Revision 319529 of "ಕಾಬಾ" on knwiki

[[ಚಿತ್ರ:Kaaba mirror edit jj.jpg|right|thumb|350px|'''ಕಾಬಾ'''ವನ್ನು ಸುತ್ತುವರೆದಿರುವ ಯಾತ್ರಿಕರು]]
'''ಕಾಬಾ''' ({{lang-ar|الكعبة}}) [[ಮೆಕ್ಕಾ]], [[ಸೌದಿ ಅರೇಬಿಯ]]ದಲ್ಲಿರುವ ಒಂದು ಕಟ್ಟಡ. ಇದು [[ಇಸ್ಲಾಂ]] ಧರ್ಮದ ಅತ್ಯಂತ ಪವಿತ್ರ ಕ್ಷೇತ್ರ. ಈ ಕಟ್ಟಡದ ಸುತ್ತ [[ಮಸ್ಜಿದ್ ಅಲ್-ಹರಾಮ್]] ಎಂಬ ಮಸೀದಿಯನ್ನು ಕಟ್ಟಲಾಗಿದೆ. ಪ್ರಪಂಚದ ಎಲಾ ಮುಸ್ಲಿಮರು ಪ್ರಾರ್ಥಿಸುವಾಗ ಕಾಬಾದ ದಿಕ್ಕಿನಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.

ಮಸ್ಜಿದ್ ಅಲ್ ಹರಮ್, ಮುಸ್ಲಿಮರ ಪವಿತ್ರ ಸ್ಥಳವಾಗಿದೆ, ಇದು ಕಹ್ಬದ ಸುತ್ತ ಮುತ್ತಲಿನ ಪರಿಸರ. ಮುಸ್ಲಿಮರು ಕಹ್ಬಕ್ಕೆ ಮುಖ ಮಾಡಿ ನಮಾಝ್ ನಿರ್ವಹಿಸಬೇಕು, ಜಗತ್ತಿನ ಎಲ್ಲಿ ಇದ್ದರೂ. ಹಜ್ಜ್ ಮತ್ತು ಉಮ್ರಃ ಮಾಡಬೇಕಾದರೆ ಕಹ್ಬದ ಸುತ್ತ ತಿರುಗಬೇಕು, ಇದಕ್ಕೆ ತವಾಫ್ ಎನ್ನುತ್ತಾರೆ. ಹಜ್ಜ್'ನ ದಿನದಲ್ಲಿ, ಸುಮಾರು ೬ ಮಿಲಿಯನ್ ಹಜ್ಜ್ ಯಾತ್ರಿಗಳು ಕಹ್ಬಾದ ಪರಿಸರದಲ್ಲಿ ಸೇರುತ್ತಾರೆ.    

[[ವರ್ಗ:ಇಸ್ಲಾಂ ಧರ್ಮ]]
[[ವರ್ಗ:ಸೌದಿ ಅರೇಬಿಯ]]