Revision 1064789 of "ಮನೆ ಮದ್ದು" on knwiki{{ಅಳಿಸುವಿಕೆ|ವಿಶ್ವಕೋಶದ ಶೈಲಿಯಲ್ಲಿಲ್ಲ. ಉಲ್ಲೇಖಗಳೂ ಇಲ್ಲ}}
ಅನೇಕ ಕಾಯಿಲೆ -ರೋಗ -ದೈಹಿಕ ತೊಂದರೆಗಳಿಗೆ ಮನೆಯಲ್ಲೇ , ಆಹಾರ, ನೀರು ಮನೆಯಲ್ಲಿರುವ ಅಡಿಗೆಗೆ ಉಪಯೋಗಿಸುವ ಸೊಪ್ಪು, ತರಕಾರಿ, ವಸ್ತು, ಸಸ್ಯ, ನಾರು ಬೇರುಗಳಿಂದ ಔಷಧಿ ಮಾಡಿಕೊಂಡು ವಾಸಿಮಾಡಿಕೊಳ್ಳಬಹುದು. ಈ ಪದ್ಧತಿ ಅನೂಚಾನವಾಗಿ ವಾಡಿಕೆಯಿಂದ ತಲೆಮಾರಿನಿಂದ ತಲೆಮಾರಿಗೆ ,ಮನೆ ಮನೆಗಳಲ್ಲಿ ನಡೆದುಕೊಂಡು ಬಂದಿದೆ. ಬರವಣಿಗೆಗಳ ದಾಖಲೆ ಸಿಗುವುದು ಕಷ್ಟ. ಈಚೆಗೆ ಇದನ್ನು ಈ ಮನೆ ಮದ್ದಿನ ಬಗೆಯನ್ನು ದಾಖಲು ಮಾಡಲಾಗುತ್ತಿದೆ.
*ಹೆಚ್ಚಿನ ಕಾಯಿಲೆ, ದೈಹಿಕ ತೊಂದರೆ ಇದ್ದಾಗ ಇದನ್ನೇ ನೆಚ್ಚಿಕೊಳ್ಳದೇ ವೈದ್ಯರನ್ನು ಕಾಣುವುದು ಒಳಿತು.
== ತರಕಾರಿ ==
.ಜನ ಸಾಮಾನ್ಯರಲ್ಲಿ ರೂಢಿಯಲ್ಲಿರುವ ಪದ್ದತಿ-ಚಿಕಿತ್ಸೆ:
*[[ಚಿತ್ರ:Drumstick leaves 2011-12.jpg|thumb|ನುಗ್ಗೆ ಮರ]][[ನುಗ್ಗೆಕಾಯಿ]]<sup>೧</sup> ಪ್ರಮುಖ ತರಕಾರಿಯಷ್ಟೆ ಅಲ್ಲ, ಔಷಧೀಯ ಸಸ್ಯ ಕೂಡ. ಇದರ ಬೇರು, ತೊಗಟೆ, ಎಲೆ, ಹೂವು, ಹಣ್ಣು, ಕಾಯಿ ಹಾಗು ಬೀಜಗಳು ನಾನಾ ರೋಗಗಳಿಗೆ ರಾಮಬಾಣ.
* ತಲೆನೋವು, ನುಗ್ಗೆ ಅಂಟಿನಿಂದ ಪ್ರತಿದಿನ ಬಾಯಿ ಮುಕ್ಕಳಿಸಿದರೆ, ಹಲ್ಲು ಬೀಳುವುದು ಹಾಗೂ ಹಲ್ಲಿಗೆ ಸಂಬಂಧಿಸಿದ ಎಲ್ಲಾ ತೊಂದರೆಗಳು ಗುಣವಾಗುತ್ತದೆ.
* ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪನ್ನು ನಿಯಮಿತವಾಗಿ ಸೇವಿಸಿದರೆ ಮೂಲವ್ಯಾಧಿಯಿಂದ ಮುಕ್ತರಾಗಬಹುದು.
* ಶರೀರದ ಯಾವುದೇ ಗಂಟುಗಳಲ್ಲಿ ಊತ ಇದ್ದರೆ, ನುಗ್ಗೆ ಮರದ ತೊಗಟೆಯನ್ನು ಬಿಸಿ ನೀರಿನಲ್ಲಿ ಅರೆದು ಊತದ ಮೇಲೆ ಲೇಪನ ಮಾಡಿದರೆ ಊತ ಬೇಗ ಕಡಿಮೆಯಾಗುತ್ತದೆ.
* ನುಗ್ಗೆ ಎಲೆಗಳನ್ನು ಬಿಸಿನೀರಿನಲ್ಲಿ ಅರೆದು ನೋವಿರುವ ಜಾಗಕ್ಕೆ ಲೇಪನ ಮಾಡಿದರೆ ನೋವು ಕಡಿಮೆಯಾಗುತ್ತದೆ.
== ಸೊಪ್ಪು ==
== ಔಷಧೀಯ ಸಸ್ಯಗಳು-ಫಲಗಳು ==
(Solanum nigrum (European black nightshade or locally just "black nightshade", duscle, garden nightshade, hound's berry, petty morel, wonder berry, small-fruited black nightshade or popolo)
[[File:Solanum_nigrum_leafs_flowers_fruits.jpg|thumb|right|Leaves, flowers and fruit of ''Solanum nigrum'' ಎಳೆಯ ಕಾಯಿ ವಿಷ ಕಾರಿ ಕಪ್ಪು ಹಣ್ಣು ಒಳ್ಳೆಯದು.]]
{{Quote_box|width=40%|align=right|quote=ಕಾಕ ಮಾಚಿ -ಇಂಗ್ಲಿಷ್ -ವಿಕಿ||*elated to Kakamachi (BLACK NIGHTSHADE) "|source= Natural Ways to Boost Testosterone Vitamins.-Solanum nigrum (European black nightshade or locally just "black nightshade", duscle, garden nightshade, hound's berry, petty morel, wonder berry, small-fruited black nightshade or popolo) is a species in the Solanum genus,;The toxicity of Solanum nigrum varies widely depending on the variety, and poisonous plant experts advise to avoid eating the berries unless they are a known edible strain|
}}
[[http://www.webmd.com/vitamins-supplements/ingredientmono-821-Kakamachi%20(BLACK%20NIGHTSHADE).aspx?activeIngredientId=821&activeIngredientName=Kakamachi%20(BLACK%20NIGHTSHADE)]]
;;ಕಾಕಮಾಚಿ - ಮಲೆನಾಡು ಗ್ರಾಮಗಳಲ್ಲಿ ಕಾಕಮಟ್ಟಲು ಎನ್ನುವರು
::'''ಕಾಕಮಾಚಿ'''ಯಲ್ಲಿ ಎಂಟು ರಸಗಳಿವೆ. ಮಕ್ಕಳ ಆರೋಗ್ಯ ಕಾಪಾಡಲು ಇದನ್ನು ಬಳಸುವರು. ಇದು ಕಫ ನಾಶಕ. ಹೃದ್ರೋಗ ಸಮಸ್ಯೆಗೂ, ಕೆಮ್ಮು ಉಪಶಮನಕ್ಕೂ ಉತ್ತಮ ಔಷಧಿ ಎಂದು ಹೇಳಲಾಗಿದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಇದರ ಕುಡಿಯ ತಂಬಳಿ ಉಪಕಾರಿ ಎಂದು ಹೇಳಲಾಗಿದೆ. ಚಿಕ್ಕ ಮಕ್ಕಳಿಗೆ ಇದರ ಸೊಪ್ಪನ್ನು ಅರೆದು ಬಿಸಿ ಕೊಬ್ಬರಿ ಎಣ್ನೆಯಲ್ಲಿ ಹಾಕಿ ಬೆಚ್ಚನೆಯ ಮಿಶ್ರಣವನ್ನು ಹಚ್ಚಿದರೆ ಕಜ್ಜಿ, ತುರಿ ಬಾಧೆ ಬರುವುದಿಲ್ಲ. ಬಂದರೆ ವಾಸಿಯಾಗುವುದು, ಸಾಮಾನ್ಯವಾಗಿ ೧೫ ದಿನಕ್ಕೊಮ್ಮೆ ಇದರ ಸೊಪ್ಪಿನ ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ಚಿಕ್ಕ ಶಿಶುಗಳ ಮೈಗೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡಿಸುವುದು ಮಲೆ ನಾಡಿನಲ್ಲಿ ರೂಢಿಯಲ್ಲಿದೆ.
*ಇದು ಮಲಬದ್ದತೆ ನಿವಾರಿಸಲು ಬಹಳ ಉಪಕಾರಿ. ಇದರ ತಂಬಳಿ ಮಾಡಿ ಉಪಯೋಗಿಸಬಹುದು. ಇದರ ಔಷಧೀಯ ಗುಣಕ್ಕಾಗಿ, ಈ ಗಿಡದ ಸೊಪ್ಪನ್ನು ಕೆಲವರು ಸಾರು ಹುಳಿ ಪಲ್ಯಗಳಲ್ಲಿಯೂ ಬಳಸುವರು.
*ಮಲೆನಾಡಿನಲ್ಲಿ ಇದರ ತಂಬಳಿ ಮಾಡುವರು. ಮಲಬದ್ದತೆ ಇದ್ದಾಗ ಇದರ ಕುಡಿಗಳ ಪಲ್ಯ ಮಾಡಿ ಸೇವಿಸುವರು. ಕಾಕ ಮಾಚಿ ಗಿಡದ ಎಲೆಯನ್ನು ಅರೆದು ಕುದಿಸಿ ಮಾಡಿದ ಕಷಾಯ ಮೂಲವ್ಯಾಧಿ, ಚರ್ಮ ರೋಗಕ್ಕೆ, ಪಿತ್ತಕೋಶದ ಸಮಸ್ಯೆಗಳಿಗೆ ಔಷಧವಾಗಿದೆ ಎಂದು ಹೇಳುತ್ತಾರೆ.
*ಇದರಲ್ಲಿ ಹಳದಿ ಬಣ್ಣದ ಸ್ವಲ್ಪ ದೊಡ್ಡ ತಳಿಯೂ ಇದೆ.
[[https://en.wikipedia.org/wiki/Solanum_nigrum]]
== ಪಪ್ಪಾಯಿ ==
*[[ಚಿತ್ರ:Papaya ready for harvest.jpg|thumb|ಪಪ್ಪಾಯಿ]]ಯುರೋಪ್ ಪಪ್ಪಾಯಿ ಹಣ್ಣಿನ ತವರೂರು. ಇದರ ವೈಜ್ಞಾನಿಕ ಹೆಸರು ‘ಕ್ಯಾರಿಕಾ’. ಪಪ್ಪಾಯಿಯಲ್ಲಿ ವಿವಿಧ ತಳಿಗಳಿವೆ. ಮೆಕ್ಸಿಕೊದಲ್ಲಿ ಶೇಕಡ ನಲವತ್ತರಷ್ಟು ಬಿಳಿ ಪಪ್ಪಾಯಿಯನ್ನು ಬೆಳೆಯುತ್ತಾರೆ. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಕಾಣಸಿಗುವ, ಎಲ್ಲ ಋತುಗಳಲ್ಲೂ ದೊರೆಯುವ ಪಪ್ಪಾಯಿ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ.
*ಔಷಧೀಯ ಗುಣಗಳು: ವಿಟಮಿನ್ ಎ, ಸಿ, ಇ, ಐರನ್ ಹಾಗೂ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ಇದರಲ್ಲಿರುವ ‘ಪಪ್ಪಾಯಿಯನ್’ ಎಂಬ ಜೀವಸತ್ವವು ಜೀರ್ಣಕಾರಕವಾಗಿ ಕೆಲಸ ಮಾಡುತ್ತದೆ. ವಯಸ್ಸಾದಂತೆ ಕುಗ್ಗುವ ಜೀರ್ಣಶಕ್ತಿಯನ್ನು ವೃದ್ಧಿಸಲು ಪಪ್ಪಾಯಿ ಸಹಕರಿಸುತ್ತದೆ. ಮೂಳೆ ಸವೆತಕ್ಕೆ, ಹೃದಯ ಕಾಯಿಲೆ ಉಳ್ಳವರಿಗೂ ಪಪ್ಪಾಯಿ ಸೇವನೆ ಶ್ರೇಷ್ಠ. ಮಧುಮೇಹಿಗಳೂ ಈ ಹಣ್ಣನ್ನು ಧಾರಾಳವಾಗಿ ಸೇವಿಸಬಹುದು.
*ಪಪ್ಪಾಯಿ ಸೇವನೆಯಿಂದ ಕರುಳಿನಲ್ಲಿ ಸೇರಿಕೊಳ್ಳುವ ಜಂತುಗಳು ನಾಶವಾಗುವುವು. ಇದರ ಎಲೆಗಳಿಂದ ಹಲ್ಲುಜ್ಜಿದರೆ ಹಲ್ಲು ಹಾಗೂ ವಸಡು ನೋವು ನಿವಾರಣೆಯಾಗುವವು. ಪಪ್ಪಾಯಿ ಸೇವನೆಯಿಂದ ಬಾಣಂತಿಯರಿಗೆ ಎದೆಹಾಲು ಹೆಚ್ಚುತ್ತದೆ. ಮಕ್ಕಳಿಗೆ, ಹಾಲುಣಿಸುವ ತಾಯಂದಿರಿಗೆ ಪಪ್ಪಾಯಿಯು ಶಕ್ತಿದಾಯಕ ಆಹಾರ. ಮಲಬದ್ಧತೆಯೂ ನಿವಾರಣೆಯಾಗುವುದು.
*ಹಾಲು, ಜೇನುತುಪ್ಪ ಹಾಗೂ ಪರಂಗಿ ಹಣ್ಣನ್ನು ಮಿಶ್ರ ಮಾಡಿ ಸೇವಿಸುವುದರಿಂದ ನರ ದೌರ್ಬಲ್ಯ ದೂರವಾಗುವುದು. ಪಪ್ಪಾಯಿ ಹಣ್ಣಿನ ಹೋಳಿನಿಂದ ಚರ್ಮವನ್ನುಜ್ಜಿದರೆ ಚರ್ಮದ ಮೇಲಿನ ಕಲೆ ಮಾಯವಾಗುತ್ತದೆ. ಮೂಲವ್ಯಾಧಿ, ಯಕೃತ್ತಿನ ದೋಷಗಳಿಗೂ ಪಪ್ಪಾಯಿ ಅತ್ಯುತ್ತಮ ಔಷಧ. ಎಲೆಯಿಂದ ಒಸರುವ ದ್ರವವನ್ನು ಗಾಯಕ್ಕೆ ಹಚ್ಚುವುದರಿಂದ ಗಾಯವು ಬೇಗನೆ ವಾಸಿಯಾಗುತ್ತವೆ.
*ನಿತ್ಯವೂ ಊಟದ ನಂತರ ಈ ಹಣ್ಣನ್ನು ನಿಯಮಿತವಾಗಿ ಸೇವಿಸಬೇಕು. ಕಣ್ಣಿನ ಆರೋಗ್ಯಕ್ಕೂ ಸಹಕಾರಿ. ಮನೆ ಮುಂದೆ ತುಸು ಖಾಲಿ ಜಾಗ ಉಳ್ಳವರು ಒಂದಾದರೂ ಪಪ್ಪಾಯಿ ಗಿಡವನ್ನು ಬೆಳೆದಲ್ಲಿ ಇದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಬೀಜದಿಂದಲೇ ವೃದ್ಧಿಯಾಗುವ ಗಿಡವಿದು. ಪೋಷಣೆ ಸುಲಭ. ಹೆಚ್ಚಿನ ಆರೈಕೆ ಬೇಡ.(೧. ಆರೋಗ್ಯ ದರ್ಪಣ -ಪಂಡಿತ ಶಿವಕುಮಾರ ಸ್ವಾಮಿಗಳು; ೨. ಪ್ರಜಾವಾಣಿ ೧೨-೭-೨೦೧೪- ಗೀತಾ ಬರ್ಲ)
== ಮನೆ ಲೇಹ್ಯ ==
*ಬಾಣಂತಿ ಲೇಹ್ಯ
;ಆರೊಗ್ಯವರ್ಧಕ ಸಾಮಾನ್ಯ ಟಾನಿಕ್ (ಮನೆಯಲ್ಲಿ ತಯಾರಿಸುವುದು )
{| class="wikitable"
|-
!ಕ್ರ.ಸಂ!! ವಿವರ !! ಪ್ರಮಾಣ (ಗ್ರಾಂ) !!ಷರಾ
|-
|ಒಂದು ||ದ್ರಾಕ್ಷಿ ||೨೦೦ ಗ್ರಾಂ. ||-
|-
|೨ ||ಗೋಡಂಬಿ ||೧೦೦ ||--
|-
|೩|| ಉತ್ತುತ್ತೆ|| ೨೦೦ ||--
|-
|೪|| ಬಾದಾಮಿ ||೧೦೦ (೧೫೦) ||--
|-
|೫|| ಅಂಟು (ಔಷಧಿ)|| ೫೦ ||--
|-
|೬|| ಅಶ್ವಗಂಧಿ|| ೨೫ (೫೦|| ಮಕ್ಕಳಿಗೆ ೨೫ ಗ್ರಾಂ
|-
|೭|| ಲವಂಗ|| ೫|| --
|-
|೮|| ಗಸಗಸೆ|| ೧೫೦||--
|-
|೯ ||ಒಣಶುಂಠಿ|| ೨೫ ||--
|-
|೧೦ ||ಕಲ್ಲು ಸಕ್ಕರೆ ||೧೫೦ ||--
|-
|೧೧ ||ಸಕ್ಕರೆ ||೧೫೦ (೨೫೦) ||--
|-
|೧೨ ||ತುಪ್ಪ ||೨೫೦ ||--
|-
|೧೩ ||ಜಾಯಿಕಾಯಿ ||೧-(೫ಗ್ರಾಂ) ||--
|-
|೧೪|| ಪತ್ರೆ ||೧೦|| --
|-
|೧೫ ||ಮೆಣಸಿನ ಕಾಳು ||೨೦ ||(೪೦ಕಾಳು)
|}
*ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು
* ಸಕ್ಕರೆ ಪಾಕದಲ್ಲಿ ಇವೆಲ್ಲವನ್ನೂ ಪುಡಿಮಾಡಿ ಹಾಕಿ ತೊಳಸಿ/ಕದಡಿ ಲೇಹ ತಯಾರಿಸಿ- ಉಂಡೆ ಮಾಡಿಕೊಂಡು ದಿನ ೧ ರಂತೆ ಖಾಲಿ ಹೊಟ್ಟೆ ಯಲ್ಲಿ ತಿಂದು ಹಾಲು ಕುಡಿದರೆ ಆನೇಕ ತೊಂದರೆಗಳು ನಿವಾರಣೆ ಆಗುವುದು .ಮಕ್ಕಳಿಗೂ ಒಳ್ಳೆಯದು. ರುಚಿಯಾಗಿರತ್ತೆ, ಮಕ್ಕಳಿಗೆ ಸಿಗದಂತೆ ಇಡಬೇಕು. ಒಟ್ಟು ನೀರಿನ ಅಂಶ ಒಟ್ಟು : ೧೪೭೫ ಗ್ರಾಂ ೧೨೫ ಗ್ರಾಂ ೧೬೦೦ಗ್ರಾಂ ನೆಲ್ಲಿಕಾಯಿಗಾತ್ರದ ೭೦- ೮೦ ಉಂಡೆ ಸುಮಾರು ೨೦ಗ್ರಾಂನವು.
*ಹೆಣ್ಣು ಮಕ್ಕಳಿಗೆ ಅತಿ ಮಟ್ಟು ತೊಂದರೆ ಇರೆತ್ತೆ ; ಮುಟ್ಟಾದಾಗ ಆ ದಿನಗಳಲ್ಲಿ ನೋವು / ಅತಿ ಶ್ರಾವ ಇದ್ದರೆ ಈ ಲೇಹದಿಂದ ಗುಣ ಕಂಡಿದೆ.
*ಬಾಣಂತಿಯರಿಗೆ ಇದರ ಪ್ರಮಾಣಗಳನ್ನು ಸ್ವಲ್ಪ ಬದಲಾಯಿಸಿ ಮಾಡುತ್ತಾರೆ
*(ಇದು ಮಲೆನಾಡಿನಲ್ಲಿ ರೂಡಿಯಲ್ಲಿರುವ ಶಕ್ತಿ ವರ್ಧಕ ಔಷಧ)
== ದೂರ್ವೆ ಹುಲ್ಲು / ಗರಿಕೆ==
[[ಚಿತ್ರ:Bermuda grass, Cynodon dactylon (16434099448).jpg|thumb|ದೂರ್ವೆ ಅಥವಾ ಗರಿಕೆ]]
ದೂರ್ವೆ ಸಣ್ಣಕಡ್ಡಿ ಎಲೆಯ ಹುಲ್ಲು.(ಗರಿಕೆ) ಗಣಪತಿ ದೇವರಿಗೆ ಪ್ರೀತಿಯಾದ ಹುಲ್ಲು' ಇದರ ಮೂರು ಎಸಳುಳ್ಳ ಕುಡಿಯನ್ನು ಗಣಪತಿ ದೇವರಿಗೆ ಪೂಜೆಯಲ್ಲಿ ಅರ್ಪಿಸುತ್ತಾರೆ. ಇದರಲ್ಲಿ ವಿಶೇಷವಾದ ಔಷಧಿಯ ಗುಣವಿದೆ. ಇದರ ಬೇರಿನ (ತೊಳೆದು ಶುದ್ಧಮಾಡಿ) ಕಷಾಯ ಮಾಡಿ ದಿನನಿತ್ಯ ಮೂರರಿಂದ ಆರು ತಂಗಳು ಕುಡಿದರೆ ಮೂತ್ರ ಪಿಂಡದ ಸೋಂಕು ಖಾಹಿಲೆ (ನಫ್ರೈಟಿಸ್`) ಗುಣವಾಗುವುದು. ೩-೪ ಜನರ ಮೇಲೆ ಪ್ರಯೋಗ ಮಾಡಿನೋಡಿ ಸಫಲತೆ ಕಂಡಿದೆ. ಡಾ. ಶಿವಕುಮಾರ ಸ್ವಾಮಿಯವರೂ ಇದನ್ನು ತಮ್ಮ ಆರೋಗ್ಯ ದರ್ಪಣ ಗ್ರಂಥದಲ್ಲಿ ಹೇಳದ್ದಾರೆ. ಆರಂಭದಲ್ಲೇ ಚಿಕಿತ್ಸೆ ಮಾಡಿದರೆ ಮೂತ್ರ ಪಿಂಡವನ್ನು ತೆಗೆದು-ಹಾಕುವ ಶಸ್ತ್ರ ಚಿಕಿತ್ಸೆ ಮಾಡಿಸುವ ಕಷ್ಟ ತಪ್ಪುತ್ತದೆ.
==ಹೊಟ್ಟೆಯುಬ್ಬರ - ಉರಿತೇಗು :ಗ್ಯಾಸ್ಟೈಟಿಸ್==
*ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ೧೫ ನಿಮಿಷ ಕುದಿಸಿ ಇಟ್ಟುಕೊಳ್ಲಬೇಕು. ಊಟ ಅಥವಾ ತಿಂಡಿಯ ಮೂರುಗಂಟೆಯ ನಂತರ ಅರ್ಧ ಲೋಟದಷ್ಟು ಸ್ವಲ್ಪ ಬಿಸಿ ಮಾಡಿಕೊಂಡು ಒಂದು ಚಮಚ ಬೆಲ್ಲ ಒಂದು ಚಮಚ ನಿಂಬೆಹುಳಿ ಸೇರಿಸಿಕೊಂಡು ನಿಧಾನವಾಗಿ ಕುಡಿಯಿರಿ (ಜೊಲ್ಲು ಸೇರಬೇಕು). <ref>ಪ್ರಜಾವಾಣಿ ೩೧-೧೦-೨೦೧೬ ಕೊನೆ ಪುಟ.</ref>
==ಮನೆಮದ್ದುಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸು==
*ಯಾವುದೇ ಕಾಯಿಲೆ ಇರಲಿ ಹೊಟ್ಟೆ ತುಂಬ ಊಟ ಮಾಡಿದ ನಂತರ ಔಷಧ ಸೇವಿಸಬೇಕು ಎನ್ನುವುದು ವಾಡಿಕೆ. ಆದರೆ ಕೆಲವು ಮನೆಮದ್ದುಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವುದೇ ಒಳಿತು.
* ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಸೇರಿಸಿ ಕುಡಿದರೆ ಬೊಜ್ಜು ಕಡಿಮೆಯಾಗುತ್ತದೆ.
* ಜೇಷ್ಠಮದ್ದು, ಹಿಪ್ಪಲಿ, ಜಾಯಿಕಾಯಿ, ಗದಗನಕಾಯಿ, ಶುಂಠಿ, ಮೆಣಸಿನ ಕಾಳನ್ನು ತೇಯ್ದು ಮಗುವಿಗೆ ಒಂದು ಚಮಚದಷ್ಟು ಮುಂಜಾನೆ ನೀಡಿದರೆ ಜಂತು ಹುಳುವಿನ ಸಮಸ್ಯೆ ಉಂಟಾಗದು.
* ಹಸಿದ ಹೊಟ್ಟೆಯಲ್ಲಿ ಮೂರು ಲೋಟ ನೀರು ಕುಡಿದು 45 ನಿಮಿಷಗಳ ನಂತರ ಆಹಾರ ಸೇವಿಸಬೇಕು. ಉತ್ತಮ ಚಯಾಪಚಯ ಕ್ರಿಯೆಗೆ, ತ್ವಚೆಯ ಕಾಂತಿ ಹೆಚ್ಚಲು, ಬೊಜ್ಜಿನ ಸಮಸ್ಯೆ ನಿವಾರಿಸಲು, ಹೊಳೆಯುವ ಹಾಗೂ ಆರೋಗ್ಯಕರ ಕೂದಲ ಬೆಳವಣಿಗೆಗೆ ಇದು ಸಹಕಾರಿ.
* ಹಸಿದ ಹೊಟ್ಟೆಯಲ್ಲಿ ನೀರು ಕುಡಿಯುವುದು ಮೂತ್ರಪಿಂಡದಲ್ಲಿ ಕಲ್ಲು ಹಾಗೂ ಮೂತ್ರಕೋಶದ ಸೋಂಕಿಗೆ ಉತ್ತಮ ಮದ್ದು.
* ಹಸಿದ ಹೊಟ್ಟೆಯಲ್ಲಿ ನೀರು ಕುಡಿಯುವುದು ಹೊಟ್ಟೆ ಮತ್ತು ಎದೆಯುರಿಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿನ ವಿಷದ ಅಂಶವನ್ನು ಹೊರಹಾಕುತ್ತದೆ.
* ಹಲ್ಲುಜ್ಜಿದ ನಂತರ ಹಸಿದ ಹೊಟ್ಟೆಯಲ್ಲೇ 10–15 ಕರಿಬೇವು ಹಾಗೂ ಅರ್ಧ ಚಮಚ ಜೀರಿಗೆಯನ್ನು ಸೇವಿಸುವ ರೂಢಿ ಮಾಡಿಕೊಂಡರೆ ಅನೇಕ ಲಾಭಗಳಿವೆ. ಕೂದಲು ಉದುರುವಿಕೆ ಕಡಿಮೆ ಆಗುತ್ತದೆ. ದೃಷ್ಟಿ ದೋಷ ಸಮಸ್ಯೆಗೂ ಪರಿಹಾರ ನೀಡಬಲ್ಲುದು.
* ಖಾಲಿ ಹೊಟ್ಟೆಗೆ ಕರಿಬೇವು ಸೇವನೆ ಗ್ಯಾಸ್ಟ್ರಿಕ್ ಹಾಗೂ ಅಸಿಡಿಟಿಗೆ ರಾಮಬಾಣ, ಕೀಲುನೋವು ಕಡಿಮೆಯಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ.
* ಹಾಗೂ ಆ್ಯಸಿಡಿಟಿ ಸಮಸ್ಯೆಗೆ ರಾಮಬಾಣ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಂಧಿ ನೋವು ಮುಂತಾದ ಸಮಸ್ಯೆಗಳಿಗೆ ಕರಿಬೇವು ಸೇವನೆ ಪರಿಹಾರ ನೀಡುತ್ತದೆ.
* ಕರಿಬೇವು ಸೇವನೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ. ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ನೀಡುತ್ತದೆ.
* ಕಹಿಬೇವನ್ನು ಅರೆದು ಮುಂಜಾನೆ ಕುಡಿದರೆ ದೊಡ್ಡವರಲ್ಲಿ ಜಂತು ಹುಳುವಿನ ಸಮಸ್ಯೆ ಉಂಟಾಗುವುದಿಲ್ಲ. ವಾಯು ಸಂಬಂಧಿ ಸಮಸ್ಯೆಯನ್ನೂ ನಿವಾರಿಸುವ ಶಕ್ತಿ ಇದಕ್ಕಿದೆ.
* ಹಸಿದ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಹೊಟ್ಟೆಯನ್ನು ಬ್ಯಾಕ್ಟೀರಿಯಾದಿಂದ ಮುಕ್ತಗೊಳಿಸುತ್ತದೆ. ಜೀರ್ಣಕ್ರಿಯೆ ಉತ್ತಮವಾಗುತ್ತದೆ.
* ಉದ್ವೇಗ ಹಾಗೂ ಆತಂಕದಿಂದ ಎದೆಬಡಿತ ಹೆಚ್ಚುವ ಸಮಸ್ಯೆ ನಿಮ್ಮಲ್ಲಿದ್ದರೆ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೀಬೆ ಹಣ್ಣು ಸೇವಿಸುವುದು ಅತ್ಯುತ್ತಮ.<ref>{{Cite web |url=http://www.prajavani.net/news/article/2017/03/28/480511.html |title=ಖಾಲಿ ಹೊಟ್ಟೆಗೆ ಒಂದಿಷ್ಟು ‘ಮದ್ದು’;28 Mar, 2017 |access-date=2017-03-28 |archive-date=2017-03-27 |archive-url=https://web.archive.org/web/20170327233736/http://www.prajavani.net/news/article/2017/03/28/480511.html |url-status=dead }}</ref>
'''ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆಗಳು ಮಳೆಗಾಲದಲ್ಲಿ ಆವರಿಸಿಕೊಳ್ಳುತ್ತದೆ. ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯತ್ತ ಮುಖ ಮಾಡುವವರೇ ಹೆಚ್ಚು. ಆದರೆ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸುವುದರಿಂದ ಇಂತಹ ಸಮಸ್ಯೆಗಳಿಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವೊಂದು ಮನೆ ಮದ್ದುಗಳನ್ನು ಇಲ್ಲಿದೆ…'''
ಕೆಮ್ಮು ಶುರುವಾದಾಗ ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ. ಇದರಿಂದ ಗಂಟಲಿನ ಉರಿಯೂತ ಕಡಿಮೆಯಾಗುತ್ತದೆ.ಒಂದೆಲಗದ ಕಷಾಯವನ್ನು ಸೇವಿಸಿದರೆ ಕೆಮ್ಮು ಗುಣವಾಗುತ್ತದೆ.
ಒಂದು ಚಮಚ ಜೇನುತುಪ್ಪಕ್ಕೆ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಸೇವಿಸಿದರೆ ಕಫದ ಸಮಸ್ಯೆಗೆ ಪರಿಹಾರ ಕಾಣಬಹುದು.
ಉಪ್ಪಿನ ಜೊತೆ ಶುಂಠಿ ಮತ್ತು ಲವಂಗವನ್ನು ಸೇರಿಸಿ ಜಗಿಯುವುದರಿಂದ ಕಫ ಮತ್ತು ಗಂಟಲ ಕೆರೆತವನ್ನು ದೂರ ಮಾಡಬಹುದು.
ನಿಂಬೆ, ಕಲ್ಲು ಸಕ್ಕರೆ ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.
ಶುಂಠಿಯ ಚಹಾವನ್ನು ಮಾಡಿ ಕುಡಿಯುವುದರಿಂದ ಸಹ ನೆಗಡಿ ಮತ್ತು ಕಫವನ್ನು ನಿವಾರಿಸಿಕೊಳ್ಳಬಹುದು.
ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಮತ್ತು ಬೆಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಬಿಸಿ ಆರುವ ಮುನ್ನವೇ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.
ಬಿಸಿ ನೀರಿಗೆ ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.
ಇನ್ನು ಒಣ ಕೆಮ್ಮು ಇದ್ದರೆ ಏಲಕ್ಕಿ ಮತ್ತು ಶುಂಠಿ ಪುಡಿಯನ್ನು ಸೇರಿಸಿಕೊಂಡು ಸೇವಿಸುವುದು ಉತ್ತಮ.
ಹಾಗೆಯೇ ನೆಲ್ಲಿಕಾಯಿಯನ್ನು ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಕಫದ ಸಮಸ್ಯೆಯಿಂದ ದೂರವಿರಬಹುದು.
ಬಿಸಿ ಹಾಲಿಗೆ ಅರಿಶಿಣ ಮತ್ತು ಕಲ್ಲು ಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೂ ಕಫ ಮತ್ತು ನೆಗಡಿ ಕಡಿಮೆಯಾಗುತ್ತದೆ.
ಜೇನು ಮತ್ತು ನಿಂಬೆರಸದೊಂದಿಗೆ ದಾಲ್ಚಿನಿಯನ್ನು ಸೇರಿಸಿ ಸೇವಿಸಿದರೂ ನೆಗಡಿ ಮತ್ತು ಕಫದ ಸಮಸ್ಯೆ ದೂರವಾಗುತ್ತದೆ.
ಕೆಮ್ಮು ಉಂಟಾಗುವ ಸಂದರ್ಭದಲ್ಲಿ ಕಲ್ಲು ಸಕ್ಕರೆ ಮತ್ತು ಲವಂಗವನ್ನು ಸೇವಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ.
<ref>ಆರೋಗ್ಯ ದರ್ಪಣ -ಡಾ. ಪಂಡಿತ ಶಿವಕುಮಾರ ಸ್ವಾಮಿಗಳು</ref>
<ref>ಪ್ರಜಾವಾಣಿ ೧೨-೭-೨೦೧೪- ಗೀತಾ ಬರ್ಲ</ref>
<ref>ವಿಜಯಕರ್ನಾಟಕ (ಮನೆ ಮದ್ದು ೨೭-೬-೨೦೧೪ ಡಾ.ಸುಜೇತಾ.</ref>
==ಉಲ್ಲೇಖ==
[[ವರ್ಗ:ಔಷಧಿಗಳು]] [[ವರ್ಗ:ಆಯುರ್ವೇದ]][[ವರ್ಗ:ಚಿಕಿತ್ಸೆ]][[ವರ್ಗ:ಪ್ರಥಮ ಚಿಕಿತ್ಸೆ]]
[[ವರ್ಗ:ಸಸ್ಯಗಳು]]
[[ವರ್ಗ:ಔಷದೀಯ ಸಸ್ಯಗಳು]]
[[ವರ್ಗ:ವೈದ್ಯಕೀಯ]]
[[ವರ್ಗ:ಆರೋಗ್ಯ]]All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?oldid=1064789.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|