Revision 320023 of "ವಿಗಲನ" on knwiki

[[ಚಿತ್ರ:Hemodialysismachine.jpg|thumb|ಒಂದು ಹೀಮೋಡಾಯಾಲಸಿಸ್ ಯಂತ್ರ]]
[[ವೈದ್ಯಶಾಸ್ತ್ರ]]ದಲ್ಲಿ, '''ವಿಗಲನ'''ವು (ಅಥವಾ '''ಡಯಾಲಿಸಿಸ್''', [[ಗ್ರೀಸ್‌ನ ಭಾಷೆ]]ಯಲ್ಲಿ "ಡಯಾಲಸಿಸ್" ಎಂದರೆ ಬೇರ್ಪಡಿಸುವಿಕೆ, "ಡಯಾ", ಎಂದರೆ ಮೂಲಕ, ಮತ್ತು "ಲಿಸಿಸ್", ಎಂದರೆ ಸಡಿಲಗೊಳಿಸುವಿಕೆ) ಮುಖ್ಯವಾಗಿ [[ಮೂತ್ರಪಿಂಡ ವೈಫಲ್ಯ]]ದ ಕಾರಣ ವಿಫಲವಾದ [[ಮೂತ್ರಪಿಂಡ]] ಕ್ರಿಯೆಗೆ ([[ಮೂತ್ರಪಿಂಡ ಬದಲಿ ಚಿಕಿತ್ಸೆ]]) ಒಂದು ಕೃತಕ ಬದಲಿ ವ್ಯವಸ್ಥೆಯನ್ನು ಒದಗಿಸಲು ಬಳಸಲ್ಪಡುತ್ತದೆ. ಹಠಾತ್ತಾಗಿ ಆದರೆ ತಾತ್ಕಾಲಿಕವಾಗಿ ತಮ್ಮ ಮೂತ್ರಪಿಂಡದ ಕಾರ್ಯಭಾರವನ್ನು ಕಳೆದುಕೊಂಡು ಬಹಳ ಅಸ್ವಸ್ಥರಾದ ರೋಗಿಗಳಿಗೆ ([[ತೀವ್ರ ಮೂತ್ರಪಿಂಡ ವೈಫಲ್ಯ]]) ಅಥವಾ ತಮ್ಮ ಮೂತ್ರಪಿಂಡದ ಕ್ರಿಯೆಯನ್ನು ಶಾಶ್ವತವಾಗಿ ಕಳೆದುಕೊಂಡಿರುವ ಹೆಚ್ಚುಕಡಮೆ ಸ್ಥಿರವಾಗಿರುವ ರೋಗಿಗಳಿಗೆ ([[ದೃಢೀಕೃತ ಮೂತ್ರಪಿಂಡ ರೋಗ|೫ನೇ ಹಂತದ ದೃಢೀಕೃತ ಮೂತ್ರಪಿಂಡ ರೋಗ]]) ವಿಗಲನವನ್ನು ಬಳಸಬಹುದು. ೫ನೇ ಹಂತದ ರೋಗಿಗಳಿಗೆ, ಅಥವಾ ಕೊನೆ-ಘಟ್ಟದ ಮೂತ್ರಪಿಂಡ ರೋಗದವರಿಗೆ (ಎಂಡ್-ಸ್ಟೇಜ್ ಕಿಡ್ನಿ ಡಿಸೀಸ್-ಇಎಸ್‌ಕೆಡಿ), ಮೂತ್ರಪಿಂಡ ಕ್ರಿಯೆಯ ಕ್ಷೀಣಿಸುವಿಕೆಯು ತಿಂಗಳುಗಟ್ಟಲೇ ಅಥವಾ ವರ್ಷಗಟ್ಟಲೆಯ ಅವಧಿಯಲ್ಲಿ ಉಂಟಾಗಿ ಬದುಕಿ ಉಳಿಯಲು ಚಿಕಿತ್ಸೆ ಅಗತ್ಯವಾದ ಒಂದು ಮಟ್ಟವನ್ನು ಮುಟ್ಟಿರುತ್ತದೆ.
{{ಚುಟುಕು}}

[[ವರ್ಗ:ಮೂತ್ರಪಿಂಡ ಶಾಸ್ತ್ರ]]
[[ವರ್ಗ:ಆರೋಗ್ಯ]]