Revision 1031954 of "ಪ್ರೊ.ಜಿ.ವೆಂಕಟಸುಬ್ಬಯ್ಯ" on knwiki{{Infobox Writer
<!-- For template details please see Template:Infobox Writer -->
| name = ಜಿ. ವೆಂಕಟಸುಬ್ಬಯ್ಯ
| image = G_Venkatasubbaiah.jpg
| imagesize =200px
| caption =
| pseudonym =
| birth_date = ೨೩-೦೮-೧೯೧೩
| birth_place = [[ಮೈಸೂರು]]
| death_date = ೧೯ ಏಪ್ರಿಲ್, ೨೦೨೧
| death_place = ಬೆಂಗಳೂರು
| occupation = ಭಾಷಾತಜ್ಞ, ಕನ್ನಡ ನಿಘಂಟು ತಜ್ಞ, ಬರಹಗಾರ, ಸಂಶೋಧಕ, ಶಿಕ್ಷಕ, ಚಿಂತಕ,
| nationality = ಭಾರತೀಯ
| period = 20ನೇ ಶತಮಾನ
| genre =
| subject = [[ಕನ್ನಡ ಸಾಹಿತ್ಯ]]
| movement =
| debut_works =
| notableworks = [[ಇಗೋ ಕನ್ನಡ]]
| spouse = ಲಕ್ಷ್ಮಿ
| children = ೪
| influences = [[ಪು.ತಿ.ನರಸಿಂಹಾಚಾರ್]], [[ಬಿ.ಎಂ.ಶ್ರೀ]], [[ಕುವೆಂಪು]]
| influenced =
| awards = [[ಪದ್ಮಶ್ರೀ]] (೨೦೧೭), [[ಭಾಷಾ ಸಮ್ಮಾನ್]](೨೦೧೮)
| signature =
| website = [[https://www.srikanta-sastri.org/g-venkatasubbiah/4592707820 'ವೆಬ್ಸೈಟ್']]
| footnotes =
}}
'''ಪ್ರೊ||ಗಂಜಾಂ ವೆಂಕಟಸುಬ್ಬಯ್ಯ''' (೨೩ಆಗಸ್ಟ್೧೯೧೩-೧೯ಏಪ್ರಿಲ್೨೦೨೧) ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ತಜ್ಞರು. ಇವರ '[[ಇಗೋ ಕನ್ನಡ]]' ಎಂಬ [[ಪ್ರಜಾವಾಣಿ]] ಅಂಕಣ ಸಮಸ್ತ ಕನ್ನಡಿಗರಿಗೆ ಪರಿಚಿತವಾಗಿದೆ. ೧೯೯೧ ರಿಂದ ವೆಂಕಟಸುಬ್ಬಯ್ಯನವರು ಈ ಅಂಕಣದ ಮೂಲಕ ಕನ್ನಡ ಭಾಷೆಯ ಪದಗಳನ್ನು ಓದುಗರಿಗೆ ಹತ್ತಿರಗೊಳಿಸಿದವರು. ಇವರ ಭಾಷಾ ಸಾಹಿತ್ಯ ಕೊಡುಗೆಗೆ ೨೦೦೫ರಲ್ಲಿ, ಹಂಪೆ ವಿಶ್ವವಿದ್ಯಾಲಯವು ಇವರಿಗೆ ಪ್ರತಿಷ್ಠಿತ [[ನಾಡೋಜ ಪ್ರಶಸ್ತಿ]]ಯನ್ನು ನೀಡಿದೆ. ಇವರು ಬೆಂಗಳೂರಿನಲ್ಲಿ ನಡೆದ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. <ref>[https://starofmysore.com/kannada-linguist-grammarian-teacher-writer-and-lexicographer-g-venkatasubbiah-turns-107/ Kannada Linguist, Grammarian, Teacher, Writer And Lexicographer… G. Venkatasubbiah Turns 107 Aug 23, 2020,Star of Mysore] </ref>
==ಜೀವನ==
೧೯೧೩ರಲ್ಲಿ ಮೈಸೂರಿನಲ್ಲಿ ಜನಿಸಿ, ಬೆಳೆದ ವೆಂಕಟಸುಬ್ಬಯ್ಯನವರ ತಂದೆ [[ಗಂಜಾಂ ತಿಮ್ಮಣ್ಣಯ್ಯ]]ನವರು. ಸಂಸ್ಕೃತ ಹಾಗು ಕನ್ನಡದ ವಿದ್ವಾಂಸರಾಗಿದ್ದರು. ೧೯೩೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿಯನ್ನು ಪಡೆದ ಇವರಿಗೆ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ [[ಸುವರ್ಣಪದಕ]]ವನ್ನು ಬಹುಮಾನವಾಗಿ ಕೊಡಲಾಯಿತು. ಮುಂದೆ ಇವರು ಬಿ.ಟಿ. ಪದವಿಯನ್ನೂ ಕೂಡ ಪಡೆದರು. ೧೯೩೯ ರಿಂದ ಪ್ರಾರಂಭಿಸಿ ಸುಮಾರು ೪೦ ವರ್ಷಗಳ ಕಾಲ ಇವರು [[ಶಿಕ್ಷಣ]] ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವರು.<ref>[http://www.deccanherald.com/content/276167/teacher-par-excellence.html Teacher par excellence], Deccan Herald, Sep 4, 2012 </ref> ಕನ್ನಡ ಸಾರಸ್ವತ ಲೋಕದಲ್ಲಿ ಅವರು ಜಿ.ವಿ.ಎಂದೇ ಹೆಸರಾದವರು.
==ಇಗೋ ಕನ್ನಡ==
'[[ಇಗೋ ಕನ್ನಡ]]' - ೧೨-೫-೯೧ ರಿಂದ ಕನ್ನಡದ ಜನಪ್ರಿಯ ಪತ್ರಿಕೆಯಾದ [[ಪ್ರಜಾವಾಣಿ | ಪ್ರಜಾವಾಣಿಯಲ್ಲಿ]] ಪುಟ್ಟ ಅಂಕಣವಾಗಿ ಪ್ರಾರಂಭವಾಯಿತು. ಕನ್ನಡದ ಶಿಷ್ಟ ಬರವಣಿಗೆಯನ್ನು ಸಾರ್ವಜನಿಕರಿಗೆ ತಿಳಿಯ ಪಡಿಸಲು ಆರಂಭಿಸಿದ ಈ ಅಂಕಣವು ಕೆಲವೇ ದಿನಗಳಲ್ಲಿ ಹಲವರ ಗಮನವನ್ನೂ, ಉತ್ಸಾಹವನ್ನೂ ತನ್ನತ್ತ ಸೆಳೆಯಿತು. ಕನ್ನಡವನ್ನು ಅಭ್ಯಾಸ ಮಾಡಿದವರಿಂದಲೂ, ಶ್ರೀಸಾಮಾನ್ಯರಿಂದಲೂ ಬಂದ ವೈವಿಧ್ಯಮಯ ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲಿ ತೊಡಗಿಸಿಕೊಂಡ ಈ ಅಂಕಣ, ಹಲವರ ಭಾಷೆಗೆ ಸಂಬಂಧಿಸಿದ ಸಂದೇಹಗಳನ್ನು ನಿವಾರಣೆ ಮಾಡಿತು. ಇಂತಹ ಭಾಷೆಗೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಒಟ್ಟುಗೂಡಿಸಿ ವೆಂಕಟಸುಬ್ಬಯ್ಯನವರು ಇಗೋ ಕನ್ನಡ ಎಂಬ ಹೆಸರಲ್ಲೇ ಒಂದು ಸಾಮಾಜಿಕ [[ನಿಘಂಟು|ನಿಘಂಟನ್ನು]] ಹೊರತಂದದ್ದುಂಟು.<ref>[http://www.bangalorewaves.com/news/bangalorewaves-news.php?detailnewsid=2916 genius Kannada lexicographer who turns 100 bangalorewaves. August 23, 2012]</ref>
==ಪ್ರಶಸ್ತಿಗಳು/ಗೌರವ ಪುರಸ್ಕಾರಗಳು==
* [[ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ]]
* ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
* [[ಪಂಪ ಪ್ರಶಸ್ತಿ]] (೨೦೧೪)
* [[ನಾಡೋಜ ಪ್ರಶಸ್ತಿ]] (೨೦೦೫) <ref>[https://www.newindianexpress.com/cities/bangalore/Nadoja-is-honorary-doctorate/2013/11/20/article1900665.ece]</ref>
* ೧೯೭೪ ರಲ್ಲಿ ಬೀದರನಲ್ಲಿ ನಡೆದ ಪ್ರಥಮ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
* ೨೦೧೧ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ೭೭ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
* ೨೦೧೭ನೇ ಸಾಲಿನ [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿ]] <ref>[http://pib.nic.in/newsite/erelease.aspx?relid=157675 ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ, ಭಾರತ ಸರ್ಕಾರ] </ref>
* ೨೦೧೮ - [[ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳು|ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ ಪುರಸ್ಕಾರ]]<ref>{{cite news|url=https://www.prajavani.net/basha-samman-g-venkatasubbiah-597217.html|title= ಗುರುಗಳ ಮಾತು ಉಳಿಸಿದ್ದಕ್ಕೆ ಸನ್ಮಾನ ಭಾಷಾ ಸಮ್ಮಾನ್|work=Prajavani|access-date=19 April 2021}} </ref>
==ನಿಧನ==
ಡಾ.ವೆಂಕಟಸುಬ್ಬಯ್ಯನವರು, ೧೮ ಏಪ್ರಿಲ್, ೨೦೨೧ ರಂದು ಮಧ್ಯರಾತ್ರಿ ತಮ್ಮ ಬೆಂಗಳೂರಿನ ನಿವಾಸದಲ್ಲಿ ನಿಧನಹೊಂದಿದರು. <ref> [https://www.prajavani.net/karnataka-news/veteran-kannada-writer-grammarian-padma-shri-g-venkatasubbiah-passed-away-in-bengaluru-823609.html ನಿಘಂಟು ತಜ್ಞ, ಭಾಷಾ ತಜ್ಞ, ಪ್ರೊ.ಜಿ.ವೆಂಕಟಸುಬ್ಬಯ್ಯನವರು ಇನ್ನಿಲ್ಲ] ಪ್ರಜಾವಾಣಿ, ೧೯, ಏಪ್ರಿಲ್,೨೦೨೧</ref>. ಅವರಿಗೆ ೧೦೮ ವರ್ಷ ವಯಸ್ಸಾಗಿತ್ತು.
==ಉಲ್ಲೇಖಗಳು==
<References />
==ನೋಡಿ==
[[ಸಿರಿಭೂವಲಯಸಾಗರರತ್ನಮಂಜೂಷ]]—ಪ್ರೊ.ಜಿ.ವೆಂಕಟಸುಬ್ಬಯ್ಯನವರ ಪತ್ರ.
==ಬಾಹ್ಯ ಸಂಪರ್ಕಗಳು==
{{commons category|G. Venkatasubbiah}}
[[ವರ್ಗ:ಸಾಹಿತಿಗಳು|ಜಿ.ವೆಂಕಟಸುಬ್ಬಯ್ಯ]]
[[ವರ್ಗ:ನಾಡೋಜ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು]]
[[ವರ್ಗ:೧೯೧೩ ಜನನ]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು]]
[[ವರ್ಗ:೨೦೨೧ ನಿಧನ]]All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?oldid=1031954.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|