Difference between revisions 277763 and 277764 on knwiki'''ಹಳೆ ಪೈಕ''': ಭಾರತದಲ್ಲಿ ಸಮುದಾಯ ಅಧ್ಯಯನಗಳು ಮಾನವ ಶಾಸ್ತ್ರದ ಶೈಕ್ಶಣಿಕ ಚಟವಟಿಕೆಗಳ ಭಾಗವಾಗಿ ರೂಪಗೊಂಡವು. ವಸಾಹತು ಆಡಳಿತದ ಭಾಗವಾಗಿ ನಡೆದ ಈ ಸಮುದಾಯ ಅಧ್ಯಯನಗಳಿಗೆ ಸರಿ ಸುಮಾರು ನೂರು ವರ್ಶಗಳ ಇತಿಹಾಸವಿದೆ. ಭಾರತಕ್ಕೆ ಸಂಬಂಧಪಟ್ಟ ಅಧ್ಯಯನಗಳು ೧೭೭೪ರಲ್ಲಿ ಕಲ್ಕತ್ತಾದಲ್ಲಿ ಪ್ರಾರಂಭವಾದ " ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ " ಸಂಸ್ಥೆಯ ಮೂಲಕ ಪ್ರಾರಂಭವಾದವು. ವಸಾಹತು ಆಡಳಿತದ ರಾಜಕೀಯಾರ್ಥಿಕ ಚಟವಟಿಕೆಗಳ ಭಾಗವಾಗಿ ಪ್ರಾರಂಭವಾದ ಈ ಅಧ್ಯಯನಗಳಿಗೆ ಶುದ್ಧ ಶೈಕ್ಶಣಿಕ ಕಾರಣವಾಗಲಿ, ಹಿಂದುಳಿದ ಸಮುದಾಯಗಳ ಅಭಿವ್ರದ್ದಿಯ ಕಾಳಜಿಯಾಗಲಿ ಇರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿ(contracted; show full) ಹಳೆಪೈಕರಲ್ಲಿ ವಿಭಿನ್ನ ಗೋತ್ರಗಳ ಸಾಮಾಜಿಕ ಗುಂಪುಗಳಿರುತ್ತವೆ. ಈ ಭಿನ್ನ ಗೋತ್ರದ ಸಮೂಹಕ್ಕೆ " ಬಳಿ "[ಬಳ್ಳಿ-ಹಬ್ಬುವ] ಎಂದು ಕರೆಯುತ್ತಾರೆ. ಈ ಬಳಿಯ ಹೆಸರುಗಳು ಯಾವುದಾದರು ಮರ, ಹಾವು ಅಥವಾ ಪ್ರಾಣಿಯ ಹೆಸರುಗಳನ್ನು ಆದರಿಸಿರುತ್ತವೆ. ಈ ಮರ, ಹಾವು, ಪ್ರಾಣಿಗಳು ಅಯಾಯ ಬಳಿಯ ಪೂರ್ವಿಕರಗಿದ್ದರೆಂದೂ, ಅವುಗಳಿಗೆ ಯಾವುದೇ ಗಾಯವಾಗುವ ಹಾಗಿಲ್ಲವೆಂಬ ನಂಬಿಕೆಯಿದೆ. ಉದಾಹರಣೆಗೆ " ನಾಗ ಬಳಿ " ಯವರು ನಾಗಸಂಪಿಗೆ ಹೂವನ್ನು ಮುಡಿಯುವ ಹಾಗಿಲ್ಲ ಹಾಗು ಆ ಮರವನ್ನು ಕಡಿಯುವ ಹಾಗಿಲ್ಲ. ===ತೆಂಗಿನ ದೀವರ ಬಳಿಗಳು= == ೧] ಶೆಟ್ಟಿ ಬಳಿ ಶೆಟ್ಲಿ ಅಥವಾ ಶೆಟ್ಟಿ - ಮೀನು ೨] ಹೊನ್ನೆ ಬಳಿ ಹೊನ್ನೆ - ಮರ ೩] ಚೆಂಡಿ ಬಳಿ ಚೆಂಡಿ - ಮರ ೪] ತೋಳನ ಬಳಿ ತೋಳ- ಪ್ರಾಣಿ ೫] ದೇವನ ಬಳಿ ದೇವನ - ಮರ ೬] ಹೊಳೆ ಬಳಿ ಹೊಳೆ - ನದಿ ೭] ಭೈರನ ಬಳಿ ಭೈರನ - ಪಕ್ಷಿ ೮] ಕೆಂಡಿ ಬಳಿ ಕೆಂಡಿ - ಮರ ೯] ಹಂದಿ ಬಳಿ ಹಂದಿ ೧೦] ನಾಗ ಬಳಿ ನಾಗಸಂಪಿಗೆ - ಮರ ೧೧] ವಾಲಿ ಬಳಿ ವಾಲಿ - ಬಳ್ಳಿ ೧೨] ಶೀಗೆ ಬಳಿ ಶೀಗೆ - ಬಳ್ಳಿ ೧೩] ಅಜ್ಜಾನೆ ಬಳಿ ಅಜ್ಜಾನೆ - ಮರ ೧೪] ಕನ್ನೆ ಬಳಿ ಕನ್ನಾ - ಮರ ೧೫] ಶಿವನೆ ಬಳಿ ಶಿವನೆ - ಮರ ೧೬] ಗಂಗಾ ಬಳಿ ಗಂಗಾವಳಿ - ನದಿ ೧೭] ಸಲ್ಯಾನ ಬಳಿ ಸಾಲೆ - ಮುಳ್ಳು ಹಂದಿ ೧೮] ಮಾನಾಟ್ ಬಳಿ ಮನಾಟ್ - ಮರ ೧೯] ಶಿರೇನ್ ಬಳಿ ಶಿರೇನ್ - ಮರ ೨೦] ಅರಶಿನ ಬಳಿ ಅರಶಿನ - ಸಸ್ಯ ===ಬಯಿನೆ ದೀವರ ಬಳಿಗಳು===⏎ ...... ೧] ಮಹಾರ್ ಬಳಿ ಮಹಾರ್, ಮಾದರ-ಕೀಳು ಜಾತಿ, ಎಣ್ಣೆಯ ಮರ ೨] ಬಂಗಾರ ಬಳಿ ಬಂಗಾರ,ಚಿನ್ನ- ಆಭರಣ ೩] ಕಡವೆ ಬಳಿ ಕಡ-ಪ್ರಾಣಿ ೪] ಸರ್ಪನ ಬಳಿ ಸರ್ಪ - ಹಾವು ೫] ಶೆಟ್ಟಿ ಬಳಿ ಶೆಟ್ಟಿ - ಮೀನು ೬] ಹೊನ್ನೆ ಬಳಿ ಹೊನ್ನೆ - ಮರ ೭] ಚೆಂಡಿ ಬಳಿ ಚೆಂದಿ - ಮರ ೮] ತೋಳನ ಬಳಿ ತೋಳ - ಪ್ರಾಣಿ (contracted; show full)್ಯವಸ್ಥೆಯ ಸ್ಥಾನಮಾನದಲ್ಲಿ ಇವರು ಅಗೇರ್, ಮುಕ್ರಿ ಹಾಗೂ ಚಮ್ಮಾರ ಶೂದ್ರರಿಗಿಂತ ಎತ್ತರದಲ್ಲಿದ್ದಾರೆ.ಬ್ರಾಹ್ಮಣ ನಾಡಾರ್ ಹಾಗೂ ಇತರ ಮೇಲ್ಜಾತಿಯವರು ಇವರನ್ನು ಕೀಳಾಗಿ ಕಾಣುತ್ತಾರೆ. ಘಟ್ಟದ ಮೇಲಿನ ಹಳೇಪೈಕರು ನಾಗರಿಕ ಸಂಪರ್ಕದ ಕೊರತೆಯಿಂದಾಗಿ ಅಷ್ಟೊಂದು ಸುದಾರಣೆ ಹೊಂದಿದವರಂತೆ ಕಾಣುವುದಿಲ್ಲ. ಇವರು ಹಾಲಕ್ಕಿವಕ್ಕಲಿಗ ಹಾಗೂ ಕೋಟೆವಕ್ಕಲಿಗರ ಮನೆಯಲ್ಲಿ ಕಚ್ಚಿ ತಿನ್ನುತ್ತಾರೆ. ಆದರೆ ವಕ್ಕಲ ಜಾತಿಯವರು ಹಳೇಪೈಕರ ಮನೆಗಳಲ್ಲಿ ಕಚ್ಚಿ ತಿನ್ನುವುದಿಲ್ಲ.ಒಟ್ಟಾರೆಯಾಗಿ ಕರಾವಳಿಯ ಹಳೇಪೈಕರನ್ನು ಬಿಟ್ಟು ಉಳಿದ ಎಲ್ಲಾ ಹಳೇಪೈಕರು ಸುಧಾರಿಸಿದವರಲ್ಲ. ವಕ್ಕಲರಿಗಿಂತ ಕಡಿಮೆ ಹಾಗೂ ಕುಣಬಿಯರಿಗೆ ಸಮಾನರು. [[ವರ್ಗ:ಹಿಂದೂ ಧರ್ಮದ ಪಂಗಡಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=277764.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|