Revision 285771 of "BNP (ಬಿಎನ್ ಪಿ)ಪರಿಬಾಸ್" on knwiki{{Infobox company
|company_name = BNP Paribas S.A.
|company_logo = [[File:BNP Paribas.svg|240px]]
|company_type = [[S.A. (corporation)|Société Anonyme]] ({{euronext|BNP}}, {{pink sheets|BNPQY}})
|foundation = 23 May 2000
|location = [[Boulevard des Italiens]], [[Paris]], [[France]]
|area_served = Worldwide
|key_people = [[Baudouin Prot]] <small>([[chief executive officer|CEO]])</small>, [[Michel Pébereau]] <small>([[Chair (official)|Chairman]])</small>
|industry = [[Financial services]]
|products = [[Retail banking|Retail]], [[BNP Paribas CIB|corporate and investment banking]]; [[Investment management|asset management]]
|revenue = [[Euro|€]]40.19 [[1000000000 (number)|billion]] <small>(2009)</small><ref name="AR2009">{{cite web |url=http://media-cms.bnpparibas.com/file/62/4/4q09-financial-statements.7624.pdf |language=French |title=Reference Document 2009 |accessdate=2010-03-12 |publisher=BNP Paribas|format=PDF}}</ref>
|operating_income = €8.482 billion <small>(2009)</small><ref name="AR2009" />
|net_income = €5.832 billion <small>(2009)</small><ref name="AR2009" />
|assets = €2.058 trillion <small>(2009)</small><ref name="AR2009" />
|num_employees = 201,740 <small>(2009)</small><ref name="AR2009" />
|homepage = [http://www.bnpparibas.com/ www.bnpparibas.com]
|intl = yes
}}
[[File:Bnp-Paribas.JPG|thumb|ಪ್ಯಾರಿಸ್ ನಲ್ಲಿರುವ BNP ಕಟ್ಟಡ ]]
'''BNP ಪರಿಬಾಸ್''' ({{euronext|BNP}}) ವಿಶ್ವದ ಅತ್ಯಂತ ದೊಡ್ಡ ಜಾಗತಿಕ [[ಬ್ಯಾಂಕ್|ಬ್ಯಾಂಕಿಂಗ್]] ಸಮೂಹಗಳಲ್ಲಿ ಒಂದಾಗಿದೆ, [[ಪ್ಯಾರಿಸ್|ಪ್ಯಾರಿಸ್]] ನಲ್ಲಿ ಪ್ರಧಾನ ಕಛೇರಿ ಹೊಂದಿದ್ದು, ತನ್ನ ಎರಡನೇ ಜಾಗತಿಕ ಮಟ್ಟದ ಪ್ರಧಾನ ಕಛೇರಿಯನ್ನು [[ಲಂಡನ್|ಲಂಡನ್]] ನಲ್ಲಿ ಹೊಂದಿದೆ.<ref>http://www.bnpparibas.co.uk/en/home/default.asp BNP ಲಂಡನ್ ನಲ್ಲಿರುವ ವಿಶ್ವಮಟ್ಟದ ಪ್ರಧಾನ ಕಚೇರಿ </ref> 2010ರಲ್ಲಿ ಫೋರ್ಬ್ಸ್ ನಿಯತಕಾಲಿಕವು ಇದನ್ನು $2.95 ಲಕ್ಷ ಕೋಟಿಗೂ ಅಧಿಕ ಆಸ್ತಿಗಳೊಂದಿಗೆ ವಿಶ್ವದ ಅತ್ಯಂತ ದೊಡ್ಡ ಸಂಸ್ಥೆಯೆಂದು ಶ್ರೇಣೀಕರಿಸಿದೆ.<ref>[http://www.forbes.com/lists/2010/18/global-2000-10_The-Global-2000_Rank.html ದಿ ಗ್ಲೋಬಲ್ 2000. ][http://www.forbes.com/lists/2010/18/global-2000-10_The-Global-2000_Rank.html ಫೋರ್ಬ್ಸ್, ಏಪ್ರಿಲ್ 21, 2010]. ಸೆಪ್ಟೆಂಬರ್ 11 2010ರಂದು ಮರುಸಂಪಾದಿಸಲಾಗಿದೆ.</ref> ಇದನ್ನು ಬಾಂಕ್ಯೂ ನ್ಯಾಷಿನೆಲ್ ಡೆ ಪ್ಯಾರಿಸ್ (BNP) ಹಾಗು ಪರಿಬಾಸ್ ನ ವಿಲೀನದ ಮೂಲಕ 2000ದಲ್ಲಿ ಸ್ಥಾಪಿಸಲಾಯಿತು. ಏಪ್ರಿಲ್ 2009ರಲ್ಲಿ, BNP ಪರಿಬಾಸ್ ಫೋರ್ಟಿಸ್ ಬ್ಯಾಂಕ್ ನಲ್ಲಿನ ಶೇಖಡ 75ರಷ್ಟು ಬಂಡವಾಳವನ್ನು ಖರೀದಿಸಿತು, ಬೆಲ್ಜಿಯಂ ಬ್ಯಾಂಕಿಂಗ್ ವ್ಯಾಪಾರವು BNPಯನ್ನು ಅದರ ಠೇವಣಿ ಆಧರಿಸಿ ಯುರೋಜೋನ್ ನ ಅತ್ಯಂತ ದೊಡ್ಡ ಬ್ಯಾಂಕ್ ಎಂದು ಪರಿಗಣಿಸಿದೆ.<ref>[http://uk.reuters.com/article/rbssFinancialServicesAndRealEstateNews/idUKLT42693120090429 ಡಚ್ OKಯೊಂದಿಗೆ BNP ಫೋರ್ಟಿಸ್ ಸ್ವತ್ತಿನ ಮಾರಾಟವನ್ನು ಮುಕ್ತವಾಗಿಸಿದೆ. ರಾಯ್ಟರ್ಸ್, ಏಪ್ರಿಲ್ 29, 2009]. 30 ಏಪ್ರಿಲ್ 2009ರಲ್ಲಿ ಮರುಸಂಪಾದಿಸಲಾಗಿದೆ </ref>
BNP ಪರಿಬಾಸ್ 2007-09ರ ಸಾಲದ ಬಿಕ್ಕಟ್ಟಿನಿಂದ ತುಲನಾತ್ಮಕವಾಗಿ ಪಾರಾಗುವುದರ ಜೊತೆಗೆ 2008ರ ವರ್ಷದಲ್ಲಿ €3 ಶತಕೋಟಿ ಹಾಗು 2009ರಲ್ಲಿ €5.8 ನಿವ್ವಳ ಲಾಭವನ್ನು ಗಳಿಸಿದ್ದರ ಬಗ್ಗೆ ವರದಿ ಮಾಡಿತು. ಈ ಎರಡೂ ವರ್ಷಗಳಲ್ಲಿ ಬ್ಯಾಂಕ್ ತನ್ನ BNPPCIB ವಿಭಾಗದ (ಕಾರ್ಪೋರೆಟ್ ಹಾಗು ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್) ಸ್ಥಿರ ಆದಾಯದ ವಹಿವಾಟಿನಿಂದ ಲಾಭ ಹೆಚ್ಚಿಸಿಕೊಂಡಿತು.<ref name="Annual Registration Document 2009">[http://invest.bnpparibas.com/en/pid748/registrationdocument.html ಆನ್ಯುಯಲ್ ರೆಜಿಸ್ಟ್ರೇಶನ್ ಡಾಕ್ಯುಮೆಂಟ್ 2009] BNP ಪರಿಬಾಸ್ , ಮಾರ್ಚ್ 11, 2010. 2010ರ ಏಪ್ರಿಲ್ 17ರಂದು ಮರುಸಂಪಾದಿಸಲಾಯಿತು.</ref> BNP ಪರಿಬಾಸ್, ತನ್ನ ಇತರ ಸಮಾನ ಸಮೂಹದಲ್ಲಿ ದೀರ್ಘಕಾಲಿಕವಾಗಿ ಸಾಲ ನೀಡುವುದರೊಂದಿಗೆ ಅತ್ಯಧಿಕ ಸಾಲ ನೀಡಿದ ಬ್ಯಾಂಕ್ ಎಂಬ ಅರ್ಹತೆ ಗಳಿಸಿದೆ, ಪ್ರಸಕ್ತ ಇದು S&Pಯಿಂದ ''AA'' , ಮೂಡಿ'ಸ್ ನಿಂದ ''Aa2'' ಎಂದು ಹಾಗು ಫಿಟ್ಚ್ ನಿಂದ ''AA-'' ಎಂದು ಸ್ಥಾನ ಗಳಿಸಿದೆ.<ref>http://www.fitchratings.com/corporate/ratings/issuer_content.cfm?issr_id=80359629 Fitch ratings</ref>
ಸಂಸ್ಥೆಯು, ಮೂರು ನಿಗದಿತ ವ್ಯಾಪಾರಿ ಘಟಕಗಳಾಗಿ ವಿಭಜನೆಯಾಗಿರುವ ಒಂದು ಸಾರ್ವತ್ರಿಕ ಬ್ಯಾಂಕ್ ಎನಿಸಿದೆ: "ರಿಟೇಲ್ ಬ್ಯಾಂಕಿಂಗ್", "ಕಾರ್ಪೋರೆಟ್ & ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್", ಹಾಗು "ಇನ್ವೆಸ್ಟ್ಮೆಂಟ್ ಸಲ್ಯೂಷನ್ಸ್"(ಇದರಲ್ಲಿ ಸ್ವತ್ತಿನ ನಿರ್ವಹಣೆ, ರಕ್ಷಣಾ ಬ್ಯಾಂಕಿಂಗ್, ಹಾಗು ರಿಯಲ್ ಎಸ್ಟೇಟ್ ಸೇವೆಗಳು ಸೇರಿವೆ).<ref name="Annual Registration Document 2009"></ref>
BNP ಪರಿಬಾಸ್ ನ ಮೂರು ದೇಶೀಯ ಮಾರುಕಟ್ಟೆಗಳೆಂದರೆ [[ಫ್ರಾನ್ಸ್|ಫ್ರಾನ್ಸ್]], [[ಇಟಲಿ|ಇಟಲಿ]], ಹಾಗು ಬೆಲ್ಜಿಯಂ. ಇದು ತನ್ನ ಮಹತ್ವದ ರಿಟೇಲ್ ವ್ಯವಸ್ಥಿತ ಚಟುವಟಿಕೆಗಳನ್ನು [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕ ಸಂಯುಕ್ತ ಸಂಸ್ಥಾನ]], [[ಪೋಲೆಂಡ್|ಪೋಲಂಡ್]], [[ಟರ್ಕಿ|ಟರ್ಕಿ]], [[ಯುಕ್ರೇನ್|ಉಕ್ರೈನ್]] ಹಾಗು [[ಉತ್ತರ ಆಫ್ರಿಕಾ|ಉತ್ತರ ಆಫ್ರಿಕಾ]]ದಲ್ಲೂ ಸಹ ಹೊಂದಿದೆ, ಅಲ್ಲದೇ ದೊಡ್ಡ ಮಟ್ಟದ ಬಂಡವಾಳ ಹೂಡಿಕೆ ಚಟುವಟಿಕೆಗಳನ್ನು [[ಲಂಡನ್|ಲಂಡನ್]], [[ನ್ಯೂ ಯಾರ್ಕ್|ನ್ಯೂಯಾರ್ಕ್]], [[ಹಾಂಗ್ ಕಾಂಗ್|ಹಾಂಗ್ಕಾಂಗ್]], ಹಾಗು [[ಸಿಂಗಾಪುರ್|ಸಿಂಗಾಪುರ್]] ನಲ್ಲಿ ಹೊಂದಿದೆ.<ref>[http://invest.bnpparibas.com/en/pid748/registrationdocument.html ಆನ್ಯುಯಲ್ ರೆಜಿಸ್ಟ್ರೇಶನ್ ಡಾಕ್ಯುಮೆಂಟ್ 2009] BNP ಪರಿಬಾಸ್ , ಮಾರ್ಚ್ 11, 2010. 2010ರ ಏಪ್ರಿಲ್ 17ರಂದು ಮರುಸಂಪಾದಿಸಲಾಯಿತು.</ref>
== ಇತಿಹಾಸ ==
1869ರಲ್ಲಿ, ಅದ್ರಿಯೇನ್ ಡೆಲಹಂತೆ, ಎಡ್ಮಂಡ್ ಜೌಬರ್ಟ್ ಹಾಗು ಹೆನ್ರಿ ಸೆರ್ನುಸ್ಚಿಯಂತಹ ಬ್ಯಾಂಕರುಗಳು ಹಾಗು ಬಂಡವಾಳ ಹೂಡಿಕೆದಾರರ ಒಂದು ಸಮೂಹವು ''ಬ್ಯಾಂಕ್ಯೂ ಡೆ ಪ್ಯಾರಿಸ್'' ಅನ್ನು ಸ್ಥಾಪನೆ ಮಾಡಿತು. ಇದು ತನ್ನ ಪ್ರಧಾನ ಕಛೇರಿಯನ್ನು ಪ್ಯಾರಿಸ್ ನ 3 ರುಯೇ ಡ'ಅಂಟಿನ್ ನಲ್ಲಿದ್ದ ಆಪೆರಾದಲ್ಲಿ ಹೊಂದಿತ್ತು. ಜೊನಾಥನ್-ರಾಫೆಲ್ ಬಿಸ್ಸೋಚೋಆಫ್ಶೆಯಿಂ ಹಾಗು ಅವರ ಸಹೋದರ ''ನೆದರ್ಲಂಡ್ಸ್ಚೆ ಕ್ರೆಡಿಟ್ ಎನ್ ಡೆಪಾಸಿಟೋ ಬ್ಯಾಂಕ್'' ಅಥವಾ ''ಬ್ಯಾಂಕ್ಯೂ ಡೆ ಕ್ರೆಡಿಟ್ ಎಟ್ ಡಿಪೋ ಡೆಸ್ ಪೇಸ್-ಬಾಸ್'' ನ್ನು ಸ್ಥಾಪಿಸಿದರು.<ref>[http://www.univ-mlv.fr/PPF-HPP-manageriales/contributions/resume_piet_geljon_vanmarken.pdf ಲಾ ಬಾಂಕ್ಯೂ ಡೆ ಕ್ರೆಡಿಟ್ ಎಟ್ ಡೆ ಡಿಪೋ ಡೆಸ್ ಪೇಸ್-ಬಾಸ್]</ref>
ಎರಡನೇ ಮಹಾಯುದ್ಧದ ನಂತರ, ಫ್ರೆಂಚ್ ಸರ್ಕಾರವು, "ಬ್ಯಾಂಕುಗಳು ಹಾಗು ಸಾಲ ನೀಡುವ ಸಂಸ್ಥೆಗಳನ್ನು ರಾಷ್ಟ್ರೀಯ ಪುನರ್ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿತು". ಅಂದಿನ ವಿತ್ತ ಮಂತ್ರಿಯಾಗಿದ್ದ ರೆನೆ ಪ್ಲೆವೆನ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಪುನರ್ವ್ಯವಸ್ಥೆಯನ್ನು ಹುಟ್ಟುಹಾಕಿದರು. 2 ಡಿಸೆಂಬರ್ 1945ರಲ್ಲಿ ಅಂಗೀಕರಿಸಲಾದ ಕಾಯ್ದೆಯು, ಈ ವಲಯವನ್ನು ವ್ಯವಸ್ಥೆಗೊಳಿಸುವ ವಿಧಿಬದ್ಧವಾದ ಚೌಕಟ್ಟನ್ನು ಮರುವ್ಯಾಖ್ಯಾನಿಸಿತು. ಜೊತೆಗೆ ಬ್ಯಾಂಕ್ಯೂ ಡೆ ಫ್ರಾನ್ಸ್ ಹಾಗು ಇತರ ನಾಲ್ಕು ಪ್ರಮುಖ ಫ್ರೆಂಚ್ ರಿಟೇಲ್ ಬ್ಯಾಂಕುಗಳಾದ: BNCI, CNEP, ಕ್ರೆಡಿಟ್ ಲ್ಯೋನ್ನಯಿಸ್ ಹಾಗು ಸೊಸೈಟೆ ಜನರೇಲ್ ಗಳ ರಾಷ್ಟ್ರೀಕರಣವನ್ನು ಅಧಿಕೃತಗೊಳಿಸಿತು. ಇದು 1 ಜನವರಿ 1946ರಿಂದ ಜಾರಿಗೆ ಬಂದಿತು.
ಈ ಸಂಸ್ಥೆಗಳಲ್ಲಿದ್ದ ಬಂಡವಾಳದ ಪಾಲುಗಳನ್ನು ಫ್ರೆಂಚ್ ಸರ್ಕಾರಕ್ಕೆ ವರ್ಗಾಯಿಸಲಾಯಿತು, ಇದು ಹಣಕಾಸು ಸಂಸ್ಥೆಗಳ ಸಂಪೂರ್ಣ ಒಡೆತನವೆಂದು ಊಹಿಸಲಾಯಿತು. ಬ್ಯಾಂಕಿನ ನಿರ್ದೇಶಕ ಮಂಡಳಿಯನ್ನು ವಿಲೀನಗೊಳಿಸುವುದರ ಜೊತೆಗೆ ಪ್ರತಿ ಬ್ಯಾಂಕಿನಲ್ಲಿ ಹನ್ನೆರಡು ಹೊಸ ನಿರ್ದೇಶಕರನ್ನು ನೇಮಕ ಮಾಡಲಾಯಿತು. BNPಯನ್ನು ರೂಪಿಸುವ ಸಲುವಾಗಿ BNCI ಹಾಗು CNEPಯನ್ನು 1966ರಲ್ಲಿ ವಿಲೀನಗೊಳಿಸಲಾಯಿತು.
BNPಯನ್ನು 1993ರಲ್ಲಿ ಖಾಸಗೀಕರಣ ಮಾಡಲಾಯಿತು.
ಮೂಲದಲ್ಲಿ ''ಕಂಪನಿ ಫೈನಾನ್ಸಿಯೇರೆ ಡೆ ಪ್ಯಾರಿಸ್ ಎಟ್ ಡೆಸ್ ಪೇಸ್-ಬಾಸ್'' (ಪ್ಯಾರಿಸ್ ಹಾಗು ದಿ ನೆದರ್ಲ್ಯಾಂಡ್ಸ್ ನ ಹಣಕಾಸು ಸಂಸ್ಥೆ), ''ಕಂಪನಿ ಫೈನನ್ಸಿಯೇರೆ ಡೆ ಪರಿಬಾಸ್'' , 1998ರಲ್ಲಿ ''ಕಂಪನಿ ಬಂಕೈರೆ'' ಯನ್ನು ಸ್ವಾಧೀನಪಡಿಸಿಕೊಂಡ ನಂತರ ಕೇವಲ ಪರಿಬಾಸ್ ಎಂದು ಪರಿಚಿತವಾಯಿತು. ಕ್ಲೌಡೆ ಡೆ ಕೆಮೌಲಾರಿಯ ಅವರು 1960 ಹಾಗು 1970ರಲ್ಲಿ, ಬ್ಯಾಂಕ್ ನ ಒಬ್ಬ ಪ್ರಮುಖ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.
1999ರಲ್ಲಿ,BNP (ಬನಪ್ ) ಹಾಗು ಸೊಸೈಟೆ ಜನರೇಲ್, ಸ್ಟಾಕ್ ಮಾರುಕಟ್ಟೆಯಲ್ಲಿ ಒಂದು ಸಂಕೀರ್ಣ ಸ್ಪರ್ಧೆ ಎದುರಿಸಿದವು. ಸೊಸೈಟೆ ಜನರೇಲ್ ಪರಿಬಾಸ್ ಗಾಗಿ ಹರಾಜಿನಲ್ಲಿ ಪಾಲ್ಗೊಂಡು, BNP ಸೊಸೈಟೆ ಜನರೇಲ್ ಗಾಗಿ ಹರಾಜಿನಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಪರಿಬಾಸ್ ಗಾಗಿ ಪ್ರತಿ-ಹರಾಜು ಬೆಲೆಯನ್ನು ನಿಗದಿಗೊಳಿಸಿತು. ಸೊಸೈಟೆ ಜನರೇಲ್ ಗಾಗಿ ಹರಾಜುಯೊಡ್ಡಿದ್ದ BNP ಇದರಲ್ಲಿ ವಿಫಲವಾಯಿತು, ಆದರೆ ಪರಿಬಾಸ್ ಗಾಗಿ ಹರಾಜಿನಲ್ಲಿ ಯಶಸ್ಸು ಸಾಧಿಸುವುದರ ಜೊತೆಗೆ ಒಂದು ವರ್ಷದ ನಂತರ 22 ಮೇ 2000ದಲ್ಲಿ BNP ಹಾಗು ಪರಿಬಾಸ್ ನ ವಿಲೀನಕ್ಕೆ ದಾರಿ ಮಾಡಿಕೊಟ್ಟಿತು.
ಆಗಸ್ಟ್ 9 2007ರಲ್ಲಿ, BNP ಪರಿಬಾಸ್, ಸಬ್-ಪ್ರೈಮ್ (ಆಸ್ತಿ ವಹಿವಾಟಿನ)ಬಿಕ್ಕಟ್ಟಿನಲ್ಲಿ ಅದಕ್ಕೆಂದೇ ನಿಗದಿಯಾದ ಎರಡು ನಿಧಿಗಳನ್ನು ಮುಚ್ಚುವ ಮೂಲಕ ಅದರ ಪರಿಣಾಮಗಳನ್ನು ಗುರುತಿಸಿತು.ಆಗ ಅದು ಮೊದಲ ಪ್ರಮುಖ ಹಣಕಾಸಿನ ನಿಧಿವರ್ಗವೆನಿಸಿತು. ಈ ದಿನವನ್ನು ಸಾಧಾರಣವಾಗಿ ಸಾಲ ಬಿಕ್ಕಟ್ಟಿನ ಆರಂಭದ ದಿನವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಇದು ಬ್ಯಾಂಕಿನ ತ್ವರಿತ ಪ್ರತಿಕ್ರಿಯೆಯಿಂದಾಗಿದೆ.ಇದರಿಂದ UBSನಂತಹ ಇತರ ದೊಡ್ಡ ಯುರೋಪಿಯನ್ ಬ್ಯಾಂಕುಗಳಿಗೆ ಒದಗಿದ ಪರಿಸ್ಥಿತಿಯಿಂದ ಪಾರಾಗಲು ಸಾಧ್ಯವಾಯಿತು.<ref>http://www.telegraph.co.uk/finance/newsbysector/banksandfinance/7922946/BNP-Paribas-makes-first-asset-write-back-since-2007.html BNP Paribas ಬಿಕ್ಕಟ್ಟನ್ನು ಗುರುತಿಸಿದ ಮೊದಲ ಬ್ಯಾಂಕ್ </ref><ref>http://www.marketwatch.com/story/asian-stocks-may-fall-on-credit-woes-global-selloff?siteid=rss BNP Paribas ಸಾಲ ಬಿಕ್ಕಟ್ಟಿಗೆ ಸಂಬಂಧಿಸಿದ ನಿಧಿಯನ್ನು ಮುಚ್ಚಿಹಾಕಿತು </ref>
6 ಅಕ್ಟೋಬರ್ 2008ರಲ್ಲಿ, BNP, ತೊಂದರೆಯಲ್ಲಿದ್ದ ಬೆಲ್ಜಿಯಂನ ಫೋರ್ಟಿಸ್ ಬ್ಯಾಂಕ್ ನ 75%ರಷ್ಟು, ಲಕ್ಸಂಬೋರ್ಗ್ ನ 66%ನಷ್ಟು ಪಾಲುದಾರಿಕೆ ಚಟುವಟಿಕೆಗಳನ್ನು ವಶಪಡಿಸಿಕೊಂಡಿತು. ಇದಕ್ಕೆ ಪ್ರತಿಯಾಗಿ ಬೆಲ್ಜಿಯನ್ ಸರ್ಕಾರವು ಹೊಸ ತಂಡದ ಪ್ರಮುಖ ಪಾಲುದಾರನಾಯಿತು. ಫೋರ್ಟಿಸ್ ಷೇರುಗಳ ಮಾರಾಟವನ್ನು ಡಿಸೆಂಬರ್ 12ನೇ ತಾರೀಕು ಶುಕ್ರವಾರದಂದು<ref>http://www.lemonde.fr/la-crise-financiere/article/2008/10/06/bnp-Paribas -prend-le-controle-de-fortis-en-belgique-et-au-luxembourg_1103272_1101386.html</ref> ಕೋರ್ಟ್ ಆಫ್ ಅಪೀಲ್ ನ ಆದೇಶದ ಮೇರೆಗೆ ಅಲ್ಪಕಾಲದವರೆಗೆ ತಡೆಹಿಡಿಯಲಾಯಿತು<ref>http://www.demorgen.be/dm/nl/3324/Financiele-crisis/article/detail/551195/2008/12/14/Aandeel-Fortis-blijft-geschorst.dhtml</ref>
14 ಡಿಸೆಂಬರ್ 2008ರಲ್ಲಿ, BNP, ಮಾಡೋಫ್ಫ್ ವಂಚನೆಗೆ (ತೆರಿಗೆ ವಂಚನೆಯು ತನಿಖೆಯಿಂದ ಪತ್ತೆಯಾದದ್ದು)ಗುರಿಯಾಗಿ €350 ದಶಲಕ್ಷ ನಷ್ಟ ಎದುರಿಸಬೇಕಾಗಬಹುದೆಂದು ಪ್ರಕಟಿಸಿತು.<ref>http://www.lemonde.fr/la-crise-financiere/article/2008/12/14/affaire-madoff-bnp-Paribas-pourrait-perdre-350-millions-d-euros_1131107_1101386.html</ref>
ಜನವರಿ ತಿಂಗಳ ಕೊನೆಯಲ್ಲಿ, ಬೆಲ್ಜಿಯಂ ಸರ್ಕಾರ ಹಾಗು BNP, ಫೋರ್ಟಿಸ್ ಬ್ಯಾಂಕ್ ಬೆಲ್ಜಿಯಂನಲ್ಲಿ 75%ರಷ್ಟು ಪಾಲುದಾರಿಕೆಗೆ ಪ್ರಸ್ತಾಪಿಸಿತು. ಫೋರ್ಟಿಸ್ ಇನ್ಶೂರೆನ್ಸ್ ಬೆಲ್ಜಿಯಂ ಅನ್ನು ಫೋರ್ಟಿಸ್ ಹೋಲ್ಡಿಂಗ್ ನೊಂದಿಗೆ ಪುನಸ್ಸಂಘಟಿಸಲಾಯಿತು.
ಫೆಬ್ರವರಿ 11ರಂದು, ಫೋರ್ಟಿಸ್ ನ ಷೇರುದಾರರು, ಫೋರ್ಟಿಸ್ ಬ್ಯಾಂಕ್ ಬೆಲ್ಜಿಯಂ ಹಾಗು ಫೋರ್ಟಿಸ್ ಇನ್ಶೂರೆನ್ಸ್ ಬೆಲ್ಜಿಯಂ ಎರಡೂ BNP ಪರಿಬಾಸ್ ನ ಸ್ವತ್ತಾಗಬಾರದೆಂದು ನಿರ್ಧರಿಸಿದರು. ಆದಾಗ್ಯೂ ಸ್ವಾಧೀನತೆ ಪೂರ್ಣಗೊಂಡು BNP ಪರಿಬಾಸ್ 75%ನಷ್ಟು ಪಾಲುದಾರಿಕೆಯನ್ನು ವಶಪಡಿಸಿಕೊಂಡಿತು. ಜೊತೆಗೆ ಹೊಸ ಸಹಕಾರಿ ಸಂಸ್ಥೆಯನ್ನು BNP ಪರಿಬಾಸ್ ಫೋರ್ಟಿಸ್ ಎಂದು ಮರುನಾಮಕರಣ ಮಾಡಿತು. ಇದರ ನಂತರ ಕೇವಲ ಫೋರ್ಟಿಸ್ ಇನ್ಶೂರೆನ್ಸ್ ಇಂಟರ್ನ್ಯಾಷನಲ್ ಅನ್ನು ಫೋರ್ಟಿಸ್ ಹೋಲ್ಡಿಂಗ್ ನ ವಶಕ್ಕೆ ಒಪ್ಪಿಸಲಾಯಿತು. ಅಲ್ಲದೇ ಇದನ್ನು ಯೆಜೆಯಸ್ ಎಂದು ಮರುನಾಮಕರಣ ಮಾಡಲಾಯಿತು, ಈ ವಹಿವಾಟು ಸಂಪೂರ್ಣ ಯುರೋಪ್ ಹಾಗು ಏಶಿಯದಲ್ಲಿ ವಿಮೆಯನ್ನು ಹೊಂದಿತ್ತು. ಉಳಿದ ಫೋರ್ಟಿಸ್ ಬ್ಯಾಂಕ್ ನೆದರ್ಲ್ಯಾಂಡ್ಸ್ ಡಚ್ ಸರ್ಕಾರದ ಅಧೀನವಾಗುವುದರ ಜೊತೆಗೆ ABN AMRO ಹೆಸರಿನಡಿ ಈಗಾಗಲೇ ಒಡೆತನ ಹೊಂದಿದ್ದ ABN AMRO ಹಿಡುವಳಿ ಸಂಸ್ಥೆಯೊಂದಿಗೆ ವಿಲೀನವಾಯಿತು.
== ವ್ಯಾಪಾರ ಘಟಕಗಳು ==
=== ರಿಟೇಲ್ ಬ್ಯಾಂಕಿಂಗ್ (ಸಣ್ಣ ಪ್ರಮಾಣದ ಬ್ಯಾಂಕಿಂಗ್) ===
ರಿಟೇಲ್ ಬ್ಯಾಂಕಿಂಗ್, BNP ಪರಿಬಾಸ್ ನ ಅತ್ಯಂತ ದೊಡ್ಡ ವ್ಯಾಪಾರಿ ಘಟಕವಾಗಿದ್ದು 2009ರಲ್ಲಿ 45%ನಷ್ಟು ವರಮಾನ ಪ್ರಕಟಿಸಿತು. ಜೊತೆಗೆ ಬ್ಯಾಂಕ್ ತನ್ನ ಸಮೂಹದಲ್ಲಿದ್ದ 59%ನಷ್ಟು ನೌಕರರನ್ನು ನೇಮಕ ಮಾಡಿಕೊಂಡಿತ್ತು. ಇದು ತನ್ನ ಕಾರ್ಯ ನಿರ್ವಹಣೆಯನ್ನು ಯುರೋಪ್ ನಲ್ಲಿ ಕೇಂದ್ರೀಕರಿಸಿತ್ತು, ಅದರಲ್ಲೂ ವಿಶೇಷವಾಗಿ ಸಂಸ್ಥೆಯ ಮೂರು ದೇಶೀಯ ಮಾರುಕಟ್ಟೆಗಳಾದ [[ಫ್ರಾನ್ಸ್|ಫ್ರಾನ್ಸ್]], [[ಇಟಲಿ|ಇಟಲಿ]](ಅಲ್ಲಿ ಸಂಸ್ಥೆಯು ಬ್ಯಾಂಕ ನಾಜಿಯೋನೆಲ್ ಡೆಲ್ ಲವೊರೋ(BNL) ಹೆಸರಿನಡಿ ಕಾರ್ಯ ನಿರ್ವಹಿಸುತ್ತದೆ.), ಹಾಗು ಬೆಲ್ಜಿಯಂ (BNP ಪರಿಬಾಸ್ ಫೋರ್ಟಿಸ್). ಸಮೂಹವು ಒಂದು ಅಮೆರಿಕನ್ ಸಹಕಾರಿ ಸಂಸ್ಥೆಯಾದ ಬ್ಯಾಂಕ್ ವೆಸ್ಟ್ ನ(ಗೃಹಸಾಲ ಇತ್ಯಾದಿ ಗೃಹೋಪಯೋಗಿ ಸಾಲದ ನೆರವು ಒದಗಿಸುತ್ತೆ) ಒಡೆತನ ಹೊಂದಿದೆ, ಇದು ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ನಲ್ಲಿ ಬ್ಯಾಂಕ್ ಆಫ್ ದಿ ವೆಸ್ಟ್ ಹಾಗು ಹವಾಯಿಯಲ್ಲಿ ಫಸ್ಟ್ ಹವಾಯಿಯನ್ ಬ್ಯಾಂಕ್ ಎಂಬ ಹೆಸರಿನಡಿ ಕಾರ್ಯ ನಿರ್ವಹಿಸುತ್ತದೆ. BNP ಪರಿಬಾಸ್ ನ ಯುರೋಪಿಯನ್ ಮೆಡಿಟರೇನಿಯನ್ <span class="goog-gtc-fnr-highlight">ಸಮೂಹವೂ</span> ಸಹ ಪೋಲಂಡ್, ಟರ್ಕಿ, ಉಕ್ರೈನ್, ಹಾಗು ಉತ್ತರ ಆಫ್ರಿಕಾದಲ್ಲಿ ದೊಡ್ಡ ರಿಟೇಲ್ ಬ್ಯಾಂಕಿಂಗ್ ಚಟುವಟಿಕೆಯನ್ನು ನಡೆಸುತ್ತದೆ.
''ದಿ ಬ್ಯಾಂಕರ್'' ನಿಯತಕಾಲಿಕದ ಪ್ರಕಾರ BNP ಪರಿಬಾಸ್, ಒಟ್ಟಾರೆ ಆಸ್ತಿಗಳ ಆಧಾರದ ಮೇಲೆ ಯುರೋಜೋನ್ ನ(ಯುರೊ ಚಲಾವಣೆಯಲ್ಲಿರುವ ದೇಶಗಳ ವ್ಯಾಪ್ತಿಯಲ್ಲಿ) ಅತ್ಯಂತ ದೊಡ್ಡ ಬ್ಯಾಂಕ್ ಎನಿಸುವುದರ ಜೊತೆಗೆ ಮಾರುಕಟ್ಟೆ ಬಂಡವಾಳ ಹೊಂದಿರುವ ಎರಡನೇ ಅತ್ಯಂತ ದೊಡ್ಡ ಸಂಸ್ಥೆಯೆನಿಸಿದೆ. ಬ್ಯಾಂಕ್ ನ ಪ್ರಕಾರ 31 ಡಿಸೆಂಬರ್ 2009ರವರೆಗೂ 201,000ಕ್ಕೂ ಅಧಿಕ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ 80,000 ಜನರು ಯುರೋಪ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ 87 ರಾಷ್ಟ್ರಗಳಲ್ಲಿ ತನ್ನ ಶಾಖೆಗಳನ್ನು ಇದು ನಡೆಸುತ್ತಿದೆ.
=====ದೇಶೀಯ ಮಾರುಕಟ್ಟೆ=====
*ಫ್ರಾನ್ಸ್: BNP ಪರಿಬಾಸ್, 2,200 ಶಾಖೆಗಳು ಹಾಗು 3,200ಕ್ಕೂ ಅಧಿಕ ಏಟಿಎಂ ಯಂತ್ರಗಳೊಂದಿಗೆ ಫ್ರಾನ್ಸ್ ನ ಅತ್ಯಂತ ದೊಡ್ಡ ರಿಟೇಲ್ ಬ್ಯಾಂಕಿಂಗ್ ಜಾಲ-ವ್ಯವಸ್ಥೆಗಳನ್ನು ನಡೆಸುತ್ತದೆ. ಕೇವಲ ಪ್ಯಾರಿಸ್ ನಲ್ಲೇ ಬ್ಯಾಂಕ್ ತನ್ನ 187 ಏಜೆನ್ಸಿಗಳನ್ನು ಹೊಂದಿದೆ.<ref>[http://www.vb.com/bnp-paribas/paris1.htm ಪ್ಯಾರಿಸ್ ನಲ್ಲಿರುವ BNP ಪರಿಬಾಸ್ ಏಜೆನ್ಸಿಗಳ ಫೋಟೋ ಗ್ಯಾಲರಿ] </ref> BNP ಪರಿಬಾಸ್ ಆರು ದಶಲಕ್ಷಕ್ಕೂ ಅಧಿಕ ಫ್ರೆಂಚ್ ಕುಟುಂಬಗಳಿಗೆ ಹಾಗು 60,000 ಸಂಘಟಿತ, ಕಾರ್ಪೊರೇಟ್ ಗ್ರಾಹಕರಿಗೆ ತನ್ನ ಸೇವೆ ಒದಗಿಸುತ್ತದೆ. 2009ರಲ್ಲಿ ದಿ ಫ್ರೆಂಚ್ ರಿಟೇಲ್ ಬ್ಯಾಂಕಿಂಗ್ ಘಟಕವು(FRB) €6.1 ಶತಕೋಟಿ (ಒಟ್ಟಾರೆ ಸಮೂಹದ 15.2%ರಷ್ಟು) ವರಮಾನವನ್ನು, €1.5 ಶತಕೋಟಿ(ಒಟ್ಟಾರೆ ಸಮೂಹದ 15%ನಷ್ಟು) ಆದಾಯವನ್ನು, ಹಾಗು 31,000 ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದೆ. (ಒಟ್ಟಾರೆ ಸಮೂಹದ ಸಿಬ್ಬಂದಿಯಲ್ಲಿ 15.4%ನಷ್ಟು)<ref name="Annual Registration Document 2009"></ref>
*ಇಟಲಿ: 2006ರಲ್ಲಿ BNP ಪರಿಬಾಸ್ ಬಾಂಕಾ ಬಾಂಕಾ ನಾಜಿಯೋನೆಲ್ ಡೆಲ್ ಲವೊರೋ(BNL)ವನ್ನು ಖರೀದಿಸಿತು, ಇದು ಅಂದಿಗೆ ಇಟಲಿಯ ಆರನೇ ಅತ್ಯಂತ ದೊಡ್ಡ ಬ್ಯಾಂಕ್ ಎನಿಸಿತ್ತು. 2009ರಲ್ಲಿ, BNL ಇಟಲಿಯಲ್ಲಿ 810 ಶಾಖೆಗಳನ್ನು, 2.5 ದಶಲಕ್ಷ ವೈಯಕ್ತಿಕ ಗ್ರಾಹಕರು, ಹಾಗು 150,000ಕ್ಕೂ ಅಧಿಕ ಸಂಘಟಿತ (ಕಾರ್ಪೊರೇಟ್)ಗ್ರಾಹಕರನ್ನು ಹೊಂದಿತ್ತು. ಇದು €2.9 ಶತಕೋಟಿ (ತೆರಿಗೆ-ವೆಚ್ಚಗಳ ಮುಂಚಿನ) ವರಮಾನ(ಒಟ್ಟು ಸಮೂಹದ 7.2%ರಷ್ಟು) ಹಾಗು €540 ಶತಕೋಟಿ ನಿವ್ವಳ ಆದಾಯವನ್ನು(ಒಟ್ಟಾರೆ ಸಮೂಹದ 9.3%ರಷ್ಟು), ಹಾಗು ಸುಮಾರು 13,000 ನೌಕರರನ್ನು ನೇಮಕ ಮಾಡಿಕೊಂಡಿದೆ.(ಒಟ್ಟಾರೆ ಸಮೂಹದ 6.5%ರಷ್ಟು)<ref name="Annual Registration Document 2009"></ref>
*ಬೆಲ್ಜಿಯಂ: BNP ಪರಿಬಾಸ್, 2009ರಲ್ಲಿ ಬೆಲ್ಜಿಯನ್ ಲೆಂಡರ್ ಬ್ಯಾಂಕ್ ವಹಿವಾಟನ್ನು ಪಡೆದುಕೊಳ್ಳುವುದರೊಂದಿಗೆ, ಫೋರ್ಟಿಸ್ ಬ್ಯಾಂಕ್ ನ ರಿಟೇಲ್ ಬ್ಯಾಂಕಿಂಗ್ ಆಸ್ತಿಗಳನ್ನೂ ಸ್ವಾಧೀನಕ್ಕೆ ತೆಗೆದುಕೊಂಡಿತು. ಈ ವಹಿವಾಟು ಪೋಲಂಡ್ ಹಾಗು ಟರ್ಕಿಯಲ್ಲಿದ್ದ ಫೋರ್ಟಿಸ್ ನ ಶಾಖಾ-ಅಂಗ ಸಂಸ್ಥೆಗಳನ್ನೂ ಒಳಗೊಂಡಿತ್ತು, ಇದು ಈಗ "ಯುರೋಪ್ ಮೆಡಿಟರೇನಿಯನ್" ವಿಭಾಗದಡಿ ಕೆಲಸ ಮಾಡುತ್ತಿದೆ.
=====ಅಮೆರಿಕಾ ಸಂಯುಕ್ತ ಸಂಸ್ಥಾನ=====
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, BNP ಪರಿಬಾಸ್ ಬ್ಯಾಂಕ್ ವೆಸ್ಟ್ ರಿಟೇಲ್ ಬ್ಯಾಂಕಿಂಗ್ ನ ಇತರೆ ಸಹ ಸಂಸ್ಥೆಗಳಾದ ಬ್ಯಾಂಕ್ ಆಫ್ ವೆಸ್ಟ್ ಹಾಗು ಫಸ್ಟ್ ಹವಾಯಿಯನ್ ಬ್ಯಾಂಕ್ ಗಳ ಒಡೆತನವನ್ನೂ ಹೊಂದಿದೆ. ಬ್ಯಾಂಕ್ ಆಫ್ ವೆಸ್ಟ್, ಪಶ್ಚಿಮ US ರಾಜ್ಯಗಳ 19 ಶಾಖೆಗಳಲ್ಲಿ ತನ್ನ ಕಾರ್ಯಚಟುವಟಿಕೆ ನಿರ್ವಹಿಸುತ್ತದೆ. (ಆಸ್ತಿಗಳ ಆಧಾರದ ಮೇಲೆ ಅಲ್ಲಿ ಇದನ್ನು ಏಳನೇ ಅತ್ಯಂತ ದೊಡ್ಡ ಬ್ಯಾಂಕ್ ಎಂದು ಶ್ರೇಣೀಕರಿಸಲಾಗಿದೆ), ಫಸ್ಟ್ ಹವಾಯಿಯನ್ [[ಹವಾಯಿ|ಹವಾಯಿ]]ಯ ಪ್ರಮುಖ ಬ್ಯಾಂಕ್ ಆಗಿದ್ದು ಠೇವಣಿ ವಿಭಾಗದಲ್ಲಿ 40% ಮಾರುಕಟ್ಟೆ ಪಾಲನ್ನು ಹೊಂದಿದೆ. ಒಟ್ಟಾರೆಯಾಗಿ ಎರಡೂ ಬ್ಯಾಂಕುಗಳು 710 ಶಾಖೆಗಳಲ್ಲಿ, ಐದು ದಶಲಕ್ಷ ಗ್ರಾಹಕರಿಗೆ ತಮ್ಮ ಸೇವೆ ಒದಗಿಸುತ್ತವೆ.
ಎರಡೂ ಬ್ಯಾಂಕುಗಳನ್ನು 1998ರಲ್ಲಿ ಬ್ಯಾಂಕ್ ವೆಸ್ಟ ನೊಂದಿಗೆ ವಿಲೀನಗೊಳಿಸಲಾಯಿತು. ನಂತರ BNP ಪರಿಬಾಸ್ ಈ ಸಂಘಟಿತ ಸಂಸ್ಥೆಗಳ ಅಸ್ತಿತ್ವದ ಮೇಲೆ 2001ರಲ್ಲಿ ಸಂಪೂರ್ಣ ನಿಯಂತ್ರಣಾಧಿಕಾರ ಪಡೆದುಕೊಂಡಿತು.
ಸಮೂಹವು, ಕಡಲ ತೀರದ ಹಾಗು ಮನೋರಂಜನಾ ಚಟುವಟಿಕೆಗಳಿಗೆ ಮೀಸಲಾಗಿರುವ ವಾಹನಗಳಿಗೆ, ಚರ್ಚ್ ಗೆ ಹಾಗು ಕೃಷಿವ್ಯಾಪಾರದಂತಹ ಮಹತ್ವದ ಸ್ಥಾನವುಳ್ಳ ಮಾರುಕಟ್ಟೆಗಳಿಗೆ ಸಾಲ ನೀಡುವ ಮೂಲಕ ಆ ಆಯಕಟ್ಟಿನ ಸ್ಥಾನದಲ್ಲಿ ತನ್ನ ಬಲವಾದ ಛಾಪು ಮೂಡಿಸಿದೆ. 2009ರಲ್ಲಿ ಬ್ಯಾಂಕ್ ವೆಸ್ಟ್ €2.1 ಶತಕೋಟಿ ವರಮಾನ ಹೊಂದಿತ್ತು. (ಒಟ್ಟಾರೆ ಸಮೂಹದ 5.2%ರಷ್ಟು), ಹಾಗು 11,200 ನೌಕರರನ್ನು ನೇಮಕ ಮಾಡಿಕೊಂಡಿತ್ತು. (ಒಟ್ಟಾರೆ ಸಮೂಹದಿಂದ 5.5%ರಷ್ಟು ನೌಕರರ ನೇಮಕಾತಿ).<ref name="Annual Registration Document 2009"></ref> ಬ್ಯಾಂಕ್ ವೆಸ್ಟ್, 2009ರಲ್ಲಿ €223 ದಶಲಕ್ಷದಷ್ಟು ನಷ್ಟ ಅನುಭವಿಸಿತು, ಇದಕ್ಕೆ ಮುಖ್ಯ ಕಾರಣವೆಂದರೆ [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯ]], [[ಆರಿಜೋನ|ಅರಿಜೋನ]], ಹಾಗು ನೆವಾಡದಲ್ಲಿ ಸಂಭವಿಸಿದ [[ಅಮೇರಿಕದ ಭೋಗ್ಯ ಬಿಕ್ಕಟ್ಟು|ಆಸ್ತಿವಹಿವಾಟಿನ ಒತ್ತೆ ಬಿಕ್ಕಟ್ಟು]].
=====ಉದಯೋನ್ಮುಖ ಮಾರುಕಟ್ಟೆಗಳು=====
2009ರಲ್ಲಿ, BNP ಪರಿಬಾಸ್ ತನ್ನ ರಿಟೇಲ್ ಬ್ಯಾಂಕಿಂಗ್ ವಿಭಾಗಗಳನ್ನು ಮರುಸಂಘಟಿಸಿ, ಅದರ "ಉದಯೋನ್ಮುಖ ಮಾರುಕಟ್ಟೆ" ಸಮೂಹವನ್ನು "ಯುರೋಪ್ ಮೆಡಿಟರೇನಿಯನ್ ಸಮೂಹವೆಂದು ಮರುನಾಮಕರಣ ಮಾಡಿತು. ಫೋರ್ಟಿಸ್ ಬ್ಯಾಂಕ್ ನ ಪೋಲಿಷ್ ಹಾಗು ಟರ್ಕಿಷ್ ಅಂಗ ಸಂಸ್ಥೆ,ಸಂಘಗಳು ಏಕೀಕರಣಗೊಂಡ ನಂತರ, BNP ಪರಿಬಾಸ್ ನ ಉದಯೋನ್ಮುಖ ಮಾರುಕಟ್ಟೆ ಚಟುವಟಿಕೆಗಳು ಬಹುತೇಕ [[ಪೂರ್ವ ಯುರೋಪ್|ಪೂರ್ವ ಯುರೋಪ್]] ಹಾಗು ಮೆಡಿಟರೇನಿಯನ್ ಜಲಾನಯನ ಭೂಮಿಯ ದಕ್ಷಿಣಾರ್ಧ ಭಾಗದಲ್ಲಿ ಕೇಂದ್ರೀಕೃತಗೊಂಡ ನಂತರ ಈ ಬದಲಾವಣೆ ಮಾಡಲಾಯಿತು.
EM ಸಮೂಹದಲ್ಲಿ:
*ಉಕ್ರೈನ್: ಉಕ್ರ್ಸಿಬ್ಬ್ಯಾಂಕ್ ಉಕ್ರೈನ್ ನ ಮೂರನೇ ಅತ್ಯಂತ ದೊಡ್ಡ ಸಾಲ ನೀಡಿಕೆ ಸಂಸ್ಥೆ.
*ಟರ್ಕಿ: ಟರ್ಕ್ ಎಕೊನೋಮಿ ಬಾಂಕಾಸಿ,
*ಮೊರಾಕೊ: BMCI ಹಾಗು
*ಲಿಬ್ಯಾ: ಸಹಾರಾ ಬ್ಯಾಂಕ್
*ಪೋಲಂಡ್: BNP ಪರಿಬಾಸ್ ಫೋರ್ಟಿಸ್ ಪೋಲಂಡ್
*ಈಜಿಪ್ಟ್: BNP ಪರಿಬಾಸ್ ಈಜಿಪ್ಟ್ ಸಹ ಸೇರಿವೆ
BNP ಪರಿಬಾಸ್, ಗ್ಲೋಬಲ್ ATM ಅಲೈಯನ್ಸ್ ನ ಸದಸ್ಯನಾಗಿದೆ. ಇದು ಹಲವಾರು ಪ್ರಮುಖ ಅಂತರರಾಷ್ಟ್ರೀಯ ಬ್ಯಾಂಕುಗಳ ಒಂದು ಜಂಟಿ ಸಹಯೋಗವಾಗಿದೆ. ಇದು ತನ್ನ ಗ್ರಾಹಕರಿಗೆ ತಮ್ಮ ATM ಕಾರ್ಡನ್ನು ಅಥವಾ ಚೆಕ್ ಕಾರ್ಡನ್ನು ಗ್ಲೋಬಲ್ ATM ಅಲೈಯನ್ಸ್ ನೊಳಗಿರುವ ಯಾವುದೇ ಬ್ಯಾಂಕ್ ನಲ್ಲಿ ಬಳಸುವ ಅವಕಾಶ ನೀಡುತ್ತದೆ. ಜೊತೆಗೆ ಗ್ರಾಹಕರು ವಿದೇಶದಲ್ಲಿರುವಾಗ ಯಾವುದೇ ATM ಶುಲ್ಕ ವಿಧಿಸುವುದಿಲ್ಲ. ಪಾಲ್ಗೊಳ್ಳುವ ಇತರ ಬ್ಯಾಂಕುಗಳೆಂದರೆ ಬಾರ್ಕ್ಲೇಸ್ ([[ಯುನೈಟೆಡ್ ಕಿಂಗ್‍ಡಮ್|ಯುನೈಟೆಡ್ ಕಿಂಗ್ಡಂ]]), ಬ್ಯಾಂಕ್ ಆಫ್ ಅಮೆರಿಕ([[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್]]), ಚೀನಾ ಕನ್ ಸ್ಟ್ರಕ್ಷನ್ ಬ್ಯಾಂಕ್ ([[ಚೀನಾ|ಚೀನಾ]]), ಡಾಷ್ ಬ್ಯಾಂಕ್ ([[ಜರ್ಮನಿ|ಜರ್ಮನಿ]]), ಸಂಟಂದರ್ ಸರ್ಫಿನ್([[ಮೆಕ್ಸಿಕೋ|ಮೆಕ್ಸಿಕೋ]]), ಉಕ್ರ್ಸಿಬ್ಬ್ಯಾಂಕ್ ([[ಯುಕ್ರೇನ್|ಉಕ್ರೈನ್]]). ಸ್ಕಾಟಿಯಬ್ಯಾಂಕ್([[ಕೆನಡಾ|ಕೆನಡಾ]]) ಹಾಗು ವೆಸ್ಟ್ಪಾಕ್([[ಆಸ್ಟ್ರೇಲಿಯ|ಆಸ್ಟ್ರೇಲಿಯ]] ಹಾಗು [[ನ್ಯೂ ಜೀಲ್ಯಾಂಡ್|ನ್ಯೂಜಿಲ್ಯಾಂಡ್]]).<ref>[http://www.atmmarketplace.com/article.php?id=1886 "ಐದು ದೊಡ್ಡ ಬ್ಯಾಂಕುಗಳು ಗ್ಲೋಬಲ್ ATM ಅಲೈಯನ್ಸ್ ನ್ನು ರೂಪಿಸುತ್ತವೆ"], ATMmarketplace.com.
9 ಜನವರಿ 2002. 22 ಜೂನ್ 2007ರಲ್ಲಿ ಸಂಕಲನಗೊಂಡಿದೆ.</ref>
===ಸಂಘಟಿತ ಹಾಗು ಬಂಡವಾಳ ಹೂಡಿಕೆ ಬ್ಯಾಂಕಿಂಗ್ ===
{{Main|BNP Paribas CIB}}
[[File:BNP_Paribas_London_Trading_Floor.jpg|thumb|500|ಲಂಡನ್ ನಲ್ಲಿರುವ BNP ಪರಿಬಾಸ್ ನ ಒಂದು ವ್ಯಾಪಾರ ಪ್ರದೇಶ.]]
ತನ್ನ ರಿಟೇಲ್ ಚಟುವಟಿಕೆಗಳ ಜೊತೆಯಲ್ಲಿ, BNP ಪರಿಬಾಸ್, ತನ್ನ ಸಂಘಟಿತ & ಬಂಡವಾಳ ಹೂಡಿಕೆ ಬ್ಯಾಂಕಿಂಗ್ ಘಟಕದ ಮೂಲಕ ಪ್ರಮುಖ ಜಾಗತಿಕ ಮಟ್ಟದ ಬಂಡವಾಳ ಹೂಡಿಕೆ ಬ್ಯಾಂಕ್ ಸಹ ಆಗಿದೆ. ಎಲ್ಲ ಬಂಡವಾಳ ಹೂಡಿಕೆ ಬ್ಯಾಂಕಿಂಗ್ ಮಾರುಕಟ್ಟೆಗಳಲ್ಲಿ ಅಸ್ತಿತ್ವದಲ್ಲಿದ್ದರೂ ಸಹ, ಇದನ್ನು ನಿವ್ವಳ ಬೆಲೆ ಜನ್ಯಗಳು, ವ್ಯವಸ್ಥಿತ ವರಮಾನ, ಹಾಗು ಯೋಜನಾ ಹಣಕಾಸಿನ ಒಂದು ಜಾಗತಿಕ ಮಟ್ಟದ ಮಾರ್ಗದರ್ಶಕವೆಂದು ಗುರುತಿಸಲಾಗುತ್ತದೆ.
ಸಂಸ್ಥೆಯು ಆರು ಪ್ರಮುಖ ವ್ಯಾಪಾರ ಕ್ಷೇತ್ರಗಳಾಗಿ ವಿಂಗಡನೆಯಾಗಿದೆ:
*'''ಸ್ಥಿರ ಆದಾಯ''' : BNP ಪರಿಬಾಸ್ ನ ಸ್ಥಿರ ಆದಾಯದ ತಂಡವು, ಸಂಸ್ಥೆಗಳು ವಿದೇಶಿ ವಿನಿಮಯ, ಬಡ್ಡಿ ದರ, ಹಾಗು ಸಾಲ ನೀಡಿಕೆಯ ಅಪಾಯಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಪ್ರಮುಖವಾಗಿ ಬಡ್ಡಿ ದರ ಹಾಗು ವಿದೇಶಿ ವಿನಿಮಯಗಳು, ಹಾಗು ಸಾಲ [[ಉತ್ಪನ್ನ (ಹಣಕಾಸು)|ಜನ್ಯ]]ಗಳಂತಹ ಉತ್ಪತ್ತಿಯ ಮೂಲಕ ವ್ಯವಸ್ಥಿತಗೊಳಿಸುವುದು ಹಾಗು ಅದನ್ನು ಮಾರಾಟ ಮಾಡುವುದು. ಇದು ಗ್ರಾಹಕರ ಪರವಾಗಿ ಅಥವಾ ತನ್ನದೇ ಸ್ವಾಮ್ಯದ ಲೆಕ್ಕಾಚಾರದ ವಿಚಾರವಾಗಿ ಈ ಮಾರುಕಟ್ಟೆಗಳಲ್ಲಿಯೂ ಸಹ ವಹಿವಾಟು ನಡೆಸುತ್ತದೆ.
*'''ನಿವ್ವಳ ಬೆಲೆ & ಮೂಲಗಳು''' BNP ಪರಿಬಾಸ್ ನ ನಿವ್ವಳ ಬೆಲೆ & ಮೂಲಗಳ ಸಮೂಹವು, ಸಂಸ್ಥೆಗಳು ನಿವ್ವಳ ಬೆಲೆ ಮೂಲಗಳಾದ ಹಣಕೊಟ್ಟು ಖರೀದಿಸಿದ ಹಕ್ಕುಗಳು,(ಶೇರುಗಳು) ಭವಿಷ್ಯದ ಸರಕುಗಳು ಮತ್ತು ಸಾಲಪತ್ರಗಳು, ಹಾಗು ವಿನಿಮಯಗಳು ಹಾಗು ಅತ್ಯಂತ ಸಂಕೀರ್ಣ, ಗ್ರಾಹಕರ ಆದೇಶಾನುಸಾರದ ಪರಿಹಾರಗಳು. ಉದಾಹರಣೆಗೆ ವ್ಯವಸ್ಥಿತ ಉತ್ಪನ್ನಗಳ ವಿಚಾರದಲ್ಲಿ ಎದುರಿಸುವ ಅಪಾಯಗಳು ಹಾಗು [[ಬಂಡವಾಳ ಪಟ್ಟಿ|ಬಂಡವಾಳಗಳ ಪಟ್ಟಿ]]ಗಳನ್ನು ನಿರ್ವಹಿಸಲು ಸಹಾಯ ಮಾಡುತ್ತವೆ. ಇದು ಗ್ರಾಹಕರ ಪರವಾಗಿ ಅಥವಾ ತನ್ನದೇ ಸ್ವಾಮ್ಯದ ಲೆಕ್ಕಾಚಾರದ ವಿಚಾರವಾಗಿ ಈ ಮಾರುಕಟ್ಟೆಗಳಲ್ಲಿಯೂ ಸಹ ವಹಿವಾಟನ್ನು ನಡೆಸುತ್ತದೆ.
*ಸರಕುಗಳ ಮೂಲಗಳ ಆದಾಯ ಉಸ್ತುವಾರಿ ನೋಡಿಕೊಳ್ಳುವ ಸಮೂಹ;'''ಸರಕು ಜನ್ಯಗಳು''' : BNP ಪರಿಬಾಸ್ ನ ಸರಕು ಜನ್ಯ ತಂಡವು, ಗ್ರಾಹಕರಿಗೆ, ಸರಕಿನಿಂದ ಉಂಟಾಗುವ ನಷ್ಟಕ್ಕೆ ಗುರಿಯಾಗುವುದನ್ನು ಸಂಘಟಿತಗೊಳಿಸುವ ಹಾಗು ಭವಿಷ್ಯದ,ಮುಮ್ಮಾರಿಕೆಯ ಸರಕುಗಳು ಹಾಗು OTC ಸರಕು ವಿನಿಮಯಗಳ ಮೂಲಕ ತಡೆಹಿಡಿಯುತ್ತದೆ. ಇದು ಗ್ರಾಹಕರ ಪರವಾಗಿ ಅಥವಾ ತನ್ನದೇ ಸ್ವಾಮ್ಯದ ಲೆಕ್ಕಾಚಾರದ ವಿಚಾರವಾಗಿ ಈ ಮಾರುಕಟ್ಟೆಗಳಲ್ಲಿಯೂ ಸಹ ವಹಿವಾಟನ್ನು ಮಾಡುತ್ತದೆ.
*'''ಸಂಘಟಿತ ಹಣಕಾಸು''' BNP ಪರಿಬಾಸ್ ನ ಸಂಘಟಿತ(ಕಾರ್ಪೊರೇಟ್) ಹಣಕಾಸು ತಂಡವು, ಸಮೂಹದ ಸಾಂಪ್ರದಾಯಿಕ ಬಂಡವಾಳ ಹೂಡಿಕೆಯ ಬ್ಯಾಂಕಿಂಗ್ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತದೆ, ಇದರಲ್ಲಿ ವಿಲೀನಗಳು ಹಾಗು ಸ್ವಾಧೀನತೆಗಳ ಸಲಹಾ ಸಮಿತಿ, ಹಾಗು ನಿವ್ವಳ ಬೆಲೆ ಏರಿಕೆಯ ನಿರ್ವಹಣೆಗಳಾದ ಇನಿಶಿಯಲ್ ಪಬ್ಲಿಕ್ ಆಫರಿಂಗ್ಸ್(IPOs),(ಆರಂಭಿಕ ಸಾರ್ವಜನಿಕವಾಗಿ ಶೇರು ಬಿಡುಗಡೆ) ಹಕ್ಕು ವಿಷಯಗಳು, ಹಾಗು ಪರಿವರ್ತನೀಯ ಬಾಂಡ್ ಗಳಿಗೆ ಸಂಬಂಧಿಸಿದ ವಿಷಯಗಳು ಸೇರಿವೆ.
*'''ವ್ಯವಸ್ಥಿತ ಹಣಕಾಸು''' BNP ಪರಿಬಾಸ್ ನ ವ್ಯವಸ್ಥಿತ ಹಣಕಾಸಿನ ರಚನಾ ತಂಡವು ಗ್ರಾಹಕರಿಗೆ, ಯೋಜನಾ ಹಣಕಾಸು ನಿವಾರಣೋಪಾಯಗಳು, ರಫ್ತಿಗಾಗಿ ನೀಡಲಾಗುವ ಹಣಕಾಸು, ಸಿಂಡಿಕೇಟ್ ಲೋನುಗಳು, ಹಾಗು ಸ್ವಾಧೀನತೆಗಳು ಹಾಗು ಖರೀದಿ ಸಾಮರ್ಥ್ಯ ತಂಡಗಳ ಸ್ವಾಮ್ಯಸ್ವಾಧೀನತೆಗಳಿಗೆ ಹಣಕಾಸು ಪೂರೈಕೆ.
*'''ಸಂಘಟಿತ & ನಿರ್ವಹಣಾ ತಂಡ:''' BNP ಪರಿಬಾಸ್ ನ ಸಂಘಟಿತ ಹಾಗು ನಿರ್ವಹಣಾ ತಂಡವು, ಗ್ರಾಹಕರಿಗೆ ಸರಳವಾದ ಫ್ಲೋ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತವೆ, ಇದರಲ್ಲಿ ವ್ಯಾಪಾರ ಹಣಕಾಸು, ಅಂತರರಾಷ್ಟ್ರೀಯ ಹಣಕಾಸು ನಿರ್ವಹಣೆ, ಹಾಗು ಮೂಲಭೂತವಾಗಿ ನಷ್ಟದ ವಿರುದ್ಧ ರಕ್ಷಣಾ ಪರಿಹಾರೋಪಾಯಗಳೂ ಸೇರಿವೆ.
ಕಳೆದ 2009ರಲ್ಲಿ BNP CIB €12.2 ಶತಕೋಟಿ ವರಮಾನ ಗಳಿಸಿತು. (ಒಟ್ಟಾರೆ ಸಮೂಹದ 30%ನಷ್ಟು), 4.4 ಶತಕೋಟಿ ತೆರಿಗೆ ಪಾವತಿ ಪೂರ್ವ ಆದಾಯ (ಒಟ್ಟಾರೆ ಸಮೂಹದ 48.9%ನಷ್ಟು), ಹಾಗು 18,000 ಸಿಬ್ಬಂದಿಯನ್ನು ನೇಮಕಮಾಡಿಕೊಂಡಿತು. (ಒಟ್ಟಾರೆ ಸಮೂಹದಲ್ಲಿ 9.0%ನಷ್ಟು)<ref name="Annual Registration Document 2009"></ref>
===ಇನ್ವೆಸ್ಟ್ಮೆಂಟ್ ಸಲ್ಯೂಷನ್ಸ್ (ಬಂಡವಾಳ ಹೂಡಿಕೆಗಾಗಿ ಪರಿಹಾರೋಪಾಯಗಳು)===
BNP ಪರಿಬಾಸ್ ನ "ಇನ್ವೆಸ್ಟ್ಮೆಂಟ್ ಸಲ್ಯೂಷನ್ಸ್" ಘಟಕವು ತನ್ನ ಆಸ್ತಿ-ವಹಿವಾಟುಗಳ, ಸ್ವತ್ತಿನ ನಿರ್ವಹಣೆ, ರಕ್ಷಣಾ ಬ್ಯಾಂಕಿಂಗ್, ರಿಯಲ್ ಎಸ್ಟೇಟ್, [[ವಿಮೆ|ವಿಮೆ]], ಆನಲೈನ್ ದಳ್ಳಾಳಿ ಚಟುವಟಿಕೆ, "ವೈಯಕ್ತಿಕ ಬಂಡವಾಳ ಹೂಡಿಕೆದಾರರು" ಹಾಗು ಸಂಪತ್ತಿನ ನಿರ್ವಹಣಾ ಚಟುವಟಿಕೆಗಳನ್ನು ಒಳಗೊಂಡಿದೆ.<ref name="Annual Registration Document 2009"></ref>
11 ಜೂನ್ 2008ರಲ್ಲಿ, BNP ಪರಿಬಾಸ್, ಬ್ಯಾಂಕ್ ಆಫ್ ಅಮೆರಿಕ ಸೆಕ್ಯೂರಿಟೀಸ್ ನ ಪ್ರೈಮ್ ಬ್ರೋಕರೇಜ್ ಸರ್ವೀಸಸ್ ವಿಭಾಗವನ್ನು ಖರೀದಿಸಲು ಅಂತಿಮ ಹಂತದ ಕರಾರಿಗೆ ಔಪಚಾರಿಕವಾಗಿ ಸಹಿ ಹಾಕಿತು. ಈ ಮಾರಾಟ ಪ್ರಕ್ರಿಯೆ, 2008ರ ಮೂರನೇ ತ್ರೈಮಾಸಿಕದಲ್ಲಿ ಸಂಪೂರ್ಣಗೊಂಡಿತೆಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ.
*'''ಸ್ವತ್ತಿನ ನಿರ್ವಹಣೆ:''' BNP ಪರಿಬಾಸ್ ನ ಸ್ವತ್ತು ನಿರ್ವಹಣಾ ಚಟುವಟಿಕೆಗಳನ್ನು '''BNP ಪರಿಬಾಸ್ ಇನ್ವೆಸ್ಟ್ಮೆಂಟ್ ಪಾರ್ಟ್ನರ್ಸ್''' ಎಂದು ವಿಂಗಡಣೆ ಮಾಡಲಾಗಿದೆ. ಕಳೆದ 2009ರಲ್ಲಿ BNP ಪರಿಬಾಸ್ ಐಪಿ 70 ರಾಷ್ಟ್ರಗಳಲ್ಲಿ 2,400 ಸಿಬ್ಬಂದಿವರ್ಗ ಹೊಂದಿತ್ತು. ಜೊತೆಗೆ ತನ್ನ ನಿರ್ವಹಣೆಯಡಿಯಲ್ಲಿ 518 ಶತಕೋಟಿ ಆಸ್ತಿಗಳನ್ನು ಹೊಂದಿತ್ತು.<ref name="Annual Registration Document 2009"></ref>
== 2005ರಲ್ಲಿ ನಡೆದ ಘಟನೆಗಳು ==
23 ಸೆಪ್ಟೆಂಬರ್ 2005ರಲ್ಲಿ, BNP ಪರಿಬಾಸ್, ಚೀನಾದ ನಾನ್ಜಿಂಗ್ ಸಿಟಿ ಕಮರ್ಷಿಯಲ್ ಬ್ಯಾಂಕ್ ನಿಂದ ಶೇಖಡಾ 20ರಷ್ಟು ಪಾಲುದಾರಿಕೆ ಪಡೆಯಲು ತಯಾರಿ ನಡೆಸಿತೆಂದು ಚೀನಾದ ಅಧಿಕೃತ ಹಾಗು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದವು. "BNP ಮುಂದಿನ ತಿಂಗಳು ಅದರ ಹೂಡಿಕೆಯನ್ನು ಖರೀದಿಸಲು ನಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದೆ" ಎಂದು ನಾನ್ಜಿಂಗ್ ಸಿಟಿ ಕಮರ್ಷಿಯಲ್ ನ ಅಧಿಕಾರಿಯೊಬ್ಬರು AFPಗೆ ತಿಳಿಸಿದರು. ಶಾಂಘೈ ಮೂಲದ ''ಓರಿಯಂಟಲ್ ಮಾರ್ನಿಂಗ್ ಪೋಸ್ಟ್'' , BNP US$100 ದಶಲಕ್ಷ ನೀಡಲಿದೆಯೆಂದು ವರದಿ ಮಾಡಿತಾದರೂ, ಬ್ಯಾಂಕಿನ ಅಧಿಕಾರಿಯೊಬ್ಬರು ಈ ಸಂಖ್ಯೆಯು ತಪ್ಪಾದುದೆಂದು ಹೇಳುತ್ತಾರೆ. ಅವರು ಮತ್ತಷ್ಟು ಮಾಹಿತಿಯನ್ನು ಒದಗಿಸಲು ನಿರಾಕರಿಸುತ್ತಾರೆ. ಫ್ರೆಂಚ್ ದಿನಪತ್ರಿಕೆ ''ಲಾ ಟ್ರಿಬ್ಯೂನ್'' , ಆಗಸ್ಟ್ 2005ರಲ್ಲಿ BNP ಪರಿಬಾಸ್, ನಾಲ್ಕು ಚೈನೀಸ್ ಕಮರ್ಷಿಯಲ್ ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸಿದೆಯೆಂದು ವರದಿ ಮಾಡಿತು - ನಿಂಗ್ಬೋ, ವುಕ್ಸಿ, ನಾನ್ಜಿಂಗ್ ಹಾಗು ಸುಜ್ಹೌ- ಜೊತೆಗೆ ಇದು US$50–100 ದಶಲಕ್ಷ ಬಂಡವಾಳ ಹೂಡಲು ತಯಾರಾಗಿದೆಯೆಂದು ಹೇಳಿತು. "ನಾವು ವಿವಿಧ ಹಣಕಾಸು ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದೆವು, ಆದರೆ ಕೇವಲ BNP ಮಾತ್ರ ನಮ್ಮೆಡೆಗೆ ಒಲವು ತೋರಿತು. ನಾವು ಒಂದು ಒಪ್ಪಂದಕ್ಕೆ ಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ," ನಾನ್ಜಿಂಗ್ ಸಿಟಿ ಕಮರ್ಷಿಯಲ್ ಬ್ಯಾಂಕ್ ನ ಅಧಿಕಾರಿಯೊಬ್ಬರು ತಿಳಿಸುತ್ತಾರೆ. BNP ಪರಿಬಾಸ್ ಇದರ ಬಗ್ಗೆ ವಿವರಣೆ ನೀಡಲು ನಿರಾಕರಿಸಿತು.
ವಿಶ್ವ ಬ್ಯಾಂಕ್ ನ ಹೂಡಿಕೆಯ ಅಸ್ತ್ರವಾದ ಇಂಟರ್ನ್ಯಾಷನಲ್ ಫೈನಾಂಷಿಯಲ್ ಕಾರ್ಪೋರೇಶನ್, ಈಗಾಗಲೇ ನಾನ್ಜಿಂಗ್ ಸಿಟಿ ಕಮರ್ಷಿಯಲ್ ಬ್ಯಾಂಕ್ ನ ಶೇಖಡ 15ರಷ್ಟು ಒಡೆತನ ಹೊಂದಿತ್ತು, ಇದು ರಾಷ್ಟ್ರದ ದೇಶೀಯ(ಶೇರು) ಸ್ಟಾಕ್ ಮಾರುಕಟ್ಟೆಗಳ ಮೇಲೆ ನಿಯಂತ್ರಕ ಅನುಮತಿಯನ್ನು ಹೊಂದಿತ್ತು.
=== ಪ್ರಮುಖ ಪಾಲುದಾರರು ===
* ಫ್ರಾನ್ಸ್ (17%)<ref>
[http://www.ft.com/cms/s/0/587b82a6-23b9-11de-996a-00144feabdc0,dwp_uuid=86c92008-1c23-11dd-8bfc-000077b07658.html ಫ್ರೆಂಚ್ ಸರ್ಕಾರ BNPಯಲ್ಲಿ ಅತಿ ದೊಡ್ಡ ಬಂಡವಾಳ ಹೂಡಿಕೆದಾರನಾಗಿದೆ, FT.com]</ref>
* ಬೆಲ್ಜಿಯಂ(11.6%)
* AXA ವಿಮಾ ಸಂಸ್ಥೆ
* ಗ್ರಾಹಕರು
* ಉದ್ಯೋಗಿಗಳು
* ಜನರಲ್ ಮೆಡಿಟರೇನಿಯನ್ ಹೋಲ್ಡಿಂಗ್ಸ್
=== ಸಾಮಾಜಿಕ ಸಂಬಂಧ ===
1971ರಿಂದಲೂ, BNP ಪರಿಬಾಸ್ ರೋಲಂಡ್ ಗರ್ರೋಸ್ ಕ್ರೀಡಾಂಗಣದಲ್ಲಿ ನಡೆಯುವ [[ಫ್ರೆಂಚ್ ಮುಕ್ತ ಟೆನ್ನಿಸ್ ಪಂದ್ಯಾವಳಿ|ಫ್ರೆಂಚ್ ಓಪನ್]] ಟೆನ್ನಿಸ್ ಗೆ ಪ್ರಮುಖ ಪ್ರಾಯೋಜಕತ್ವ ವಹಿಸಿಕೊಳ್ಳುತ್ತಿದೆ.
=== ಮುಖ್ಯ ಸಹಕಾರಿ ಸಂಸ್ಥೆಗಳು ===
==== ರಿಟೇಲ್ ಬ್ಯಾಂಕಿಂಗ್ ====
* BNP ಪರಿಬಾಸ್ ಫ್ರಾನ್ಸ್ (2200ಕ್ಕೂ ಅಧಿಕ ಶಾಖೆಗಳು)
* ಬಾಂಕ್ಯೂ ಡೆ ಬ್ರೆಟಗ್ನೆ (ಫ್ರಾನ್ಸ್ - ಬ್ರಿಟನಿ)
* ಬ್ಯಾಂಕ್ ವೆಸ್ಟ್ (ಬ್ಯಾಂಕ್ ಆಫ್ ದಿ ವೆಸ್ಟ್ & USAನಲ್ಲಿ ಸ್ಥಾಪಿತವಾದ ಮೊದಲ ಹವಾಯಿಯನ್ ಬ್ಯಾಂಕ್ )
* BMCI ([[ಮೊರಾಕೊ|ಮೊರಾಕೊ]])
* BNP ಪರಿಬಾಸ್ ಈಜಿಪ್ಟ್ ([[ಈಜಿಪ್ಟ್|ಈಜಿಪ್ಟ್]])
* BNL (ಬಂಕಾ ನಾಜಿಯೊನೆಲ್ ಡೆಲ್ ಲವೊರೋ - [[ಇಟಲಿ|ಇಟಲಿ]])
* TEB (ಟರ್ಕ್ ಎಕೊನೋಮಿ ಬಂಕಾಸಿ) ([[ಟರ್ಕಿ|ಟರ್ಕಿ]])
* BNP ಪರಿಬಾಸ್ ಫೋರ್ಟಿಸ್ (ಬೆಲ್ಜಿಯಂ, [[ಜರ್ಮನಿ|ಜರ್ಮನಿ]], [[ಪೋಲೆಂಡ್|ಪೋಲಂಡ್]], [[ಟರ್ಕಿ|ಟರ್ಕಿ]])
* BGL SA (ಲಕ್ಸೆಂಬೊರ್ಗ್)
* ಸಹಾರಾ ಬ್ಯಾಂಕ್ ([[ಲಿಬ್ಯಾ|ಲಿಬ್ಯಾ]])
* ಉಕ್ರ್ಸಿಬ್ಬ್ಯಾಂಕ್ ([[ಯುಕ್ರೇನ್|ಉಕ್ರೈನ್]])
* BCI ಮೆರ್ ರೌಗ್ ದ್ಜಿಬೌಟಿ
* ಬಾಂಕ್ಯೂ ಡೆ ವಾಲ್ಲಿಸ್ ಎಟ್ ಫುಟುನ
==== ಇತರ ಸಹಕಾರಿ ಸಂಸ್ಥೆಗಳು ====
* BNPPCIB - BNP ಪರಿಬಾಸ್ ಕಾರ್ಪೋರೆಟ್ ಆಗಿ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್
* ಅಟಿಸ್ರಿಯಲ್ BNP ಪರಿಬಾಸ್ ರಿಯಲ್ ಎಸ್ಟೇಟ್ ಎಂದು ಮರುನಾಮಕರಣಗೊಂಡಿದೆ
* BNP ಪರಿಬಾಸ್ ಆರ್ಬಿಟ್ರೇಜ್
* BNP ಪರಿಬಾಸ್ ಅಶೂರೆನ್ಸಸ್ ಕಾರ್ಡಿಫ್, ಪಿನಾಕಲ್ ನೊಂದಿಗೆ
* BNP ಪರಿಬಾಸ್ ಅಸೆಟ್ ಮ್ಯಾನೇಜ್ಮೆಂಟ್
* BNP ಪರಿಬಾಸ್ ಪ್ರೈಮ್ ಬ್ರೋಕರೇಜ್
* BNP ಪರಿಬಾಸ್ ಲೀಸ್ ಗ್ರೂಪ್ <ref> http://bplg.com </ref> ಅರ್ವಲ್<ref>http://www.arval.com/eng/car-leasing/home/index.html</ref>, ಕಾರು ಗುತ್ತಿಗೆ ಹಾಗು ಆರ್ಟೆಜಿ ಯೊಂದಿಗೆ
* BNP ಪರಿಬಾಸ್ ರಿಯಲ್ ಎಸ್ಟೇಟ್
* BNP ಪರಿಬಾಸ್ ಸೆಕ್ಯೂರಿಟೀಸ್ ಸರ್ವೀಸಸ್
* BNP ಪರಿಬಾಸ್ ವೆಲ್ತ್ ಮ್ಯಾನೇಜ್ಮೆಂಟ್ ಇಸಿನ್ಗರ್ ಡೆ ಬ್ಯೂಫೋರ್ಟ್, BNP ಪರಿಬಾಸ್ ಪ್ರೈವೇಟ್ ಬ್ಯಾಂಕಿಂಗ್ ನೊಂದಿಗೆ
* ಸೆಟೆಲೆಮ್
* LaSer ಕೋಫಿನೋಗ ನೊಂದಿಗೆ
* ಕೋರ್ಟಲ್ ಕಾನ್ಸೋರ್ಸ್
* FundQuest (ಫಂಡ್ ಕ್ವೆಸ್ಟ್)
* SBI ಲೈಫ್ ಇನ್ಶೂರೆನ್ಸ್ ಲಿಮಿಟೆಡ್, [[ಭಾರತೀಯ ಸ್ಟೇಟ್ ಬ್ಯಾಂಕ್|ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ]]ದ ಜಂಟಿ ಸಹಯೋಗವಿರುವ ವಿಮಾ ಸಂಸ್ಥೆ, ಇದು ಭಾರತದ ಅತ್ಯಂತ ದೊಡ್ಡ ಹಣಕಾಸು ಸೇವಾ ಸಂಸ್ಥೆಯಾಗಿದ್ದು, ಭಾರತ ಸರ್ಕಾರದ ಅಧೀನದಲ್ಲಿದೆ
* ಜಿಯೋಜಿತ್ (ಜಿಯೋಜಿತ್ BNP ಪರಿಬಾಸ್ ಫೈನಾಂಷಿಯಲ್ ಸರ್ವೀಸಸ್ Ltd.)
* [[:fr:L'Atelier BNP Paribas|ಲಾ'ಅಟೆಲಿಯರ್]]
* ಕ್ರಿಯೇಶನ್ ಕನ್ಸ್ಯೂಮರ್ ಫೈನಾನ್ಸ್ <ref name="laseruk.com">http://www.laseruk.com/creation_group_structure.html</ref>
* ಲಾಫಾಯಟ್ಟೆ ಸರ್ವೀಸಸ್<ref name="laseruk.com"></ref>
* [http://www.bnpparibas-personalinvestors.lu BNP ಪರಿಬಾಸ್ ಪರ್ಸನಲ್ ಇನ್ವೆಸ್ಟರ್ಸ್ ಲಕ್ಸಂಬೋರ್ಗ್]
== ಪ್ರಮುಖ ಪ್ರಸ್ತುತ ಮತ್ತು ಹಿಂದಿನ ನೌಕರರು ==
=== ವ್ಯವಹಾರ ===
*ಬೋರಿಸ್ ಅಡ್ಲಂ - ಬ್ರಿಟಿಶ್ ಬಂಡವಾಳಗಾರ
*ನಸ್ಸಿಂ ತಲೇಬ್ - ಹಣಕಾಸಿನ ಗಣಿತಶಾಸ್ತ್ರದ ವೃತ್ತಿಪರರು
=== ರಾಜಕಾರಣ ಮತ್ತು ಸಾರ್ವಜನಿಕ ಸೇವೆ ===
*ಬೌರ್ಬನ್ ನ ಲೂಯಿಸ್ ಅಲ್ಫಾನ್ಸೋ, ಅಂಜೌನ ಡ್ಯೂಕ್-ಫ್ರೆಂಚ್ ರಾಯಲ್ ಹೌಸ್ ನ ಮುಖ್ಯಸ್ಥನೆಂದು ರಾಜಪ್ರಭುತ್ವವಾದಿಗಳು ಪರಿಗಣಿಸುತ್ತಾರೆ.
*ಜಾಕ್ವೆಸ್ ಡೆ ಲರೋಸಿಯೇರೆ - ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ನ ನಿರ್ವಾಹಕ ನಿರ್ದೇಶಕ (1978–87); ಬಾಂಕ್ಯೂ ಡೆ ಫ್ರಾನ್ಸ್ ನ ಗವರ್ನರ್ (1987–93)
*ಲಾರೆಂಜ್ ಆಫ್ ಹಬ್ಸ್ಬರ್ಗ್, ಆಸ್ಟ್ರಿಯಾ-ಎಸ್ಟೆಯ ರಾಜಕುಮಾರ
=== ಇತರೆ ===
*ಡೇವಿಡ್ ಮ್ಯಾಕ್ವಿಲ್ಲಿಯಮ್ಸ್ - ಅರ್ಥಶಾಸ್ತ್ರಜ್ಞ
*ಜಾರ್ಜಸ್ ಚೋಡ್ರೋನ್ ಡೆ ಕೌರ್ಸೆಲ್ - ನಿರ್ವಾಹಕ ನಿರ್ದೇಶಕರು, ಶ್ರೀಮತಿ ಬರ್ನಡೆಟ್ಟೆ ಚಿರಾಕ್ ಕುಟುಂಬದಿಂದ
*ಎಡ್ಮಂಡ್ ಟಾರ್ಕುಯಿಯೆಹ್ - ಸಾಪಿಯನ್ಸ್ ಕ್ಯಾಪಿಟಲ್ Ltd ಸ್ಥಾಪಕ
== ವಿವಾದ ==
2010ರಲ್ಲಿ ಫ್ರೆಂಚ್ ಸರ್ಕಾರದ ಅಟೊರೈಟ್ ಡೆ ಲ ಕಂಕರೆನ್ಸ್, BNP ಹಾಗು ಇತರ ಬ್ಯಾಂಕುಗಳಿಗೆ ಚೆಕ್ ಪ್ರಕ್ರಿಯೆಗಳ ಮೇಲೆ ಅನಾವಶ್ಯಕ ಶುಲ್ಕ ಹೇರಿ ಗ್ರಾಹಕರನ್ನು ವಂಚಿಸಿದ್ದಕ್ಕಾಗಿ 384,000,000 ಯುರೋಗಳ ದಂಡ ವಿಧಿಸಿತು, ಇದರಲ್ಲಿ ಕಾಗದದ ಚೆಕ್ ನಿಂದ "ಏಕ್ಸ್ಚೆಂಜಸ್ ಚೆಕ್-ಇಮೇಜ್" ಇಲೆಕ್ಟ್ರಾನಿಕ್ ವರ್ಗಾವಣೆಗೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಶುಲ್ಕವೂ ಸಹ ಸೇರಿತ್ತು. <ref>[http://www.autoritedelaconcurrence.fr/user/standard.php?id_rub=368&id_article=1472
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಂಚನೆ], ಆತೋರೈಟ್ ಡೆ ಲಾ ಕಂಕರೆನ್ಸ್ ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ್ದು, ರಿಪಬ್ಲಿಕ್ ಫ್ರಾಂಕೈಸೆ, 20 ಸೆಪ್ಟೆಂಬರ್ 2010, 2010 9 20ರಲ್ಲಿ ಮರುಸಂಪಾದಿಸಲಾಗಿದೆ </ref>
== ಇವನ್ನೂ ನೋಡಿ ==
{{Portal box|Paris|Companies}}
* ಬಂಡವಾಳ ಹೂಡಿಕೆ ಬ್ಯಾಂಕುಗಳ ಪಟ್ಟಿ
* ಫ್ರೆಂಚ್ ಸಂಸ್ಥೆಗಳ ಪಟ್ಟಿ
* ಬ್ಯಾಂಕುಗಳ ಪಟ್ಟಿ
* ಪ್ರಧಾನ ವಿತರಕರು
* ಯುರೋಪಿಯನ್ ಫೈನಾಂಷಿಯಲ್ ಸರ್ವೀಸಸ್ ರೌಂಡ್ ಟೇಬಲ್
* ಅಂಗೋಲಗೇಟ್
==ಉಲ್ಲೇಖಗಳು==
{{Reflist|2}}
==ಬಾಹ್ಯ ಕೊಂಡಿಗಳು==
{{Commons category|BNP Paribas}}
*{{official|http://www.bnpparibas.com/}}
{{Template group
|list =
{{CAC 40 companies}}
{{Major investment banks}}
{{Members of Euro Banking Association}}
}}
{{Major_insurance_companies}}
{{DEFAULTSORT:Bnp Paribas}}
[[Category:BNP ಪರಿಬಾಸ್ ]]
[[Category:ಫ್ರಾನ್ಸ್ ನ ಬ್ಯಾಂಕುಗಳು ]]
[[Category:ಬಂಡವಾಳ ಹೂಡಿಕೆ ಬ್ಯಾಂಕುಗಳು ]]
[[Category:ಪ್ರಧಾನ ವಿತರಕರು ]]
[[Category:2000ದಲ್ಲಿ ಸ್ಥಾಪನೆಯಾದ ಸಂಸ್ಥೆಗಳು ]]
[[ar:بي إن بي باريبا]]
[[ca:BNP Paribas]]
[[cs:BNP Paribas]]
[[de:BNP Paribas]]
[[en:BNP Paribas]]
[[es:BNP Paribas]]
[[fr:BNP Paribas]]
[[he:BNP פריבה]]
[[id:BNP Paribas]]
[[it:BNP Paribas]]
[[ja:BNPパリバ]]
[[ko:BNP 파리바]]
[[lt:BNP Paribas]]
[[nl:BNP Paribas]]
[[no:BNP Paribas]]
[[pl:BNP Paribas]]
[[pt:BNP Paribas]]
[[ro:BNP Paribas]]
[[ru:BNP Paribas]]
[[sk:BNP Paribas]]
[[sv:BNP Paribas]]
[[tr:BNP Paribas]]
[[uk:BNP Paribas]]
[[zh:法國巴黎銀行]]All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?oldid=285771.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|