕಿಂಗ್ಡಮಿನಲ್ಲಿ ಸ್ಥಳಾಂತರಗೊಂಡಾಗ, ೧೯೮೧ರಲ್ಲಿ ಅವರು ಸಂಶೋಧಕರಾಗಿ ಇಂಪೀರಿಯಲ್ ಕ್ಯಾನ್ಸರ್ ರಿಸರ್ಚ್ ಫಂಡ್ (ಈಗ ಕ್ಯಾನ್ಸರ್ ರಿಸರ್ಚ್, ಯುಕೆ) ಸೇರಿದರು. ಅವರು ೧೯೮೬ರಿಂದ ೨೦೦೫ರ ವರೆಗು ಹರ್ಟ್ಫೋರ್ಡ್ಶೈರ್ ಕ್ಯಾನ್ಸರ್ ರಿಸರ್ಚ್ ಯುಕೆ ಕ್ಲೇರ್ ಹಾಲ್ ಲ್ಯಾಬೋರೇಟರೀಸಿನ ಮೊದಲ ನಿರ್ದೇಶಕರಾಗಿದ್ದರು. ೨೦೧೫ರಿಂದ ಹರ್ಟ್ಫೋರ್ಡ್ಶೈರ್ ಕ್ಯಾನ್ಸರ್ ರಿಸರ್ಚ್ ಯುಕೆ ಕ್ಲೇರ್ ಹಾಲ್ ಲ್ಯಾಬೋರೇಟರೀಸ್, ಫ್ರಾನ್ಸಿಸ್ ಕ್ರಿಕ್ ಸಂಸ್ಥೆಯ ಭಾಗವಾಗಿದೆ. ಅವರು ಅಲ್ಲಿ ೨೦೦೯ರವರೆಗು ತಮ್ಮ ಸಂಶೋಧನೆಯನು ಮುಂದುವರಿಸಿದರು. ಲಿನ್ದಾಲ್ ಡಿಎನ್ಎ ದುರಸ್ತಿ ಹಾಗು ಕ್ಯಾನ್ಸರ್ ತಳಿಶಾಸ್ತ್ರ ಕುರಿತು ಅನೇಕ ಸಂಶೋಧನೆ ಪತ್ರಿಕೆಗಳು, ತಮ್ಮ ಕಾಣಿಕೆ ನೀಡಿದಾರೆ.

'''''ಪ್ರಶಸ್ತಿ ಹಾಗು ಗೌರವಗಳು''''' 

೧೯೭೪ರಲ್ಲಿ ಲಿನ್ದಾಲವರನ್ನು ಎಂಬೊ ಸಂಸ್ಥೆಯ ಸದಸ್ಯರಾಗಿ ಚುನಾಯಿತರಾದರು. ೧೯೮೮ರಲ್ಲಿ ಫೆಲೋ ಆಫ್ ರಾಯಲ್ ಸೊಸೈಟಿ (ಎಫ್ ಆರ್ ಎಸ್) ಚುನಾವಣೆಯ ಪ್ರಮಾಣಪತ್ರದಲ್ಲಿ ಬರೆದುದೆನೆಂದರೆ:

(contracted; show full)

ಅವರಿಗೆ ೨೦೧೫ರಲ್ಲಿ ರಸಾಯನ ಶಾಸ್ತ್ರದಲ್ಲಿ [[ನೊಬೆಲ್ ಪ್ರಶಸ್ತಿ]] ಲಭಿಸಿತು. ಸ್ವೀಡಿಷ್ ಅಕಾಡೆಮಿ ಕೆಮಿಸ್ಟ್ರಿ, <ref>https://web.archive.org/web/20151008205352/http://www.acmedsci.ac.uk/fellows/fellows-directory/ordinary-fellows/dr-tomas-lindahl/</ref>[[೨೦೧೫]] ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಾಲ್ ಎಲ್ ಮೊಡ್ರಿಚ್ ಮತ್ತು ಅಜೀಜ್ ಸನಕಾರೊಡನೆ  ಡಿಎನ್ಎ ದುರಸ್ತಿಯ ಯಾಂತ್ರಿಕ ಅಧ್ಯಯನಕ್ಕೆ ತೋಮಸ್ ಲಿನ್ದಾಲಿಗೆ ಜಂಟಿಯಾಗಿ ನೀಡಲಾಯಿತು ಎಂಬುದು ಗಮನಿಸಿದರು.
==ಉಲ್ಲೇಖಗಳು==