Difference between revisions 284030 and 284581 on knwiki

=== ಮಕ್ಕಳ ಸಾಹಿತ್ಯ ===
------------------
ಮಕ್ಕಳ ಕವನ ವನ್ನು  ಮಕ್ಕಳ ಕಥೆ ಮೊದಲಾದವುಗಳನ್ನು ಬರೆದು ಮಕ್ಕಳ ಸಾಹಿತ್ಯ ಬೆಳಸಿದವರಲ್ಲಿ ದೇವುಡು ನರಸಿಂಹ ಶಾಸ್ತ್ರಿ , ಜಿ.ಪಿ.ರಾಜರತ್ನಂ ಕೆ.ವಿ.ಪುಟ್ಟಪ್ಪ , ಹೊಹಿಸಳ, ಟಿ.ಎಂ.ಆರ್.ಸ್ವಾಮಿ, ಕಲಾಕುಮಾರ (ಡಾ.ದೊಡ್ಡೇರಿ ವೆಂಕಟಗಿರಿರಾವ್. ) ಸಿದ್ದಯ್ಯ ಪುರಾಣಿಕ ಮೊದಲಾದವರು ಪ್ರಮುಖರು. ಪುರಂದರದಾಸರು ಚಿಕ್ಕಮಕ್ಕಳಿಗಾಗಿ ಕೆಲವು ಸಣ್ಣ -ಸರಳ ಹಾಡುಗಳನ್ನು ರಚಿಸಿದ್ದಾರೆ. 
*ಇಲ್ಲಿ ಕೆಲವು ಜನಪ್ರಿಯ  ಮಕ್ಕಳ ಕವನಗಳನ್ನು  ಉದಾಹರಣೆಗಾಗಿ ಕೊಟ್ಟಿದೆ :
(contracted; show full)-
* ಯಾವಾಗಲು ನಗುವನದೇಕೆ ? 
* ನಾವರಿಯದುದನವನರಿತುದಕೆ
* (ನಾವು ಅರಿಯದುದನು ಅವನು ಅರತುದಕೆ  - ದೇವರನ್ನು ?)

*ರಚನೆ :ಕಲಾಕುಮಾರ ([[ಡಾ.ದೊಡ್ಡೇರಿ ವೆಂಕಟಗಿರಿರಾವ್]]).


=== ಬಣ್ಣದ ತಗಡಿನ ತುತ್ತೂರಿ ===
-------------------------
೩೧-೭-೨೦೧೨
 ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ ||೧||
ಸರಿಗಮ ಪದನಿಸ ಊದಿದನು
ಸನಿದಪ ಮಗರಿಸ ಊದಿದನು||೨|| 
ತನಗೇ ತುತ್ತುರಿ ಇದೆಯೆಂದ,
ಬೇರಾರಿಗು ಅದು ಇಲ್ಲೆಂದ, ||೩||
ಕಸ್ತುರಿ ನಡೆದನು ಬೀದಿಯಲಿ, 
ಜಂಬದ ಕೋಲಿಯ ರೀತಿಯಲಿ,||೪|| 
ತುತ್ತುರಿಯೂದುತ ಕೊಳದ ಬಳಿ, 
ನಡೆದನು ಕಸ್ತುರಿ ಸಂಜೆಯಲಿ. ||೫||
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ||೬||
ಸರಿಗಮ ಊದಲು ನೋಡಿದನು 
ಗಗಗಗ ಸದ್ದನು ಮಾಡಿದನು ||೭||
ಬಣ್ಣವು ನೀರಿನ ಪಾಲಾಯ್ತು 
ಬಣ್ಣದ ತುತ್ತುರಿ ಬೋಳಾಯ್ತು ||೮||
ಬಣ್ಣದ ತುತ್ತುರಿ ಹಾಳಾಯ್ತು
ಜಂಬದ ಕೋಳಿಗೆ ಗೋಳಾಯ್ತು||೯|| ಜಿ.ಪಿ ರಾಜರತ್ನಂ.
ಹತ್ತು ಹತ್ತು ಇಪ್ಪತ್ತು, 

ಹತ್ತು ಹತ್ತು ಇಪ್ಪತ್ತು, 
ತೋಟಕೆ ಹೋದನು ಸಂಪತ್ತು 
ಇಪ್ಪತ್ತು ಹತ್ತು ಮೂವತ್ತು 
ಕೈಯಲ್ಲೊಂದು ಕಲ್ಲಿತ್ತು
ಮೂವತ್ತು ಹತ್ತು ನಲವತ್ತು, 
ಎದುರಿಗೆ ಮಾವಿನ ಮರವಿತ್ತು. 
ನಲವತ್ತು ಹತ್ತು ಐವತ್ತು 
ಮಾವಿನ ಮರದಲಿ ಕಾಯಿತು
ಐವತ್ತು ಹತ್ತು ಅರವತ್ತು 
ಕಲ್ಲನುಬೀರಿದ ಸಂಪತ್ತು
ಅರವತ್ತು ಹತ್ತು ಎಪ್ಪತ್ತು
ಕಾಯಿಯು ತಪ ತಪನುದುರಿತ್ತು
ಎಪ್ಪತ್ತು ಹತ್ತು ಎಂಭತ್ತು 
ಮಾಲಿಯ ಕಂಡನು ಸಂಪತ್ತು. 
ಎಂಭತ್ತು ಹತ್ತು ತೊಂಭತ್ತು 
ಕಾಲುಗಳೆರಡೂ ಓಡಿತ್ತು
ತೊಂಭತ್ತು ಹತ್ತು ನೂರು
ಓಡುತ ಮನೆಂiiನು  ಸೇರು ಜಿ.ಪಿ ರಾಜರತ್ನಂ.
ಊಟದ ಆಟ
ಒಂದು ಎರಡು ಬಾಳೆಲೆ ಹರಡು ||
ಮೂರು ನಾಕು ಅನ್ನ ಹಾಕು ||
ಐದುಆರು ಬೇಳೆ ಸಾರು ||
ಏಳು ಎಂಟು ಪಲ್ಯಕೆ ದಂಟು ||
ಒಂಬತು ಹತ್ತು ಎಲೆ ಮುದಿರೆತ್ತು ||
ಒಂದರಿಂದ ಹತ್ತು, ಊಟದ ಆಟವು ಮುಗಿದಿತ್ತು || ಜಿ.ಪಿ ರಾಜರತ್ನಂ.||
ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ









=== ಆಧಾರ : === 
-------------
ಹಿಂದಿನ ಮೈಸೂರು ಸರ್ಕಾರದ ಪ್ರಾಥಮಿಕ ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ.
*[[ಕನ್ನಡ ಸಾಹಿತ್ಯ ಪ್ರಕಾರಗಳು]]

ವರ್ಗ : [[ಕನ್ನಡ ಸಾಹಿತ್ಯ]]