Revision 316103 of "ಪ್ರೊ.ಜಿ.ವೆಂಕಟಸುಬ್ಬಯ್ಯ" on knwiki'''ಪ್ರೊ|| ಜಿ ವೆಂಕಟಸುಬ್ಬಯ್ಯ''' ಕನ್ನಡದ ಏಳಿಗೆಗಾಗಿ ದುಡಿದವರು, ದುಡಿಯುತ್ತಿರುವವರು. ಬೆಂಗಳೂರಿನ ಇವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಇವರ '[[ಇಗೋ ಕನ್ನಡ]]' ಎಂಬ [[ಪ್ರಜಾವಾಣಿ]] ಅಂಕಣ ಸಮಸ್ತ ಕನ್ನಡಿಗರ ಬಾಯಿಮಾತಿನಲ್ಲಿರುವ ಅಂಕಣ. ೧೯೯೧ ರಿಂದ ಪ್ರಾರಂಭಿಸಿ ವೆಂಕಟಸುಬ್ಬಯ್ಯನವರು ಈ ಅಂಕಣದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ವರ್ಷ ೨೦೦೫ರಲ್ಲಿ, ಹಂಪೆ ವಿಶ್ವವಿದ್ಯಾಲಯವು ಇವರಿಗೆ ಪ್ರತಿಷ್ಠಿತ [[ನಾಡೋಜ ಪ್ರಶಸ್ತಿ]]ಯನ್ನಿತ್ತು ಗೌರವಿಸಿದೆ.
ಬೆಂಗಳೂರಿನಲ್ಲಿ ನಡೆದ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು (ಫೆಬ್ರವರಿ ೪- ಫೆಬ್ರವರಿ ೬).
{{Infobox Writer
<!-- For template details please see Template:Infobox Writer -->
| name = ಪ್ರೊ.ಜಿ.ವೆಂಕಟಸುಬ್ಬಯ್ಯ
| image = G_Venkatasubbaiah.jpg
| imagesize =200px
| caption =ಪ್ರೊ ಜಿ.ವೆಂಕಟಸುಬ್ಬಯ್ಯ
| pseudonym =
| birth_date = ೨೩-೦೮-೧೯೧೩
| birth_place = [[ಮೈಸೂರು]]
| death_date =
| death_place =
| occupation = ಭಾಷಾತಜ್ಞ, ಬರಹಗಾರ, ಸಂಶೋಧಕ, ಶಿಕ್ಷಕ
| nationality = ಭಾರತೀಯ
| period = 20ನೇ ಶತಮಾನ
| genre =
| subject = [[ಕನ್ನಡ ಸಾಹಿತ್ಯ]]
| movement =
| debut_works =
| notableworks = [[ಇಗೋ ಕನ್ನಡ]]
| spouse = ಲಕ್ಷ್ಮಿ
| children = ಅನಂತಸ್ವಾಮಿ, ಅರುಣ್, ಪ್ರಭಾ, ರೋಹಿಣಿ
| influences = [[ಪು.ತಿ.ನರಸಿಂಹಾಚಾರ್]], [[ಬಿ.ಎಂ.ಶ್ರೀ.]], [[ಕುವೆಂಪು ]]
| influenced =
| awards =
| signature =
| website =
| footnotes =
}}
==ಜೀವನ==
೧೯೧೩ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು,ಮೈಸೂರಿನಲ್ಲಿಯೆ ಬೆಳೆದುಬಂದದ್ದು.ಇವರ ತಂದೆ, [[ಗಂಜಾಂ ತಿಮ್ಮಣ್ಣಯ್ಯ]]ನವರು ಸಂಸ್ಕೃತ ಹಾಗು ಕನ್ನಡದ ವಿದ್ವಾಂಸರಾಗಿದ್ದರು. ೧೯೩೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿಯನ್ನು ಪಡೆದ ಇವರಿಗೆ ಪ್ರಥಮ ಸ್ಥಾನ ಪಡೆದಕ್ಕಾಗಿ [[ಸುವರ್ಣ]] [[ಪದಕವನ್ನು]] ಬಹುಮಾನವಾಗಿ ಕೊಡಲಾಯಿತು. ಮುಂದೆ ಇವರು ಬಿ.ಟಿ. ಪದವಿಯನ್ನೂ ಕೂಡ ಪಡೆದರು.
೧೯೩೯ ರಿಂದ ಪ್ರಾರಂಭಿಸಿ ಸುಮಾರು ೪೦ ವರ್ಷಗಳ ಕಾಲ ಇವರು [[ಶಿಕ್ಷಣ]] ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವರು.
==ಇಗೋ ಕನ್ನಡ==
'[[ಇಗೋ ಕನ್ನಡ]]' - ೧೨-೫-೯೧ ರಿಂದ ಕನ್ನಡದ ಜನಪ್ರಿಯ ಪತ್ರಿಕೆಯಾದ [[ಪ್ರಜಾವಾಣಿ | ಪ್ರಜಾವಾಣಿಯಲ್ಲಿ]] ಪುಟ್ಟ ಅಂಕಣವಾಗಿ ಪ್ರಾರಂಭವಾಯಿತು. ಕನ್ನಡದ ಶಿಷ್ಟ ಬರವಣಿಗೆಯನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಆರಂಭಿಸಿದ ಈ ಅಂಕಣವು ಕೆಲವೇ ದಿನಗಳಲ್ಲಿ ಹಲವರ ಗಮನವನ್ನೂ, ಉತ್ಸಾಹವನ್ನೂ ತನ್ನತ್ತ ಸೆಳೆಯಿತು. ಕನ್ನಡವನ್ನು ಅಭ್ಯಾಸ ಮಾಡಿದವರಿಂದಲೂ, ಶ್ರೀಸಾಮಾನ್ಯರಿಂದಲೂ ಬಂದ ವೈವಿದ್ಯಮಯ ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲಿ ತೊಡಗಿಸಿಕೊಂಡ ಈ ಅಂಕಣ, ಹಲವರ ಭಾಷೆಗೆ ಸಂಬಂಧಿಸಿದ ಸಂದೇಹಗಳನ್ನು ನಿವಾರಣೆ ಮಾಡಿತು. ಇಂತಹ ಭಾಷೆಗೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಒಟ್ಟುಗೂಡಿಸಿ ವೆಂಕಟಸುಬ್ಬಯ್ಯನವರು ಇಗೋ ಕನ್ನಡ ಎಂಬ ಹೆಸರಲ್ಲೇ ಒಂದು ಸಾಮಾಜಿಕ [[ನಿಘಂಟು | ನಿಘಂಟನ್ನು]] ಹೊರತಂದದ್ದುಂಟು.
==ಪ್ರಶಸ್ತಿಗಳು==
ಇವರು ಪಡೆದ ಪ್ರಶಸ್ತಿಗಳು
* ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
* ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
* ನಾಡೋಜ ಪ್ರಶಸ್ತಿ (೨೦೦೫)
==ಉಲ್ಲೇಖಗಳು==
* [[ಮಲ್ಲಿಗೆ (ಮಾಸಪತ್ರಿಕೆ)]]ಯ ಸೆಪ್ಟೆಂಬರ್ ೨೦೦೫ರ ಸಂಚಿಕೆ.
==ಬಾಹ್ಯ ಸಂಪರ್ಕಗಳು==
[http://prajavani.net/dec162005/37895200501216.php| ಪ್ರೊ. ಜಿ ವೆಂಕಟಸುಬ್ಬಯ್ಯನವರಿಗೆ ನಾಡೋಜ ಪ್ರಶಸ್ತಿ - ಪ್ರಜಾವಾಣಿ ವರದಿ]
[[ವರ್ಗ:ಕನ್ನಡ ಸಾಹಿತ್ಯ]]
[[Category:ಸಾಹಿತಿಗಳು |ಜಿ.ವೆಂಕಟಸುಬ್ಬಯ್ಯ ]]
[[Category: ನಾಡೋಜ ಪ್ರಶಸ್ತಿ ವಿಜೇತರು]]
[[Category: ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು]]
[[ವರ್ಗ:ರಾಜ್ಯೋತ್ಸವ ಪ್ರಶಸ್ತಿ ವಿಜೇತರು]]
[[ವರ್ಗ:೧೯೧೩ ಜನನ]]All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?oldid=316103.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|