Difference between revisions 289909 and 289910 on knwiki

{{merge from|ಪುಟ‎}}
<big>'''ಈಶೋಪನಿಷತ್ತು'''</big> ((ಕನ್ನಡ ಭಾವಾನುವಾದ ಮತ್ತು ವ್ಯಾಖ್ಯಾನ : [[ಬಿ.ಎಸ್.ಚಂದ್ರಶೇಖರ]] [[ಸಾಗರ]] ; ೨೨-೯-೨೦೦೯/2-1-2012) 
ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು [[ಉಪನಿಷತ್ತುಗಳು]], ವೇದದ ಅಂಗಗಳಾದ [[ಬ್ರಾಹ್ಮಣ]],ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ [[ಈಶಾವಾಸ್ಯೋಪನಿಷತ್ತು]] ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು.  ಅದಕ್ಕೆ ಈಶೋಪನಿಷತ್ತು ಎಂಬ 
ಹೆಸರೂ ಇದೆ. 
ಇದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ.  [[ಭಗವದ್ಗೀತೆ]]  ಇದರ ವಿಸ್ತಾರ ರೂಪ ಎಂಬ ಅಭಿಪ್ರಾಯವಿದೆ.  

(contracted; show full)
ತೇನ ತ್ಯಕ್ತೇನ ಭುಂಜೀಥಾಃ|

ಮಾ ಗೃಧಃ  ಕಸ್ಯಸ್ವಿದ್ಧನಂ ||

'''ಕನ್ನಡ'''


* ಓಂ ಹರಿಗೆ ನಮವು |
* ಈಶ ಭಾವದಿಂ ಮುಚ್ಚು ಮನದಿಂದೆಲ್ಲವನು|
* ಕಣವಿರಲಿ, ಜಗವಿರಲಿ ; ಅದರಿಂದೆ - |
* ಕೊಟ್ಟು ತಾನುಣಬೇಕು,  ಅತಿಯಾಸೆ ಒಳಿತಲ್ಲ,
* ಬಿಟ್ಟು ಹೋಗುವ ಸಂಪದವು ನಮದಲ್ಲ ||

*(ಈಶ ಭಾವದಿಂದ ಮುಚ್ಚು ಮನದಿಂದ + ಎಲ್ಲವನು, ಕಣವು +ಇರಲಿ- ಕಣವೇ ಆಗಿರಲಿ;  ಜಗವು+ಇರಲಿ - ಜಗವೇ ಆಗಿರಲಿ; ಅದರಿಂದೆ- ಆದ್ದರಿಂದ ಕೊಟ್ಟು ತಾನು ಉಣ್ಣಬೇಕು;  ಆತಿ ಆಸೆ ಒಳಿತು ಅಲ್ಲ;  ಬಿಟ್ಟು ಹೋಗುವ ಸಂಪತ್ತು ನಮ್ಮದು ಅಲ್ಲ.)

*ಸರ್ವಾಂತರ್ಯಾಮಿಯಾದ ಜಗದೊಡೆಯ ಭಗವಂತನ ನೆನಪು ಸದಾ ಇರಬೇಕು. (ಈಶ ಭಾವದಿಂದ ಈ ಜಗತ್ತನ್ನು ಮುಚ್ಚಬೇಕು ಎಂಬುದು ಶ್ರೀ ಶಂಕರರ ಅರ್ಥ:
*ಈ ಜಗತ್ತಿನ ಕಣದಿಂದ ಹಿಡಿದು ಎಲ್ಲದರಲ್ಲೂ ಪರಮಾತ್ಮನು ಆವರಿಸಿದ್ದಾನೆ -  ಆವಾಸವಾಗಿದ್ದಾನೆ ಎಂದು ಕೆಲವರ ಅರ್ಥ) 

*(ಜಗದೊಡೆಯ ಈಶನಿಗೆ ಈ ಜಗತ್ತು ಆಶ್ರಯ ಸ್ಥಾನವಾಗಿದೆ ಎಂಬುದು ತಾರ್ಕಿಕ ದೃಷ್ಠಿಯಿಂದ ಸರಿಯಲ್ಲವೆಂದು ಶ್ರೀ ಶಂಕರರು ಭಾವಿಸಿರಬಹುದು.  ಏಕೆಂದರೆ ಈಶನೇ ಜಗತ್ತಿಗೆ ಆಶ್ರಯನು.ಜಗತ್ತನ್ನು ಮೀರಿ ಅವನಿದ್ದಾನೆ.)     
*ತ್ಯಕ್ತೇನ ಭುಂಜೀಥಾ ಎಂದಿದೆ. ಎಂದರೆ ತ್ಯಾಗ ಮಾಡಿ ನೀನೂ ಅನುಭವಿಸು. ಭುಂಜೀಥಾ ಎಂದರೆ ಉಣ್ಣಬೇಕು ಎಂದರೆ ಅನುಭವಿಸಬೇಕು ಎಂಬ ಅರ್ಥ ಬರುವುದು.  ತ್ಯಾಗ ಮಾಡಲು ಅಗತ್ಯವಾದುದಕ್ಕಿಂತ ಹೆಚ್ಚು ದುಡಿಯಬೇಕು-ಸಂಪಾದಿಸಬೇಕು. ಜಗತ್ತನ್ನು ನಿರಾಕರಿಸಬೇಕಿಲ್ಲ.  ಜಗತ್ತಿನಲ್ಲಿ ನೀನೂ ಸುಖವಾಗಿರು, ಬೇರೆಯವರನ್ನೂ ಸುಖವಾಗಿರಿಸಲು ಪ್ರಯತ್ನಿಸು, ಬಿಟ್ಟು ಹೋಗುವ ಈ ಸಂಪತ್ತು ಯಾರದ್ದೂ ಅಲ್ಲ. .  ಅತಿಯಾಸೆ ಬೇಡ  ಇದು ಜೀವನದ ಸೂತ್ರ.
(ಮಾ ಗೃಧಃ  ಹದ್ದಿನಂತೆ ದುರಾಸೆಯುಳ್ಳವನಾಗಬೇಡ.  ಹದ್ದು ದುರಾಸೆಗೆ ಹೆಸರಾಗಿದೆ. ಕಸ್ಯಸ್ವಿದ್ಧನಂ ಈ ಧನ ಯಾರದ್ದು? ಎಂದರೆ ಯಾರದ್ದೂ ಅಲ್ಲ ಎಂದು ಅರ್ಥ.  ಕಾರಣ ಬಿಟ್ಟು ಹೋಗುವಂಥಾದ್ದು )
*ಭಕ್ತಿ ಪಂಥದವರು ತ್ಯಕ್ತೇನ ಎಂದರೆ ದೇವರಿಂದ ತ್ಯಕ್ತ ವಾದ -ಕೊಟ್ಟಿದ್ದನ್ನು ಅನುಭವಿಸು ಎಂದು ಅರ್ಥ ಮಾಡುತ್ತಾರೆ. ಅಲ್ಲಿ ದುಡಿಯುವ, ತ್ಯಾಗಮಾಡುವ- ಉಪಕಾರ ಮಾಡುವ ಮಾತೇ ಇಲ್ಲ !. ಏಕೆಂದರೆ ಎಲ್ಲವೂ ಅವರವರ ಕರ್ಮದಂತೆ, ದೇವರ ಇಚ್ಛೆಯಂತೆ ಜಗತ್ತು ನಡೆಯುವುದು. ಭಕ್ತನು  ಪರಮಾತ್ಮನನ್ನು  ನೆನೆಯುವದನ್ನು ಬಿಟ್ಟು ಬೇರೇನನ್ನೂ ಮಾಡಬೇಕಾದ್ದಿಲ್ಲ. 'ಕಸ್ಯಸ್ವಿದ್ಧನಂ' ಎಂಬುದಕ್ಕೆ  ಪರಮಾತ್ಮನದ್ದಲ್ಲದ ಬೇರೆ ಸಂಪತ್ತು ಯಾವುದಿದೆ-ಯಾವುದೂ ಇಲ್ಲ,  ಎಲ್ಲಾ ಅವನಿಗೆ ಸೇರಿದ್ದು,  ಎಂದು ಅರ್ಥಮಾಡುತ್ತಾರೆ. ಎಲ್ಲವೂ ಪರಮಾತ್ಮನ ಅಧೀನ;ಭಕ್ತನ ಕೈಯಲ್ಲಿ ಏನಾಗುವುದು? ಇದು ಅವರ ವಾದ ಸರಣಿ.   
*ಅದು ಜೀವನದ ಮುಖ್ಯವಾದ ಕರ್ತವ್ಯದಿಂದ ವಿಮುಖವಾದ ಜೀವನ ಕ್ರಮ ಎನಿಸುವುದು. ಜೀವನದಲ್ಲಿ, ಕರ್ತವ್ಯ - ದುಡಿಮೆ, ಸೇವೆ, ಪರೋಪಕಾರ, ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ,   ಇರಬೇಕಾಗುವುದು; ಇವೆಲ್ಲಾ [[ಗೀತೆ]] ಮತ್ತು [[ಉಪನಿಷತ್ತಿ|ಉಪನಿಷತ್ತಿನ]] ಉಪದೇಶ ಸಾರ. ನಂತರ ಕರ್ಮದ  :[[ಕರ್ಮ]]  [[ವ್ಯಾಖ್ಯಾನ]] : ಕರ್ಮದ ಮೇಲೆ ಕ್ಲಿಕ್ ಮಾಡಿ

=== ಮಂತ್ರ ೨ ===
-----------------------------------------------
:
* ಕುರ್ವನ್ನೇವೇಹ ಕರ್ಮಾಣಿ|
* ಜಿಜೀವಿಷೇಚ್ಛತಂ ಸಮಾಃ |
* ಏವಂ ತ್ವಯಿ ನಾನ್ಯಥೇತೋಸ್ತಿ|
(contracted; show full)--------------
ಈಶಾವಾಸ್ಯೋಪನಿಷತ್  - ಸ್ವಾಮಿ ಆದಿದೇವಾನಂದ
------------
[[ಈಶಾವಾಸ್ಯೋಪನಿಷತ್]]
[[Wikipedia:ಈಶಾವಾಸ್ಯ ಉಪನಿಷತ್]] 
Bschandrasgr ೦೭:೩೬, ೬ ಜನವರಿ ೨೦೧೨ (UTC)

* ವರ್ಗ:   [[ಹಿಂದೂ ಧರ್ಮ]]  |   [[ಉಪನಿಷತ್ತುಗಳು]]