Revision 319165 of "ಜಯಪ್ರದಾ" on knwiki

{{Infobox ನಟ
| name =ಜಯಪ್ರದಾ, <br> జయప్రద
| imagesize = 
| caption =  
| birthname = ಲಲಿತ ರಾಣಿ
| birth_date ={{Birth date and age|1962|4|3|mf=y}}
| location = {{flagicon|India}} [[ರಾಜಮುಂಡ್ರಿ]], [[ಆಂಧ್ರ ಪ್ರದೇಶ]], [[ಭಾರತ]]
| film industry = [[ಟಾಲಿವುಡ್]],[[ಬಾಲಿವುಡ್]] 
}}

'''ಜಯಪ್ರದಾ''' (ಜನನ [[ಏಪ್ರಿಲ್ ೩]], [[೧೯೬೨]]) ಒಬ್ಬ ಭಾರತೀಯ [[ಚಲನಚಿತ್ರ ನಟಿ]] ಮತ್ತು ರಾಜಕಾರಣಿ. ಇವರು [[ಆಂಧ್ರ ಪ್ರದೇಶ]]ದ [[ರಾಜಮುಂಡ್ರಿ]]ಯಲ್ಲಿ ಜನಿಸಿದರು.
ಇವರ ಮೊದಲ ಚಿತ್ರ ತೆಲುಗಿನ ''ಭೂಮಿಕೋಸಂ''. ಈ ಚಿತ್ರದ ಹಾಡೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.
ನಾಯಕಿಯಾಗಿ ಇವರ ಮೊದಲ ಚಿತ್ರ  ಕೆ.ಬಾಲಚಂದರ್ ಅವರ ''ಅಂತುಲೇನಿ ಕಥ'''. ಈ ಚಿತ್ರದ ಕನ್ನಡ ಅವತರಣಿಕೆ ''[[ಬೆಂಕಿಯಲ್ಲಿ ಅರಳಿದ ಹೂವು]]''.ಇಲ್ಲಿ [[ಸುಹಾಸಿನಿ]] [[ಜಯಪ್ರದಾ]]ರ ಪಾತ್ರವನ್ನು ನಿರ್ವಹಿಸಿದ್ದಾರೆ.
೧೯೭೭ರ ''[[ಸನಾದಿ ಅಪ್ಪಣ್ಣ]]'' ಚಿತ್ರದಲ್ಲಿ [[ಡಾ.ರಾಜ್ ಕುಮಾರ್]] ಜೊತೆ ನಟಿಸುವುದರೊಂದಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಜಯಪ್ರದಾ ತಮಿಳು, ಮಲಯಾಳಂ, ಹಿಂದಿ, ಮರಾಠಿ, ಬೆಂಗಾಲಿ ಸೇರಿದಂತೆ ಒಟ್ಟು ೭ ಭಾಷೆಗಳಲ್ಲಿ ನಟಿಸಿ ಭಾರತದಾದ್ಯಂತ ಪ್ರಖ್ಯಾತಿ ಗಳಿಸಿದ್ದಾರೆ.

೧೯೯೪ರಲ್ಲಿ ರಾಜಕೀಯ ಪ್ರವೇಶವನ್ನು ಮಾಡಿದ ಇವರು ಪ್ರಸ್ತುತ ಉತ್ತರಪ್ರದೇಶದ ರಾಂಪುರ್ ಜಿಲ್ಲೆಯ ಲೋಕಸಭಾ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರ ಮುಂಬರುವ ಕನ್ನಡ ಚಿತ್ರ [[ದರ್ಶನ್ ]] ಪ್ರಧಾನ ಪಾತ್ರ ನಿರ್ವಹಿಸುತ್ತಿರುವ [[ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ]]. ಚಿತ್ರದಲ್ಲಿ ಜಯಪ್ರದಾ [[ಕಿತ್ತೂರು ಚೆನ್ನಮ್ಮ]]ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

[[ವರ್ಗ:ಭಾರತದ ಚಲನಚಿತ್ರ ನಟಿಯರು]]
[[ವರ್ಗ:೧೯೬೨ ಜನನ]]
[[ವರ್ಗ:ಟಾಲಿವುಡ್]]
[[ವರ್ಗ:ಭಾರತದ ಮಹಿಳಾ ರಾಜಕಾರಣಿಗಳು]]

{{ಚುಟುಕು}}