Revision 846874 of "'ರಂಬಾರೂಟಿ'" on knwiki

ತುಳು ಚಲನಚಿತ್ರ ರಂಬಾರೂಟಿ [[ಚಲನಚಿತ್ರ ನಿರ್ಮಾಪಕ|ಶ್ರೀನಿವಾಸ ಉಜಿರೆ]]
[[ಚಲನಚಿತ್ರ ನಿರ್ದೇಶಕ|ಪ್ರಜ್ವಲ್ ಕುಮಾರ್ ಅತ್ತಾವರ]]. 
[[[[ತುಳು ಚಿತ್ರರಂಗ|ತುಳು]]]]ಭಾಷೆ

ನಿರ್ಮಾಪಕ ಶ್ರೀನಿವಾಸ ಉಜಿರೆ, ಸಹ ನಿರ್ಮಾಪಕಿ ಪ್ರಭಾ ಶ್ರೀನಿವಾಸ್,ಯುವ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ಪ್ರಥಮ ಬಾರಿಗೆ ಹೊಸ ತಂತ್ರಜ್ಞಾನದೊಂದಿಗೆ ಹೊಸ ಯುವ ನಟರನ್ನು ಹಾಕಿ ಒಪೇರಾ ಡ್ರೀಮ್ ಮೂವೀಸ್ ಲಾಂಛನದಲ್ಲಿ ನಿರ್ದೇಶಿಸಿದ ರಂಬಾರೂಟಿ ಚಿತ್ರ ಏಪ್ರಿಲ್ 1 ೨೦೧೬ ರಂದು ನಗರದ ಪ್ರಭಾತ್ ಥಿಯೇಟರ್ ಜೊತೆಗೆ ದಕ್ಷಿಣ ಕನ್ನಡ ಮತ್ತು ಉಡುಪಿಯ 13 ಥಿಯೇಟರ್‌ಗಳಲ್ಲಿ ಬಿಡುಗಡೆಗೊಂಡಿತು.

ಪ್ರಭಾತ್ ಥಿಯೇಟರ್‌ನಲ್ಲಿ ದೀಪಬೆಳಗಿಸುವ ಮೂಲಕ ಚಲನ ಚಿತ್ರವನ್ನು ಸಾಂಕೇತಿಕವಾಗಿ ಬಿಡುಗಡೆ ಗೊಳಿಸಲಾಯಿತು. ಬಿಡುಗಡೆ ಸಮಾರಂಭದಲ್ಲಿ ಚಾಲಿಪೋಲಿಲು ತುಳು ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಎಕ್ಕಸಕ್ಕ ತುಳು ಚಿತ್ರ ನಿರ್ಮಾಪಕ ಕಿಶೋರ್ ಡಿ.ಶೆಟ್ಟಿ, ಸೂಂಬೆ ತುಳು ಚಿತ್ರ ನಿರ್ಮಾಪಕ ಆಶ್ವಿತ್ ಕೊಟ್ಟಾರಿ, ರಂಗಭೂಮಿಯ ಹಿರಿಯ ಕಲಾವಿದ ತಮ್ಮ ಲಕ್ಷ್ಮಣ್, ಖ್ಯಾತ ವೈದ್ಯ ಡಾ. ರಾಜಶೇಖರ ಹೊಂಗರಕಿ, ಉದ್ಯಮಿ ಪ್ರಕಾಶ್ ಭಂಡಾರಿ, ನಿರ್ದೇಶಕ ಪ್ರಜ್ವಲ್ ಕುಮಾರ್, ನಿರ್ಮಾಪಕ ಶ್ರೀನಿವಾಸ ಉಜಿರೆ, ಸಹ ನಿರ್ಮಾಪಕಿ ಪ್ರಭಾ ಶ್ರೀನಿವಾಸ್, ನಾಯಕ ನಟ ವಿ.ಜೆ ವಿನೀತ್, ನಾಯಕಿ ಶ್ರುತಿ ಕೋಟ್ಯಾನ್ ಹಾಗೂ ಇತರ ಕಲಾವಿದರು ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.

ತುಳು ಚಲನ ಚಿತ್ರ ಇಂದು ೪೬ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಇಂದು ಬಿಡುಗಡೆಗೊಂಡಿರುವ ರಂಬಾರೂಟಿ ಚಿತ್ರ 46ನೇ ವರ್ಷದ ಮೊದಲ ಚಿತ್ರವಾಗಿ ಹೊರಬಂದಿದೆ. ಈ ಚಿತ್ರದಲ್ಲಿ ಹೊಸಬರೇ ಇದ್ದರು ಅವರ ಪ್ರತಿಭೆ ಇನ್ನಷ್ಟು ಪ್ರಕಾಶಮಾನವಾಗಲಿ ಎಂದು ರಂಗಭೂಮಿಯ ಹಿರಿಯ ಕಲಾವಿದ ತಮ್ಮ ಲಕ್ಷ್ಮಣ್ ಹೇಳಿದರು.

ಮಂಗಳೂರಿನ ಯುವ ನಿರ್ದೇಶಕ ಯುವ ಪ್ರತಿಭೆಗಳನ್ನು ಹಾಕಿ ಮೊದಲ ಪ್ರಯತ್ನಕ್ಕೆ ತುಳುವರಾದ ನಾವೆಲ್ಲರು ತುಂಬು ಹೃದಯದ ಪ್ರೋತ್ಸಾಹ ನೀಡಬೇಕು. ತುಳುವರು ಕನಿಷ್ಟ ಪಕ್ಷ ಒಂದು ಬಾರಿಯಾದರೂ ಕುಟುಂಬ ಸಮೇತರಾಗಿ ಬಂದು ವೀಕ್ಷಿಸಿ ರಂಬಾರೂಟಿ ಚಿತ್ರ ತಂಡದ ಪ್ರಯತ್ನವನ್ನು ಮತ್ತು ತುಳು ಚಿತ್ರವನ್ನು ಯಶಸ್ವೀಗೊಳಿಸಬೇಕು ಎಂದು ಚಾಲಿಪೋಲಿಲು ತುಳು ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಕರೆ ನೀಡಿದರು.

ಏಪ್ರಿಲ್ ತಿಂಗಳು ತುಳುವರಿಗೆ ಹೊಸ ವರ್ಷ, ಈ ತಿಂಗಳ ಆರಂಭದಲ್ಲಿ ಬಿಡುಗಡೆಗೊಂಡ ತುಳುಚಿತ್ರವನ್ನು ತುಳುವರು ಪ್ರೋತ್ಸಹಿಸಲೇಬೇಕು. ಚಿತ್ರದಲ್ಲಿ ದುಡಿದ ಎಲ್ಲಾ ಹೊಸ ಕಲಾವಿದರೂ ಮುಂದೆ ಯಶಸ್ವೀ ಕಲಾವಿದರಾಗಲಿ ಎಂದು ಎಕ್ಕಸಕ್ಕ ತುಳು ಚಿತ್ರ ನಿರ್ಮಾಪಕ ಕಿಶೋರ್ ಡಿ.ಶೆಟ್ಟಿ, ಹಾರೈಸಿದರು.

ರಂಬಾರೂಟಿ ಚಿತ್ರದ ನಾಯಕ ನಟ ವಿ.ಜೆ ವಿನೀತ್, ಹೊಸ ಯುವಕರು ಮಾಡಿದ ಹೊಸ ಪ್ರಯತ್ನವನ್ನು ತುಳುವರು ಪ್ರೋತ್ಸಾಹಿಸಿ, ಯಶಸ್ವಿಗೋಳಿಸಬೇಕೆಂದು ವಿನಂತಿಸಿದರು.

ನಿರ್ಮಾಪಕ ಶ್ರೀನಿವಾಸ ಉಜಿರೆ ಮಾತನಾಡಿ ಚಿತ್ರದ ಸೋಲು ಗೆಲುವು ಪ್ರೇಕ್ಷಕರ ಕೈಯಲ್ಲಿದೆ, ಹೊಸಬರ ಪ್ರಯತ್ನವನ್ನು ಬೆನ್ನು ತಟ್ಟಿ ಚಿತ್ರವನ್ನು ಗಲ್ಲಿಸಬೇಕೆಂದು ವಿನಂತಿಸಿದರು.

ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ಅತಿಥಿಗಳನ್ನು ಸ್ವಾಗತಿಸಿದರು. ನಾಯಕ ನಟ ವಿ.ಜೆ ವಿನೀತ್ ಧನ್ಯವಾದ ವಿತ್ತರು.

ಒಪೇರಾ ಡ್ರೀಮ್ ಮೂವೀಸ್ ಲಾಂಛನದಲ್ಲಿ ಪ್ರಕಾಶ್ ಕಾಬೆಟ್ಟು, ಶ್ರೀನಿವಾಸ್ ಉಜಿರೆ ಚಿತ್ರದ ನಿರ್ಮಾಣ ಮಾಡಿದ್ದಾರೆ. ಮಂಗಳೂರಿನ ಪ್ರಭಾತ್, ಬಿಗ್ ಸಿನಿಮಾಸ್, ಪಿ.ವಿ.ಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐಯೋನೆಕ್ಸ್, ಕಾರ್ಕಳದಲ್ಲಿ ರಾಧಿಕ, ಮೂಡಬಿದ್ರೆಯಲ್ಲಿ ಅಮರಶ್ರೀ, ಸುರತ್ಕಲ್ ನಲ್ಲಿ ನಟರಾಜ್, ಬಿಸಿ ರೋಡಿನಲ್ಲಿ ನಕ್ಷತ್ರ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಸುಳ್ಯ ಸಂತೋಷ್ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೊಂಡಿದೆ.