Revision 4833 of "ಕವಿರತ್ನ ಕಾಳಿದಾಸ - ಸದಾ ಕಣ್ಣಲೆ" on knwikisourceಚಿತ್ರ: '''[[ಕವಿರತ್ನ ಕಾಳಿದಾಸ]]'''

ಸಾಹಿತ್ಯ: '''ಚಿ. ಉದಯಶಂಕರ್'''

ಸಂಗೀತ: '''ಎಂ. ರಂಗರಾವ್'''

ಗಾಯನ: '''ಡಾ. ರಾಜ್‍ಕುಮಾರ್, ವಾಣಿ ಜಯರಾಂ'''

[ಗಂಡು]ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ

ಸದಾ ನನ್ನಲಿ ಒಲವಿನಾ ಬಯಕೆ ತುಂಬುವೇ

[ಹೆಣ್ಣು]ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ

ಸದಾ ನನ್ನಲಿ ಒಲವಿನಾ ಬಯಕೆ ತುಂಬುವೇ

[ಗಂಡು]ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ

[ಗಂಡು]

ಕಣ್ಣೆರಡು ಕಮಲಗಳಂತೆ ಮುಂಗುರುಳು ದುಂಬಿಗಳಂತೆ ||೨||

ನಾಸಿಕವು ಸಂಪಿಗೆಯಂತೆ ನೀ ನಗಲು ಹೂ ಬಿರಿದಂತೆ ||೨||

ನಡೆಯುತಿರೆ ನಾಟ್ಯದಂತೇ ನಡೆಯುತಿರೆ ನಾಟ್ಯದಂತೇ ||೨||

ರತಿಯೇ ಧರೆಗಿಳಿದಂತೆ

ಈ ಅಂದಕೆ ಸೋತೆನು ಸೋತೆ ನಾನೂ

[ಹೆಣ್ಣು]

ಸದಾ ಕಣ್ಣಲ್ಲೇ ಪ್ರಣಯದಾ ಕವಿತೆ ಹಾಡುವೆ

ಗುಡುಗುಗಳು ತಾಳದಂತೇ ಮಿಂಚುಗಳು ಮೇಳದಂತೆ

ಸುರಿವಾ ಮಳೆ ನೀರೆಲ್ಲಾ ಪನ್ನೀರ ಹನಿಹನಿಯಂತೇ ||೨||

ಜೊತೆಯಾಗಿ ನೀನಿರೆ ಸಾಕು ಭೂಲೋಕ ಸ್ವರ್ಗದಂತೆ

ಈ ಪ್ರೇಮಕೆ ಸೋತೆನು ಸೋತೆ ನಾನೂ

[ಗಂಡು]

ಸದಾ ಕಣ್ಣಲ್ಲೇ ಪ್ರಣಯದಾ ಕವಿತೆ ಹಾಡುವೆ

[ಹೆಣ್ಣು]

ಸದಾ ನನ್ನಲೀ ಒಲವಿನಾ ಬಯಕೆ ತುಂಬುವೇ

[ಗಂಡು]

ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ

ಸದಾ ನನ್ನಲೀ ಒಲವಿನಾ ಬಯಕೆ ತುಂಬುವೇ

[ಗಂಡು, ಹೆಣ್ಣು]

ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೇ...

{{ಪರಿವಿಡಿ}}
[[Category: ಕನ್ನಡ ಚಿತ್ರಸಾಹಿತ್ಯ]]
[[Category: ಕವಿರತ್ನ ಕಾಳಿದಾಸ ಚಿತ್ರ]]
[[Category: ಚಿ.ಉದಯಶಂಕರ್ ಸಾಹಿತ್ಯ]]
[[ವರ್ಗ: ಡಾ.ರಾಜ್‍ಕುಮಾರ್ ಗಾಯನ]]All content in the above text box is licensed under the Creative Commons Attribution-ShareAlike license Version 4 and was originally sourced from https://kn.wikisource.org/w/index.php?oldid=4833.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.