Revision 276280 of "ಶ್ರೀ ಅರವಿಂದ" on knwiki{{Infobox ಧಾರ್ಮಿಕ ವ್ಯಕ್ತಿ|
|name= ಶ್ರೀ ಅರವಿಂದರು
|image= Sri aurobindo.jpg|right|thumb
|caption= ಪುದುಚೇರಿಯಲ್ಲಿ ಶ್ರೀ ಅರವಿಂದರು
|birth-date= {{birth date|1872|08|15}}
|birth-place= [[ಕಲಕತ್ತ]]
|birth-name= ಒರೊಬಿಂದೋ ಅಕ್ರಾಯ್ಡ್ ಘೋಷ್
|death-date= {{death date and age|1950|12|05|1872|08|15|df=y}}
|death-place= [[ಶ್ರೀ ಅರವಿಂದ ಆಶ್ರಮ]], [[ಪುದುಚೇರಿ]]
|philosophy= [[ಅತೀತ ಮಾನಸ ಯೋಗ]]
|quote= ಪ್ರಕೃತಿಯು ಪಶುವೆಂಬ ಜೀವಂತ ಪ್ರಯೋಗಾಲಯದಲ್ಲಿ ಮಾನವನನ್ನು ಸೃಷ್ಟಿಸಿದೆಯೆನ್ನುವರು. ಚಿಂತಿಸುವ ಮತ್ತು ಜೀವಿಸುವ ಮಾನವನೆಂಬ ಪ್ರಯೋಗಾಲಯದಲ್ಲಿ ... ಪ್ರಕೃತಿಯು ಅತಿಮಾನವನನ್ನು, ದೇವತೆಯನ್ನು ಸೃಷ್ಟಿಸಲು ವ್ಯವಸಾಯ ನಡೆಸುತ್ತಿರಬಹುದು
|footnotes=
}}
'''ಶ್ರೀ ಅರವಿಂದ''' ({{lang|bn|শ্রী অরবিন্দ}} : '''ಶ್ರೀ ಒರೊಬಿಂದೋ''') ([[ಆಗಸ್ಟ್ ೧೫]], [[೧೮೭೨]] - [[ಡಿಸೆಂಬರ್ ೫]], [[೧೯೫೦]]) [[ಭಾರತದ ಸ್ವಾತಂತ್ರ್ಯ ಚಳುವಳಿ]]ಯ ಹೋರಾಟಗಾರ, [[ತತ್ವಜ್ಞಾನಿ]], ಹಾಗು ಯೋಗಿಯಾಗಿದ್ದವರು.
='''ಜೀವನ'''=
[[ಕಲಕತ್ತೆ]]ಯಲ್ಲಿ ಶ್ರೀ ಅರವಿಂದರು ಕೃಷ್ಣಧನ ಘೋಷ್ ಮತ್ತು ಸ್ವರ್ಣಲತಾ ದೇವಿಯರಿಗೆ ತೃತೀಯ ಪುತ್ರನಾಗಿ ಜನಿಸಿದರು. ಆಂಗ್ಲೇಯರಿಂದ ಪ್ರಭಾವಿತರಾದ ಅವರ ತಂದೆಯು ಅವರಿಗೆ "ಒರೊಬಿಂದೋ ಅಕ್ರಾಯ್ಡ್ ಘೋಷ್" ಎಂಬ ಜನ್ಮನಾಮವನ್ನು ಕೊಟ್ಟರು. ಅಲ್ಲದೆ, ಭಾರತೀಯರ ಅಥವಾ ಭಾರತದ ಪ್ರಭಾವ ತಮ್ಮ ಮಕ್ಕಳ ಮೇಲೆ ಬೀಳಬಾರದೆಂಬ ಉದ್ದೇಶದಿಂದ ಅವರನ್ನು ಇಂಗ್ಲೆಂಡಿಗೆ ರವಾನಿಸಿದರು. ಇಂಗ್ಲೆಂಡಿನಲ್ಲಿಯೇ ೧೩ ವರ್ಷ ಕಳೆದ ಅರವಿಂದರು, ಪಾಶ್ಚಾತ್ಯ ಸಂಸ್ಕೃತಿ, ಚರಿತ್ರೆ, ಸಾಹಿತ್ಯಗಳನ್ನು ಅಭ್ಯಸಿಸಿ ಪಾಂಡಿತ್ಯವನ್ನು ಪಡೆದು ಕೊಂಡರು. ಹಾಗೆಯೇ, ಅನೇಕ ಯೂರೋಪೀಯ ಭಾಷೆಗಳಲ್ಲಿಯೂ ಪ್ರವೀಣರಾದರು: ಇಂಗ್ಲಿಷ್, ಫ್ರೆಂಚ್, ಲ್ಯಾಟಿನ್, ಗ್ರೀಕ್, ಇಟಾಲಿಯನ್, ಜರ್ಮನ್ ಅವರಿಗೆ ತಿಳಿದಿದ್ದ ಕೆಲವು ಭಾಷೆಗಳು. ಅವರು ಐ.ಸಿ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಕುದುರೆ ಸವಾರಿಯನ್ನು ತೆಗೆದು ಕೊಳ್ಳದೆ ತಮ್ಮನ್ನು ಅನರ್ಹಗೊಳಿಸಿಕೊಂಡರು. ೧೮೯೩ರಲ್ಲಿ ಅವರು ಭಾರತಕ್ಕೆ ವಾಪಸು ಬಂದು ಬರೋಡದ ಮಹಾರಾಜರ ಆಸ್ಥಾನದಲ್ಲಿ ಕೆಲಸವನ್ನು ಪಡೆದು ಕೊಂಡರು. ಬರೋಡದಲ್ಲಿದ್ದ ಅವಧಿಯಲ್ಲಿ ಅವರು ಭಾರತದ ಸಂಸ್ಕೃತಿ, ಚರಿತ್ರೆ, ಮತ್ತು ಸಾಹಿತ್ಯಗಳನ್ನು ಅಧ್ಯಯನ ಮಾಡಿದರು ಮತ್ತು ಭಾರತೀಯ ಭಾಷೆಗಳಲ್ಲಿಯೂ (ಬಂಗಾಳಿ, ಸಂಸ್ಕೃತ, ಹಿಂದಿ, ಮರಾಠಿ, ಗುಜರಾತಿ, ತಮಿಳು) ಪ್ರಭುತ್ವವನ್ನು ಸಂಪಾದಿಸಿದರು. ಈ ಸಮಯದಲ್ಲಿಯೇ ಅವರು ಕ್ರಾಂತಿಕಾರಿ ಚಟುವಟಿಕೆಗಳನ್ನು ಪ್ರಾರಂಭಿಸಿ ೧೯೦೬ರಲ್ಲಿ (ಬಂಗಾಳದ ವಿಭಜನೆಯ ನಂತರ) ರಾಜಕೀಯದಲ್ಲಿ ಸಕ್ರಿಯ ಪಾತ್ರವಹಿಸಲು ಬರೋಡದಲ್ಲಿನ ತಮ್ಮ ಪದಕ್ಕೆ ರಾಜೀನಾಮೆಯಿತ್ತು ಕಲಕತ್ತೆಗೆ ಬಂದು ನೆಲೆಸಿದರು. ಅಲ್ಲಿ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ಕಾಲಿಟ್ಟು [[ಬಂದೇ ಮಾತರಂ (ಪತ್ರಿಕೆ)| ಬಂದೇ ಮಾತರಂ]] ಎಂಬ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡರು. ಈ ನಡುವೆಯೇ, ೧೯೦೬ರಲ್ಲಿ, ಯೋಗವೂ ಕೂಡ ಭಾರತದ ಸ್ವಾತಂತ್ರ್ಯ ಸಾಧನೆಗೆ ಶಕ್ತಿಶಾಲಿ ಸಹಾಯಕವಾಗ ಬಹುದೆಂದು ಚಿಂತಿಸಿ [[ವಿಷ್ಣು ಭಾಸ್ಕರ ಲೇಲೆ]] ಎಂಬ ಯೋಗಿಯನ್ನು ಸಂಧಿಸಿದರು: ಈ ಯೋಗಿಯು ತಿಳಿಸಿಕೊಟ್ಟ ಕೆಲವು ವಿಧಾನಗಳನ್ನು ಅನುಸರಿಸಿ ನಿರ್ಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡರೆಂದು ಶ್ರೀ ಅರವಿಂದರು ಹೇಳಿದರು. ಅದೇ ವರ್ಷ, ಅವರು ಅಲೀಪುರದ ವಿಸ್ಫೋಟದ ಪ್ರಕರಣದಲ್ಲಿ ಬಂಧಿತರಾಗಿ, ಒಂದು ವರ್ಷದ ನಡೆದ ವಿಚಾರಣೆಯ ಕಾಲವನ್ನು ಅಲೀಪುರದ ಸೆರೆಯಲ್ಲಿ ಕಳೆದರು: ಈ ಕಾಲದಲ್ಲಿಯೇ ಅವರು ಸಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡರೆಂದು ಹೇಳಿರುವರು. ೧೯೦೯ರಲ್ಲಿ ಖುಲಾಸೆಯಾಗಿ ಇವರ ಬಿಡುಗಡೆಯಾಯಿತು. ಆನಂತರ, ತಮ್ಮ ಅಂತರಾತ್ಮದ ಆದೇಶವನ್ನು ಅನುಸರಿಸಿ ೧೯೧೦ರಲ್ಲಿ ಪುದುಚೇರಿಗೆ ಬಂದು ನೆಲೆಸಿದರು ಮತ್ತು ತಮ್ಮ ಶೇಷಾಯುಷ್ಯವನ್ನು ಅಲ್ಲಿಯೇ ಯೋಗ ಸಾಧನೆಯಲ್ಲಿ ಕಳೆದರು.
='''ಯೋಗ'''=
ಶ್ರೀ ಅರವಿಂದರು [[ಅತೀತ ಮಾನಸ ಯೋಗ|ಅತೀತ ಮಾನಸ ಯೋಗದ]] ಪ್ರವರ್ತಕರು. ಈ ಕೆಲಸದಲ್ಲಿ ಅವರ ಸಹಕಾರ್ಯಕಾರಿಯಾದವರು [[ಮೀರಾ ಅಲ್ಫಾಸ]] ರವರು (ಇವರನ್ನು [[ಶ್ರೀ ಅರವಿಂದ ಆಶ್ರಮ | ಶ್ರೀ ಅರವಿಂದಾಶ್ರಮದ]] ಶ್ರೀ ಮಾತೆಯವರೆಂದೂ ಕರೆಯುವ ಪ್ರತೀತಿ). ಇವರೂ ಕೂಡ ಶ್ರೀ ಅರವಿಂದರಂತೆಯೇ ಸ್ವತಂತ್ರವಾಗಿ ಸಾಕ್ಷಾತ್ಕಾರಗಳನ್ನು ಪಡೆದು ಕೊಂಡಿದ್ದು, ಅತೀತ ಮಾನಸ ಯೋಗವು ಪೃಥ್ವಿಯ ಮುಂದಿನ ವಿಕಸವನ್ನು ತ್ವರಿತಗೊಳಿಸುದೆಂದು ಪ್ರತಿಪಾದಿಸಿದರು. ಶ್ರೀ ಅರವಿಂದರು ಪ್ರಕೃತಿಯ ವಿಕಸನವು ಅಧ್ಯಾತ್ಮಿಕ ದೃಷ್ಟಿಕೋನದಿಂದ ಪ್ರಜ್ಙೆಯ ವಿಕಸನವೆಂದೂ, ಭೌತಿಕ, ಪ್ರಾಣ, ಮತ್ತು ಮನಸ್ಸುಗಳು ಕ್ರಮವತ್ತಾಗಿ ಜಡಜಗತ್ತು, ಸಸ್ಯ ಮತ್ತು ಪಶುಗಳು, ಮತ್ತು ಮನುಷ್ಯನಲ್ಲಿ ಅಭಿವ್ಯಕ್ತಿಯನ್ನು ಪಡೆದುಕೊಂಡಿತೆಂದೂ, ಮುಂದಿನ ವಿಕಸನವು ಮನಸ್ಸನ್ನು ಮೀರಿಸಿದ ಪ್ರಜ್ಙೆಯ ಸ್ಥಿತಿಯ ಅಭಿವ್ಯಕ್ತಿಯೆಂದು ಹೇಳುವರು. ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಅಧ್ಯಾತ್ಮಿಕ ಪರಂಪರೆಗಳು ಸೂಚಿಸುವಂತೆ, ಮನಸ್ಸಿನಾಚೆಯ ಅತಿ ಪ್ರಜ್ಙೆಯಲ್ಲಿಯೇ ಸಂತೃಪ್ತರಾಗಿ, ಭೌತಿಕ ಜಗತ್ತಿಗೆ ಈ ಅನ್ವೇಷಣೆಯ ಗೆಲುವುಗಳನ್ನು ಕೆಳ ತರದೆ ಅತೀತದಲ್ಲಿ ಲೀನವಾಗಿಹೋಗುವುದು ತರವಲ್ಲದ್ದೆಂದೂ, ಅತಿಪ್ರಜ್ಙೆಯ ಪ್ರಾಪ್ತಿಗಳನ್ನು ಮಾನಸಿಕ, ಪ್ರಾಣಿಕ ಮತ್ತು ಭೌತಿಕಗಳಿಗೆ ಇಳಿಸಬೇಕೆಂದೂ, ಈ ರೀತಿ ನವೀನ ಜೀವಜಾತಿಯನ್ನು, ಅತಿಮಾನವತೆಯನ್ನು ಅಭಿವ್ಯಕ್ತಗೊಳಿಸಬೇಕೆಂದು ಅಭಿಪ್ರಾಯ ಪಡುವರು.
='''ವಾಙ್ಮಯ'''=
ಶ್ರೀ ಅರವಿಂದರ ಸಮಗ್ರ ವಾಙ್ಮಯವನ್ನು [[ಶ್ರೀ ಅರವಿಂದ ಆಶ್ರಮ | ಶ್ರೀ ಅರವಿಂದಾಶ್ರಮವು]] ವು ೩೫ ಸಂಪುಟಗಳಲ್ಲಿ ಪ್ರಕಟಿಸಿದೆ. ಅವರ ಕೆಲವು ಕೃತಿಗಳೆಂದರೆ:
*'''[[ದಿವ್ಯ ಜೀವನ]]''': ಶ್ರೀ ಅರವಿಂದರ ಪ್ರಮುಖ ತತ್ತ್ವಶಾಸ್ತ್ರ ಕೃತಿ. ಈ ಗ್ರಂಥವು ವಿಶ್ಲೇಷಿಸುವ ಕೆಲವು ವಿಷಯಗಳನ್ನು ಮುಂದೆ ಕೊಟ್ಟಿದೆ: ವಿಕಸನ, ವಿಶ್ವ ಅಭಿವ್ಯಕ್ತಿಯ ಹಲವು ಸ್ತರಗಳು, ಅತೀತ ಮಾನಸ ವಿಕಸನದ ಸಾಧ್ಯತೆಗಳು, ಸನ್ನಿವೇಶಗಳು, ಸೃಷ್ಟಿ-ಸ್ಥಿತಿ-ಲಯ, ಇತ್ಯಾದಿ
*'''[[ಯೋಗ ಸಮನ್ವಯ]]''' - ತಮ್ಮ ಮತ್ತು ಇತರ ಯೋಗಗಳ ವಿಷಯವಾಗಿ ಬರೆದ ಕೃತಿ. ಇತರ ಯೋಗಗಳು ತಮ್ಮ ಯೋಗಕ್ಕೆ ಹೇಗೆ ಪೂರಕ-ಸಾಧಕಗಳಾಗ ಬಹುದೆಂಬುದರ ಮೇಲೆ ಒತ್ತು ಕೊಟ್ಟಿರುವರು.
*'''[[ಮಾನವ ಚಕ್ರ]]''' - ಶ್ರೀ ಅರವಿಂದರ ಸಾಮಾಜಿಕ ಮತ್ತು ರಾಜನೀತಿ ವಿಷಯಕ ವಿಶ್ಲೇಷಣೆಗಳು
*'''[[ವೇದ ರಹಸ್ಯ]], [[ಅಗ್ನಿ ಸೂತ್ರಗಳು]]''' - ಶ್ರೀ ಅರವಿಂದರ ವೇದಾರ್ಥ ನಿರೂಪಣೆಯ ಪ್ರಯತ್ನ. ಇವರು ವೇದಗಳನ್ನು ತಮ್ಮ ಅನುಭವಗಳ ಬೆಳಕಿನಲ್ಲಿ ಈ ಗ್ರಂಥಗಳನ್ನು ಹೇಗೆ ಅರ್ಥೈಸಬಹುದೆಂದು ಚರ್ಚಿಸುವರು. ಅಗ್ನಿ ಸೂತ್ರಗಳು ಎಂಬ ಗ್ರಂಥ ಅವರ ಈ ವಿಧಾನದ ನಿದರ್ಶನಗಳು
*'''[[ಸಾವಿತ್ರಿ(ಕಾವ್ಯ) | ಸಾವಿತ್ರಿ]]''' - ಶ್ರೀ ಅರವಿಂದರ ಮಹಾಕಾವ್ಯ.
*'''[[ಯೋಗ ದಾಖಲೆಗಳು]]''' - ಶ್ರೀ ಅರವಿಂದರು ೧೯೦೯ರಿಂದ ೧೯೨೭ರ ವರೆಗೆ ದಾಖಲಿಸಿದ್ದ ತಮ್ಮ ಯೋಗ ಸಾಧನಾ ವಿಷಯಕ ಟಿಪ್ಪಣಿಗಳು
*'''ಯೋಗ ಪತ್ರಗಳು''' - ಶ್ರೀ ಅರವಿಂದರು ಬರೆದ ಪತ್ರಗಳನ್ನು ಹಲವು ಸಂಪುಟಗಳಲ್ಲಿ ಬೇರೆ ಬೇರೆ ಶೀರ್ಷಿಕೆಗಳಡೆ ವಿಂಗಡಿಸಲಾಗಿದೆ
='''ಪ್ರಭಾವ'''=
ಪಂಡಿತ [[ಮದನ ಮೋಹನ ಮೌಲವೀಯ]], [[ಸುಭಾಸಚಂದ್ರ ಭೋಸ್]], [[ರವೀಂದ್ರ ನಾಥ್ ಠಾಕೂರ್]] ಇತ್ತ್ಯಾದಿ ಮಹಾನ್ ವ್ಯಕ್ತಿಗಳು ಶ್ರೀ ಅರವಿಂದರ ಪ್ರಭಾವಕ್ಕೆ ಒಳಗಾದರು. ದ.ರಾ.ಬೇಂದ್ರೆ, ಕುವೆಂಪು, ಮಧುರ ಚೆನ್ನರು, ಶಂ.ಬಾ.ಜೋಶಿ, ಸ.ಸ,ಮಾಳವಾಡ, ಶಾಂತಾದೇವಿ ಮಾಳವಾಡ, ಮುಂತಾದ ಮಹಾನ್ ಕನ್ನಡಿಗರೂ ಕೂಡ ಇವರ ಕೃತಿಗಳಿಂದ ಪ್ರಭಾವಿತರಾದರು.
[[ವರ್ಗ:ಸ್ವಾತಂತ್ರ್ಯ ಹೋರಾಟಗಾರರು]]
[[ವರ್ಗ:ಭಾರತದ ತತ್ವಶಾಸ್ತ್ರಜ್ಞರು]]
[[als:Aurobindo Ghose]]
[[bg:Шри Ауробиндо]]
[[bn:অরবিন্দ ঘোষ]]
[[ca:Sri Aurobindo]]
[[cs:Šrí Aurobindo]]
[[de:Aurobindo Ghose]]
[[en:Sri Aurobindo]]
[[eo:Sri Aŭrobindo]]
[[es:Sri Aurobindo]]
[[et:Aurobindo]]
[[eu:Aurobindo Ghose]]
[[fi:Sri Aurobindo]]
[[fr:Aurobindo Ghose]]
[[gl:Aurobindo]]
[[hi:श्री अरविन्द]]
[[id:Sri Aurobindo]]
[[it:Sri Aurobindo]]
[[ja:オーロビンド・ゴーシュ]]
[[ko:아우로빈도 고시]]
[[lv:Šrī Aurobindo]]
[[ml:അരൊബിന്ദോ]]
[[mr:श्री ऑरोबिंदो]]
[[nl:Aurobindo]]
[[no:Sri Aurobindo]]
[[pl:Aurobindo Ghose]]
[[pt:Sri Aurobindo]]
[[ro:Sri Aurobindo]]
[[ru:Шри Ауробиндо]]
[[sa:श्री अरविन्दः]]
[[sk:Sri Aurobindo]]
[[sv:Aurobindo]]
[[ta:அரவிந்தர்]]
[[te:అరబిందో]]
[[tr:Sri Aurobindo]]
[[uk:Шрі Ауробіндо]]
[[vi:Aurobindo]]
[[zh:斯瑞·奧羅賓多]]All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?oldid=276280.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|