Difference between revisions 1000686 and 1064789 on knwiki

{{ಅಳಿಸುವಿಕೆ|ವಿಶ್ವಕೋಶದ ಶೈಲಿಯಲ್ಲಿಲ್ಲ. ಉಲ್ಲೇಖಗಳೂ ಇಲ್ಲ}}

ಅನೇಕ ಕಾಯಿಲೆ -ರೋಗ -ದೈಹಿಕ ತೊಂದರೆಗಳಿಗೆ ಮನೆಯಲ್ಲೇ , ಆಹಾರ, ನೀರು ಮನೆಯಲ್ಲಿರುವ ಅಡಿಗೆಗೆ ಉಪಯೋಗಿಸುವ ಸೊಪ್ಪು, ತರಕಾರಿ, ವಸ್ತು, ಸಸ್ಯ, ನಾರು ಬೇರುಗಳಿಂದ ಔಷಧಿ ಮಾಡಿಕೊಂಡು ವಾಸಿಮಾಡಿಕೊಳ್ಳಬಹುದು. ಈ ಪದ್ಧತಿ ಅನೂಚಾನವಾಗಿ ವಾಡಿಕೆಯಿಂದ ತಲೆಮಾರಿನಿಂದ ತಲೆಮಾರಿಗೆ ,ಮನೆ ಮನೆಗಳಲ್ಲಿ ನಡೆದುಕೊಂಡು ಬಂದಿದೆ. ಬರವಣಿಗೆಗಳ ದಾಖಲೆ ಸಿಗುವುದು ಕಷ್ಟ. ಈಚೆಗೆ ಇದನ್ನು ಈ ಮನೆ ಮದ್ದಿನ ಬಗೆಯನ್ನು ದಾಖಲು ಮಾಡಲಾಗುತ್ತಿದೆ.
*ಹೆಚ್ಚಿನ ಕಾಯಿಲೆ, ದೈಹಿಕ ತೊಂದರೆ ಇದ್ದಾಗ ಇದನ್ನೇ ನೆಚ್ಚಿಕೊಳ್ಳದೇ ವೈದ್ಯರನ್ನು ಕಾಣುವುದು ಒಳಿತು.
== ತರಕಾರಿ == 
(contracted; show full)

* ಕಹಿಬೇವನ್ನು ಅರೆದು ಮುಂಜಾನೆ ಕುಡಿದರೆ ದೊಡ್ಡವರಲ್ಲಿ ಜಂತು ಹುಳುವಿನ ಸಮಸ್ಯೆ ಉಂಟಾಗುವುದಿಲ್ಲ. ವಾಯು ಸಂಬಂಧಿ ಸಮಸ್ಯೆಯನ್ನೂ ನಿವಾರಿಸುವ ಶಕ್ತಿ ಇದಕ್ಕಿದೆ.

* ಹಸಿದ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಹೊಟ್ಟೆಯನ್ನು ಬ್ಯಾಕ್ಟೀರಿಯಾದಿಂದ ಮುಕ್ತಗೊಳಿಸುತ್ತದೆ.  ಜೀರ್ಣಕ್ರಿಯೆ ಉತ್ತಮವಾಗುತ್ತದೆ.

* ಉದ್ವೇಗ ಹಾಗೂ ಆತಂಕದಿಂದ ಎದೆಬಡಿತ ಹೆಚ್ಚುವ ಸಮಸ್ಯೆ ನಿಮ್ಮಲ್ಲಿದ್ದರೆ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೀಬೆ ಹಣ್ಣು ಸೇವಿಸುವುದು ಅತ್ಯುತ್ತಮ.<ref>
[{{Cite web |url=http://www.prajavani.net/news/article/2017/03/28/480511.html   |title=ಖಾಲಿ ಹೊಟ್ಟೆಗೆ ಒಂದಿಷ್ಟು ‘ಮದ್ದು’;28 Mar, 2017] |access-date=2017-03-28 |archive-date=2017-03-27 |archive-url=https://web.archive.org/web/20170327233736/http://www.prajavani.net/news/article/2017/03/28/480511.html |url-status=dead }}</ref>

'''ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆಗಳು ಮಳೆಗಾಲದಲ್ಲಿ ಆವರಿಸಿಕೊಳ್ಳುತ್ತದೆ. ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯತ್ತ ಮುಖ ಮಾಡುವವರೇ ಹೆಚ್ಚು. ಆದರೆ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸುವುದರಿಂದ ಇಂತಹ ಸಮಸ್ಯೆಗಳಿಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವೊಂದು ಮನೆ ಮದ್ದುಗಳನ್ನು ಇಲ್ಲಿದೆ…'''

ಕೆಮ್ಮು ಶುರುವಾದಾಗ ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ. ಇದರಿಂದ ಗಂಟಲಿನ ಉರಿಯೂತ ಕಡಿಮೆಯಾಗುತ್ತದೆ.ಒಂದೆಲಗದ ಕಷಾಯವನ್ನು ಸೇವಿಸಿದರೆ ಕೆಮ್ಮು ಗುಣವಾಗುತ್ತದೆ.

(contracted; show full)<ref>ಪ್ರಜಾವಾಣಿ ೧೨-೭-೨೦೧೪- ಗೀತಾ ಬರ್ಲ</ref>
<ref>ವಿಜಯಕರ್ನಾಟಕ (ಮನೆ ಮದ್ದು ೨೭-೬-೨೦೧೪ ಡಾ.ಸುಜೇತಾ.</ref>
==ಉಲ್ಲೇಖ==
[[ವರ್ಗ:ಔಷಧಿಗಳು]] [[ವರ್ಗ:ಆಯುರ್ವೇದ]][[ವರ್ಗ:ಚಿಕಿತ್ಸೆ]][[ವರ್ಗ:ಪ್ರಥಮ ಚಿಕಿತ್ಸೆ]]
[[ವರ್ಗ:ಸಸ್ಯಗಳು]]
[[ವರ್ಗ:ಔಷದೀಯ ಸಸ್ಯಗಳು]]
[[ವರ್ಗ:ವೈದ್ಯಕೀಯ]]
[[ವರ್ಗ:ಆರೋಗ್ಯ]]