Revision 1054809 of "ಗಿರಿಗದ್ದೆ" on knwiki

{{Incomplete}}

ಗಿರಿಗದ್ದೆಯು ಕುಕ್ಕೆ ಸುಬ್ರಮಣ್ಯದಿಂದ  ಕುಮಾರ ಪರ್ವತ ರಸ್ತೆಯ ಮಧ್ಯೆ ಸಿಗುತ್ತದೆ. ಇದು ದಕ್ಶಿನ [[ಕನ್ನಡ]] ಹಾಗೂ ಕೊಡಗಿನ ಗಡಿಭಾಗದಲ್ಲಿ ಇದ್ದು ಚಾತಣಕ್ಕೆ ಹೋಗುವ ಯಾತ್ರಿಗಳಿಗೆ ಒಂದು ತಂಗುದಾಣವಾಗಿದೆ. 

ಕುಕ್ಕೆ ಸುಬ್ರಮಣ್ಯದಿಂದ ಕಾಡಿನ ದಾರಿಯಲ್ಲಿ ಸುಮಾರು ೪ ಕಿ.ಮೀ ಹಾಗು ಗುಡ್ಡದ ದಾರಿಯಾಗಿ ೧ ಕಿ.ಮೀ. ಪ್ರಯಾಣಿಸಿದರೆ ಗಿರಿಗದ್ದೆ ಭಟ್ಟರಮನೆ,ಅರಣ್ಯ ಇಲಾಖೆಯ ಠಾಣೆ ಸಿಗುತ್ತದೆ. ಇಲ್ಲಿಂದ ಕುಮಾರ ಪರ್ವತ ಸುಮಾರು ೬ ಕಿ.ಮೀ ದೂರ ಇದೆ. ಪರ್ವತಕ್ಕೆ ಪ್ರಯಾಣಿಸುವ ಯಾತ್ರಿಗಳ ಊಟ, ತಿಂಡಿ, ರಾತ್ರಿಯ ಉಳಿದುಕೊಳ್ಳುವ ವ್ಯವಸ್ಥೆ ಮುಂತಾದವು ಇಲ್ಲಿ ಲಬ್ಯವಿದೆ. 
[[ಚಿತ್ರ:ಗಿರಿಗದ್ದೆ ವೀವ್ ಪಾಯಿಂಟ್|thumbnail]]

ಇಲ್ಲಿನ ಭಟ್ಟರು ಸುಮಾರು ೪೦ ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ. ಚಾರಣಕ್ಕೆ ಬರುವ ಯಾತ್ರಿಗಳಿಗೆ ಇವರ ಆತಿಥ್ಯ ಯವುದೆ ಪೈವ್ ಸ್ಟಾರ್ ಹೋಟೇಲಿಗಿಂತ ಕಮ್ಮಿ ಇಲ್ಲ . ನಡೆದು ನಡೆದು ಸುಸ್ತು , ಹಸಿವು ಆಗಿ ಬಳಲಿ ಬಂದ ಯಾತ್ರಿಗಳಿಗೆ ಗಮ್ಮತ್ತು ಊಟ , ತಂಪಾದ ಮಜ್ಜಿಗೆ ಎಲ್ಲ ಸುಸ್ತನ್ನು ಮರೆಸುತ್ತದೆ.
ಭಟ್ಟರು ಕೃಷಿಕರು. ತಮ್ಮ ಅಲ್ಪ ತೋಟದಲ್ಲಿ ಅಡಿಕೆ, ತೆಂಗು, ಬಾಳೆ, ವೆನಿಲ್ಲಾ, ತರಕಾರಿ ಮುಂತಾದ ಬೆಳೆಗಳನ್ನು ಬೆಳೆದಿದ್ದರೆ. 
ಚಾರಣಕ್ಕೆ ಒಳ್ಳೆ ಸಮಯ ಎಂದರೆ ಸೆಪ್ಟೆಂಬರ್ ನಿಂದ ಜನವರಿ ತನಕ. ದಾರಿಯಲ್ಲಿ ಅರಣ್ಯ ಇಲಾಖೆಯ ಸುಂಕ ವಸೂಲಿ ಕೇಂದ್ರ ಇದ್ದು ತಲೆಗೆ ೨೦೦ ರೂ ಕೊಡಬೇಕು. ಊಟ ಹಾಗು ಉಳಿದು ಕೊಳ್ಳುವ ವ್ಯವಸ್ಥೆಗೆ ಭಟ್ಟರಿಗೆ ಮುಂಚಿತವಾಗಿ ತಿಳಿಸಿದರೆ ಒಳ್ಳೆಯದು. ಗೈಡ್ ನ ಅವಶ್ಯಕತೆ ಇಲ್ಲ ಅದರೂ ಬೇಕು ಎಂದಾದರೆ ಭಟ್ಟರಲ್ಲಿ ವಿಚಾರಿಸಿದರೆ ವ್ಯವಸ್ಥೆ ಮಾಡುತ್ತಾರೆ. ಭಟ್ಟರ ಫೇಸ್ ಬುಕ್ ಪುಟದಲ್ಲಿ ಹವಾಮಾನ ಮುಂತಾದ ವಿವರ ಲಬ್ಯವಿರುತ್ತದೆ.  


<ref>https://picasaweb.google.com/lh/photo/Z_LiRev1bGGo2pQ102NXotMTjNZETYmyPJy0liipFm0{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
<ref>http://mathukathe.wordpress.com/2008/02/27/one-night-the-kumaraparvatha/</ref>