Difference between revisions 856098 and 856099 on knwiki

{{ಅಳಿಸುವಿಕೆ|ವಿಶ್ವಕೋಶ ಶೈಲಿಯಲ್ಲಿಲ್ಲ. ಪ್ರಬಂಧ, ಬ್ಲಾಗ್ ಮಾದರಿಯಲ್ಲಿದೆ. ವೈಯಕ್ತಿಕ ಅಭಿಪ್ರಾಯ, ಭಾವನೆಗಳಿಂದ ತುಂಬಿದೆ}}

=== ಭೂಮಿಯ ಪವಿತ್ರತೆ ===
ರಾಮಾಯಣದಲ್ಲಿ ಭೂಮಿ

== ಸೀತಾ ಪರಿತ್ಯಾಗ ==
ಶ್ರೀರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯಲ್ಲಿ ಸುಖ, ಸಮೃದ್ಧಿಗಳು ನೆಲಸಿದ್ದವು. ಪ್ರಜೆಗಳು ಆನಂದದಿಂದಿದ್ದರು. ಆದರೆ ಈ ನೆಮ್ಮದಿ ಶಾಶ್ವತವಾಗಿ ಉಳಿಯಲಿಲ್ಲ. ರಾವಣನ ಸೆರೆಯಲ್ಲಿ ಬಹಳ ಕಾಲವಿದ್ದ ಸೀತೆಯ ಪಾವಿತ್ರ್ಯದ ಬಗೆಗೆ ಜನರು ಅನುಮಾನದಿಂದ ಮಾತಾಡ ತೊಡಗಿದರು. ಈ ವಿಷಯ ಗೂಢಚಾರರಿಂದ ರಾಮನಿಗೂ ತಿಳಿದು ಬಂದಿತು. ರಾಜ್ಯದಲ್ಲಿ ಉಂಟಾದ ಬರಗಾಲಕ್ಕೂ ಸೀತೆಯಿಂದಾಗಿರುವ ತಪ್ಪೇ ಕಾರಣವೆಂದು ಜನ ಗುಸುಗುಸು ಮಾತಾಡ ತೊಡಗಿದರು. ತನ್ನ ಪ್ರಜೆಗಳನ್ನು ಸಂತೋಷ ಪಡಿಸಲು ರಾಮ ಸೀತೆಯನ್ನು ತ್ಯಜಿಸಲು ನಿರ್ಧರಿಸಿದನು. ಸೀತೆಯು ವನವಾಸ ಕಾಲದಲ್ಲಿ ರಾಮನೊಡನೆ ಸಂತೋಷದಿಂದ ಕಾಲಕಳೆದ ಅರಣ್ಯಕ್ಕೆ ಮತ್ತೊಮ್ಮೆ ಹೋಗಬೇಕಾಯಿತು. ತುಂಬು ಗರ್ಭಿಣಿಯಾದ ಸೀತೆಯನ್ನು, ವಿಹಾರದ ನೆಪ ಹೇಳಿ ರಾಮ ಲಕ್ಷ್ಮಣನೊಂದಿಗೆ ಅವಳನ್ನು ಕಾಡಿಗೆ ಕಳುಹಿಸಿ ಅವಳನ್ನು ಅಲ್ಲೆ ಬಿಟ್ಟು ಬರುವಂತೆ ತಿಳಿಸಿ ಪ್ರಜಾಪ್ರೇಮವನ್ನು ಮೆರೆಯುತ್ತಾನೆ. ಜನಾಪವಾದದಿಂದ ರಾಮ ತನ್ನನ್ನು ತ್ಯಜಿಸಿರುವನೆಂಬ ಸುದ್ದಿಯಿಂದ ಸೀತೆ ದು:ಖತಪ್ತ ಳಾಗಿ ಕಲ್ಲು ಕರಗುವಂತೆ ರೋದಿಸುತ್ತಾಳೆ. ನಂತರ ರಾಮನಿಂದ ಪರಿತ್ಯಕ್ತೆಯಾದ ಸೀತೆಗೆ ವಾಲ್ಮೀಕಿ ಮುನಿಯು ತನ್ನ ಆಶ್ರಮದಲ್ಲಿ ಆಶ್ರಯ ನೀಡಿದನು. ಸೀತೆ ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಲವ ಮತ್ತು ಕುಶ ಎಂಬ ಅವಳಿ-ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಸೀತೆಯು ವಾಲ್ಮೀಕಿ ಮುನಿಯ ಸಹಾಯದಿಂದ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುತ್ತಾಳೆ. ವಾಲ್ಮೀಕಿ ಲವ-ಕುಶರಿಗೆ ಗುರುವಾಗಿ ಸಕಲ ವಿದ್ಯೆಗಳನ್ನು ಹೇಳಿಕೊಡುತ್ತಾನೆ. ಲವ-ಕುಶರು ಬೆಳೆದು ಯುವಕ ರಾಗಿದ್ದರು. ಅದೇ ಸಮಯದಲ್ಲಿ ರಾಮನನ್ನು ಒಂದು ಚಿಂತೆ ಕಾಡುತ್ತಿತ್ತು. ಬ್ರಾಹ್ಮಣನ ಮಗನಾಗಿದ್ದ ರಾವಣನನ್ನು ಕೊಂದಿರುವುದರಿಂದ ತನಗೆ ಬಂದಿರಬಹುದಾದ ಬ್ರಹ್ಮ ಹತ್ಯೆ ಎಂಬ ಪಾಪವನ್ನು ಕಳೆದುಕೊಳ್ಳಲು ನಿಶ್ಚಯಿಸಿದನು. ಅದಕ್ಕಾಗಿ ಅಶ್ವಮೇಧ ಯಾಗ ಮಾಡಬೇಕೆಂದು ನಿರ್ಧರಿಸಿದನು. ಈ ಯಾಗಕ್ಕೆ ತನ್ನ ದೇಶದ ಎಲ್ಲಾ ಪ್ರಜೆಗಳಿಗೂ, ಋಷಿ ಮುನಿಗಳಿಗೂ ಆಹ್ವಾನವಿರುತ್ತದೆ. ವಾಲ್ಮೀಕಿ ಮುನಿಗಳು ಲವ-ಕುಶರೊಡನೆ ಈ ಯಾಗಕ್ಕೆ ಹೋಗಿರುತ್ತಾರೆ. ಯಾಗದ ದಿನ ಲವ-ಕುಶರಿಬ್ಬರು ರಾಮನ ಎದುರು ವಾಲ್ಮೀಕಿ ಋಷಿಗಳಿಂದ ಕಲಿತ ರಾಮಾಯಣವನ್ನು ಹಾಡುತ್ತಾರೆ. ರಾಮನಿಗೆ ಆ ಗಾಯನದ ಮೂಲಕ ತನ್ನದೇ ಕಥೆಯನ್ನು ಕೇಳಿ ಸೋಜಿಗವಾಗುತ್ತದೆ. ವಾಲ್ಮೀಕಿಯಿಂದ ರಾಮನಿಗೆ ಲವ,ಕುಶರು ತನ್ನ ಮಕ್ಕಳೆಂದು ತಿಳಿಯುತ್ತದೆ. ಸೀತೆಯು ವಾಲ್ಮೀಕಿ ಮುನಿಗಳ ಆಶ್ರಮದಲ್ಲಿರುವ ವಿಷಯ ತಿಳಿದು, ಅವಳನ್ನು ತಾನಿರುವಲ್ಲಿಗೆ ಬರುವಂತೆ ಹೇಳಿ ಕಳಿಸುತ್ತಾನೆ. ವಾಲ್ಮೀಕಿ ಮುನಿಯು ಸೀತೆಯನ್ನು ಆಶ್ರಮ ದಿಂದ ಕರೆದು ಕೊಂಡು ಬರುತ್ತಾನೆ. ಆಗ ರಾಮ ಸೀತೆಯು ಮತ್ತೊಂದು ಪರೀಕ್ಷೆಯ ಮೂಲಕ ತನ್ನ ಮೇಲಿರುವ ಕಳಂಕದಿಂದ ಗಬೇಕೆಂದು ಹೇಳುತ್ತಾನೆ. ರಾಮನ ಮಾತುಗಳನ್ನು ಕೇಳಿ ಸೀತೆಯನ್ನು ದು:ಖ ಆವರಿಸುತ್ತದೆ. ಆಗ ಸೀತೆಯು ತನ್ನ ತಾಯಿಯಾದ ಭೂದೇವಿಯಲ್ಲಿ ಹೀಗೆ ಕೇಳಿಕೊಳ್ಳುತ್ತಾಳೆ - ತಾನು ಪತಿವ್ರತೆಯೇ ಆಗಿದ್ದಲ್ಲಿ, ಭೂಮಿ ಬಾಯಿ ಬಿರಿಯಲಿ, ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಎಂದು ಕೇಳಿಕೊಳ್ಳುತ್ತಾಳೆ. ಎಲ್ಲರೂ ನೋಡುತ್ತಿರುವಂತೆಯೇ ಭೂಮಿ ದೊಡ್ಡ ಸದ್ದಿನೊಂದಿಗೆ ಬಾಯಿ ಬಿಡುತ್ತದೆ. ಅಲ್ಲಿ ಸೀತೆಗಾಗಿ ಸಿಂಹಾಸನವೊಂದು ಪ್ರತ್ಯಕ್ಷವಾಗುತ್ತದೆ. ಸೀತೆಯ ತಾಯಿಯಾದ ಭೂದೇವಿಯು ತನ್ನ ಮಗಳನ್ನು ಅಪ್ಪಿಕೊಂಡು ಭೂಮಿ ಒಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಭೂಮಿ ಮುಚ್ಚಿಕೊಳ್ಳುತ್ತದೆ. ಈ ದೃಶ್ಯವನ್ನು ಕಂಡು ರಾಮ ಸೀತೆಯನ್ನು ಅನುಮಾನಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ಮುನಿಗಳು ರಾವಣನ ಸಂಹಾರದ ನಿಮಿತ್ತಕ್ಕಾಗಿ ಸೀತೆಯ ಅವತಾರವಾಗಿತ್ತು. ತನ್ನ ಕಾರ್ಯ ಮುಗಿದಿದ್ದರಿಂದ ಅವಳು ಹೋಗಿದ್ದಾಳೆ. ನೀನು ದುಃಖಿಸಬೇಡ ಎಂದು ರಾಮನನ್ನು ಸಮಾಧಾನಿಸುತ್ತಾರೆ.

ಹೀಗೇ ಭೂಮಿಯಮೇಲಿನ ಜನರು ರಾಮಾಯಣ ಕಾಲದಿಂದಲೂ ಸೀತಾಮಾತೆ ಯನ್ನು ಭೂಮಿ ತಾಯಿಯ ಮಗಳಾಗಿ ಪವಿತ್ರಳೆಂಬ ಭಾವನೆಯಿಂದ ನಂಬಿಕೆಯಿರಿಸಿಕೊಂಡಿರುತ್ತಾರೆ.

== ವೈಜ್ಞಾನಿಕವಾಗಿ ಭೂಮಿಯ ಪವಿತ್ರತೆ ==
ಲಭ್ಯವಿರುವ ಪುರಾವೆಗಳನ್ನು ಆಧರಿಸಿ, ಗ್ರಹದ ವೈಜ್ಞಾನಿಕ ಇತಿಹಾಸವನ್ನು ವಿಜ್ಞಾನಿಗಳು ಮರುರೂಪಿಸಿದ್ದಾರೆ. ಸುಮಾರು ೪೬೦ ಕೋಟಿ ವರ್ಷಗಳ ಹಿಂದೆ, ಸೂರ್ಯ ಮತ್ತು ಬೇರೆ ಗ್ರಹಗಳ ಜೊತೆಯಲ್ಲೇ ಭೂಮಿಯು solar nebula ನೀಹಾರಿಕೆಯಿಂದ ಉದ್ಭವವಾಯಿತು. ಭೂಮಿಯು ಪ್ರಸ್ತುತದ ಅರ್ಧ ವ್ಯಾಸವನ್ನು ಹೊಂದಿದ್ದಾಗ ವಾಯುಮಂಡಲದಲ್ಲಿ ನಿಧಾನವಾಗಿ ನೀರು ಮತ್ತು ನೀರಾವಿಗಳು ಶೇಖರವಾಗತೊಡಗಿದವು.
ನೀರಿನ ಅಂಶ ಹೆಚ್ಚುತ್ತಿದ್ದಂತೆ, ದ್ರವರೂಪದಲ್ಲಿದ್ದ ಭೂಮಿಯ ಮೇಲ್ಮೈಯು ಘನರೂಪಕ್ಕೆ ತಿರುಗಿತು. ಇದರ ಸ್ವಲ್ಪ ನಂತರವೇ ಚಂದ್ರ ರೂಪುಗೊಂಡಿತು. ಇದು ಮಂಗಳ ಗ್ರಹದಷ್ಟು ಗಾತ್ರದ ಥೀಯ ಎಂಬ ಕಾಯ ಭೂಮಿಯನ್ನು ತಾಡಿಸಿದ್ದರಿಂದ ಮೈದಳೆದಿರುವ ಸಾಧ್ಯತೆಗಳಿವೆ. ಭೂಮಿಯ ಒಳಭಾಗದಿಂದ ಹೊರಬಂದ ಅನಿಲಗಳು ಮತ್ತು ಅಗ್ನಿಪರ್ವತಗಳ ಚಟುವಟಿಕೆಗಳಿಂದ ಆದಿಮ ವಾಯುಮಂಡಲವು ಸೃಷ್ಟಿಯಾಯಿತು;
ಧೂಮಕೇತುಗಳಿಂದ ಬಂದ ಮಂಜು ಮತ್ತು ಸಾಂದ್ರೀಕರಿತವಾಗುತ್ತಿದ್ದ ನೀರಾವಿಗಳಿಂದ, ಮೊದಲ ಸಾಗರಗಳು ರೂಪುಗೊಂಡವು.[೨] ಸುಮಾರು ೪೦೦ ಕೋಟಿ ವರ್ಷಗಳ ಹಿಂದೆ ಪ್ರಬಲವಾದ ರಸಾಯನಿಕ ಕ್ರಿಯೆ ಜರುಗಿ ಜೀವಾಧಾರವಾದ ಕಾರ್ಬನ್ ಮೈದಳೆಯಿತು. ಮುಂದೆ ಇದೇ ಜೀವಕೋಶಕ್ಕೆ ಎಡೆಗೊಟ್ಟು ೫೦ ಕೋಟಿ ವರ್ಷಗಳ ನಂತರ ಮೊಟ್ಟಮೊದಲ ಜೀವಿಯು ಉಗಮವಾಯಿತು. 

== ಭೂಮಿಯ ಪವಿತ್ರತೆಯಲ್ಲಿ ಪಂಚಭೂತಗಳಲ್ಲೊಂದಾದ ನೀರಿನ ಪಾತ್ರ ==
ವಿಶ್ವಕ್ಕೆ ಜಲ ಪೂರೈಕೆ ಮತ್ತು ವಿತರಣೆ 

ಆಹಾರ ಮತ್ತು ನೀರು ಮಾನವನ ತಳ ಮಟ್ಟದ ಅವಶ್ಯಕತೆ. ವರ್ಷ 2002ರಿಂದ ಜಾಗತಿಕ ಮಟ್ಟದಲ್ಲಿ ಕಲೆಹಾಕಲಾಗಿರುವ ಅಂಕಿಅಂಶದ ಪ್ರಕಾರ ಪ್ರತಿ 10 ಮಂದಿಯಲ್ಲಿ:
ಅಂದಾಜು 5 ಜನರು ನೀರಿನ ಸಂಪರ್ಕ ಪಡೆದಿದ್ದಾರೆ (ತಮ್ಮ ಮನೆಯಲ್ಲಿ,ಅಂಗಳದಲ್ಲಿ ಅಥವಾ ಹೊಲದಲ್ಲಿ)
3 ಮಂದಿ ಸಂರಕ್ಷಿಸಲ್ಪಟ್ಟ ಬಾವಿ ಅಥವಾ ಬೀದಿ ನಲ್ಲಿಯಲ್ಲಿ ದೊರೆಯುವಂಥ ಇತರ ಸುಧಾರಿತ ಜಲ ಮೂಲವನ್ನು ಆಶ್ರಯಿಸಿದ್ದಾರೆ;
2 ಜನಕ್ಕೆ ಇಂಥ ಯಾವುದೇ ಸೇವೆ ಇಲ್ಲದೇ ವಂಚಿತರಾಗಿದ್ದಾರೆ;
10 ರಲ್ಲಿ 4 ಮಂದಿ ಸುಧಾರಿತ ಶೌಚಾಲಯ ಸೌಲಭ್ಯವಿಲ್ಲದೇ ಬದುಕುತ್ತಿದ್ದಾರೆ.[೩]
ವರ್ಷ 2002ರ ಭೂಶೃಂಗದಲ್ಲಿ ಪಾಲ್ಗೊಂಡ ಸರಕಾರಗಳು ಈ ಕೆಳಗಿನ ಕ್ರಿಯಾ ಯೋಜನೆಗೆ ಅಂಗೀಕಾರ ನೀಡಿದವು:

ವರ್ಷ 2015ರ ವೇಳೆಗೆ ಕುಡಿಯುವ ನೀರು ಸಿಕ್ಕದೇ ಪರದಾಡುತ್ತಿರುವ ಮಂದಿಗೆ ಸಮಪಾಲು ನೀಡುವುದು. ವಿಶ್ವ ಜಲ ಪೂರೈಕೆ ಮತ್ತು ಶುಚಿತ್ವದ ಮೌಲ್ಯ ಮಾಪನ ವರದಿ-2000 ([http:// www.who.int /water_sanitation _health/monitoring / globalassess/en/ ಗ್ಲೋಬಲ್ ವಾಟರ್ ಸಪ್ಲೈ ಅಂಡ್ ಸ್ಯಾನಿಟೇಷನ್ ರಿಪೋರ್ಟ್ ೨೦೦೦ = GWSSAR]) ಬಳಕೆದಾರನ ಮನೆ ಹಾಗೂ ಜಲ ಮೂಲದ ನಡುವಿನ ಅಂತರ ಒಂದು ಕಿಲೋಮೀಟರ್‌ ಒಳಗಿದ್ದು ಪ್ರತಿ ವ್ಯಕ್ತಿಗೆ ನಿತ್ಯವೂ ಕನಿಷ್ಠ 20 ಲೀಟರ್‌ ನೀರು "ಸಿಕ್ಕುವಂತಿರುವುದು ನ್ಯಾಯೋಚಿತ" ಎಂದು ವರದಿಯಲ್ಲಿ ವಿವರಿಸಲಾಗಿದೆ.
ಶೌಚಾಲಯದ ಮೂಲ ಸೌಕರ್ಯವಿಲ್ಲದ ಜನಕ್ಕೆ ಅದನ್ನು ಒದಗಿಸುವುದು. "ಶೌಚಾಲಯದ ಮೂಲ ಸೌಕರ್ಯ" ಖಾಸಗಿಯದೇ ಇರಬಹುದು ಅಥವಾ ಪಾಲುದಾರಿಕೆಯದ್ದೇ ಆಗಿರಬಹುದು, ಆದರೆ ಅದು ಮಾನವನ ಶರೀರದಿಂದ ಹೊರಬಂದಿರುವ ತ್ಯಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ.
ಸಂಪನ್ಮೂಲದ ಕೊರತೆ ಹಾಗೂ ಕ್ಷಿಪ್ರಗತಿಯಲ್ಲಿ ಏರುತ್ತಿರುವ ಜನಸಂಖ್ಯೆ ಸಮಸ್ಯೆಯನ್ನು ಎದುರಿಸುತ್ತಿರುವ ಬಡದೇಶಗಳು 2025ರ ವೇಳೆಗೆ ನೀರಿನ ಕೊರತೆಯಿಂದ ನರಳುವ ಚಿತ್ರ ಕಣ್ಣಿಗೆ ಕಟ್ಟುತ್ತಿದೆ. ನಮ್ಮ ಮುಂದಿನ ಪೀಳಿಗೆ ಇಂಥಹ ಕಷ್ಟಗಳನ್ನು ಎದುರಿಸಬೇಕಾಗಿಬರಬಹುದು,ನೀರಿನ ಸಮಸ್ಯೆಯಿಂದ ಜನತೆ ತತ್ತರಗೊಳ್ಳಬಹುದು.ಇದಕ್ಕಾಗಿ ಭೂಮಿಯಲ್ಲಿನ ಅಂತರ್ಜಲ ಖಾಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಇದೆ,  ನೀರು ಮಳೆಗಾಲದಲ್ಲಿ ಹರಿದು ಅನಾವಶ್ಯಕವಾಗಿ ಸರಾಗವಾಗಿ ಸಮುದ್ರವನ್ನು ಸೇರುವುದನ್ನು ತಡೆದು ಭೂಮಿಯ ಅಂತರ್ಜಲ(ಒಸರು) ಬತ್ತಿ ಹೋಗದಂತೆ ತಡೆಯುವ ಸಲುವಾಗಿ ಅಲ್ಲಲ್ಲಿ ಇಂಗು ಗುಂಡಿಗಳ ರಚನೆ, ಹೊಸ ಹೊಸ ಹಳ್ಳ, ತೋಡು, ಕೆರೆಗಳ ರಚನೆಯಿಂದ ಮಳೆಗಾಲದ ನೀರನ್ನು ರಕ್ಷಿಸಿ ಶೇಕರಿಸಿಡುವುದು,ಸಣ್ಣ ಹಾಗೂ ಮದ್ಯಮ ಪ್ರಮಾಣದ ಜಲಾಶಯ,ಅಣೆಕಟ್ಟುಗಳ ನಿರ್ಮಾಣ ಇವುಗಳ ಪಾತ್ರ ಮಹತ್ತರವಾಗಿದೆ ಮಾತ್ರವಲ್ಲ ಅನಿವಾರ್ಯವೂ ಆಗಲಿದೆ.

== ಭೂಮಿಯ ಪವಿತ್ರತೆಯಲ್ಲಿ ಪಂಚಭೂತಗಳಲ್ಲೊಂದಾದ ಗಾಳಿ(ವಾಯು)ಯ ಪಾತ್ರ  ==
 ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು. ಮಾಲಿನ್ಯವನ್ನು ಪ್ರತ್ಯಕ್ಷ ಮಾಲಿನ್ಯ ಹಾಗೂ ಪರೋಕ್ಷ ಮಾಲಿನ್ಯ ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಬ್ಲಾಕ್‌ಸ್ಮಿತ್ ಇನ್ಸ್ಟಿಟ್ಯೂಟ್ಎಂಬ ಸಂಸ್ಥೆಯು ಪ್ರತಿ ವರ್ಷ ಪ್ರಪಂಚದ ಅತಿಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶಗಳ ಪಟ್ಟಿ ಪ್ರಕಟಿಸುತ್ತದೆ. 2007ರ ಪ್ರಕಟಣೆಯಲ್ಲಿ ಪ್ರಕಟವಾದ ಪಟ್ಟಿಯಲ್ಲಿದ್ದ ಟಾಪ್ 10 ಮಾಲಿನ್ಯ ಪ್ರದೇಶಗಳು ಅಜರ್ಬೈಜಾನ್, ಚೀನಾ, ಭಾರತ, ಪೆರು, ರಷ್ಯಾ, ಉಕ್ರೇನ್ ಮತ್ತು ಜಾಂಬಿಯಾ ಪ್ರದೇಶದಲ್ಲಿವೆ.

== ವಾಸ್ತುವಿನ ಪ್ರಕಾರ ಭೂಮಿಯ ಮೇಲೆ ಒಂದು ಹೊಸ ಮನೆ ಕಟ್ಟುವಾಗ ವಾಸ್ತು ಪೂಜೆ ==
ಮನೆಯ ನಿರ್ಮಾಣದ ಬಗ್ಗೆ ನಾವು ವಾಸ್ತು ಪರವಾಗಿ ಚಿಂತಿಸುವಾಗ, ಸಾಧಾರಣ ನಾವು ಅಡಿಪಾಯ (ಅಡಿ ಕಲ್ಲು) ಹಾಕುವುದರ ಬಗ್ಗೆ ಹೆಚ್ಚು ಗಮನವನ್ನು ನೀಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಅಡಿಕಲ್ಲಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವುದರಿಂದ ಮನೆಯು ಸುದೃಢವಾಗಿರುತ್ತದೆ.
ಮನೆ ಕಟ್ಟಲು ಅಡಿಕಲ್ಲು ಹಾಕುವ ಮೊದಲು ಭೂಮಿ ಪೂಜೆ ನಡೆಸಿ ವಾಸ್ತು ಪುರುಷನನ್ನು ಸಂತೋಷಗೊಳಿಸಬೇಕು. ಪೂಜೆ ನಡೆಸಿದ ನಂತರವೂ ಕೆಲವು ಕಾರ್ಯಗಳ ಬಗ್ಗೆ ಹೆಚ್ಚು ಶ್ರದ್ಧೆ ವಹಿಸ ಬೇಕೆಂದು ವಾಸ್ತುಶಾಸ್ತ್ರವು ಹೇಳುತ್ತದೆ.
ಕೆಲವು ಅಶುಭಕರವಾದ ಶಬ್ದ ಅಥವಾ ಸನ್ನಿವೇಷಗಳು ಈ ಸಮಯದಲ್ಲಿ ತಲೆದೋರಿದರೆ ಈ ಸಮಾರಂಭವನ್ನು ಇನ್ನೊಂದು ಮುಹೂರ್ತಕ್ಕೆ ಮುಂದೂಡುವುದು ಒಳ್ಳೆಯದು ಎಂದು ವಾಸ್ತು ತಜ್ನರ ಅಭಿಪ್ರಾಯ.
ವಾಸ್ತು ಪುರುಷಮಂಡಲವನ್ನು ನಮ್ಮ ಭ-ಚಕ್ರಕ್ಕೆ ಹೋಲಿಸಿದರೆ ಈಶಾನ್ಯ ಕೋನದಲ್ಲಿ ಈಶಾನ್ಯದ ಗ್ರಹಗಳಾದ ಗುರುಗ್ರಹ ಗುರು ಪುತ್ರಕಾರಕ, ಪೂರ್ವದ ಅಧಿಪತಿ ಸೂರ್ಯ ಮತ್ತು ಕುಬೇರ ಸ್ಥಾನದ ಅಧಿಪತಿ ಬುಧ.

ಗುರುಗ್ರಹ ಭ-ಚಕ್ರದ ನವಮ ಮತ್ತು ದ್ವಾದಶ ಸ್ಥಾನದ ರಾಶ್ಯಾದಿಪತಿ, ವಾಸ್ತುಪುರುಷಸ್ಥಾನದ ಯಜಮಾನನ ತಲೆಯ ಸ್ಥಾನ, ಈ ಯಜಮಾನ ತನ್ನ ಬಾಳಿನಲ್ಲಿ ಮತ್ತು ಉದ್ಯೋಗದಲ್ಲಿ ತನಗೆ ತೃಪ್ತಿ ಸಿಗಬೇಕಾದರೆ ಪುತ್ರಕಾರಕ ಗುರುವಿನ ಅನುಗ್ರಹಬೇಕು, ಅಂತೆಯೇ ಸೂರ್ಯಗ್ರಹ ತಂದೆಯ ಬಗ್ಗೆ ತಿಳಿಸುತ್ತದೆ.

ವಾಸ್ತು ಶಾಸ್ತ್ರದಲ್ಲಿ ಜಲ ಸ್ಥಾನವನ್ನು ಪುತ್ರನ ಸ್ಥಾನ ಎನ್ನುತ್ತಾರೆ. ಪೂರ್ವ ಜನ್ಮಪುಣ್ಯಸ್ಥಾನ ಸಹಾಯವಿಲ್ಲದೆ, ಪುತ್ರಸ್ಥಾನದ ಯೋಗ ಸಿಗುವುದಿಲ್ಲ. ಈ ಸ್ಥಾನಕ್ಕೆ ಜಠರ ಅಗ್ನಿಯ ಸ್ಥಾನವೆನ್ನುತ್ತಾರೆ.

ಸೂರ್ಯ ಗ್ರಹವು ಶ್ರೀಸಾಮಾನ್ಯನಿಗೆ ಆರೋಗ್ಯವನ್ನು ನೀಡುವ ಗ್ರಹವಾಗಿದೆ, ಆರೋಗ್ಯವಿಲ್ಲದಿದ್ದರೆ ಮನುಷ್ಯನ ವೀರ್ಯ ಬೆಳೆಯುವುದಿಲ್ಲ, ಅಂತೆಯ ಭ-ಚಕ್ರದ ಮೇಷರಾಶಿಯನ್ನು ಧರ್ಮಸ್ಥಾನ, ವೃಷಭರಾಶಿಯನ್ನು ಅರ್ಥಸ್ಥಾನ, ಮಿಥುನ ರಾಶಿಯನ್ನು ಕಾಮಸ್ಥಾನ ಮತ್ತು ಕಟಕರಾಶಿಯನ್ನು ಜಲಸ್ಥಾನವೆಂದು ಕರೆಯುತ್ತಾರೆ.

== ಭೂಮಿಯ ಕಂಪನದ ಕಾರಣಗಳು  ==
ಬಹುತೇಕ ಭೂಕಂಪಗಳು ಸಂಭವಿಸುತ್ತವೆಯಾದರೂ, ಮಾನವನ ಚಟುವಟಿಕೆಯೂ ಸಹ ಭೂಕಂಪವನ್ನು ಉಂಟುಮಾಡಬಲ್ಲದು. ಈ ವಿದ್ಯಮಾನಕ್ಕೆ ನಾಲ್ಕು ಪ್ರಮುಖ ಕಾರಣಗಳು ಕೊಡುಗೆಯನ್ನು ನೀಡುತ್ತವೆ. ಅವುಗಳೆಂದರೆ, 

(1) ಬೃಹತ್ ಅಣೆಕಟ್ಟುಗಳು ಹಾಗೂ (2) ಕಟ್ಟಡಗಳನ್ನು ಕಟ್ಟುವುದು, (3)ಬಾವಿಗಳನ್ನು ಕೊರೆಯುವುದು ಹಾಗೂ ಅವುಗಳಿಗೆ ದ್ರವಪದಾರ್ಥವನ್ನು ಸೇರಿಸುವುದು, ಮತ್ತು (4) ಕಲ್ಲಿದ್ದಲು ಗಣಿಕಾರಿಕೆ ಹಾಗೂ ತೈಲ ನಿಕ್ಷೇಪಗಳಿಗಾಗಿ ಕೊರೆಯುವುದು. 

ಚೈನಾದ ಸಿಚುವಾನ್ ಪ್ರಾಂತ್ಯದಲ್ಲಿ ಮೇ ತಿಂಗಳಲ್ಲಿ ಸಂಭವಿಸಿದ 2008ರ ಸಿಚುವಾನ್ ಭೂಕಂಪ ಪ್ರಾಯಶಃ ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಬಲ್ಲದು. ಈ ಕಂಪನದಿಂದಾಗಿ ೬೯,೨೨೭ ಸಾವುಗಳು ಸಂಭವಿಸಿದ್ದು, ಇದು ಇದುವರೆಗಿನ ಭೂಕಂಪಗಳ ಪೈಕಿ 19ನೇ ಅತ್ಯಂತ ಮಾರಣಾಂತಿಕ ಭೂಕಂಪವಾಗಿದೆ. ದೋಷದ ಒತ್ತಡವನ್ನು1,650 feet (503 m) ಝಿಪಿಂಗ್‌ಪು ಅಣೆಕಟ್ಟು ಹೊಯ್ದಾಡಿಸಿ ತಳ್ಳಿದೆ ಎಂದು ನಂಬಲಾಗಿದ್ದು, ಈ ಒತ್ತಡವೇ ಪ್ರಾಯಶಃ ಭೂಕಂಪದ ಶಕ್ತಿಯನ್ನು ಹೆಚ್ಚಿಸಿ, ಸದರಿ ದೋಷದ ಚಲನೆಯ ದರವನ್ನು ಉತ್ಕರ್ಷಿಸಿದೆ ಎಂದು ಭಾವಿಸಲಾಗಿದೆ.[೨೧] ಆಸ್ಟ್ರೇಲಿಯಾದ ಇತಿಹಾಸದಲ್ಲಿನ ಅತ್ಯಂತ ದೊಡ್ಡ ಭೂಕಂಪಕ್ಕೂ ಮಾನವನ ಪ್ರಚೋದನೆ ಇತ್ತು. ಕಲ್ಲಿದ್ದಲ ಗಣಿಕಾರಿಕೆ ಈ ಭೂಕಂಪಕ್ಕೆ ಕಾರಣವಾಗಿತ್ತು. ನ್ಯೂಕ್ಯಾಸಲ್ ನಗರವನ್ನು ಕಲ್ಲಿದ್ದಲು ಗಣಿಪ್ರದೇಶಗಳ ಬೃಹತ್ ವಿಭಾಗವೊಂದರ ಮೇಲೆ ಕಟ್ಟಲಾಗಿತ್ತು.ದೋಷವೊಂದರಿಂದ ಹುಟ್ಟಿದ ಭೂಕಂಪವು, ಗಣಿಕಾರಿಕೆ ಪ್ರಕ್ರಿಯೆಯಲ್ಲಿ ತೆಗೆದುಹಾಕಲ್ಪಟ್ಟ ಮಿಲಿಯಗಟ್ಟಲೆ ಕಲ್ಲುಬಂಡೆಗಳ ಕಾರಣದಿಂದ ಪುನಶ್ಚೇತನಗೊಂಡಿತು.

ಭೂಮಿಯ ಕಂಪನ ಧರ್ಮ ಮತ್ತು ನಂಬಿಕೆ:-
ಪುರಾಣ ಮತ್ತು ಧರ್ಮ	
ನಾರ್ವೆ ಭಾಷೆಯ ಪುರಾಣದಲ್ಲಿ, ಭೂಕಂಪಗಳನ್ನು ಲೋಕಿ ದೇವರ ಬಿರುಸಾದ ಹೆಣಗಾಟ ಎಂಬಂತೆ ವಿವರಿಸಲಾಗಿತ್ತು. ಕಿರುಕುಳದ ಮತ್ತು ಸೆಣಸಾಟದ ದೇವರಾದ ಲೋಕಿಯು, ಸೌಂದರ್ಯ ಮತ್ತು ಜ್ಞಾನದ ದೇವರಾದ ಬಾಲ್ದ್‌ರ್‌ನನ್ನು ಕೊಂದಾಗ ಅವನನ್ನು ಗುಹೆಯೊಂದರಲ್ಲಿ ಬಂಧಿಸಿಟ್ಟು, ನಂಜನ್ನು ಕಕ್ಕುತ್ತಿರುವ ವಿಷಯುಕ್ತ ಸರ್ಪವೊಂದನ್ನು ಅವನ ತಲೆಯ ಮೇಲೆ ಇರಿಸುವ ಮೂಲಕ ಅವನನ್ನು ಶಿಕ್ಷಿಸಲಾಯಿತು. ಲೋಕಿಯ ಹೆಂಡತಿಯಾದ ಸೈಜಿನ್ ಅವನ ಪಕ್ಕದಲ್ಲಿ ನಿಂತು, ವಿಷವನ್ನು ಸಂಗ್ರಹಿಸಲು ಕೈನಲ್ಲಿ ಬೋಗುಣಿಯೊಂದನ್ನು ಹಿಡಿದುಕೊಂಡಿರುತ್ತಾಳೆ. ಆದರೆ ಅವಳು ಬೋಗುಣಿಯನ್ನು ಖಾಲಿಮಾಡಬೇಕಾಗಿ ಬಂದಾಗಲೆಲ್ಲಾ, ಲೋಕಿಯ ಮುಖದಮೇಲೆ ವಿಷವು ಜಿನುಗಿ, ಅದರಿಂದ ತಪ್ಪಿಸಿಕೊಳ್ಳಲು ಆತ ತಲೆಯನ್ನು ಎಳೆದುಕೊಳ್ಳಬೇಕಾಗಿ ಬರುವುದರಿಂದ ಹಾಗೂ ಆತನಿಗೆ ಕಟ್ಟಲಾಗಿರುವ ಕಟ್ಟುಗಳಿಂದ ಬಿಡಿಸಿಕೊಳ್ಳಲು ಬಡಿದಾಡುವುದರಿಂದ ಅದು ಭೂಮಿಯ ಕಂಪನಕ್ಕೆ ಕಾರಣವಾಗುತ್ತದೆ.[೩೫] ಗ್ರೀಕ್ ಪುರಾಣದಲ್ಲಿರುವಂತೆ, ಪಾಸಿಡಾನ್‌ ಭೂಕಂಪಗಳಿಗೆ ಕಾರಣನಾಗಿದ್ದ ಮತ್ತು ಅವುಗಳ ದೇವರಾಗಿದ್ದ.ಆತ ಕೆಟ್ಟ ಮನಸ್ಥಿತಿಯಲ್ಲಿದ್ದಾಗ, ನೆಲವನ್ನು ತ್ರಿಶೂಲವೊಂದರಿಂದ ಚುಚ್ಚುತ್ತಿದ್ದ. ಇದರಿಂದಾಗಿ ಭೂಕಂಪ ಮತ್ತು ಇತರ ವಿಕೋಪಗಳು ಉಂಟಾಗುತ್ತಿದ್ದವು. ಜನರನ್ನು ಶಿಕ್ಷಿಸಲು ಹಾಗೂ ಅವರ ಮೇಲೆ ಭಯವನ್ನು ಹೇರಲು ಆತ ಭೂಕಂಪವನ್ನು ಪ್ರತೀಕಾರದ ರೂಪದಲ್ಲಿಯೂ ಬಳಸಿಕೊಂಡ.[೩೬] ಜಪಾನೀಯರ ಪುರಾಣದಲ್ಲಿ, ನಮಝು (鯰) ಒಂದು ದೈತ್ಯ ಬೆಕ್ಕುಮೀನು ಆಗಿದ್ದು ಅದು ಭೂಕಂಪಗಳನ್ನು ಉಂಟುಮಾಡುತ್ತದೆ.ಭೂಮಿಯ ಅಡಿಯಲ್ಲಿನ ಕೆಸರಿನಲ್ಲಿ ನಮಝು ವಾಸಿಸುತ್ತದೆ. ಒಂದು ಕಲ್ಲನ್ನಿಟ್ಟುಕೊಂಡು ಮೀನನ್ನು ಅಂಕೆಯಲ್ಲಿಡುವ ದೇವರಾದ ಕಶಿಮಾ ಈ ನಮಝುವನ್ನು ರಕ್ಷಿಸುತ್ತದೆ. ಕಶಿಮಾ ತನ್ನ ರಕ್ಷಣಾ ಕಾಪನ್ನು ಕೆಳಗೆ ಬೀಳಿಸಿದಾಗ, ನಮಝು ಹೊಯ್ದಾಡಲು ಅಥವಾ ಬಡಿದಾಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ಬಿರುಸಾದ ಭೂಕಂಪಗಳು ಸಂಭವಿಸುತ್ತವೆ, ಮುಂತಾದ ನಂಬಿಕೆಗಳಿದ್ದವು.

== ಮಹಾಭಾರತದಲ್ಲಿ ಭೂಮಿ ಮತ್ತು ಸೃಷ್ಟಿ ==
ಮಹಾಭಾರತದ ಈಗಿನ ಕಾವ್ಯವು ಸುಮಾರು ಕ್ರಿಪೂ 4000 ವರ್ಷಗಳ ಹಿಂದೆ ಬರಹರೂಪಕ್ಕೆ ಬಂದಿರಬೇಕೆಂದು ಇತಿಹಾಸಕಾರರು ತೀರ್ಮಾನಿಸಿದ್ದಾರೆ. ಮೂಲಮಹಾಭಾರತ ಪಾಠವು ಸುಮಾರು ಕ್ರಿ ಪೂ. ೮ /೯ ನೇ ಶತಮಾನದಲ್ಲಿ ರಚನೆಯಾಗಿರಬೇಕೆಂದು ಅಭಿಪ್ರಾಯ ಪಡುತ್ತಾರೆ. ಕ್ರಿಶ. ೩೦೦/೪೦೦ ರ ಗುಪ್ತರಕಾಲದಲ್ಲಿ ಈಗಿನ ತಿದ್ದಿದ ಗ್ರಂಥ ರಚನೆ ಯಾಗಿರಬಹುದೆಂಬುದು ಭಾಷಾತಜ್ಞರ ಅಭಿಪ್ರಾಯ. ಖಗೋಲ ವಿಜ್ಞಾನಿ ಆರ್ಯಭಟ್ಟರು (ಕ್ರಿ ಶ.೬ ನೇ ಶತಮಾನ) ಕಲಿಯುಗಾದಿಯನ್ನು ಕ್ರಿ.ಪೂ. ೩೧೦೨ ಫೆಬ್ರವರಿ ೧೮ ಎಂದು ನಿರ್ಧರಿಸಿದ್ದಾರೆ ಮಹಾಭಾರತಯುದ್ಧವು ಅದಕ್ಕಿಂತ ೫೦/೬೦ವರ್ಷಹಿಂದೆ ಆಗಿರಬೇಕು. ೨ನೇ ಪುಲಕೇಶಿಯ ಕಾಲದ ಐಹೊಳೆ ಶಾಸನದಲ್ಲಿ ಶಕ ೫೫೬= ಕಿಪೂ.೬೩೪ ಎಂದರೆ ಭಾರತ (ಕುರುಕ್ಷೇತ್ರ ಯುದ್ಧವು) ನಡೆದು ೩೭೩೫ ವರ್ಷಗಳಾದವೆಂದು ಹೇಳಿದೆ. ಖಗೋಲ ಶಾಸ್ರಜ್ಞರ ವೃದ್ಧ ವರ್ಗ, ವರಾಹಮಿಹಿರರು ಮತ್ತು ಹಿಂದಿನ ಇತಿಹಾಸ ಕಾರ ಕಲ್ಹಣ ರು ಆ ಯುದ್ಧವು ಕ್ರಿ ಪೂ ೨೪೪೯ ವರ್ಷದಲ್ಲಿ (೨೪೪೯+೨೦೧೨ = ೪೪೬೧ ವರ್ಷದ ಹಿಂದೆ) ಆಯಿತೆಂದು ಹೇಳುತ್ತಾರೆ. ಆದರೆ ಈಗಿನ ಇತಿಹಾಸ ಕಾರರು ಮಹಾಭಾರತ ಯುದ್ಧವು ಕ್ರಿ ಪೂ.೧೨ ನೇ ಶತಮಾನ ದಿಂದ ಕ್ರಿ ಪೂ. ೮ ನೇ ಶತಮಾನದ ನಡುವೆ ಕಬ್ಬಿಣ ಯುಗದ ಆರಂಭದಲ್ಲಿ ನಡೆದಿರಬೇಕೆಂದು ಅಭಿಪ್ರಾಯ ಪಡುತ್ತಾರೆ. (ವಿಕಿಪೀಡಿಯಾ ಇಂಗ್ಲಿಷ್- ಮಹಾಭಾರತ) ಹಿಂದೂ ಪಂಚಾಂಗಗಳ ಪ್ರಕಾರ ಕಲಿಯುಗ ಆರಂಭವಾಗಿ ೫೧೦೦ ವರ್ಷ ವಾಗಿದೆ
ಪ್ರಸಿದ್ಧವಾದ ೧೮ ಪುರಾಣಗಳು ಮಹಾಭಾರತ ಕಾವ್ಯ ಅಥವಾ [[ಇತಿಹಾಸ]]ಕ್ಕಿಂತ ಈಚೆಗೆ ರಚನೆಯಾದದ್ದೆಂದು ಇತಿಹಾಸಕಾರರ ಅಭಿಪ್ರಾಯ.
ಕಾಲ ಗಣನೆ
ಕಾಲ ೧೯೭,೨೬,೪೯,೧೧೦ ವರ್ಷಗಳ ಹಿಂದೆ
(೨೦೦೯ ಕ್ಕೆ) ೧ ನೇ ಸ್ವಾಯಂಭೂ ಮನುವಿನ ಕಾಲ ? ದೇವಗಣ ಸೃಷ್ಟಿ (ಮಹಾಭಾರತ ಆದಿಪರ್ವ ಅದ್ಯಾಯ ೬೫ ಶ್ಲೋಕ ೨೫೭೪/೧೦) ರಿಂದ)
ಕಲ್ಪ ಆದಿ ಗತ:೧೯೭,೨೬,೪೯,೧೧೦ (ವರ್ಷಗಳ ಹಿಂದೆ)ಕಲಿ ಗತ ೫೧೧೦ವರ್ಷ (೨೦೦೯ಕ್ಕೆ) ಸೃಷ್ಟಿಯ ಆದಿ ಗತ:೧೯೫,೫೮,೮೫೨೧೦,; ವವಸ್ವತ ಮನು ಗತ : ೧,೮೬,೧೮,೮೫೦ (ಮೈಸೂರು ಪಂಚಾಂಗ ರೀತ್ಯಾ). ಇದು ಬ್ರಹ್ಮನ ದ್ವಿತೀಯ ಪರಾರ್ಧ (ಮಧ್ಯಾಹ್ನ ) ಶ್ವೇತ ವರಾಹ ಕಲ್ಪ ( ಅನೇಕ ಯುಗಗಳು ಮತ್ತು ಮನ್ವಂತರಗಳು) ಈಗ ವೈವಸ್ವತ ಮನ್ವಂತರ.

== ಭೂಮಿಯ ಪವಿತ್ರತೆಯಲ್ಲಿ ನೀರು,ಜಲ ಮಾಲಿನ್ಯ ಮತ್ತು ಜಲ ಸಂರಕ್ಷಣೆ  ==
ಭೂಮಿಯ ಹೊರತಲದಲ್ಲಿ ಅತ್ಯಂತ ಹೇರಳವಾಗಿ ಸಿಗುವ ಅಣು ನೀರು (H
2O), ಇದು ಗ್ರಹದ 70% ಭಾಗದಲ್ಲಿ ಸಂಯೋಜನೆಗೊಂಡಿದೆ. ನಿಸರ್ಗದಲ್ಲಿ ಇದು ದ್ರವ, ಘನ, ಮತ್ತು ಅನಿಲ ರೂಪದಲ್ಲಿ ಅಸ್ತಿತ್ವದಲ್ಲಿದೆ. ಉಷ್ಣಾಂಶ ಮತ್ತು ಒತ್ತಡ ಪ್ರಮಾಣದಲ್ಲಿ ದ್ರವ ಮತ್ತು ಅನಿಲಗಳ ನಡುವೆ ಪ್ರೇರಕ ಸಮತೋಲನವಾಗಿ ಇರುತ್ತದೆ. ಕೊಠಡಿ ತಾಪಮಾನದಲ್ಲಿ, ಅದು ವರ್ಣರಹಿತವಾಗಿರುತ್ತದೆ ಜೊತೆಗೆ ನೀಲಿ ಬಣ್ಣದ ಸುಳಿವು ಹಿಂದಿದ್ದು ರುಚಿಹೀನವಾಗಿಯೂ ಮತ್ತು ವಾಸನಾರಹಿತವಾಗಿಯೂ ಇರುವ ದ್ರವಾಗಿದೆ. ಅನೇಕ ವಸ್ತುಗಳು ನೀರಿನಲ್ಲಿ ಕರಗುತ್ತವೆ ಮತ್ತು ಸಾಮಾನ್ಯವಾಗಿ ನೀರನ್ನು ವಿಶ್ವವ್ಯಾಪಿ ದ್ರವೀಕರಣ ಮಾಡುವ ಗುಣವುಳ್ಳದ್ದು ಎಂದು ಉಲ್ಲೇಖಿಸಲಾಗುತ್ತದೆ. ಈ ಕಾರಣದಿಂದಲೇ ಪ್ರಕೃತಿಯಲ್ಲಿ ಮತ್ತು ಬಳಕೆಯಲ್ಲಿ ನೀರು ಅಶುದ್ಧವೆನ್ನಲಾಗಿದೆ ಮತ್ತು ಶುದ್ಧ ವಸ್ತುಗಳ ಶುದ್ಧತೆಯೂ ಕೂಡ ಒಂದಿಷ್ಟು ವ್ಯತ್ಯಾಸಗೊಳ್ಳುತ್ತದೆ. ಏನೇ ಆಗಲಿ, ಪೂರ್ಣವಾಗಿ ಅಲ್ಲದಿದ್ದರೂ ಕೆಲವು ಸಂಯೋಗಗಳು ಅಗತ್ಯವಾಗಿದೆ, ಇಲ್ಲದಿದ್ದಲ್ಲಿ ನೀರಲ್ಲಿ ಕರಗುವುದಿಲ್ಲ. ನೀರು ಎಂಬುದೊಂದೇ ನೈಸರ್ಗಿಕವಾಗಿ ಎಲ್ಲಾ ಮೂರು ಸಾಮಾನ್ಯವಾದ ಭೌತದ್ರವ್ಯದ ಸ್ಥಿತಿ-ಯಲ್ಲಿ ಕಂಡು ಬರುವುದು, ಬೇರೆ ರೀತಿಯಲ್ಲಿ ಕಾಣುವುದಕ್ಕಾಗಿ ರಾಸಾಯನಿಕ ಗುಣಲಕ್ಷಣಗಳು ನೋಡಬೇಕಾಗುತ್ತದೆ. ಭೂಮಿಯ ಮೇಲೆ ಜೀವಿಸುವುದಕ್ಕೆ ನೀರು ಅತ್ಯಂತ ಅಗತ್ಯ.ಮನುಷ್ಯನ ಶರೀರದಲ್ಲಿ 55% ರಿಂದ 78% ರಷ್ಟು ನೀರು ತುಂಬಿರುತ್ತದೆ.