Difference between revisions 653933 and 653934 on knwiki

==ಮುನ್ನೋಟ==

[[ಡಯೋಡ್]]-[[ಟ್ರಾನ್ಸಿಸ್ಟರ್]] ತರ್ಕ(ಡಿ.ಟಿ.ಎಲ್) ಡಿಜಿಟಲ್ ಮಂಡಲಗಳ ಒಂದು ವರ್ಗ.ಈ ತರ್ಕವನ್ನು ಟ್ರಾನ್ಸಿಸ್ಟರ್-ಟ್ರಾನ್ಸಿಸ್ಟರ್ ತರ್ಕದ ಮೂಲ ಎಂದು ಪರಿಗಣಿಸಲಾಗಿದೆ. ತರ್ಕ ಗೇಟಿಂಗ್ ಕಾರ್ಯವನ್ನು (ಉದಾ AND) [[ಡಯೋಡ್]] ನೆಟ್ವರ್ಕ್ ಹಾಗು ವರ್ಧಿಸಿಕೊಳ್ಳುವ ಕಾರ್ಯವನ್ನು (ಆರ್.ಟಿ.ಎಲ್) ಮತ್ತು ಟಿಟಿಎಲ್ ತರ್ಕಗಳಿಗೆ ತದ್ವಿರುದ್ಧವಾಗಿ) [[ಟ್ರಾನ್ಸಿಸ್ಟರ್]] ನಡೆಸುವ ಕಾರಣ ಈ ತರ್ಕಕ್ಕೆ ಡಿ.ಟಿ.ಎಲ್ ಎಂದು ಕರೆಯಲಾಗುತ್ತದೆ.

==ಅನುಷ್ಠಾನ==
[[Image:DTL NAND Gate.svg|frame|ಎರಡು ಇನ್ಪುಟ್ ಹೊಂದಿರುವ ಮೂಲಭೂತ ಡಿ.ಟಿ.ಎಲ್ NAND ಗೇಟ್.]]

(contracted; show full)







==ಅಳಿಕೆಯಲ್ಲಿರುವ ವಿದ್ಯಾಸಂಸ್ಥೆಗಳು==
ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆ ಮತ್ತು ಮುದ್ದೇನಹಳ್ಳಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.ಅಳಿಕೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ವಿವರವನ್ನು ಇಲ್ಲಿ ನೀಡಲಾಗಿದೆ:
=ಶ್ರೀ ಸತ್ಯಸಾಯಿ ಲೋಕ ಸೇವಾ ಪದವಿ ಪೂರ್ವ ಕಾಲೇಜು,ಸತ್ಯಸಾಯಿ ವಿಹಾರ=
ಪದವಿ ಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಖ್ಯಾತಿಯನ್ನು ಈ ಕಾಲೇಜು ಹೊಂದಿದೆ.ಕರ್ನಾಟಕದ ಎಲ್ಲಾ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಶಿಕ್ಷಣಕ್ಕಾಗಿ ಬರುತ್ತಾರೆ.ಅವರಿಗೆಲ್ಲಾ ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಾಗುತ್ತದೆ.ಇವರಲ್ಲದೆ ಸುತ್ತಮುತ್ತಲಿನ ಹಳ್ಳಿಯ ಮಕ್ಕಳು ಕೂಡ ಇಲ್ಲಿಗೆ ಬಂದು ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಾರೆ.
ಪ್ರತಿ ವರ್ಷ ನಡೆಯುವ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆಯಲ್ಲಿ ಇಲ್ಲಿಯ ಹೆಚ್ಚಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಗುವುದು ಸಾಮಾನ್ಯ.ಇದಲ್ಲದೆ ಪ್ರತಿ ವರ್ಷ ನಡೆಯುವ ಸಿ.ಇ.ಟಿ ಪರೀಕ್ಷೆಯಲ್ಲೂ ಇಲ್ಲಿನ ವಿದ್ಯಾರ್ಥಿಗಳು ಮೊದಲಿಗರಾಗಿರುತ್ತಾರೆ.ಸರ್ಕಾರದಿಂದ ಅನುದಾನವನ್ನು ಪಡೆಯುವ ಈ ಕಾಲೇಜು ಅತ್ಯುತ್ತಮ ಪಾಠ ಪ್ರವಚನಗಳಿಗಲ್ಲದೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸನಕ್ಕೆ ಹೆಸರುವಾಸಿ.ಸತ್ಯಸಾಯಿ ವಿಹಾರದ ಪ್ರಶಾಂತ ವಾತವರಣದಲ್ಲಿ ಈ ಕಾಲೇಜಿದ್ದು,ವಿಶಾಲ ಕ್ರೀಡಾಂಗಣಗಳನ್ನೂ,ಅತ್ಯುತ್ತಮ ಗ್ರಂಥಾಲಯವನ್ನೂ ಹೊಂದಿದೆ.ಇವಲ್ಲದೆ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ,ವೇದ ಪಠಣ ಮುಂತಾದ ತರಬೇತಿಗಳನ್ನು ನೀಡಲಾಗುತ್ತದೆ.ಕಾಲೇಜಿಗಾಗಿ ಸುಸಜ್ಜಿತ ಕಟ್ಟಡ ಹಾಗೂ ಪ್ರಾರ್ಥನಾ ಮಂದಿರ ಸತ್ಯಸಾಯಿ ವಿಹಾರದಲ್ಲಿ ಪ್ರಸ್ತುತ ಮೇಲೇರುತಿದ್ದು,ಬರುವ ಶೈಕ್ಷಣಿಕ ವರ್ಶದಲ್ಲಿ ವಿದ್ಯಾರ್ಥಿಗಳ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.

==ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಕೇಂದ್ರ,ಸತ್ಯಸಾಯಿ ವಿಹಾರ==
ಸಂಪೂರ್ಣ ವಸತಿ ಶಾಲೆಯಾಗಿರುವ ವಿದ್ಯಾಕೇಂದ್ರ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯಿಂದ ಗುರುತಿಸಲ್ಪಟ್ಟಿದೆ.ಸಿ.ಬಿ.ಯ.ಸ್ಸಿ ಮಾದರಿಯಲ್ಲಿ ಶಿಕ್ಷಣ ನೀಡುವ ಕರ್ನಾಟಕದ ವಸತಿ ಶಾಲೆಗಳಲ್ಲಿ ಅತಿ ಬೇಡಿಕೆಯಿರುವ ಶಾಲೆ ವಿದ್ಯಾಕೇಂದ್ರ.ಇಲ್ಲಿಯ ಮಕ್ಕಳು ತಮ್ಮ ಪ್ರತಿಭೆಯಿಂದ ಎಂತವರನ್ನಾದರೂ ಸೆಳೆಯುತ್ತಾರೆ.ಆಟ,ಪಾಠ ಹಾಗೂ ಬೇರೆ ಯಾವುದೇ ಸಾಂಸ್ಕೃತಿಕ ಚಟುವಟಿಕೆಯಿರಲಿ,ಇಲ್ಲಿಯ ಮಕ್ಕಳು ಅದರಲ್ಲಿ ಪಾಲ್ಗೊಳ್ಳುತ್ತಾರೆಂದೇ ಅರ್ಥ.ಆರನೇ ತರಗತಿಯಿಂದ ಹತ್ತನೆಯ ತರಗತಿಯವರೆಗಿನ ವಿದ್ಯಾರ್ಥಿಗಳು ಇಲ್ಲಿದ್ದು,ಸುಮಾರು ೪೦೦ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಇದ್ದುಕೊಂಡು ಅಭ್ಯಾಸ ಮಾಡುತ್ತಿದ್ದಾರೆ.ಸಂಪೂರ್ಣ ವಸತಿ ಶಾಲೆಯಾದ್ದರಿಂದ ಎಲ್ಲಾ ಮಕ್ಕಳೂ ಹಾಸ್ಟೆಲಿನಲ್ಲಿಯೇ ಇದ್ದು ಓದುತ್ತಿದ್ದಾರೆ.ಈ ಶಾಲೆ ಪ್ರಾರಂಭವಾದಗಿನಿಂದಲೂ ಇಲ್ಲಿಯವರೆಗೂ ಹತ್ತನೆಯ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶವನ್ನು ದಾಖಲಿಸುತ್ತಾ ಬಂದಿರುವುದು ಒಂದು ದಾಖಲೆ.ಇಲ್ಲಿ ವ್ಯಾಸಾಂಗವನ್ನು ಮಾಡುವ ಹೆಚ್ಚಿನ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಾರೆ.

==ಶ್ರೀ ಸತ್ಯಸಾಯಿ ಲೋಕ ಸೇವಾ ಹೈಸ್ಕೂಲ್(ಬಾಲಕುಟೀರ),ಶಾರದ ವಿಹಾರ==
ರಾಜ್ಯ ಮಾದರಿಯಲ್ಲಿ(ಕರ್ನಾಟಕ ಬೋರ್ಡ್) ಶಿಕ್ಷಣವನ್ನು ನೀಡುವ ಹೈಸ್ಕೂಲ್ ಇದಾಗಿದ್ದು,ಬಾಲಕರಿಗೆ ಹಾಗು ಬಾಲಕಿಯರಿಗಾಗಿ ಪ್ರತ್ಯೇಕ ನಿವೇಶನಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ಬಾಲಕರ ಶಾಲೆ ಶಾರದಾ ವಿಹಾರದಲ್ಲಿದ್ದರೆ,ಬಾಲಕಿಯರ ಶಾಲೆ ವಾಣಿ ವಿಹಾರದಲ್ಲಿದೆ.ಬಾಲಕರಿಗೆ ವಸತಿ ವ್ಯವಸ್ಥೆಯಿದ್ದು,ಹಾಸ್ಟೆಲನ್ನು ಬಾಲಕುಟೀರ ಎಂದು ಕರೆಯಲಾಗುತ್ತದೆ.ಲೋಕ ಸೇವಾ ವೃಂದ ಪ್ರಾರಂಭವಾದ ದಿನಗಳಿಂದಲೂ ಈ ಬಾಲಕುಟೀರ ಕಾರ್ಯ ನಿರ್ವಹಿಸುತ್ತಿದೆ.ಹಾಸ್ಟೆಲ್ ವಿದ್ಯಾರ್ಥಿಗಳಲ್ಲದೆ ಸ್ಥಳೀಯ ವಿದ್ಯಾರ್ಥಿಗಳು ಸಹ ಇಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ.ಬಾಲಕರಿಗೆ ಕನ್ನಡ ಹಾಗು ಇಂಗ್ಲೀಷ್ ಎರಡೂ ಮಾಧ್ಯಮಗಳ ಆಯ್ಕೆಯಿದೆ.ಆದರೆ ಬಾಲಕಿಯರಿಗೆ ಕನ್ನಡ ಮಾಧ್ಯಮದಲ್ಲಿ ಮಾತ್ರ ಬೋಧಿಸಲಾಗುತ್ತದೆ.ಶಿಕ್ಷಣದ ಜೊತೆ ಸಹಪಠ್ಯೇತರ ವಿಷಯಗಳಿಗೂ ಇಲ್ಲಿ ಆದ್ಯತೆಯನ್ನು ನೀಡಲಾಗುತ್ತದೆ.ಶಿಸ್ತು,ಉತ್ತಮ ಸಂಸ್ಕೃತಿ ಮತ್ತು ಅತ್ಯುತ್ತಮ ಫಲಿತಾಂಶಕ್ಕೆ ಈ ಶಾಲೆ ರಾಜ್ಯದಲ್ಲೇ ಹೆಸರುವಾಸಿ.

==ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರಾಥಮಿಕ ಶಾಲೆ,ವಾಣಿ ವಿಹಾರ==
ಈ ಶಾಲೆಯಲ್ಲಿ ಒಂದನೆಯ ತರಗತಿಯಿಂದ ಏಳನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ.ಹಾಸ್ಟೆಲ್ ವ್ಯವಸ್ಥೆಯಿಲ್ಲವಾದ ಕಾರಣ ಸುತ್ತಮುತ್ತಲಿನ ಮಕ್ಕಳಿಗೆ ಮಾತ್ರ ಇಲ್ಲಿ ಪ್ರವೇಶಾವಕಾಶವಿದೆ.ಉತ್ತಮ ಶಿಕ್ಷಣ,ಸಹ ಪಠ್ಯೇತರ ತರಬೇತಿ ಹಾಗೂ ಶಿಸ್ತಿಗೆ ಈ ಶಾಲೆ ಸುತ್ತಮುತ್ತಲಿನ ಪರಿಸರದಲ್ಲಿ ಹೆಸರುವಾಸಿ.

==ಬಾಪೂಜಿ ಬಾಲನಿಕೇತನ,ಸತ್ಯಸಾಯಿ ವಿಹಾರ==
ಮಹಾತ್ಮ ಗಾಂಧಿಯವರ ಕಟ್ಟಾ ಅನುಯಾಯಿಯಾಗಿದ್ದ ಅಣ್ಣನವರು,ಅವರ ನೆನಪಿನಲ್ಲಿ ಸ್ಥಾಪಿಸಿದ ಸಂಸ್ಥೆಯೇ ಬಾಪೂಜಿ ಬಾಲನಿಕೇತನ.ಇದೊಂದು ಅನಥಾಲಯವಾಗಿದ್ದು,ಅನಾಥ ಅಥವಾ ಶಿಕ್ಷಣದ ವೆಚ್ಚವನ್ನು ಭರಿಸಲಾಗದ ಬಡ ಮಕ್ಕಳು ಇಲ್ಲಿ ವಾಸವಿದ್ದು ಅಳಿಕೆಯ ಉಳಿದ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.ಇವರ ಊಟ,ವಸತಿ ಉಚಿತವಾಗಿದ್ದು,ಅದರ ಖರ್ಚನ್ನು ಸಂಸ್ಥೆ ದಾನಿಗಳ ನೆರವಿನಿಂದ ಭರಿಸುತ್ತದೆ.ಪಿ.ಯು.ಸಿ ವರೆಗಿನ ಶಿಕ್ಷಣಕ್ಕೆ ಅಳಿಕೆಯಲ್ಲಿ ಅವಕಾಶವಿದ್ದು,ನಂತರ ಅವರ ಜೀವನೋಪಾಯಕ್ಕೆ ಸಂಸ್ಥೆ ವ್ಯವಸ್ಥೆ ಮಾಡುತ್ತದೆ.ಓದುವ ಅಭಿಲಾಶೆಯಿದ್ದರೆ,ಹೊರಗಿನ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವನ್ನು ಕೊಡಿಸಿ ಸಂಸ್ಥೆಯೇ ಓದಿಸುತ್ತದೆ.ಹೀಗೆ ಅನೇಕ ಬಡ ಮಕ್ಕಳು ಅಳಿಕೆಯಲ್ಲಿ ಆಶ್ರಯ ಪಡೆದು ಉತ್ತಮ ಶಿಕ್ಷಣದೊಂದಿಗೆ ಬೆಳೆಯುತ್ತಿದ್ದಾರೆ.

==ಶ್ರೀ ಸತ್ಯಸಾಯಿ ಲೋಕ ಸೇವಾ ಸುಪೀರಿಯರ್ ಆಸ್ಪತ್ರೆ,ಸತ್ಯಸಾಯಿ ವಿಹಾರ==
ಶ್ರೀ ಸತ್ಯಸಾಯಿ ಬಾಬರವರು ಉಚಿತ ಶಿಕ್ಷಣ,ಆರೋಗ್ಯ ಸೌಲಭ್ಯ ಹಾಗೂ ನೀರಿನ ವ್ಯವಸ್ಥೆಯನ್ನು ಅತ್ಯಂತ ಬಡ ಜನರಿಗೆ ಕಲ್ಪಿಸಿಕೊಟ್ಟ ಮಹಾನ್ ಸಂತ.ಬಡವರಿಗೆ ಶಿಕ್ಷಣ,ಆರೋಗ್ಯ ಹಾಗೂ ನೀರು ಉಚಿತವಾಗಿ ಸಿಗಬೇಕೆನ್ನುವುದು ಅವರ ಅಭಿಲಾಷೆಯಾಗಿತ್ತು.ಅಣ್ಣನವರು ಕೂಡ ಆಳಿಕೆಯಲ್ಲಿ ಒಂದು ಚಿಕ್ಕದಾದ ಧರ್ಮಾಸ್ಪತ್ರೆಯನ್ನು ತೆರೆಯಬೇಕೆಂಬ ಕನಸು ಕಂಡಿದ್ದರು.ಅವರ ಕನಸುಗಳನ್ನು ಈಡೇರಿಸುತ್ತೇನೆಂದು ಅವರ ಕೊನೆಯ ದಿನಗಳಲ್ಲಿ ಮಾತು ಕೊಟ್ಟಿದ್ದ ಬಾಬ ಅವರ ವಚನಕ್ಕೆ ತಪ್ಪಲಿಲ್ಲ.ಅಣ್ಣನವರ ಕನಸಿನಂತೆ ಅಳಿಕೆಯಲ್ಲಿ ಒಂದು ಸುಪೀರಿಯರ್ ಆಸ್ಪತ್ರ್ಯನ್ನು ನಿರ್ಮಿಸುತ್ತೇನೆಂದು ೨೦೦೧ನೆಯ ಇಸವಿಯಲ್ಲಿ ಅವರು ಅಳಿಕೆಗೆ ಭೇಟಿ ಕೊಟ್ಟಾಗ ಘೋಷಿಸಿದರು.ಅದರಂತೆ ಅಳಿಕೆಯಲ್ಲಿ ಸುಪೀರಿಯರ್ ಆಸ್ಪತ್ರೆಯೊಂದು ಮೇಲೆ ಬಂತು.ಸತ್ಯಸಾಯಿ ವಿಹಾರದ ಮಹಾದ್ವಾರ ಹೊಕ್ಕಂತೆಯೇ ಸ್ವಲ್ಪ ದೂರದಲ್ಲಿ ದೇವಸ್ಥಾನದಂತೆ ಕಾಣುವ ಕಟ್ಟಡದಲ್ಲಿಯೇ ಈ ಆಸ್ಪತ್ರೆ ಕಾರ್ಯನಿರ್ವಹಿಸುವುದು. 
ಈ ಆಸ್ಪತ್ರೆಯ ವಿಶೇಷತೆಯೇನೆಂದರೆ ಇಲ್ಲಿ ಬಿಲ್ ಕೌಂಟರ್ ಇಲ್ಲ.ಬಡವ ಶ್ರೀಮಂತರೆಂಬ ಭೇದವಿಲ್ಲದೆ ತಪಾಸಣೆಯಿಂದ ಹಿಡಿದು ಔಷಧದವರೆಗೂ ಎಲ್ಲವೂ ಉಚಿತ.ಅಂದಿನಿಂದ ಇಂದಿನವರೆಗೂ ಈ ಆಸ್ಪತ್ರೆಯಲ್ಲಿ ಅದೆಷ್ಟೋ ಜನ ಉಚಿತವಾಗಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿದ್ದಾರೆ.ಇಲ್ಲಿಯವರೆಗೂ ಹೊರರೋಗಿ ವಿಭಾಗ ಮಾತ್ರ ಕಾರ್ಯನಿರ್ವಹಿಸುತ್ತಿದ್ದು,ಇತ್ತೀಚಿಗೆ ಚಿಕ್ಕ ಒಳರೋಗಿ ವಿಭಾಗವೂ ಲೋಕಾರ್ಪಣೆಗೊಂಡಿತು.ಅದರೊಂದಿಗೆ ಒಂದು ಚಿಕ್ಕ ಆಪರೇಷನ್ ಕೊಠಡಿಯನ್ನೂ ಉದ್ಘಾಟಿಸಲಾಯಿತು.ಹೀಹೆ ಮೇಲ್ದರ್ಜೆಗೊಂಡು ಇನ್ನಷ್ಟು ರೋಗಿಗಳಿಗೆ ನೆರವಾಗುವ ಸಲುವಾಗಿ ಸಿದ್ದವಾಗಿ ನಿಂತಿದೆ.