Revision 4840 of "ರವಿಚಂದ್ರ ಸತ್ಯಭಾಮೆ.. ಸತ್ಯಭಾಮೆ!" on knwikisourceಚಿತ್ರ: '''[[ರವಿಚಂದ್ರ]]'''

ಸಾಹಿತ್ಯ: '''ಉದಯಶಂಕರ್'''

ಸಂಗೀತ: '''ಉಪೇಂದ್ರಕುಮಾರ್'''

ಗಾಯನ: '''ಡಾ|ರಾಜ್ ಕುಮಾರ್'''

ಅ ಅ ಅ ಅ ಆ... ಕಂಡೊಡನೆ ಕರಪಿಡಿದು.. ಕಲ್ಪಿಸದಾ ಸುಖ ಕೊಡುವ ಭಾಮೆಯಲೀ ಇಂದೇನು ಕೋಪವೊ ಕಾಣೇ!..

ಅ ಅ ಅ ಅ ಆ

ಭಾಮಾಮಣಿ.. ಚಿಂತಾಮಣಿ.. ಕಾಮನರಗಿಣಿ.. ಮುತ್ತಿನಮಣಿ.. ಕರಿಮಣಿ.. ರಿಮಣಿ.. ಮಣಿ ನೀ! ರಾಣಿ ರಾಣಿ..

ಸತ್ಯಭಾಮೆ!

ಸತ್ಯಭಾಮೆ.. ಸತ್ಯಭಾಮೆ! ಕೋಪವೇನೆ ನನ್ನಲಿ? |೨|

ಸರಸಕೆ ಕರೆದರೆ ವಿರಸವ ತೋರುವೆ ಏಕೆ ನನ್ನಲಿ? |೨|.. ಏಕೆ ನನ್ನಲಿ? ಏಕೆ ನನ್ನಲಿ?

ಸತ್ಯಭಾಮೆ.. ಸತ್ಯಭಾಮೆ! ಕೋಪವೇನೆ ನನ್ನಲಿ?..

ನನ್ನಲಿ ಕೋಪವೆ... ಕೊಪವೆ ನನ್ನಲಿ ... ಏಕೆ ನನ್ನಲಿ!?

ಸತ್ಯಭಾಮೆ.. ಸತ್ಯಭಾಮೆ! ಕೋಪವೇನೆ ನನ್ನಲಿ?

ದುರು ದುರು ನೋಡದೆ.. ಕಿಡಿಗಳ ಕಾರದೆ.. ಕೆಣಕದೆ ಕಾಡದೆ.. ದೂರಕೆ ಓಡದೆ |೨|

ತನುವಿನ ತಾಪವ ಕಳೆಯಲು ಸನಿಹಕೆ |೨|.. ಬಾರೇ ಮೊಹಿನಿ

ಹೇ! ಬಾರೇ ಮೊಹಿನಿ.. ಮೊಹಿನಿ ಈ.. ಕಾಮಿನಿ ಈ.. ಭಾಮಿನಿ ಈ.. ಬಾರೇ ಮೊಹಿನಿ!

ಸತ್ಯಭಾಮೆ.. ಸತ್ಯಭಾಮೆ.. ಸತ್ಯಭಾಮೆ.. ಸತ್ಯಭಾಮೆ! ಕೋಪವೇನೆ ನನ್ನಲಿ?

ಗಲ್ಲವ ಹಿಡಿಯಲೆ?.. ಕೆನ್ನೆಯ ಸವರಲೆ?.. ತೋಳಲಿ ಭಾಮೆಯ ನಡುವನೆ ಬಳಸಲೆ? |೨|

ಕೊಳಲಲಿ ಮೋಹನ ರಾಗವ ನುಡಿಸಲೆ? |೨|.. ಹೇಳೇ ಕೋಮಲೆ

ಹೇ! ಹೇಳೇ ಕೋಮಲೆ.. ಕೋಮಲೆ ಏ.. ಶ್ಯಾಮಲೆ ಏ.. ಚಂಚಲೆ ಏ.. ಹೇಳೇ ಕೋಮಲೆ!

ಸತ್ಯಭಾಮೆ.. ಸತ್ಯಭಾಮೆ.. ಸತ್ಯಭಾಮೆ.. ಸತ್ಯಭಾಮೆ! ಕೋಪವೇನೆ ನನ್ನಲಿ?

ರಾಧೆಯ ವಲ್ಲೆನು.. ರುಕ್ಮಿಣಿ ವಲ್ಲೆನು.. ಭಾಮೆಯನಲ್ಲದೆ ಯಾರನು ನೋಡೆನು! |೨|

ಕೈಗಳ ಮುಗಿದರು ಯಾರು ನೋಡರು |೨|.. ಸೋತೆ ಪ್ರೇಯಸಿ..

ಅ ಹಾ! ಸೋತೆ ಪ್ರೇಯಸಿ.. ಪ್ರೇಯಸಿ ಈ.. ರೂಪಸಿ ಈ.. ಊರ್ವಸಿ ಈ

ಸತ್ಯಭಾಮೆ.. ಸತ್ಯಭಾಮೆ.. ಸತ್ಯಭಾಮೆ.. ಸತ್ಯಭಾಮೆ! ಕೋಪವೇನೆ ನನ್ನಲಿ?

ಸರಸಕೆ ಕರೆದರೆ ವಿರಸವ ತೋರುವೆ |೩| ಏಕೆ ನನ್ನಲೀ!?

{{ಪರಿವಿಡಿ}}
[[Category: ಕನ್ನಡ ಚಿತ್ರಸಾಹಿತ್ಯ]]
[[Category: ರವಿಚಂದ್ರ ಚಿತ್ರ]]
[[Category: ಚಿ.ಉದಯಶಂಕರ್ ಸಾಹಿತ್ಯ]]
[[Category:Kannada]]All content in the above text box is licensed under the Creative Commons Attribution-ShareAlike license Version 4 and was originally sourced from https://kn.wikisource.org/w/index.php?oldid=4840.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.