Difference between revisions 819307 and 819309 on knwiki

{{ಅಳಿಸುವಿಕೆ|ಪ್ರಬಂಧ ಮಾದರಿಯ ಲೇಖನ. ವಿಶ್ವಕೋಶದ ಲೇಖನದ ಸ್ವರೂಪದಲ್ಲಿಲ್ಲ}}
 

'''ಜಾತ್ಯಾತೀತತೆ''' ಜಾತಿ, ಜಾತ್ಯಾತೀತತೆ, ಹಿಂದೂ, ಹಿಂದುತ್ವ ಎಂಬ ಪದಗಳು ಬಹಳ ಹಳೆಯ ಪದಗಳಾದರೂ ಅವುಗಳ ಹುಟ್ಟು ಬೆಳವಣಿಗೆಯಲ್ಲಿ ನಿರಂತರ ಚರ್ಚೆ, ವಾಗ್ವಾದ, ತಪ್ಪು ಅರ್ಥೈಸುವಿಕೆ ಮೊದಲಾದ ಗೊಂದಲಗಳಲ್ಲಿ ಸದಾ ಪ್ರಸ್ತುತ ವಿಷಯಗಳಾಗಿ ನಮ್ಮ ಮನಸ್ಸಿನ ಜಾಗೃತ ವಲಯವನ್ನು ದ್ವಂದ್ವಕ್ಕೆ ಸಿಲುಕಿಸುತ್ತಲೇ ಬಂದಿವೆ. 
ಜಾತಿ ಎಂಬುದಕ್ಕೆ ಸ್ಪಷ್ಟ ಅರ್ಥ ಗುಂಪು, ಪ್ರಬೇಧ, ಬೇರೆ ವರ್ಗ ಎಂಬುದಾಗಿದೆ. ಈ ಅರ್ಥಗಳಲ್ಲಿಯೇ ಹೆಚ್ಚಾಗಿ ಈ ಪದ ಬಳಕೆಯಾಗುತ್ತದೆ. ಒಂದೇ ಮೂಲದ ಸಮುದಾಯ ಎಂಬ ಗ್ರಹಿಕೆಗೆ ಇದು ಹೆಚ್ಚು ಒತ್ತು ಕೊಡುತ್ತದೆ. ಪ್ರಾಣಿಗಳನ್ನು ಆ ಕಾರಣಕ್ಕೇ ಜಾತಿ ಎಂಬ ಪದದಲ್ಲಿ ನಾಯಿಜಾತಿ, ಬೆಕ್ಕುಜಾತಿ, ಹಾಗೆಯೇ ಹಸು, ಆನೆ ಹುಲಿ, ಸಿಂಹ ಮೊದಲಾದ ಹೆಸರುಗಳಲ್ಲಿ ಗುರುತಿಸುತ್ತೇವೆ.  ಇವು ಒಟ್ಟಿಗೆ ಇದ್ದು ಸುಖ- ಸಂತೋಷಗಳಲ್ಲಿ ಅವುಗಳು ಮಾತ್ರ ಮುಖ್ಯಭಾಗೀದಾರರು ಎಂಬ ನಂಬಿಕೆಯಲ್ಲಿ, ಅರ್ಥಾತ್  ಸ್ವಾರ್ಥ ಮೂಲದ ಮನೋ ಭೂಮಿಕೆಯಲ್ಲಿ, ಸ್ವಜನ ಪಕ್ಷಪಾತದಿಂದ ಒಂದೇ ಮೂಲವನ್ನು ಬೆಳೆಸುವ, ಜೈವಿಕ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಮನೋವೃತ್ತಿವುಳ್ಳ ಗುಂಪಾಗಿ, ಜಾತಿಯವು ಎಂಬ ಅರ್ಥ ಪಡೆದಿವೆ. ಇದು ಜಾತಿ ಪದದಲ್ಲಿ ಅದರ  ಹುಟ್ಟಿನ ಮೂಲ ಸ್ವರೂಪದ ಮೊದಲನೆಯದು. 
 ಎರಡನೆಯದು, ಕೆಲವು ಸಂದರ್ಭಗಳಲ್ಲಿ ಪ್ರಾಣಿಗಳದು ಒಂದೇ ಜಾತಿ ಮೂಲವಾದರೂ, ಪ್ರಾದೇಶಿಕ ಭಿನ್ನತೆಯಿಂದ ಆಕಾರ, ಬಣ್ಣ, ಗಾತ್ರಗಳಲ್ಲಿ ವ್ಯತ್ಯಾಸವಿರುತ್ತದೆ, ಆ ವ್ಯತ್ಯಾಸದ ಒಂದೇ ರೀತಿ ಅಥವಾ ಬಣ್ಣ ಆಕಾರದ ಪ್ರಾಣಿಗಳಲ್ಲಿ ಗುಂಪು ಮೂಡುತ್ತದೆ. ಈ ಪ್ರದೇಶ ಅಥವಾ ಆಕಾರದ ಗುಂಪು, ಜಾತೀಯವು ಎಂಬ ಗುರುತಿಸುವಿಕೆಯಲ್ಲಿ ಒಂದು ಮೂಲವನ್ನು ದೃಡಪಡಿಸುವ ಸೂಚಕವಾಗಿ ಜಾತಿ ಪದ ಬಳಕೆಯಾಗುತ್ತದೆ. ಉದಾಹರಣೆ- ಮುಧೋಳ ನಾಯಿ,  ಬಿಳಿಹುಲಿ, ಬಿಳಿಕರಡಿ ಮೊದಲಾದವು. ಮನುಷ್ಯನು ಇದರಿಂದ ಹೊರತಲ್ಲ. ಅವನು ಸಹ ಈಗೆಯೇ ಬದುಕಲು ಪ್ರಯತ್ನಿಸುತ್ತಾನೆ. ಮಾನವನ ಜಾತಿ ಸೂಚಕ ಪದ  ಇಲ್ಲಿನ ಎರಡನೆಯ ವಿವರಣೆಗೆ ಸಂಬಂಧಿಸಿದ್ದು.  ಇಂಗ್ಲೀಷಿನ CASTE ಎಂಬ ಪದದ ಮೂಲಕ ಜಾತಿ ಪದವನ್ನು ಸಮೀಕರಿಸಿ ಈ ಎರಡನೇ ಅರ್ಥವನ್ನು ಭಾರತದಲ್ಲಿ ಹುಟ್ಟು ಹಾಕಿ ಜಾತಿಯನ್ನು ಪ್ರತ್ಯೇಕ ವರ್ಗವೆಂಬ ಹಂತಕ್ಕೆ ತಂದು, ಮುಟ್ಟಿಸಲು ಪ್ರಯತ್ನ ಮಾಡುತ್ತಲೇ ಬಂದಿದ್ದಾನೆ. 
ಆದರೆ ಪ್ರಾಣಿಗಳಿಗಿಂತ ಮನುಷ್ಯ ಭಿನ್ನ. ಏಕೆಂದರೆ ಇತರೇ ಪ್ರಾಣಿಗಳಿಗಿಲ್ಲದ, ತನಗೆ ಮಾತ್ರವೇ ದಕ್ಕಿರುವ ಜೈವಿಕ ವಾಕ್ಶಕ್ತಿ, ಬುದ್ಧಿಶಕ್ತಿಗಳ ಮೂಲಕ  ಮಾನವ, ಭಾಷೆ, ಸಂಸ್ಕೃತಿ, ನಾಗರೀಕತೆಗಳನ್ನು ರೂಪಿಸಿಕೊಂಡು, ವಿಜ್ಞಾನ-ತಂತ್ರಜ್ಞಾನಗಳನ್ನು ಬೆಳೆಸಿಕೊಂಡು ವಿಶೇಷ ವ್ಯಕ್ತಿಯಾಗಿ ಬೆಳೆದಿದ್ದಾನೆ. ಮನುಷ್ಯನ ಹುಟ್ಟಿನ ಮೂಲ ಸಹ ಪ್ರಾಣಿಗಳಂತೆ ಒಂದೇ ಆದರೂ, ಪ್ರಾದೇಶಿಕ ಭಿನ್ನತೆಯಿಂದ ಆಕಾರ, ಬಣ್ಣ, ಗಾತ್ರಗಳಲ್ಲಿ ವ್ಯತ್ಯಾಸವಿರುತ್ತದೆ. ಈ ಭಿನ್ನತೆಯ ರೀತಿ ಅಥವಾ ಬಣ್ಣ, ಆಕಾರದ ಸ್ವರೂಪಗಳಿಂದ ಪ್ರೇತ್ಯೇಕ ಗುಂಪುಗಳಾಗುತ್ತವೆ. ಜೊತೆಗೆ ಅವನ ಬದುಕಿನ ವಿವಿಧ ಕಸುಬುಗಳ ವೈವಿಧ್ಯದ ಕಾರಣದಿಂದಲೂ ಗುಂಪುಗಳಾಗಿ ಜಾತಿ ನಿರ್ಮಾಣ ಮಾಡಲಾಗಿದೆ. ಈ ಜಾತಿ-ಗುಂಪುಗಳನ್ನು ಮಾನವ ಒಡೆಯುವ ಪ್ರಯತ್ನ ಮಾಡುತ್ತ, ಜಾತಿಯ ಪರಿಕಲ್ಪನೆಯನ್ನು ಮೀರಲೂ ಸಹ ಪ್ರಯತ್ನಿಸುತ್ತಾ ಬಂದಿದ್ದಾನೆ. ಪ್ರಾಣಿಗಳಿಗಿಂತ ಭಿನ್ನವಾಗಿ ಇರಲು ಪ್ರಯತ್ನಿಸುತ್ತಾ,  ಇಚ್ಚಿಸುತಾ,  ಬೆಳೆದಿದ್ದಾನೆ. ಈ ರೀತಿಯ ಮೀರುವ ಸ್ವಭಾವವೇ ಜಾತ್ಯಾತೀತತೆ. ಇಂಗ್ಲೀಷಿನ SECULAR ಎಂಬ ಪದದ ಸಂವಾದಿಯಾಗಿ ಈ ಜಾತ್ಯಾತೀತತೆಯ ಪದವನ್ನು ಬೆಳೆಸಿಕೊಂಡು,  ಗೋತ್ರ, ಕುಲ, ಕೋಮು, ವಂಶಗಳಿಗೆ ಮಹತ್ವ ಕೊಡದೆ, ಎಲ್ಲರಿಗೂ ಸುರಕ್ಷತೆ, ನಿಶ್ಚಿಂತೆ, ನಿರ್ಭಯ, ರಕ್ಷಣೆ ನೀಡುವ ಜವಾಬ್ದಾರಿಯನ್ನಿಟ್ಟುಕೊಂಡು, ಮಾನವನ ಬೌದ್ಧಿಕ ಶಕ್ತಿಯನ್ನು ಪ್ರಗತಿಪರವಾಗಿ ದುಡಿಸಿಕೊಂಡು ಬೆಳೆಯುವ,  ಜಾತಿಗೆ ಲಕ್ಷ್ಯಕೊಡದೆ,  ಸರ್ವರಲ್ಲಿಯೂ ಬ್ರಾತೃತ್ವವನ್ನು ವೃದ್ಧಿಸುವ ಮನೋಭೂಮಿಕೆಯನ್ನು ರೂಪಿಸುವ ಚಿಂತನೆಯೇ ಜಾತ್ಯಾತೀತತೆ. 
ರಾಜ್ಯಾಡಳಿತ, ನೀತಿ, ಶಿಕ್ಷಣ ಮುಂತಾದುವುಗಳಲ್ಲಿ ವೈಯಕ್ತಿಕ ಆಚರಣೆಯ ಧರ್ಮದ ಪ್ರಭಾವವನ್ನು ತರದಿರುವ, ಮಾನವ ಲಿಂಗ, ಜಾತಿ, ಕೋಮು, ವರ್ಗಗಳ ಸ್ವಾತಂತ್ರ್ಯ, ಸಮಾನತೆಗಳಲ್ಲಿ ತಾರತಮ್ಯ ಮಾಡದಿರುವ ಮನೋಭೂಮಿಕೆಯನ್ನು ಬೆಳೆಸುವುದೇ ಜಾತ್ಯಾತೀತತೆ.  ಇದು ಮಾನವನ ಸತ್ಯಶೋಧನೆಯ,  ಪೂರ್ವಗ್ರಹ ಪೀಡಿತವಲ್ಲದ,  ಜಾತಿ ಸೂಚಕ ಪಕ್ಷಪಾತವಿಲ್ಲದ  ಶಿಕ್ಷಣದಿಂದ ಮಾತ್ರ ಸಾಧ್ಯ. ಇದೊಂದು ಸತ್ಯಮಾರ್ಗದ ಹಾದಿ. ನಿರಂತರ ಅನ್ವೇಷಣ ಗುಣದ ಸಾಧನೆಯಿಂದ ಮಾನವ ಜೀವನವನ್ನು ಕುರಿತು ಅಧ್ಯಯನ ಮಾಡಿ ಗ್ರಹಿಸಿಕೊಂಡಾಗ ಮಾತ್ರ, ದಕ್ಕಿಸಿಕೊಳ್ಳುವ ಮಾನವ ಜ್ಞಾನ ಇದು. ಕೆಲವು ಸಂದರ್ಭಗಳಲ್ಲಿ ಸರಿಯಾದ ಶಿಕ್ಷಣ ದೊರೆಯದೆ, ಮಾರ್ಗದರ್ಶನ ಸಿಗದೆ, ಅಸತ್ಯಗಳನ್ನೇ ಅಥವಾ ಜಾತಿಮೂಲವಾದಗಳ ಸನಾತನ ಶಿಕ್ಷಣವನ್ನೇ, ಸತ್ಯಶೋಧನೆಯ ಮೌಲ್ಯೀಕೃತ  ಶಿಕ್ಷಣವೆಂದು ಅಧ್ಯಯನ ಮಾಡಿದಾಗ ನಿಜವಾದ ಜಾತ್ಯಾತೀತತೆಯನ್ನು ಗ್ರಹಿಸಲು ಸಾಧ್ಯವಿಲ್ಲ. ಸಕಳ ಮಾನವರಲ್ಲಿ ಸಂಬಂಧ, ಸಹೋದರತೆಗಳನ್ನು ಬೆಳೆಸುವುದರಲ್ಲಿ ವಿಫಲತೆಯನ್ನು ಪಡೆಯುತ್ತೇವೆ.  ಸಂಘರ್ಷ, ಭಯೋತ್ಪಾದನೆಗಳನ್ನು ಸುತ್ತಲೂ ಬೆಳೆಸಿಕೊಂಡು ಕೋಮುದಳ್ಳುರಿಗಳಿಂದ ಜೀವನ ನಡೆಸಬೇಕಾಗುತ್ತದೆ. ಇದರಿಂದ ತಾತ್ಕಾಲಿಕ ಹರ್ಷದ ಭ್ರಮೆ ಮನುಷ್ಯನನ್ನು ಆವರಿಸಿ ನಿರ್ನಾಮದ ದಾರಿಗೆ ತಳ್ಳುತ್ತದೆ.  ಅದರಿಂದ ಜಾತ್ಯಾತೀತತೆಯನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕಿದೆ.  ಅದನ್ನು ತಪ್ಪಾಗಿ ವಿವರಿಸಿ ಅಪಾರ್ಥಗೊಳಿಸುವುದರಿಂದ ಮಾನವನ ಸಾಂಘಿಕಜೀವನಕ್ಕೆ ದಕ್ಕೆಯೇ ಹೊರತು ಏನೂ ಸಾಧಿಸಿದಂತೆ ಆಗುವುದಿಲ್ಲ. ಜಾತಿವಾದ, ಕೋಮುವಾದ, ಲಿಂಗತಾರತಮ್ಯ, ವರ್ಗಗಳಲ್ಲಿ ಅಸಮಾನತೆಗಳು, ಶೋಷಣೆ ಮಾಡುವುದು ಜಾತ್ಯಾತೀತತೆಯ ವಿರೋಧಿ ನಿಲುವುಗಳಾಗಿವೆ.