Revision 317542 of "ಅಲ್ಲಾಹ" on knwiki

[[ಚಿತ್ರ:Allah-green.svg|[[ಅರಬಿಕ್]] ನಲ್ಲಿ '''ಅಲ್ಲಾಹ'''|thumb|250px]]

'''ಅಲ್ಲಾಹ''' ಎಂಬ ಶಬ್ದವು [[ಅರೇಬಿಕ್ ಬಾಷೆ]]ಯಲ್ಲಿ [[ದೇವರು|ದೇವರ]]ನ್ನು ಸಂಕೇತಿಸುತ್ತದೆ. ಇದು ಇಸ್ಲಾಂ ಧರ್ಮೀಯರು ನಂಬುವ ಏಕಮಾತ್ರ ದೈವತ್ವ. ಅಂತೆಯೇ ಆ ಪ್ರದೇಶದ ಏಕದೇವ(monotheistic)ಧರ್ಮಗಳಲ್ಲಿ ಕೂಡಾ ಇದೇ ಶಬ್ದವನ್ನು ದೇವರ ಕುರಿತು ಉಪಯೋಗಿಸುತ್ತಾರೆ.

ಅಲ್ಲಾಹ್ ಚಿರಂತನು, ಸ್ವಯಂಜೀವಂತನು,ಅಖಿಲ ಪ್ರಪಂಚದ ನಿಯಂತ್ರಕನಾದ ಆತನ ಹೊರತು ಆರಾಧ್ಯನಾರೂ ಇಲ್ಲ. ಅವನಿಗೆ ತೂಕಡಿಕೆಯಾಗಲೀ ನಿದ್ರೆಯಾಗಲೀ ಬಾಧಿಸುವುದಿಲ್ಲ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಆತನದೇ. ಆತನ ಸನ್ನಿಧಿಯಲ್ಲಿ ಆತನ ಅಪ್ಪಣೆಯಿಲ್ಲದೆ ಶಿಫಾರಸು ಮಾಡತಕ್ಕವನಾರಿದ್ದಾನೆ?ದಾಸರ ಮುಂದಿರುವುದನ್ನೂ ಆತನು ಬಲ್ಲನು. ಅವರಿಂದ ಮರೆಯಾಗಿರುವುದನ್ನೂ ಆತನು ಬಲ್ಲನು.ಆತನು ಸ್ವತಃ ತಿಳಿಯಗೊಡಿಸುವ ಹೊರತು ಆತನ ಜ್ಞಾನ ಭಂಡಾರದಿಂದ ಯಾವ ವಿಷಯವನ್ನೂ ಅವರು ತಿಳಿಯಲಾರರು. ಅವನ ಅಧಿಕಾರವು ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಆತನಿಗೆ ದಣಿಸುವಂತ ಕಾರ್ಯವಲ್ಲ. ಅವನು ಏಕೈಕ ಮಹೋನ್ನತನೂ ಸರ್ವ ಶ್ರೇಷ್ಠನೂ ಆಗಿರುತ್ತಾನೆ.
[ಕುರಾನ್: 2: 255]  

1.	[ಓ ಪ್ರವಾದಿಯವರೇ!] ಹೇಳಿರಿ: 'ಅವನು ಅಲ್ಲಾಹು! ಏಕಮೇವನಾಗಿರುವನು.
2.	ಅಲ್ಲಾಹು ಸರ್ವರಿಗೂ ಆಶ್ರಯದಾತನಾಗಿರುವನು.
3.	ಅವನು (ಯಾರಿಗೂ) ಜನ್ಮವನ್ನು ನೀಡಿಲ್ಲ. ಅವನು (ಯಾರದೇ ಸಂತತಿಯಾಗಿ) ಜನಿಸಿದವನೂ ಅಲ್ಲ.
4.	ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ. 
[ಕುರಾನ್: 112: 1-4]

ಅಲ್ಲಾಹನನ್ನು ಸ್ಮರಿಸಿರಿ:
"ಆದ್ದರಿಂದ ನೀವು ನನ್ನನ್ನು ಸ್ಮರಿಸಿರಿ, ನಾನು ನಿಮ್ಮನ್ನು ಸ್ಮರಿಸುವೆನು. ನನಗೆ ಕ್ರತಜ್ಜತೆ ಸಲ್ಲಿಸಿರಿ. ನನ್ನೊಂದಿಗೆ ಕ್ರತಘ್ನತೆಯನ್ನು ತೋರಿಸದಿರಿ"
[ಕುರಾನ್: 2: 152]


[[ವರ್ಗ:ಧರ್ಮ]]
[[ವರ್ಗ:ಇಸ್ಲಾಂ ಧರ್ಮ]]