Difference between revisions 277762 and 277763 on knwiki

'''ಹಳೆ ಪೈಕ''':     ಭಾರತದಲ್ಲಿ ಸಮುದಾಯ ಅಧ್ಯಯನಗಳು ಮಾನವ ಶಾಸ್ತ್ರದ ಶೈಕ್ಶಣಿಕ ಚಟವಟಿಕೆಗಳ ಭಾಗವಾಗಿ ರೂಪಗೊಂಡವು. ವಸಾಹತು ಆಡಳಿತದ ಭಾಗವಾಗಿ ನಡೆದ ಈ ಸಮುದಾಯ ಅಧ್ಯಯನಗಳಿಗೆ ಸರಿ ಸುಮಾರು ನೂರು ವರ್ಶಗಳ ಇತಿಹಾಸವಿದೆ. ಭಾರತಕ್ಕೆ ಸಂಬಂಧಪಟ್ಟ ಅಧ್ಯಯನಗಳು ೧೭೭೪ರಲ್ಲಿ ಕಲ್ಕತ್ತಾದಲ್ಲಿ ಪ್ರಾರಂಭವಾದ " ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ " ಸಂಸ್ಥೆಯ ಮೂಲಕ ಪ್ರಾರಂಭವಾದವು. ವಸಾಹತು ಆಡಳಿತದ ರಾಜಕೀಯಾರ್ಥಿಕ ಚಟವಟಿಕೆಗಳ ಭಾಗವಾಗಿ ಪ್ರಾರಂಭವಾದ ಈ ಅಧ್ಯಯನಗಳಿಗೆ ಶುದ್ಧ ಶೈಕ್ಶಣಿಕ ಕಾರಣವಾಗಲಿ, ಹಿಂದುಳಿದ ಸಮುದಾಯಗಳ ಅಭಿವ್ರದ್ದಿಯ ಕಾಳಜಿಯಾಗಲಿ ಇರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿ(contracted; show full)ೆಗಳಲ್ಲಿ ವಾಲಗ ಊದುತ್ತಾರೆ. ಜಾತಿ ವ್ಯವಸ್ಥೆಯ ಸ್ಥಾನಮಾನದಲ್ಲಿ ಇವರು ಅಗೇರ್, ಮುಕ್ರಿ ಹಾಗೂ ಚಮ್ಮಾರ ಶೂದ್ರರಿಗಿಂತ ಎತ್ತರದಲ್ಲಿದ್ದಾರೆ.ಬ್ರಾಹ್ಮಣ ನಾಡಾರ್ ಹಾಗೂ ಇತರ ಮೇಲ್ಜಾತಿಯವರು ಇವರನ್ನು ಕೀಳಾಗಿ ಕಾಣುತ್ತಾರೆ.  ಘಟ್ಟದ ಮೇಲಿನ ಹಳೇಪೈಕರು ನಾಗರಿಕ ಸಂಪರ್ಕದ ಕೊರತೆಯಿಂದಾಗಿ ಅಷ್ಟೊಂದು ಸುದಾರಣೆ ಹೊಂದಿದವರಂತೆ ಕಾಣುವುದಿಲ್ಲ. ಇವರು ಹಾಲಕ್ಕಿವಕ್ಕಲಿಗ ಹಾಗೂ ಕೋಟೆವಕ್ಕಲಿಗರ ಮನೆಯಲ್ಲಿ ಕಚ್ಚಿ ತಿನ್ನುತ್ತಾರೆ. ಆದರೆ ವಕ್ಕಲ ಜಾತಿಯವರು ಹಳೇಪೈಕರ ಮನೆಗಳಲ್ಲಿ ಕಚ್ಚಿ ತಿನ್ನುವುದಿಲ್ಲ.ಒಟ್ಟಾರೆಯಾಗಿ ಕರಾವಳಿಯ ಹಳೇಪೈಕರನ್ನು ಬಿಟ್ಟು ಉಳಿದ ಎಲ್ಲಾ ಹಳೇಪೈಕರು ಸುಧಾರಿಸಿದವರಲ್ಲ. ವಕ್ಕಲರಿಗಿಂತ ಕಡಿಮೆ ಹಾಗೂ ಕುಣಬಿಯರಿಗೆ ಸಮಾನರು.


[[ವರ್ಗ:ಹಿಂದೂ ಧರ್ಮದ ಪಂಗಡಗಳು]]