Revision 846792 of "ಭೂಮಿಯ ಪವಿತ್ರತೆ" on knwikiಭೂಮಿಯ ಪವಿತ್ರತೆ: ರಾಮಾಯಣದಲ್ಲಿ ಭೂಮಿ:- ಸೀತಾ ಪರಿತ್ಯಾಗ:- ಶ್ರೀರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯಲ್ಲಿ ಸುಖ, ಸಮೃದ್ಧಿಗಳು ನೆಲಸಿದ್ದವು. ಪ್ರಜೆಗಳು ಆನಂದದಿಂದಿದ್ದರು. ಆದರೆ ಈ ನೆಮ್ಮದಿ ಶಾಶ್ವತವಾಗಿ ಉಳಿಯಲಿಲ್ಲ. ರಾವಣನ ಸೆರೆಯಲ್ಲಿ ಬಹಳ ಕಾಲವಿದ್ದ ಸೀತೆಯ ಪಾವಿತ್ರ್ಯದ ಬಗೆಗೆ ಜನರು ಅನುಮಾನದಿಂದ ಮಾತಾಡ ತೊಡಗಿದರು. ಈ ವಿಷಯ ಗೂಢಚಾರರಿಂದ ರಾಮನಿಗೂ ತಿಳಿದು ಬಂದಿತು. ರಾಜ್ಯದಲ್ಲಿ ಉಂಟಾದ ಬರಗಾಲಕ್ಕೂ ಸೀತೆಯಿಂದಾಗಿರುವ ತಪ್ಪೇ ಕಾರಣವೆಂದು ಜನ ಗುಸುಗುಸು ಮಾತಾಡ ತೊಡಗಿದರು. ತನ್ನ ಪ್ರಜೆಗಳನ್ನು ಸಂತೋಷ ಪಡಿಸಲು ರಾಮ ಸೀತೆಯನ್ನು ತ್ಯಜಿಸಲು ನಿರ್ಧರಿಸಿದನು. ಸೀತೆಯು ವನವಾಸ ಕಾಲದಲ್ಲಿ ರಾಮನೊಡನೆ ಸಂತೋಷದಿಂದ ಕಾಲಕಳೆದ ಅರಣ್ಯಕ್ಕೆ ಮತ್ತೊಮ್ಮೆ ಹೋಗಬೇಕಾಯಿತು. ತುಂಬು ಗರ್ಭಿಣಿಯಾದ ಸೀತೆಯನ್ನು, ವಿಹಾರದ ನೆಪ ಹೇಳಿ ರಾಮ ಲಕ್ಷ್ಮಣನೊಂದಿಗೆ ಅವಳನ್ನು ಕಾಡಿಗೆ ಕಳುಹಿಸಿ ಅವಳನ್ನು ಅಲ್ಲೆ ಬಿಟ್ಟು ಬರುವಂತೆ ತಿಳಿಸಿ ಪ್ರಜಾಪ್ರೇಮವನ್ನು ಮೆರೆಯುತ್ತಾನೆ. ಜನಾಪವಾದದಿಂದ ರಾಮ ತನ್ನನ್ನು ತ್ಯಜಿಸಿರುವನೆಂಬ ಸುದ್ದಿಯಿಂದ ಸೀತೆ ದು:ಖತಪ್ತ ಳಾಗಿ ಕಲ್ಲು ಕರಗುವಂತೆ ರೋದಿಸುತ್ತಾಳೆ. ನಂತರ ರಾಮನಿಂದ ಪರಿತ್ಯಕ್ತೆಯಾದ ಸೀತೆಗೆ ವಾಲ್ಮೀಕಿ ಮುನಿಯು ತನ್ನ ಆಶ್ರಮದಲ್ಲಿ ಆಶ್ರಯ ನೀಡಿದನು. ಸೀತೆ ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಲವ ಮತ್ತು ಕುಶ ಎಂಬ ಅವಳಿ-ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಸೀತೆಯು ವಾಲ್ಮೀಕಿ ಮುನಿಯ ಸಹಾಯದಿಂದ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುತ್ತಾಳೆ. ವಾಲ್ಮೀಕಿ ಲವ-ಕುಶರಿಗೆ ಗುರುವಾಗಿ ಸಕಲ ವಿದ್ಯೆಗಳನ್ನು ಹೇಳಿಕೊಡುತ್ತಾನೆ. ಲವ-ಕುಶರು ಬೆಳೆದು ಯುವಕ ರಾಗಿದ್ದರು. ಅದೇ ಸಮಯದಲ್ಲಿ ರಾಮನನ್ನು ಒಂದು ಚಿಂತೆ ಕಾಡುತ್ತಿತ್ತು. ಬ್ರಾಹ್ಮಣನ ಮಗನಾಗಿದ್ದ ರಾವಣನನ್ನು ಕೊಂದಿರುವುದರಿಂದ ತನಗೆ ಬಂದಿರಬಹುದಾದ ಬ್ರಹ್ಮ ಹತ್ಯೆ ಎಂಬ ಪಾಪವನ್ನು ಕಳೆದುಕೊಳ್ಳಲು ನಿಶ್ಚಯಿಸಿದನು. ಅದಕ್ಕಾಗಿ ಅಶ್ವಮೇಧ ಯಾಗ ಮಾಡಬೇಕೆಂದು ನಿರ್ಧರಿಸಿದನು. ಈ ಯಾಗಕ್ಕೆ ತನ್ನ ದೇಶದ ಎಲ್ಲಾ ಪ್ರಜೆಗಳಿಗೂ, ಋಷಿ ಮುನಿಗಳಿಗೂ ಆಹ್ವಾನವಿರುತ್ತದೆ. ವಾಲ್ಮೀಕಿ ಮುನಿಗಳು ಲವ-ಕುಶರೊಡನೆ ಈ ಯಾಗಕ್ಕೆ ಹೋಗಿರುತ್ತಾರೆ. ಯಾಗದ ದಿನ ಲವ-ಕುಶರಿಬ್ಬರು ರಾಮನ ಎದುರು ವಾಲ್ಮೀಕಿ ಋಷಿಗಳಿಂದ ಕಲಿತ ರಾಮಾಯಣವನ್ನು ಹಾಡುತ್ತಾರೆ. ರಾಮನಿಗೆ ಆ ಗಾಯನದ ಮೂಲಕ ತನ್ನದೇ ಕಥೆಯನ್ನು ಕೇಳಿ ಸೋಜಿಗವಾಗುತ್ತದೆ. ವಾಲ್ಮೀಕಿಯಿಂದ ರಾಮನಿಗೆ ಲವ,ಕುಶರು ತನ್ನ ಮಕ್ಕಳೆಂದು ತಿಳಿಯುತ್ತದೆ. ಸೀತೆಯು ವಾಲ್ಮೀಕಿ ಮುನಿಗಳ ಆಶ್ರಮದಲ್ಲಿರುವ ವಿಷಯ ತಿಳಿದು, ಅವಳನ್ನು ತಾನಿರುವಲ್ಲಿಗೆ ಬರುವಂತೆ ಹೇಳಿ ಕಳಿಸುತ್ತಾನೆ. ವಾಲ್ಮೀಕಿ ಮುನಿಯು ಸೀತೆಯನ್ನು ಆಶ್ರಮ ದಿಂದ ಕರೆದು ಕೊಂಡು ಬರುತ್ತಾನೆ. ಆಗ ರಾಮ ಸೀತೆಯು ಮತ್ತೊಂದು ಪರೀಕ್ಷೆಯ ಮೂಲಕ ತನ್ನ ಮೇಲಿರುವ ಕಳಂಕದಿಂದ ಗಬೇಕೆಂದು ಹೇಳುತ್ತಾನೆ. ರಾಮನ ಮಾತುಗಳನ್ನು ಕೇಳಿ ಸೀತೆಯನ್ನು ದು:ಖ ಆವರಿಸುತ್ತದೆ. ಆಗ ಸೀತೆಯು ತನ್ನ ತಾಯಿಯಾದ ಭೂದೇವಿಯಲ್ಲಿ ಹೀಗೆ ಕೇಳಿಕೊಳ್ಳುತ್ತಾಳೆ - ತಾನು ಪತಿವ್ರತೆಯೇ ಆಗಿದ್ದಲ್ಲಿ, ಭೂಮಿ ಬಾಯಿ ಬಿರಿಯಲಿ, ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಎಂದು ಕೇಳಿಕೊಳ್ಳುತ್ತಾಳೆ. ಎಲ್ಲರೂ ನೋಡುತ್ತಿರುವಂತೆಯೇ ಭೂಮಿ ದೊಡ್ಡ ಸದ್ದಿನೊಂದಿಗೆ ಬಾಯಿ ಬಿಡುತ್ತದೆ. ಅಲ್ಲಿ ಸೀತೆಗಾಗಿ ಸಿಂಹಾಸನವೊಂದು ಪ್ರತ್ಯಕ್ಷವಾಗುತ್ತದೆ. ಸೀತೆಯ ತಾಯಿಯಾದ ಭೂದೇವಿಯು ತನ್ನ ಮಗಳನ್ನು ಅಪ್ಪಿಕೊಂಡು ಭೂಮಿ ಒಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಭೂಮಿ ಮುಚ್ಚಿಕೊಳ್ಳುತ್ತದೆ. ಈ ದೃಶ್ಯವನ್ನು ಕಂಡು ರಾಮ ಸೀತೆಯನ್ನು ಅನುಮಾನಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ಮುನಿಗಳು ರಾವಣನ ಸಂಹಾರದ ನಿಮಿತ್ತಕ್ಕಾಗಿ ಸೀತೆಯ ಅವತಾರವಾಗಿತ್ತು. ತನ್ನ ಕಾರ್ಯ ಮುಗಿದಿದ್ದರಿಂದ ಅವಳು ಹೋಗಿದ್ದಾಳೆ. ನೀನು ದುಃಖಿಸಬೇಡ ಎಂದು ರಾಮನನ್ನು ಸಮಾಧಾನಿಸುತ್ತಾರೆ. ಹೀಗೇ ಭೂಮಿಯಮೇಲಿನ ಜನರು ರಾಮಾಯಣ ಕಾಲದಿಂದಲೂ ಸೀತಾಮಾತೆ ಯನ್ನು ಭೂಮಿ ತಾಯಿಯ ಮಗಳಾಗಿ ಪವಿತ್ರಳೆಂಬ ಭಾವನೆಯಿಂದ ನಂಬಿಕೆಯಿರಿಸಿಕೊಂಡಿರುತ್ತಾರೆ. ಭೂಮಿಯ ಪವಿತ್ರತೆಯಲ್ಲಿ ಪಂಚಭೂತಗಳಲ್ಲೊಂದಾದ ನೀರಿನ ಪಾತ್ರ :- ವಿಶ್ವಕ್ಕೆ ಜಲ ಪೂರೈಕೆ ಮತ್ತು ವಿತರಣೆ :- ಆಹಾರ ಮತ್ತು ನೀರು ಮಾನವನ ತಳ ಮಟ್ಟದ ಅವಶ್ಯಕತೆ. ವರ್ಷ 2002ರಿಂದ ಜಾಗತಿಕ ಮಟ್ಟದಲ್ಲಿ ಕಲೆಹಾಕಲಾಗಿರುವ ಅಂಕಿಅಂಶದ ಪ್ರಕಾರ ಪ್ರತಿ 10 ಮಂದಿಯಲ್ಲಿ: ಅಂದಾಜು 5 ಜನರು ನೀರಿನ ಸಂಪರ್ಕ ಪಡೆದಿದ್ದಾರೆ (ತಮ್ಮ ಮನೆಯಲ್ಲಿ,ಅಂಗಳದಲ್ಲಿ ಅಥವಾ ಹೊಲದಲ್ಲಿ) 3 ಮಂದಿ ಸಂರಕ್ಷಿಸಲ್ಪಟ್ಟ ಬಾವಿ ಅಥವಾ ಬೀದಿ ನಲ್ಲಿಯಲ್ಲಿ ದೊರೆಯುವಂಥ ಇತರ ಸುಧಾರಿತ ಜಲ ಮೂಲವನ್ನು ಆಶ್ರಯಿಸಿದ್ದಾರೆ; 2 ಜನಕ್ಕೆ ಇಂಥ ಯಾವುದೇ ಸೇವೆ ಇಲ್ಲದೇ ವಂಚಿತರಾಗಿದ್ದಾರೆ; 10 ರಲ್ಲಿ 4 ಮಂದಿ ಸುಧಾರಿತ ಶೌಚಾಲಯ ಸೌಲಭ್ಯವಿಲ್ಲದೇ ಬದುಕುತ್ತಿದ್ದಾರೆ.[೩] ವರ್ಷ 2002ರ ಭೂಶೃಂಗದಲ್ಲಿ ಪಾಲ್ಗೊಂಡ ಸರಕಾರಗಳು ಈ ಕೆಳಗಿನ ಕ್ರಿಯಾ ಯೋಜನೆಗೆ ಅಂಗೀಕಾರ ನೀಡಿದವು: ವರ್ಷ 2015ರ ವೇಳೆಗೆ ಕುಡಿಯುವ ನೀರು ಸಿಕ್ಕದೇ ಪರದಾಡುತ್ತಿರುವ ಮಂದಿಗೆ ಸಮಪಾಲು ನೀಡುವುದು. ವಿಶ್ವ ಜಲ ಪೂರೈಕೆ ಮತ್ತು ಶುಚಿತ್ವದ ಮೌಲ್ಯ ಮಾಪನ ವರದಿ-2000 ([http:// www.who.int /water_sanitation _health/monitoring / globalassess/en/ ಗ್ಲೋಬಲ್ ವಾಟರ್ ಸಪ್ಲೈ ಅಂಡ್ ಸ್ಯಾನಿಟೇಷನ್ ರಿಪೋರ್ಟ್ ೨೦೦೦ = GWSSAR]) ಬಳಕೆದಾರನ ಮನೆ ಹಾಗೂ ಜಲ ಮೂಲದ ನಡುವಿನ ಅಂತರ ಒಂದು ಕಿಲೋಮೀಟರ್ ಒಳಗಿದ್ದು ಪ್ರತಿ ವ್ಯಕ್ತಿಗೆ ನಿತ್ಯವೂ ಕನಿಷ್ಠ 20 ಲೀಟರ್ ನೀರು "ಸಿಕ್ಕುವಂತಿರುವುದು ನ್ಯಾಯೋಚಿತ" ಎಂದು ವರದಿಯಲ್ಲಿ ವಿವರಿಸಲಾಗಿದೆ. ಶೌಚಾಲಯದ ಮೂಲ ಸೌಕರ್ಯವಿಲ್ಲದ ಜನಕ್ಕೆ ಅದನ್ನು ಒದಗಿಸುವುದು. "ಶೌಚಾಲಯದ ಮೂಲ ಸೌಕರ್ಯ" ಖಾಸಗಿಯದೇ ಇರಬಹುದು ಅಥವಾ ಪಾಲುದಾರಿಕೆಯದ್ದೇ ಆಗಿರಬಹುದು, ಆದರೆ ಅದು ಮಾನವನ ಶರೀರದಿಂದ ಹೊರಬಂದಿರುವ ತ್ಯಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ. ಸಂಪನ್ಮೂಲದ ಕೊರತೆ ಹಾಗೂ ಕ್ಷಿಪ್ರಗತಿಯಲ್ಲಿ ಏರುತ್ತಿರುವ ಜನಸಂಖ್ಯೆ ಸಮಸ್ಯೆಯನ್ನು ಎದುರಿಸುತ್ತಿರುವ ಬಡದೇಶಗಳು 2025ರ ವೇಳೆಗೆ ನೀರಿನ ಕೊರತೆಯಿಂದ ನರಳುವ ಚಿತ್ರ ಕಣ್ಣಿಗೆ ಕಟ್ಟುತ್ತಿದೆ. ನಮ್ಮ ಮುಂದಿನ ಪೀಳಿಗೆ ಇಂಥಹ ಕಷ್ಟಗಳನ್ನು ಎದುರಿಸಬೇಕಾಗಿಬರಬಹುದು,ನೀರಿನ ಸಮಸ್ಯೆಯಿಂದ ಜನತೆ ತತ್ತರಗೊಳ್ಳಬಹುದು.ಇದಕ್ಕಾಗಿ ಭೂಮಿಯಲ್ಲಿನ ಅಂತರ್ಜಲ ಖಾಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಇದೆ, ನೀರು ಮಳೆಗಾಲದಲ್ಲಿ ಹರಿದು ಅನಾವಶ್ಯಕವಾಗಿ ಸರಾಗವಾಗಿ ಸಮುದ್ರವನ್ನು ಸೇರುವುದನ್ನು ತಡೆದು ಭೂಮಿಯ ಅಂತರ್ಜಲ(ಒಸರು) ಬತ್ತಿ ಹೋಗದಂತೆ ತಡೆಯುವ ಸಲುವಾಗಿ ಅಲ್ಲಲ್ಲಿ ಇಂಗು ಗುಂಡಿಗಳ ರಚನೆ, ಹೊಸ ಹೊಸ ಹಳ್ಳ, ತೋಡು, ಕೆರೆಗಳ ರಚನೆಯಿಂದ ಮಳೆಗಾಲದ ನೀರನ್ನು ರಕ್ಷಿಸಿ ಶೇಕರಿಸಿಡುವುದು,ಸಣ್ಣ ಹಾಗೂ ಮದ್ಯಮ ಪ್ರಮಾಣದ ಜಲಾಶಯ,ಅಣೆಕಟ್ಟುಗಳ ನಿರ್ಮಾಣ ಇವುಗಳ ಪಾತ್ರ ಮಹತ್ತರವಾಗಿದೆ ಮಾತ್ರವಲ್ಲ ಅನಿವಾರ್ಯವೂ ಆಗಲಿದೆ. ಭೂಮಿಯ ಪವಿತ್ರತೆಯಲ್ಲಿ ಪಂಚಭೂತಗಳಲ್ಲೊಂದಾದ ಗಾಳಿ(ವಾಯು)ಯ ಪಾತ್ರ :- ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು. ಮಾಲಿನ್ಯವನ್ನು ಪ್ರತ್ಯಕ್ಷ ಮಾಲಿನ್ಯ ಹಾಗೂ ಪರೋಕ್ಷ ಮಾಲಿನ್ಯ ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಬ್ಲಾಕ್‌ಸ್ಮಿತ್ ಇನ್ಸ್ಟಿಟ್ಯೂಟ್ಎಂಬ ಸಂಸ್ಥೆಯು ಪ್ರತಿ ವರ್ಷ ಪ್ರಪಂಚದ ಅತಿಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶಗಳ ಪಟ್ಟಿ ಪ್ರಕಟಿಸುತ್ತದೆ. 2007ರ ಪ್ರಕಟಣೆಯಲ್ಲಿ ಪ್ರಕಟವಾದ ಪಟ್ಟಿಯಲ್ಲಿದ್ದ ಟಾಪ್ 10 ಮಾಲಿನ್ಯ ಪ್ರದೇಶಗಳು ಅಜರ್ಬೈಜಾನ್, ಚೀನಾ, ಭಾರತ, ಪೆರು, ರಷ್ಯಾ, ಉಕ್ರೇನ್ ಮತ್ತು ಜಾಂಬಿಯಾ ಪ್ರದೇಶದಲ್ಲಿವೆ. All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?oldid=846792.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|