Revision 284029 of "ಮಕ್ಕಳ ಕವನ" on knwiki

=== ಮಕ್ಕಳ ಸಾಹಿತ್ಯ ===
------------------
ಮಕ್ಕಳ ಕವನ ವನ್ನು  ಮಕ್ಕಳ ಕಥೆ ಮೊದಲಾದವುಗಳನ್ನು ಬರೆದು ಮಕ್ಕಳ ಸಾಹಿತ್ಯ ಬೆಳಸಿದವರಲ್ಲಿ ದೇವುಡು ನರಸಿಂಹ ಶಾಸ್ತ್ರಿ , ಜಿ.ಪಿ.ರಾಜರತ್ನಂ ಕೆ.ವಿ.ಪುಟ್ಟಪ್ಪ , ಹೊಹಿಸಳ, ಟಿ.ಎಂ.ಆರ್.ಸ್ವಾಮಿ, ಕಲಾಕುಮಾರ (ಡಾ.ದೊಡ್ಡೇರಿ ವೆಂಕಟಗಿರಿರಾವ್. ) ಸಿದ್ದಯ್ಯ ಪುರಾಣಿಕ ಮೊದಲಾದವರು ಪ್ರಮುಖರು. ಪುರಂದರದಾಸರು ಚಿಕ್ಕಮಕ್ಕಳಿಗಾಗಿ ಕೆಲವು ಸಣ್ಣ -ಸರಳ ಹಾಡುಗಳನ್ನು ರಚಿಸಿದ್ದಾರೆ. 
*ಇಲ್ಲಿ ಕೆಲವು ಜನಪ್ರಿಯ  ಮಕ್ಕಳ ಕವನಗಳನ್ನು  ಉದಾಹರಣೆಗಾಗಿ ಕೊಟ್ಟಿದೆ :
೧) ನಾಗರ ಹಾವೆ ! ವಿಷವಿರುವ ಭಯಂಕರ ಹಾವು ಏ ಹಾವೇ ; ಏನಿದು ಅದರಲ್ಲಿ ಸುಂದರ ಕೋಮಲ  ಹೂವು ಅರಳುವುದೇ! ಹೆಡೆ ಬಿಚ್ಚಿದಾಗ ಅದರೊಳಗೆ ಹೂವಿನ ಚಿತ್ರ. ಹೆಡೆಯೂ ಹೂವಿನಂತೆ ಬಿಚ್ಚಿ ಅರಳುವುದು. ರುದ್ರ ಸೌಂದರ್ಯ! ಹೊರಗೆ ಬಾ.  ಹೊಳಹಿನ ಹೊಂದಲೆ - ಹೊಳೆಯುವ ಹೊನ್ನಿನ ತಲೆ ಹಳದಿ ಬಣ್ಣದ ಬಂಗಾರದ ತಲೆ ಯನ್ನು ಕೊಳಲಿನ ನಾದಕ್ಕೆ ತೂಗು. ತಲೆಯಲ್ಲಿ ರತ್ನವಿದೆ ಎನ್ನುತ್ತಾರೆ -ನಿಜವೇ - ತೋರಿಸು ; ನಾಗರ ಹಾವು ಕೊಪ್ಪರಿಗೆ ಚಿನ್ನವನ್ನು ಕಾಯುತ್ತದೆ ಎಂದು ನಂಬುಗೆ  ಇದ್ದರೆ ನನಗೆ ಕೊಡುಮೈ ತಣ್ಣಗೆ ಇದ್ದರೂ  (ಮನದಲಿ ಬಿಸಿ ಹಗೆ ಸೇಡಿನ ಸಿಟ್ಟು) ನಾಗರ ಹಾವಿಗೆ ಸಿಟ್ಟು ಬಹಳ - ಆದ್ದರಿಂದ ಬೇಗ ಹೋಗು !

=== ನಾಗರ ಹಾವೆ! ===
-----------
* ನಾಗರ ಹಾವೆ ಹಾವೊಳು ಹೂವೆ 
* ಬಾಗಿಲ ಬಿಲದಲಿ ನಿನ್ನಯ ಠಾವೆ
* ಕೈಗಳ ಮುಗಿವೆ ಹಾಲನ್ನೀವೆ 
* ಬಾ ಬಾ ಬಾ , ಬಾ ಬಾ ಬಾ 		||೧ ||
-
* ಹಳದಿಯ ಹೆಡೆಯನು ಬಿಚ್ಚೋ ಬೇಗ, 
* ಕೊಳಲನ್ನೂದುವೆ ಲಾಲಿಸು ರಾಗ,
* ಹೊಳಹಿನ ಹೊಂದಲೆ ತೂಗೋ ನಾಗ, 
* ನೀ ನೀ ನೀ, ನೀ ನೀ ನೀ 		||೨||
-
* ಎಲೆ ನಾಗಣ್ಣ ಹೇಳೆಲೊ ನಿನ್ನ , 
* ತಲೆಯಲಿ ರನ್ನ ವಿಹುದನ್ನ , 
* ಕಾಯುತಲಿರುವೆ ಕೊಪ್ಪರಿಗೆಯ ಚಿನ್ನ, 
* ತಾ ತಾ ತಾ, ತಾ ತಾ ತಾ ,		||೩||
-
* ಬರಿಮೈ ತಣ್ಣಗೆ ಮನದಲಿ ಬಿಸಿ ಹಗೆ,
* ಎರಡೆಳೆ ನಾಲಗೆ ಇದ್ದರು ಸುಮ್ಮಗೆ, 
* ಎರಗುವೆ ನಿನಗೆ ಈಗಲೆ ಹೊರಗೆ , 
* ಪೋ ಪೋ ಪೋ, ಪೋ ಪೋ ಪೋ, ||೪||
* ರಚನೆ : [[ಜಿ.ಪಿ.ರಾಜರತ್ನಂ]]

=== ನಮ್ಮ ಮನೆಯ ಸಣ್ಣ ಪಾಪ ===
---------------------------
* ನಮ್ಮ ಮನೆಲೊಂದು ಪಾಪನಿರುಉದು 
* ಎತ್ತಿಕೊಳಲು ಹೋದರದಕೆ ಕೋಪ ಬರುವುದು ||೧||
-
* ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು 
* ಕಿರುಚಿಕೊಂಡು ತನ್ನ  ಮೈಯ್ಯ ಪರಚಿಕೊಳುವುದು ||೨||
-
* ಮೈಯ್ಯ ಪರಚಿಕೊಂಡು ಪಾಪ ಅತ್ತು ಕರೆವುದು,
* ಅಳಲು ಕಣ್ಣಿನಿಂದ ಮುತ್ತು ಸುರಿವುದು , ||೩||
-
* ಪಾಪ ಅತ್ತರಮ್ಮ ತಾನೂ ಅತ್ತು ಬಿಡವುದು 
* ಅಯ್ಯೋ ಪಾಪ ಎಂದುಕೊಂಡು ಮುತ್ತು ಕೊಡುವಳು || ೪ || 
-
* ಪಾಪ ಪಟ್ಟು ಹಿಡಿದ ಹಟವು ಸಾರ್ಥ ವಾಯಿತು 
* ಪರಚಿ ಪರಚಿ ಅಳುವುದೆಲ್ಲ ಅರ್ಥವಾಯಿತು  ||೫||
*ರಚನೆ: [[ಜಿ.ಪಿ.ರಾಜರತ್ನಂ]]

=== ಕಂದನು ಬಂದ ===
------------------
* ಕಂದನು ಬಂದುದು  ಎಲ್ಲಿಂದ ?
* ನೀಲಿಯ ಗಗನದ ಬಳಿಯಿಂದ ||೧||
-
* ಕಣ್ಣನು ಹೊಂದಿದನಾವಾಗ ?
* ಕಂದನ ಚಂದಿರ ಕಂಡಾಗ ||೨||
-
* ಕಣ್ಣನು ಕಳೆಯನು ಪಡೆದಿಹುದು
* ಅರಿವೇ ಮೋಹಿಸಿ ಕೊಟ್ಟುದುದು ||೩|| 
-
* ಕೆನ್ನೆಯುಕೆಂಪಾಗಿಹುದೇಕೆ ?
* ದೇವರ ಮುತ್ತನು ಪಡೆದುದಕೆ ||೪ ||
-
* ಯಾವಾಗಲು ನಗುವನದೇಕೆ ? 
* ನಾವರಿಯದುದನವನರಿತುದಕೆ
* (ನಾವು ಅರಿಯದುದನು ಅವನು ಅರತುದಕೆ  - ದೇವರನ್ನು ?)

*ರಚನೆ :ಕಲಾಕುಮಾರ ([[ಡಾ.ದೊಡ್ಡೇರಿ ವೆಂಕಟಗಿರಿರಾವ್]]).

=== ಆಧಾರ : === 
-------------
ಹಿಂದಿನ ಮೈಸೂರು ಸರ್ಕಾರದ ಪ್ರಾಥಮಿಕ ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ.
*[[ಕನ್ನಡ ಸಾಹಿತ್ಯ ಪ್ರಕಾರಗಳು]]

ವರ್ಗ : [[ಕನ್ನಡ ಸಾಹಿತ್ಯ]]