Difference between revisions 283822 and 289909 on knwiki{{merge from|ಪುಟ}} <big>'''ಈಶೋಪನಿಷತ್ತು'''</big> ((ಕನ್ನಡ ಭಾವಾನುವಾದ ಮತ್ತು ವ್ಯಾಖ್ಯಾನ : [[ಬಿ.ಎಸ್.ಚಂದ್ರಶೇಖರ]] [[ಸಾಗರ]] ; ೨೨-೯-೨೦೦೯/2-1-2012) ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು [[ಉಪನಿಷತ್ತುಗಳು]], ವೇದದ ಅಂಗಗಳಾದ [[ಬ್ರಾಹ್ಮಣ]],ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ [[ಈಶಾವಾಸ್ಯೋಪನಿಷತ್ತು]] ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು. ಅದಕ್ಕೆ ಈಶೋಪನಿಷತ್ತು ಎಂಬ ಹೆಸರೂ ಇದೆ. ಇದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ. [[ಭಗವದ್ಗೀತೆ]] ಇದರ ವಿಸ್ತಾರ ರೂಪ ಎಂಬ ಅಭಿಪ್ರಾಯವಿದೆ. [[ವೇದಾಂತ]], [[ಉಪನಿಷತ್ತು|ಉಪನಿಷತ್ತುಗಳು]] ಈ ಜಗತ್ತನ್ನು ನಿರಾಕರಿಸುತ್ತವೆ ಮತ್ತು ಕೇವಲ [[ಮೋಕ್ಷ]], ಪರಲೋಕ ಪರವಾದದ್ದೆಂಬ ಭಾವನೆ ಇದೆ. ಸಂನ್ಯಾಸಿಗಳಾದವರು ಇವಕ್ಕೆ ವ್ಯಾಖ್ಯಾನ ಟೀಕೆ ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ ಸಾಧನೆಗೇ ಒತ್ತು ಕೊಟ್ಟು ಇಹ ಸಾಧನೆಗೆ ಅಗತ್ಯವಾದ ಕಾಯಕಕ್ಕೆ ಪ್ರಾಧಾನ್ಯತೆ ಕೊಡದಿರುವದು ಕಂಡುಬರುವುದು; ಅದು ಸ್ವಾಭಾವಿಕವೂ ಹೌದು. ಆದರೆ [[ಉಪನಿಷತ್ತಿ|ಉಪನಿಷತ್ತಿನ]] ಸಾಮಾನ್ಯ -ಸರಳ ಅರ್ಥವನ್ನು ನೋಡುವಾಗ ಕಾಯಕಕ್ಕೂ ಪ್ರಾಮುಖ್ಯತೆ ಕೊಟ್ಟಿರುವುದು ಕಾಣುತ್ತದೆ. ಇಲ್ಲಿ [[ಉಪನಿಷತ್]] ಮಂತ್ರಗಳ ಸಾಮಾನ್ಯ -ಸರಳ ಅರ್ಥವನ್ನೇ ಪರಿಗಣಿಸಲಾಗಿದೆ. ಕಾಯಕ, ಸೇವೆ, ಮೋಕ್ಷ ಸಾಧನೆಗಳಲ್ಲಿ ಸಮಾನವಾಗಿ ತೊಡಗಿದ್ದ [[ಮಹಾತ್ಮಾ |ಗಾಂಧೀಜೀ]] ಯವರ ತತ್ವ - ಸಿದ್ಧಾಂತಗಳಿಗೂ ಹೊಂದಾಣಿಕೆಯಾಗುವುದು. == ಶಾಂತಿ ಮಂತ್ರ== * ಓಂ ಪೂರ್ಣಮದಃ ಪೂರ್ಣಮಿದಂ | ⏎ ⏎ ⏎ * ಪೂರ್ಣಾತ್ಪೂರ್ಣಮುದಚ್ಯತೇ || ⏎ ⏎ ⏎ ⏎ ⏎ * ಪೂರ್ಣಸ್ಯ ಪೂರ್ಣಮಾದಾಯ | ⏎ ⏎ ⏎ * ಪೂರ್ಣಮೇವಾವಶಿಷ್ಯತೇ || ⏎ ⏎ ⏎ ⏎ ⏎ * ಓಂ ಶಾಂತಿಃ ಶಾಂತಿಃ ಶಾಂತಿಃ|| - '''ಕನ್ನಡ''' * ಓಂ, ಅದುಪೂರ್ಣ-ವಿದು ಪೂರ್ಣ| ಪೂರ್ಣದಿಂ ಪೂರ್ಣ ಹುಟ್ಟಿಹುದು | ⏎ ⏎ * ಕಳೆ ಪೂರ್ಣದಿಂ ಪೂರ್ಣವನು|| ಪೂರ್ಣವೇ ತಾನುಳಿಯುವುದು || * ಓಂ ಶಾಂತಿಃ ಶಾಂತಿಃ ಶಾಂತಿಃ || ⏎ ⏎ * *(ಅದು ಪೂರ್ಣವು + ಇದು ಪೂರ್ಣ, ಪೂರ್ಣದಿಂದ ಪೂರ್ಣ ಹುಟ್ಟಿದೆ. ಪೂರ್ಣದಿಂದ ಪೂರ್ಣವನ್ನು ಕಳೆ, ಪೂರ್ಣವೇ ಉಳಿಯುವುದು: ಸೂತ್ರ : ಪೂರ್ಣ + ಪೂರ್ಣ =ಪೂರ್ಣ; ಪೂರ್ಣ- ಪೂರ್ಣ = ಪೂರ್ಣ) ಇದು ಆಧುನಿಕ ಗಣಿತ ಸೂತ್ರದಂತೆ ತೋರುವುದು. (೦+೦=೦,೦-೦=೦ ಅಥವಾ ಅನಂತ). ಪಾಶ್ಚಿಮಾತ್ಯಜಗತ್ತಿಗೆ ಗಣಿತದಲ್ಲಿ ಸೊನ್ನೆಯ ಕಲ್ಪನೆ ಬಂದದ್ದು ಸುಮಾರು ಒಂದು ಸಾವಿರ ವರ್ಷದ ಹಿಂದೆ. ಸುಮಾರು ಐದು ಸಾವಿರ ವರ್ಷದ ಹಿಂದಿನ ಈ ಮಂತ್ರದಲ್ಲಿ ಈ ಅಮೂರ್ತ ಸೂತ್ರ ಒಂದು ವಿಸ್ಮಯ. *ಆದರೆ ಇದು ಮೋಕ್ಷ ಶಾಸ್ತ್ರದ ಪೀಠಿಕೆ. ಅದಕ್ಕೆ ತಾತ್ವಿಕ ಅರ್ಥವೇ ಸರಿ. ಪರಮಾತ್ಮ ತತ್ವವು ಪರಿಪೂರ್ಣ. ಅದರಿಂದ ಹುಟ್ಟಿದ ಈ ಜಗತ್ತೂ ಪರಿಪೂರ್ಣ. ಆದರೆ ಅದು ಹುಟ್ಟಿದ್ದರಿಂದ ಅಧಿಕವಾಗಿಲ್ಲ. ಈ ಜಗತ್ತು ಲಯವಾದರೂ ಒಟ್ಟು ಆ ಪರಮಾತ್ಮ ತತ್ವದಲ್ಲಿ ಕಡಿಮೆಯಾಗದು. ಇದು ತತ್ವ ಸಾರ. ಈ ತತ್ವ ದಾರ್ಶನಿಕ ಋಷಿಯ ಅನುಭವವಾದ್ದರಿಂದ ತರ್ಕಕ್ಕೆ ನಿಲುಕದು.ಆದರೂ ತತ್ವ ಶಾಸ್ತ್ರವು ಸಾಮಾನ್ಯರ ತಿಳುವಳಿಕೆಗಾಗಿ ತರ್ಕವನ್ನು ಅವಲಂಬಿಸಿದೆ. : *(ಉದಾ: ಕನಸಿನಲ್ಲಿ ಸಂತೆಗೆ ಹೋದವನು ಎಚ್ಚರಾದಾಗ ತಾನೊಬ್ಬನೇ ಇರುವುದನ್ನು ಕಾಣುತ್ತಾನೆ. ಕನಸು ಕಾಣುವಾಗ ಅನೇಕ ಜನರಿದ್ದರೂ ಹೆಚ್ಚೂ ಇಲ್ಲ, ಕನಸು ಲಯವಾದಾಗ ಆ ಜನರೆಲ್ಲಾಮಾಯವಾದರೂ ಕಡಿಮೆಯಾಗಲೂ ಇಲ್ಲ.). ಈ ಶಾಂತಿ ಮಂತ್ರದಲ್ಲಿಈ ಉಪನಿಷತ್ತಿನ ಸಾರವನ್ನೇ ಹೇಳಿದಂತಿದೆ. [[ಈಶ]] .⏎ ==ಮಂತ್ರ ೧== ಹರಿಃ ಓಂ | ಈಶಾವಾಸ್ಯಮಿದಂ(ದಗ್೦) ಸರ್ವಂ | ಯತ್ಕಿಂಚ ಜಗತ್ಯಾಂ ಜಗತ್ | (contracted; show full)-------------- ಈಶಾವಾಸ್ಯೋಪನಿಷತ್ - ಸ್ವಾಮಿ ಆದಿದೇವಾನಂದ ------------ [[ಈಶಾವಾಸ್ಯೋಪನಿಷತ್]] [[Wikipedia:ಈಶಾವಾಸ್ಯ ಉಪನಿಷತ್]] Bschandrasgr ೦೭:೩೬, ೬ ಜನವರಿ ೨೦೧೨ (UTC) * ವರ್ಗ: [[ಹಿಂದೂ ಧರ್ಮ]] | [[ಉಪನಿಷತ್ತುಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=289909.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|