Revision 4841 of "ಶುಭಮಂಗಳ - ಈ ಶತಮಾನದ ಮಾದರಿ ಹೆಣ್ಣು" on knwikisourceಚಿತ್ರ: '''[[ಶುಭಮಂಗಳ]]'''

ಸಂಗೀತ: '''ವಿಜಯಭಾಸ್ಕರ್'''

ಗಾಯನ: '''ವಾಣಿ ಜಯರಾಮ್'''

ಈ ಶತಮಾನದ ಮಾದರಿ ಹೆಣ್ಣು

ಸ್ವಾಭಿಮಾನದ ಸಾಹಸಿ ಹೆಣ್ಣು |೨|

ಗುಲಾಮಳಿವಳಲ್ಲಾ.. ಸಲಾಮು ಹೊಡೆಯೊಲ್ಲಾ!

ಕುತಂತ್ರವಿಲ್ಲದೆ..

ಅತಂತ್ರವಾಗದೆ..

ಸ್ವತಂತ್ರಳಾಗಿಹಳು!

ಈ ಶತಮಾನದ ಮಾದರಿ ಹೆಣ್ಣು

ಸ್ವಾಭಿಮಾನದ ಸಾಹಸಿ ಹೆಣ್ಣು

ನಾಗರೀಕತೆಯ ನಾಟಕದಲ್ಲಿ ನಟಿಸುವ ಹೆಣ್ಣಲ್ಲಾ!

ಆದುನಿಕತೆಯ ಅಹಂಕಾರದಲಿ ಮೆರೆಯುವ ಹೆಣ್ಣಲ್ಲಾ!

ಆದರ್ಶವಿಲ್ಲದ ಅಂದಥೆಯಲ್ಲಿ ಅಳಿಯುವ ಹೆಣ್ಣಲ್ಲಾ!

ವಿವೇಕವೀರದ, ವಿಚಾರಧಾರೆಯ, ವಿಬಿನ್ನ ರುಚಿಯವಳು!

ಈ ಶತಮಾನದ ಮಾದರಿ ಹೆಣ್ಣು

ಸ್ವಾಭಿಮಾನದ ಸಾಹಸಿ ಹೆಣ್ಣು

ಮಾನಾಭಿಮಾನಕೆ ಮಾನ್ಯತೆ ನೀಡುವ ಮಾಲಿನಿ ಹೆಣ್ಣು!

ಮನತನ ಗೌರವ, ಮಂಗಳ ದೀಪವ ಬೆಳುಗುವಳೀ ಹೆಣ್ಣು!

ದುಡಿಮೆಯ ದೇವರು ಎನ್ನುವ ಮಂತ್ರದ ಮಾಂತ್ರಿಕಳೀ ಹೆಣ್ಣೂ!

ವಿಲಾಸ ಜೀವನ ವಿಚಿತ್ರ ವೇಷಕೆ ವಿರೋಧಿಯಾಗಿಹಳು!

ಈ ಶತಮಾನದ ಮಾದರಿ ಹೆಣ್ಣು

ಸ್ವಾಭಿಮಾನದ ಸಾಹಸಿ ಹೆಣ್ಣು

ರಾಜತಂತ್ರದ ಚದುರಂಗದಲಿ ಚತಮಕ ಚತುರೆ ಈ ಹೆಣ್ಣು!

ಬಾಳಿನ ಬಗೆ ಬಗೆ ಬಣ್ಣದ ಬದುಕಿನ ನಾಯಕಿ ಈ ಹೆಣ್ಣು!

ವಿದ್ಯಾ ಬುದ್ಧಿಯ, ಸಿದ್ಧಿ-ಪ್ರಸಿದ್ಧಿಯ ಸಾದಕಳೀ ಹೆಣ್ಣೂ!

ವಿಷೇಶ ಪ್ರತಿಭೆಯ ವಿಶಾಲ ಕೀರ್ತಿಯ ವಿಜೆತಳಾಗಿಹಳು!

ಈ ಶತಮಾನದ ಮಾದರಿ ಹೆಣ್ಣು

ಸ್ವಾಭಿಮಾನದ ಸಾಹಸಿ ಹೆಣ್ಣು

ಗುಲಾಮಳಿವಳಲ್ಲಾ.. ಸಲಾಮು ಹೊಡೆಯೊಲ್ಲಾ!

ಕುತಂತ್ರವಿಲ್ಲದೆ..

ಅತಂತ್ರವಾಗದೆ..

ಸ್ವತಂತ್ರಳಾಗಿಹಳು!

{{ಪರಿವಿಡಿ}}
[[Category: ಕನ್ನಡ ಚಿತ್ರಸಾಹಿತ್ಯ]]
[[Category: ಶುಭಮಂಗಳ ಚಿತ್ರ]]
[[Category: ಚಿ.ಉದಯಶಂಕರ್ ಸಾಹಿತ್ಯ]]
[[Category:Kannada]]All content in the above text box is licensed under the Creative Commons Attribution-ShareAlike license Version 4 and was originally sourced from https://kn.wikisource.org/w/index.php?oldid=4841.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.