Difference between revisions 304336 and 304337 on knwiki

{{sprotected}}
[[ಚಿತ್ರ:Several mobile phones.png|thumb|300px|2000ನ್ ದಶಕದ ಆರಂಭದಲ್ಲಿ ಲಭ್ಯವಿದ್ದ ನಾನ್‌-ಫ್ಲಿಪ್‌ ಮೊಬೈಲ್‌ ದೂರವಾಣಿಗಳ ಹಲವು ಉದಾಹರಣೆಗಳು.]]
'''ಮೊಬೈಲ್ ಫೋನ್‌ (ಚರ ದೂರವಾಣಿ)'''  (ಇದನ್ನು '''ಸೆಲ್‌ಫೋನ್‌'''  ಅಥವಾ '''ಹ್ಯಾಂಡ್‌ಫೋನ್‌''' <ref>{{cite web | title = Of Cigarettes and Cellphones | last = Ulyseas | first = Mark | date = 2008-01-18 | url = http://www.thebalitimes.com/2008/01/18/of-cigarettes-and-cellphones/ | pu(contracted; show full)ವೆಗಳು ವಿಸ್ತಾರಗೊಳ್ಳುತ್ತಿವೆ. ಹಲವು ಸಂಘಟನೆಗಳು 'ಕೋರಿಕೆಯ ಮೇರೆಗೆ' ವಾರ್ತಾ ಸೇವೆಗಳನ್ನು SMS ಮೂಲಕ ರವಾನಿಸುತ್ತಿವೆ. ಕೆಲವು ಸಂಘಟನೆಗಳು 'ಜರೂರು'ಮತ್ತು ತುರ್ತು ವಾರ್ತೆಗಳನ್ನು SMS ಮೂಲಕ ಹೊರಡಿಸುತ್ತವೆ. [[ರಾಯ್ಟರ್ಸ್‌]] ಮತ್ತು [[ಯಾಹೂ!]] ಸಂಸ್ಥೆಗಳು ಪರಿಶೋಧಿಸುತ್ತಿರುವ [[ಕ್ರಿಯಾವಾದ]] ಹಾಗೂ ಸಾರ್ವಜನಿಕ ಪತ್ರಕೋದ್ಯಮಗಳಿಗೆ [[ಮೊಬೈಲ್‌ ದೂರವಾಣಿ]] ವ್ಯವಸ್ಥೆಯು ಬೆಂಬಲಿಸುತ್ತದೆ.<ref>{{cite web|url=http://news.yahoo.com/you-witness-news |title=You Witness News |publisher=News.yahoo.com |date=2009-01-26 |accessdate=2009-07-29}}</ref> 

  ಜೊತೆಗೆ ಶ್ರೀಲಂಕಾದ [[ಜ್ಯಾಸ್ಮೀನ್‌ ನ್ಯೂಸ್‌]]ನಂತಹ ಸಣ್ಣ ಪ್ರಮಾಣದ ಸ್ವತಂತ್ರ ವಾರ್ತಾ ಸಂಸ್ಥೆಗಳ ಸೇವಾ ಸೌಲಭ್ಯಗಳಿಗೂ ಬೆಂಬಲ ನೀಡುತ್ತದೆ.


ಸಂಸ್ಥೆಗಳು ಕೆಲಸದ ಹುಡುಕಾಟ ಹಾಗೂ ವೃತ್ತಿ ಸಲಹೆಯಂತಹ ಮೊಬೈಲ್‌ ಸೇವೆಗಳನ್ನು ಒದಗಿಸಲಾರಂಭಿಸಿವೆ.  ಗ್ರಾಹಕ ಬೇಡಿಕೆಗಳು ಹೆಚ್ಚುತ್ತಿವೆ. ಇವು ಸ್ಥಳೀಯ ಚಟುವಟಿಕೆ-ಕಾರ್ಯಕ್ರಮಗಳ ಕುರಿತು ಮಾಹಿತಿಯಿಂದ ಹಿಡಿದು, ಖರೀದಿಯಿಂದ ಹಣ ಉಳಿಸಲು ಮೊಬೈಲ್‌ ಕೂಪನ್‌ಗಳು ಹಾಗೂ ರಿಯಾಯಿತಿ ಸೌಲಭ್ಯಗಳ ವರೆಗೂ ಇದರ ವ್ಯಾಪ್ತಿ ಹಬ್ಬಿದೆ.  ಮೊಬೈಲ್‌ ದೂರವಾಣಿಗಳಿಗಾಗಿ ಜಾಲತಾಣ ನಿರ್ಮಾಣದ ಉಪಕರಣಗಳು ಹೆಚ್ಚಾಗಿ ಲಭ್ಯವಾಗುತ್ತಿವೆ.


ಮೊಬೈಲ್‌ ಮೂಲಕ ಹಣ ಪಾವತಿ ಪರಿಕಲ್ಪನೆ ಮೊದಲ ಬಾರಿಗೆ ಫಿನ್ಲೆಂಡ್‌ನಲ್ಲಿ 1998ರಲ್ಲಿ ಪ್ರಯೋಗ ಮಾಡಲಾಯಿತು. SMS ಪಾವತಿಯ ಮೂಲಕ ಎಸ್ಪೂದಲ್ಲಿರುವ ಎರಡು ಕೋಕಾ-ಕೋಲಾ ವಿತರಣಾ ಯಂತ್ರಗಳು ಕಾರ್ಯನಿರ್ವಹಿಸಿದವು.  ಅಂತಿಮವಾಗಿ ಈ ಪರಿಕಲ್ಪನೆ ಎಲ್ಲೆಡೆ ಹಬ್ಬಿತು. 1999ರಲ್ಲಿ ಫಿಲಿಪೀನ್ಸ್‌ನಲ್ಲಿ, ಗ್ಲೋಬ್‌ ಮತ್ತು ಸ್ಮಾರ್ಟ್‌ ಎಂಬ ಮೊಬೈಲ್‌ ಸೇವಾ ಸಂಸ್ಥೆಯ ಸಹಯೋಗದೊಂದಿಗೆ, ಮೊದಲ ವಾಣಿಜ್ಯ ಮೊಬೈಲ್‌ ಹಣ ಪಾವತಿ ವ್ಯವಸ್ಥೆ ಆರಂಭಗೊಂಡಿತು.  ಇಂದು, [[ಮೊಬೈಲ್‌ ಬ್ಯಾಂಕಿಂಗ್‌]]ನಿಂದ ಹಿಡಿದು ಮೊಬೈಲ್‌ ಕ್ರೆಡಿಟ್‌ ಕಾರ್ಡ್‌ಗಳು, ಮೊಬೈಲ್‌ ಕಾಮರ್ಸ್‌ ಸೇವೆಯ ಮೂಲಕ ಹಣ ಪಾವತಿ ವ್ಯವಸ್ಥೆಯನ್ನು ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ, ಹಾಗು ಯುರೋಪ್‌ನ ಆಯ್ದ ಮಾರುಕಟ್ಟೆಗಳಲ್ಲಿ ವ್ಯಾಪಕವಾಗಿ ಮಾಡಲಾಗುತ್ತಿದೆ.  ಉದಾಹರಣೆಗೆ, ಫಿಲಿಪೀನ್ಸ್‌ನಲ್ಲಿ ವ್ಯಕ್ತಿಯೊಬ್ಬರ ಮೊಬೈಲ್‌ ಖಾತೆಗೆ ಇಡೀ ಪೇಚೆಕ್‌  ಪಾವತಿಯಾಗಿರುವುದು ಅಸಹಜವೇನಲ್ಲ.  ಕೀನ್ಯಾದಲ್ಲಿ ಒಂದು [[ಮೊಬೈಲ್‌ ಬ್ಯಾಂಕಿಂಗ್‌]] ಖಾತೆಯಿಂದ ಇನ್ನೊಂದಕ್ಕೆ ಹಣದ ವರ್ಗಾವಣೆಯ ಮಿತಿ ಒಂದು ದಶಲಕ್ಷ US ಡಾಲರ್‌ಗಳು!.  ಭಾರತದಲ್ಲಿ ಮೊಬೈಲ್‌ ಮೂಲಕ ಬಿಲ್‌ಗಳ ಹಣ ಪಾವತಿಗೆ 5% ರಿಯಾಯಿತಿ ಲಭಿಸುವುದು.  ಇಸ್ಟೊನಿಯಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಮೊಬೈಲ್‌ ದೂರವಾಣಿಗಳ ಮೂಲಕ ಹಣ ಪಾವತಿಸುವುದು ಜನಪ್ರಿಯ ಪದ್ದತಿಯಾಗಿದೆ.





=== ವಿದ್ಯುತ್‌ ಪೂರೈಕೆ ===
{{Refimprove|section|date=September 2009}}
[[ಚಿತ್ರ:Uganda mobile phone charging service.jpg|thumb|ಯುಗಾಂಡಾದಲ್ಲಿ ಮೊಬೈಲ್‌ ದೂರವಾಣಿ ಚಾರ್ಜಿಂಗ್‌ ಸೇವೆ]]


[[ಮೊಬೈಲ್‌ ದೂರವಾಣಿ]]ಗಳು ಸಾಮಾನ್ಯವಾಗಿ [[ವಿದ್ಯುಚ್ಛಕ್ತಿ ಮರುತುಂಬಬಹುದಾದ]] [[ವಿದ್ಯುತ್ಕೋಶ]]ಗಳಿಂದ ವಿದ್ಯುತ್ ಪಡೆಯುತ್ತವೆ.  ಹಲವಾರು ರೀತಿ ಮೊಬೈಲ್‌ ದೂರವಾಣಿ ಉಪಕರಣಗಳಿಗೆ ವಿದ್ಯುತ್‌ ತುಂಬಬಹುದು: [[USB]], ಒಯ್ಯಬಹುದಾದ ವಿದ್ಯುತ್ಕೋಶಗಳು, [[ವಿದ್ಯುನ್ನೆಲೆಗಳು (ಪವರ್ ಪಾಯಿಂಟ್‌)]] ([[ವಾಲ್‌ ವಾರ್ಟ್‌]] ಬಳಸಿ), [[ಸಿಗರೆಟ್‌ ಲೈಟರ್‌]]ಗಳು ([[ಅಡಾಪ್ಟರ್‌]] ಬಳಸಿ), ಅಥವಾ [[ಡೈನಮೊ]]ಗಳಿಂದ.


(contracted; show full)[[wa:Telefone axhlåve]]
[[war:Selpon]]
[[wuu:手机]]
[[yi:צעלפאן]]
[[zh:移动电话]]
[[zh-min-nan:Hêng-tōng tiān-oē]]
[[zh-yue:手提電話]]
[[zu:Umakhalekhukhwini]]