Revision 1043877 of "ಸದಸ್ಯ:Pramodhini.A/sandbox" on knwiki[[ಚಿತ್|thumb|ಜೀನ್ ಬ್ಯಾಪ್ಟಿಸ್ಟ್ ಸೇ]] <ref>https://mises.org/library/jean-baptiste-say-neglected-champion-laissez-faire-0</ref> <ref>http://www.newworldencyclopedia.org/entry/Jean-Baptiste_Say</ref> ==ಇತಿಹಾಸ== ಜೀನ್ ಬ್ಯಾಪ್ಟಿಸ್ಟ್ ಸೇ ಸಂಪ್ರದಾಯ ಪಂಥದ ಇನ್ನೊಬ್ಬ ಪ್ರಭಾವಿ ಚಿಂತಕನಾದ ಜಿ.ಬಿ.ಸೇ ತನ್ನ ಅಮೂಲ್ಯ ಕೊಡುಗೆಗಳ ಮೂಲಕ ಪ್ರಸಿಧ್ದಿ ಪಡೆದನು.ಫ್ರೆಂಚ್ ಸಂಪ್ರದಾಯ ಪಂಥದ ಸಂಸ್ಥಾಪಕನಾದ ಸೇ ಯು ಆಡಂ ಸ್ಮಿತ್ತನ ಆರ್ಥಿಕ ವಿಚಾರಧಾರೆಗಳನ್ನು ಯೂರೋಪ್ ಖಂಡದಲ್ಲಿ ಮತ್ತು ವಿಶೇಷವಾಗಿ ಫ್ರಾನ್ಸಿನಲ್ಲಿ ಜನಪ್ರಿಯಗೊಳಿಸಿದನು.ತನ್ನ ಮಾರುಕಟ್ಟೆ ನಿಯಮದ ಮೂಲಕ ಇಡೀ ಸಂಪ್ರದಾಯದ ಚಿಂತನೆಗೆ ತಳಪಾಯ ಒದಗಿಸಿದ ಸೇ ಒಬ್ಬ ಸೈನಿಕನಾಗಿ,ರಾಜನೀತಿಗಾಗಿ,ವ್ಯಾಪಾರಿಯಾಗಿ ಮತ್ತು ಅರ್ಥಶಾಸ್ತ್ರ ನಾಗಿ ವ್ಯಾಪಕ ಜೀವನಾನುಭವ ಪಡೆದಿದ್ದೆನು.ಆಡಂ ಸ್ಮಿತ್ತನ ಅಮರ ಕೃತಿ ವೆಲ್ತ್ ಆಫ್ ನೇಷನ್ಸ್ ಆಕಸ್ಮಿಕವಾಗಿ ಗಮನಿಸಿದ ಸೇ ಅವನ ವಿಚಾರಧಾರೆಗಳನ್ನು ಸ್ಪಷ್ಟವಾಗಿ ಮತ್ತು ವ್ಯವಸ್ಥಿತವಾಗಿ ಅಭಿವೃದ್ದಿ ಪಡಿಸಲು ಯತ್ನಿಸಿದನು.ತನ್ನ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡ ಈತ ರಾಜಕೀಯಾರ್ಥಶಾಸ್ತ್ರದ ಬೆಳವಣಿಗೆಗೆ ಅಮೂಲ್ಯ ಕೊಡುಗೆ ಸಲ್ಲಿಸಿದನು. ==ಜನನ== ಜೇನ್ ಬ್ಯಾಪ್ಟಿಸ್ಟ್ ಸೇ ೧೭೬೭ ರಲ್ಲಿ ಫ್ರಾಸ್ಸಿನ ಲ್ಯೋನ್ಸ್ ಎಂಬಲ್ಲಿ ಜನಿಸಿದನು.ಅವನು ರಾಜನೀತಿ ನಾಗಿ,ವ್ಯಾಪಾರಿಯಾಗಿ ಮತ್ತು ಅರ್ಥಶಾಸ್ತ್ರ ಗಾಗಿ ದುಡಿದು ಅನುಭವಹೊಂದಿದ್ದ. ==ಮರಣ== ಆರಂಭದಲ್ಲಿ ವ್ಯಪಾರ ಕ್ಷೇತ್ರದಲ್ಲಿ ದುಡಿದು ಸೇ ೧೮೧೩ರಲ್ಲಿ ಕಾಲೇಜ್ ಡಿ ಫ್ರಾನ್ಸ್ನಲ್ಲಿ '''ರಾಜಕೀಯ''' ಅರ್ಥಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಕಗೊಂಡ.ಅದರ ಮರುವರ್ಷವಾದ ೧೮೩೨ರಲ್ಲಿ ಆತ ಮೃತನಾದ.ಇವರು ಅನೇಕ ಕೃತಿಗಳು,ಕೊಡುಗೆಗಳನ್ನು ನೀಡಿದ್ದಾರೆ. ==ಪದ್ದತಿ== ಫ್ರೆಂಚ್ ಸಂಪ್ರಾದಾಯ ಪಂಥದ ಸಂಸ್ಥಾಪಕನಾದ ಜೆ.ಬಿ.ಸೇ ಹಲವಾರು ಆರ್ಥಿಕ ಅಭಿಪ್ರಾಯಗಳನ್ನು ಅಭಿವೃದ್ದಿ ಪಡಿಸಿದ್ದಾನೆ.ಅವನ ಆರ್ಥಿಕ ಅಭಿಪ್ರಾಯಗಳ ಸಂಕ್ಷಿಪ್ತ ಚಿತ್ರಣ ಈ ಮುಂದಿನಂತಿದೆ.ರಾಜಕೀಯ [[ಅರ್ಥಶಾಸ್ತ್ರ]]ದ ಸ್ವರೂಪ ಮತ್ತು ವ್ಯಾಪ್ತಿ,ಉತ್ಪಾದನ,ಉತ್ಪಾದಕ ಮತ್ತು ಅನುತ್ಪಾದಕ ಶ್ರಮ,ಮೌಲ್ಯ ಸಿದ್ದಾಂತ,ಸೇ ನ ಮಾರುಕಟ್ಟೆ ನಿಯಮ.ಇವರ ಸೇ ನ ಮಾರುಕಟ್ಟೆ ನಿಯಮ ಒಂದು ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞ್ರರ ಪ್ರಕಾರ ಆರ್ಥಿಕ ವ್ಯವಸ್ಥೆಯಲ್ಲಿ ಶ್ರಮ ಮತ್ತು ಇತರೆ ಉತ್ಪಾದನಾಂಗಗಳ ಪೂರ್ಣೋದೋಗ ಯಾವಾಗಲೂ ನೆಲೆಸಿರುತ್ತದೆ.ಒಂದು ವೇಳೆ ''ಆರ್ಥಿಕತೆ'' ಪೂರ್ಣೋದ್ಯೋಗ ಹಂತದಿಂದ ತಾತ್ಕಲಿಕವಾಗಿ ಏನಾದರೂ ದೂರ ಸರಿದರೆ ಮಾರುಕಟ್ಟೆ ಶಕ್ತಿಗಳ ಮುಕ್ತ ಕಾರ್ಯಾಚರಣೆಯ ಮೂಲಕ ಆ ಆರ್ಥಿಕತೆಯನ್ನು ಪೂರ್ಣೋದ್ಯೋಗ ಹಂತದಲ್ಲೇ ಮರು ಸಂಸ್ಥಾಪಿಸಲಾಗುತ್ತದೆ.ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ತಮ್ಮ ಈ ಅಭಿಪ್ರಾಯವನ್ನು ಸೇ ನ ಮಾರುಕಟ್ಟೆ ನಿಯಮದ ಆಧಾರದಲ್ಲಿ ರುಜುವಾತು ಪಡಿಸುತ್ತಾರೆ.ಅವರು ಈ ನಿಯಮದ ತಳ್ಳಿಹಾಕುತ್ತಾರೆ.ಆದ್ದರಿಂದ ಸೇ ನ ಮಾರುಕಟ್ಟೆ ನಿಯಮವು ಸಂಪ್ರದಾಯ ಪಂಥ ಸಿದ್ಧಾಂತದ ತಳಪಾಯವಾಗಿದೆ.ಪೂರೈಕೆಯು ತನ್ನ ಬೇಡಿಕೆಯನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ.ಎಂಬುದು ಸೇ ನ ಮಾರುಕಟ್ಟೆ ನಿಯಮವಾಗಿದೆ.ಸೇ ಯ ಪ್ರಕಾರ, ವಸ್ತುಗಳಿಗೆ ಉತ್ಪಾದನೆಯೇ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ; ಮಾರಟ ಮಾಡುವುದೆಂದರೆ ಅದೇ ವೇಳೆಯಲ್ಲಿ ಕೊಳ್ಳುವುದೂ ಆಗಿರುತ್ತದೆ ಮತ್ತು ಹೆಚ್ಚು ಉತ್ಪಾದಿಸುವುದೆಂದರೆ,ಇತರೆ ವಸ್ತುಗಳಿಗೆ ಹೆಚ್ಚು ಬೇಡಿಕೆಯನ್ನು ಸೃಷ್ಟಿಸುವುದಾಗಿರುತ್ತದೆ.ಪ್ರತಿಯೊಬ್ಬ ಉತ್ಪಾದಕ ಗ್ರಾಹಕನೊಬ್ಬನನ್ನು ಪಡೆಯುತ್ತಾನೆ.ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ವಸ್ತುವಿನ ಪ್ರತಿ ಹೆಚ್ಚುವರಿ ಪೂರೈಕೆ ಅಷ್ಟೇ ಪ್ರಮಾಣದ ಬೇಡಿಕೆಯನ್ನು ಸೃಷ್ಟಿಸುತ್ತದೆ.ಸೇ ನ ಅಭಿಪ್ರಾಯದಲ್ಲಿ ಹೊಸದಾಗಿ ವಸ್ತುವೊಂದನ್ನು ಉತ್ಪಾದಿಸಿದಾಗ ಅದಕ್ಕೆ ತಾನಾಗಿಯೇ ಬೇಡಿಕೆ ಸೃಷ್ಟಿಯಾಗುತ್ತದೆ.ಇಲ್ಲಿ ಬೇಡಿಕೆಯ ಪ್ರಮುಖ ಮೂಲವೆಂದರೆ ಉತ್ಪಾದನಾ ಪ್ರಕ್ರಿಯೆಯಿಂದಲೇ ಸೃಷ್ಟಿಯಗುವ ಉತ್ಪಾದನಾ ಕರ್ತೃಗಳ ಆದಾಯವಾಗಿದೆ.ವಸ್ತುಗಳನ್ನು ಉತ್ಪಾದನಾಂಗಗಳು ಆದಾಯವನ್ನು ಪಡೆಯುತ್ತವೆ.ಈ ಆದಾಯವನ್ನು ಉತ್ಪಾದನಾ ಕರ್ತೃಗಳ ಮಾಲಿಕರು ತಮಗೆ ಅಗತ್ಯವಿರುವ ವಸ್ತುಗಳನ್ನು ಕೊಳ್ಳಲು ಬಳಸಿಕೊಳ್ಳುತ್ತಾರೆ.ಆದ್ದರಿಂದ ಉತ್ಪಾದನೆಯು ತನ್ನ ಜೊತೆಯಲ್ಲಿಯೇ ಅಷ್ಟೇ ಪ್ರಮಾಣದ ಆದಾಯ ಮತ್ತು ಕೊಳ್ಳುವ ಶಕ್ತಿಯನ್ನು ಸೃಷ್ಟಿಸುತ್ತದೆ.ಇದರಿಂದಾಗಿ ಉತ್ಪಾದಿತ ವಸ್ತುಗಳು ಪೂರ್ಣವಾಗಿ ಮಾರಟವಾಗುವುದು ಸಾಧ್ಯವಾಗುತ್ತದೆ.ಆದ್ದರಿಂದ ಅಧಿಕ ಪ್ರಮಾಣದ ಅಥವಾ ಮಿತಿಮೀರಿದ ಉತ್ಪಾದನೆಗೆ ಅವಕಾಶಗಳೇ ಇರುವುದಿಲ್ಲ.ಆದ್ದರಿಂದ ಸೇ ನ ಮಾರುಕಟ್ಟೆ ನಿಯಮದ ಪ್ರಕಾರ ಪೂರೈಕೆಯು ತನ್ನ ಜೊತೆಯಲ್ಲಿಯೇ ಏಕಕಾಲದಲ್ಲಿ ಬೇಡಿಕೆಯನ್ನು ಸೃಷ್ಟಿಸುವುದರ ಮೂಲಕ ಮಿತಿಮೀರಿದ ಉತ್ಪಾದನೆ ಮತ್ತು ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸುತ್ತದೆ.ಸೇ ಮಾರುಕಟ್ಟೆ ನಿಯಮದ ಪ್ರಕಾರ ಬಡ್ಡಿ ದರದಲ್ಲಿನ ನಮ್ಯತೆಯ ಉಳಿತಾಯ ಮತ್ತು ಹೊಡಿಕೆಗಳ ನಡುವೆ ಸಮಾನತೆ ಉಂಟು ಮಾಡುತ್ತದೆ.ಈ ನಿಯಮದ ಪ್ರಕಾರ ಉಳಿತಾಯ ಎಂಬುದು ''ಸಾಮಾಜಿಕ'' ಪಾವಿತ್ರ್ಯವಾಗಿದೆ.ಏಕೆಂದರೆ ಉಳಿತಾಯ ಮಾಡಿದ ಹಣವೆಲ್ಲವನ್ನೂ ಮುಂದಿನ ಉತ್ಪಾದನೆಯಲ್ಲಿ ಸ್ವಯಂಚಾಲಿತವಾಗಿ ಹೊಡಿಕೆ ಮಾಡಲಾಗುತ್ತದೆ.ಆದ್ದರಿಂದ ಮಿತಿಮೀರಿದ ಉತ್ಪಾದನೆ ಎಂಬುದು ಸಾಧ್ಯವೇ ಇರುವುದಿಲ್ಲ.ಈ ಹಿನ್ನೆಲೆಯಲ್ಲಿ ಸೇನ ನಿಯಮದ ಪ್ರಕಾರ ಅಧಿಕ ಉತ್ಪಾದನೆ ಮತ್ತು ನಿರುದ್ಯೋಗವು ತಾರ್ಕಿಕವಾಗಿ ಅಸಾಧ್ಯದ ಮಾತು.ಅಂದರೆ ಸೇ ಯ ಪ್ರಕಾರ ಪೂರೈಕೆ ತನ್ನ ಬೇಡಿಕೆಯನ್ನು ತಾನೇ ಸೃಷ್ಟಿಸಿಕೊಳ್ಳುವುದರಿಂದ ಹಾಗು ವಸ್ತುಗಳಿಗೆ ಉತ್ಪಾದನೆಯೇ ಮಾರುಕಟ್ಟೆಯನ್ನು ಸೃಷ್ಟಿಸುವುದರಿಂದ ಸಾರ್ವತ್ರಿಕ ಮಿತಿಮೀರಿದ ಉತ್ಪಾದನೆ ಮತ್ತು ಸಾರ್ವತ್ರಿಕ ನಿರುದ್ಯೋಗ ಸಂಭವಿಸುವುದು ಸಾಧ್ಯವೇ ಇಲ್ಲ.ಸೇ ಯ ಮಾರುಕಟ್ಟೆಯ ನಿಯಮದಲ್ಲಿ ಸುಮಾರು ನಾಲ್ಕು ಸೂಚ್ಯಾರ್ಥಗಳಿವೆ. ==ನಿಯಮಗಳು== ಸೇ ನ [[ಮಾರುಕಟ್ಟೆ]] ನಿಯಮದ ಪ್ರಕಾರ ಆರ್ಥಿಕ ವ್ಯವಸ್ಥೆಯಲ್ಲಿ '''ಸ್ವಯಂಚಾಲಿತ''' ಹೊಂದಾಣಿಕೆಯಿರುತ್ತದೆ.ಪೂರೈಕೆಯು ಬೇಡಿಕೆಯನ್ನು ಸೃಷ್ಟಿಸುವುದರಿಂದಾ ಆರ್ಥಿಕತೆಯಲ್ಲಿ ಪೂರೈಕೆ ಮತ್ತು ಬೇಡಿಕೆಗಳು ಸದಾಕಾಲ ಸಮನಾಗಿರುತ್ತವೆ.ಆರ್ಥಿಕತೆಯ ಸ್ವಯಂ ಚಾಲಿತ ಹೊಂದಾಣಿಕೆಯು ಸಮತೋಲನ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.ಇಲ್ಲಿ ಯಾವುದೇ ಹೊರಗಿನ ಶಕ್ತಿಯ ಹತೋಟಿ ಅಥವಾ ನಿಯಂತ್ರಣವಿರುದಿಲ್ಲ.ಸಾರ್ವತ್ರಿಕ ಮಿತಿಮೀರಿದ ಉತ್ಪಾದನೆ ಅಸಾಧ್ಯವಾದ ಮಾತು.ಏಕೆಂದರೆ ಪೂರೈಕೆ ತನ್ನ ಬೇಡಿಕೆಯನ್ನು ತಾನೇ ಸೃಜಸಿಕೊಳ್ಳುತ್ತದೆ ಹಾಗು ಅವೆರಡೂ ಪರಸ್ಪರ ಸಮನಾಗಿರುತ್ತವೆ.ಒಂದು ವೇಳೆ ಪೂರೈಕೆ ಬೇಡಿಕೆಗಿಂತ ಅಧಿಕವಿದ್ದಲ್ಲಿ ಬೆಲೆಗಳು ಕಡಿಮೆಗೊಳ್ಳುತ್ತವೆ.ಮುಕ್ತ ಪೈಪೋಟಿ ಆರ್ಥಿಕತೆಯಲ್ಲಿ ಸೇ ನಿಯಮದ ಪ್ರಕಾರ ಸಾರ್ವತ್ರಿಕ ''ನಿರುದ್ಯೋಗ'' ಸಂಭವಿಸಿದರೂ ಸಹ ಕೂಲಿಯ ದರದಲ್ಲಿನ ಕಡಿತವು ಪೂರ್ಣ ಉದ್ಯೋಗ ಸನ್ನಿವೇಶವನ್ನು ಸಂಸ್ಥಾಪಿಸುತ್ತದೆ.ಆದ್ದರಿಂದ ಸೇ ನ ಪ್ರಕಾರ ನಿರುದ್ಯೋಗವು ತಾತ್ಕಲಿಕ ಸನ್ನಿವೇಶವಾಗಿದ್ದು ಕೂಲಿ ದರದಲ್ಲಿನ ಹೊಂದಾಣಿಕೆಯ ಮೂಲಕ ಅದು ನಿವಾರಣೆಯಾಗುತ್ತದೆ.ನಾಲ್ಕನೆಯ ಸೂಚ್ಯಾರ್ಥ ತಾಟಸ್ಥ್ಯ ನೀತಿಯ ಪ್ರತಿಪಾದನೆ ಈ ನಿಯಮವನ್ನು ಮುಕ್ತ ಆರ್ಥಿಕ ನೀತಿಯ ಪರವಾಗಿ ಪ್ರತಿಪಾದಿಸಲಾಗಿದೆ.ಈ ಟೀಕೆಗಳ ಹೊರತಾಗಿಯೂ ಆರ್ಥಿಕ ಚಿಂತನೆಯ ಇತಿಹಾಸದಲ್ಲಿ ಜೆ.ಬಿ.ಸೇ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾನೆ.ಅವನು ಸಂಪ್ರದಾಯ ಪಂಥದ ಚಿಂತನೆಗೆ ಜೀವಕಳೆ ತುಂಬಿದ್ದಾನೆ. ==ಉಲ್ಲೇಖಗಳು== All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?oldid=1043877.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|