Revision 8718 of "ಮುಖ್ಯ ಪುಟ" on knwikisourceಜನಜೀವನ:ಗ್ಯಾಬಾನಿನಲ್ಲಿ ಸು.10,000 ಮಂದಿ ಐರೋಪ್ಯರಿದ್ದಾರೆ. ಸ್ಥಳೀಯ ಜನರ ಪೈಕಿ ಕುಬ್ಜರು(ಪಿಗ್ಮಿ) ಸಣ್ಣಸಣ್ಣ ಗುಂಪುಗಳಲ್ಲಿ ಕಾಡಿನಲ್ಲಿ ಚದುರಿದ್ದಾರೆ. ಬೇಟೆ,ಆಹಾರ ಸಂಗ್ರಹ - ಇವು ಇವರ ಜೀವನೋಪಾಯ. ಇಲ್ಲಿಯ ಜನರಲ್ಲಿ ತುಂಬ ಮುಂದುವರಿದವರಾದ ಮ್ಪಾಂಗ್ವೇಗಳು ವಿಶೇಷವಾಗಿ ಕರಾವಳಿಯಲ್ಲಿ ವಾಸಿಸುತ್ತಾರೆ. ಇವರು ಫ್ಯಾಂಗ್ ಜನರೊಂದಿಗೆ ಭಾಗಶಃ ಬೆರೆತ್ತಿದ್ದಾರೆ. ಈಶಾನ್ಯದಲ್ಲಿ ಬಕೋಟ ಮುಂತಾದ ತಂಡಗಳುಂಟು. ಈ ಜನ ಕ್ಯಾಮರೂನಿನ ಗುಂಪುಗಳೊಡನೆ ಸಂಬಂಧ ಹೊಂದಿದ್ದಾರೆ. ಮಧ್ಯಭಾಗದಲ್ಲಿ ಕಾಂಡ ಜನರಿದ್ದಾರೆ. ಇಲ್ಲಿಯ ಜನ ಮೂಲತಃ ಸರ್ವಚೇತನಗವಾದಿಗಳು. ಈಚೆಗೆ ಇಲ್ಲಿ ಕ್ರೈಸ್ತಮತ ಪ್ರಚಾರಕ್ಕೆ ಬಂದಿದೆ. ನೆಲದ ಒಡೆತನ ಸಾಮೂಹಿಕವಾಗಿದ್ದು, ಗುಂಪುಗಳ ಯಜಮಾನರು ಅದನ್ನು ನಿರ್ವಹಿಸುತ್ತಾರೆ. ಕಾದುಗಳನ್ನು ಸುಟ್ಟು ಕೃಷಿ ಮಾಡುವ ಪದ್ಧತಿ ಇದೆ. ಉತ್ತರದ ಜನ ಫ್ಯಾಂಗ್ ಭಾಷೆ ಆಡುತ್ತಾರೆ. ಉಳಿದೆಡೆಗಳಲ್ಲಿ ಬಾಂಟು ಉಪಭಾಷೆಗಳು ಬಳಕೆಯಲ್ಲಿವೆ. ಫ್ರ್ಂಚ್ ಅಧಿಕೃತ ಭಾಷೆಯಾಗಿ ಸ್ವೀಕೃತವಾಗಿದೆ. ಅದೇ ಸದ್ಯಕ್ಕೆ ಶಿಕ್ಷಣ ಮಾಧ್ಯಮ. ಆರ್ಥಿಕ ಪರಿಸ್ಥಿತಿ: ಕೃಷಿ ಇಲ್ಲಿಯ ಜನರ ಮುಖ್ಯ ಜೀವನೋಪಾಯ. ಬಾಳೆ, ಮರಗೆಣಸು, ಕೆಸವು ಮುಖ್ಯ ಉತ್ಪನ್ನಗಳು. ಸಮುದ್ರತೀರದಲ್ಲಿ ಮೀನುಗಾರಿಕೆಯೂ ಒಂದು ಮುಖ್ಯ ಕಸಬು. ರಬ್ಬರ್, ಕೋಕೋ - ಇವು ಇತರ ಬೆಳೆಗಳು.ತಾಳೆ ಎಣ್ಣೆ, ದಂತ, ಮರ ಇವು ಅರಣ್ಯೋತ್ಪನ್ನಗಳು. ಪೋರ್ಟ್-ಜೆಂಟಿನಲ್ಲಿ ಪದರ ಹಲಗೆ(ಪ್ಲೈವುದ್) ಕಾರ್ಖಾನೆಯುಂಟು. ಚಿನ್ನ, ವಜ್ರ, ಕಲ್ಲು, ಪೊಟಾಷ್ ಇಲ್ಲಿಯ ಮುಖ್ಯ ಖನಿಜಗಳು. ಲೋಪೆಜ್ ಭೂಶಿರ ಭಾಗದಲ್ಲಿ ಪೆಟ್ರೋಲಿಯಂ ಸಿಗುತ್ತದೆ. ಫ್ರಾನ್ಸ್ ವೀಲ್ ಬಳಿ ಮ್ಯಾಂಗನೀಸ್ ನಿಕ್ಷೇಪಗಳಿವೆ. ಈಶಾನ್ಯದಲ್ಲಿರುವ ಮೆಕಾಂಬೊದಲ್ಲೂ ನೈರುತ್ಯದ ಟ್ವೆಬಾಂಗದಲ್ಲೂ ಕಬ್ಬಿಣ ಅದುರ ಉಂಟು ಫ್ರಾನ್ಸ್ ವೀಲ್ ಬಳಿ ಮೌನಾನದಲ್ಲಿ ಯುರೇನಿಯಂ ಸಿಗುತ್ತದೆ. ಗ್ಯಾಬಾನ್ ರಾಜ್ಯದ ಮುಖ್ಯ ಆಮದುಗಳು ಆಹಾರ ಮತ್ತು ಯಂತ್ರೋಪಕರಣ. ರಘ್ತುಗಳು ಚೌಬೀನೆ, ಮ್ಯಾಂಗನೀಸ್, ಯುರೇನಿಯಂ, ಕಚ್ಚಾತೈಲ, ಪೆಟ್ರೋಲಿಯಂ, ತಾಳೆ ಎಣ್ಣೆ. ಪೋರ್ಟ್ - ಜೆಂಟಿಲ್ ಮುಖ್ಯ ರೇವು ಪಟ್ಟಣ ಮತ್ತು ಕೈಗಾರಿಕಾ ಕೇಂದ್ರ, ನಡ್ಜೊಲೇ, ಮೌಯಿಲ, ಫ್ರಾನ್ಸ್ ವೀಲ್ ಮತ್ತು ಲಂಬಾರೇನೇ - ಇವು ಇತರ ಪಟ್ಟಣಗಳು. ಲಂಬಾರೇನೇಯಲ್ಲಿ ಆಲ್ಬರ್ಟ್ ಷ್ವೀಟ್ಜ್ ಜರ್ 1913 ರಲ್ಲಿ ಆಸ್ಪತ್ರೆ ಸ್ಥಾಪಿಸಿದ್ದರು. ಇತಿಹಾಸ:ಗ್ಯಾಬಾನಿನಲ್ಲಿ ಹಳೆ ಶಿಲಾಯುಗ ಮತ್ತು ನವಶಿಲಾಯುಗಗಳ ಉಪಕರಣಗಳು ಸಿಕ್ಕಿವೆ. ಪ್ರಾರಂಭದಲ್ಲಿ ಮ್ಯೆನೇ ಭಾಷಾಗುಂಪಿನ ಜನ ಓಗೊವೇ ನದೀಬಯಲು ಮತ್ತು ಸಾಗರತೇರದಲ್ಲಿ ಜೀವಿಸುತ್ತಿದ್ದರು. ಕಾಲಕ್ರಮದಲ್ಲಿ ಇತರ ಬಣಗಳು ಈ ಭಾಗಕ್ಕೆಬಂದುವು. 19ನೆಯ ಶತಮಾನದ ಹೊತ್ತಿಗೆ ಮ್ಪಾಂಗ್ವೇ, ಮಿಟ್ಷೂಗೊ - ಓಕಂಡೆ, ಬಪುನ ಎಷಿರ, ಮ್ಬೇಡೆಆಡುಮ- ಟೇಕೇ, ಪ್ಯಾಂಗ್ ಮತ್ತು ಬಕೇಲೇ ಬಣಗಳು ನೆಲೆಸಿದುವು. ಪೋರ್ಚುಗೀಸ್ ನಾವಿಕರು ಸು.1472 ರಲ್ಲಿ ಗ್ಯಾಬಾನ್ ಪಶ್ಚಿಮ ತೀರದ ಅಳಿವೆಯನ್ನು ಕಂಡುಹಿಡಿದು ಅದಕ್ಕೆ ಗ್ಯಾಬಾನ್ ಎಂದು ಹೆಸರಿಟ್ಟರು. ತರುವಾಯ ಲೋಪೊ ಗಾನ್ ಸಾಲ್ವಿಸ್ ಎಂಬ ನಾವಿಕ ಲೋಪೆಜ್ ಭೂಶಿರವನ್ನು ಬಳಸಿದ. 1475 ರಲ್ಲಿ ರ್ಯು ಡಿ ಸೆಕ್ವೇರ 160ಕಿಮೀ ದಕ್ಷಿಣಕ್ಕಿರುವ ಸೇಂಟ್ ಕ್ಯಾದರೀನ್ ಭೂಶಿರವನ್ನು ಮುಟ್ಟಿದ. ಪೋರ್ಚುಗೀಸರು ಚೌಬೀನೆ ಮತ್ತು ದಂತ ವ್ಯಾಪಾರಕ್ಕಾಗಿ ಇಲ್ಲಿಗೆ ಬರುತ್ತಿದ್ದರು. 17ನೆಯ ಶತಮಾನದಲ್ಲಿ ಡಚ್ಚರು ಕೊರಿಸ್ಕೊ ದ್ವೀಪದಲ್ಲಿ ನೆಲಸಿ ಅಲ್ಲಿಂದ ಗ್ಯಾಬಾನ್ ತೀರದ ಆಳಿವೆಯನ್ನು ಸೂರೆ ಮಾಡಿದರು. ಇಂಗ್ಲಿಷರೂ ಫ್ರೆಂಚರೂ ವ್ಯಾಪಾರದಲ್ಲಿ ಪೈಪೋಟಿ ನದೆಸಿದರೂ ಗ್ಯಾಬಾನಿನ ಸರಕುಗಳನ್ನು ಪೋರ್ಚುಗೀಸರೇ ಹೆಚ್ಚಾಗಿ ಕೊಂಡು ವ್ಯಾಪಾರವನ್ನು ನಿಯಂತ್ರಿಸಿದ್ದರು. 1815 ರಲ್ಲಿ ಗುಲಾಮ ಮಾರಾಟವನ್ನು ಹೆಸರಿಗೆ ಮಾತ್ರ ರದ್ದು ಮಾಡಲಾಯಿತು. 1880ರ ವರೆಗೆ ಇದು ನ್ಡೆಯುತ್ತಲೇ ಇತ್ತು. ಮ್ಪಾಂಗ್ವೇ, ಓರುಂಗು ಮತ್ತು ಗ್ಯಾಲೋ ಬುಡಕಟ್ಟಿನ ವ್ಯಾಪಾರಿಗಳು ತಮ್ಮ ಬಣಗಳ ಜನರನ್ನು ಹಿಡಿದು ದೋಣಿಗಳಲ್ಲಿ ಸಾಗಿಸಿ ಸಾಗರತೀರದಲ್ಲಿ ಗುಲಾಮರನ್ನಾಗಿ ಮಾರುತ್ತಿದ್ದರು. ಅಲ್ಲಿಂದ ಇವರನ್ನು ಹಡಗುಗಳಲ್ಲಿ ವಿದೇಶಗಳಿಗೆ ಸಾಗಿಸಲಾಗುತ್ತಿತ್ತು. 1839 ರಲ್ಲಿ ಕ್ಯಾಪ್ಟನ್ ಎಲ್.ಇ. ಬಾಯೆಟ್ - ವಿಲಿಯಂಮೆಜ್ ಗುಲಾಮ ವ್ಯಾಪಾರವನ್ನು ತಡೆಯುವ ಕೆಲಸಕ್ಕೆ ನೇಮಿತನಾಗಿ ಗ್ಯಾಬಾನ್ ಅಳಿವೆಯ ಬಲದಂಡೆಯ ಬಣದ ನಾಯಕನೊಡನೆ ಒಪ್ಪಂದ ಮಾಡಿಕೊಂಡ; ಇನ್ನೊಬ್ಬ ನಾಯಕನಿಂದ ಎಡದಂಡೆಯನ್ನು ಪಡೆದುಕೊಂಡು ಅಲ್ಲಿ 1843 ರಲ್ಲಿ ಕೋಟೆಯೊಂದನ್ನು ಕಟ್ಟಿದ. 1842 - 44ರ ಆವಧಿಯಲ್ಲಿ ಕ್ರೈಸ್ತ ಪಾದ್ರಿಗಳು ಅಲ್ಲಿ ನೆಲಸಿ ಕ್ರೈಸ್ತಧರ್ಮ ಪ್ರಚಾರ ಮಾಡತೊಡಗಿದರು. 1848ರಲ್ಲಿ ಈ ನೆಲೆ, ಕ್ಯಾಪ್ಟನ್ ಬಾಯೆಟ್ ವಿಲಿಯಂಮೆಜ಼್ ಸ್ಥಾಪಿಸಿದ ಫ್ರೆಂಚ್ ಕೋಟೆ ಇವೆರಡನ್ನೂ ಸೇರಿಸಿ ಲೀಬ್ರವೀಲ್ ಎಂಬ ಹೆಸರಿಡಲಾಯಿತು. 1855ರಲ್ಲಿ ಪಾಲ್ ಬಿ ಡ್ಯು ಚೈಲು ಅಮೆರಿಕಾದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನಿಂದ ಗ್ಯಾಬಾನ್ ನದೀಮುಖಜ ಭೂಮಿಯನ್ನು ಪರಿಶೋಧಿಸಲು ನಿಯೋಜಿತನಾದ. ಅವನು ಇಲ್ಲಿ ಕುಬ್ಜರನ್ನು ಗೊರಿಲಗಳನ್ನೂ ಕಂಡ; ನ್ಗೌನೀ ನದಿಯ ಮೇಲು ಪ್ರದೇಶಗಳತ್ತ ಸಂಚಿರಿಸಿದ. ಅಲ್ಲಿಯ ಪರ್ವತಶ್ರೇಣಿಗೆ ಅವನ ಹೆಸರನ್ನು ಕೊಡಲಾಗಿದೆ. 1867ರಲ್ಲಿ ಭೂಪರಿಶೋಧಕ ಎ.ಎಂ.ಎ. ಏಮೆಸ್, 1873 ರಲ್ಲಿ ಬ್ರಿಟಿಷ್ ವ್ಯಾಪಾರಿ ಆರ್.ಬಿ.ಎನ್.1873 ರಲ್ಲಿ ಬ್ರಿಟಿಷ್ ವ್ಯಾಪಾರಿ ಆರ್.ಬಿ.ಎನ್. ವಾಕರ್ ಇವರು ಓಗೊವೇ ನದಿಯ ಪ್ರವಾಹಕ್ಕೆ ಎದುರಾಗಿ ಸಂಚರಿಸಿ ಅದರ ಮೂಲವನ್ನು ಕಂಡುಹಿಡಿಯಲು ಪ್ರಯತ್ನೀದರು. ಓಗೊವೇ- ಇವಿಂಡೊ ನದೀ ಸಂಗಮ ಸ್ಥಳವನ್ನು 1874 ರಲ್ಲಿ ಆಲ್ ಫ್ರೆಡ್ ಮಾರ್ಚೆ ಮತ್ತು ಎಲ್.ಇ.ಎಚ್. ಡ್ಯುಪಾಂಟ್ ಮುಟ್ಟಿದರು. ಓಗೊವೇ ನದಿಯ ಮೂಲವನ್ನು 1877 ರಲ್ಲಿ ಪಿಯರ್ ಸವೊರ್ಗಾನ್ ಡಿ ಬ್ರಾಜಾ ತಲುಪಿದ. 1880 ರಲ್ಲಿ ಅವನು ಫ್ರಾನ್ಸ್ ವೀಲ್ ಸ್ಥಾಪಿಸಿದ. 1886 ರಲ್ಲಿ ಗ್ಯಾಬಾನಿಗೆ ಫ್ರೆಂಚ್ ಗವರ್ನರೊಬ್ಬ ನೇಮಕನಾದ. ಆಗ ಇದು ಫ್ರೆಂಚ್ ಕಾಂಗೋಗೆ ಸೇರಿತ್ತು(1889-1904). ತರುವಾಯ ಇದು ಆಫ್ರಿಕ ಸಾಮಭಾಜಕವೃತ್ತೀಯ ಫ್ರೆಂಚ್ ಪ್ರಾಂತವಾಯಿತು. ಗ್ಯಾಬಾನ್ ಮತ್ತು ಕ್ಯಾಮರೂನ್ ನಡುವಣ ಗಡಯನ್ನು 1885 ರಲ್ಲಿ ನಿರ್ಧರಿಸಲಾಯಿತು. ಸ್ಟ್ಯಾನಿಷ್ ಗಿನಿಯ ಕಡೆಯ ಗಡಿಯನ್ನು 1900 ರಲ್ಲಿ ಖಚಿತಗೊಳಿಸಲಾಯಿತು. All content in the above text box is licensed under the Creative Commons Attribution-ShareAlike license Version 4 and was originally sourced from https://kn.wikisource.org/w/index.php?oldid=8718.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|