Difference between revisions 662933 and 664004 on knwiki

ಅಡಿಕೆ ಮತ್ತು ಆಯುರ್ವೇದ
ಆಯುರ್ವೇದ ವೈದ್ಯಕದಲ್ಲಿ ಕಾಸರಕ, ಉಮ್ಮತ ಕರವೀರ, ಅರ್ಕ, ಜಾಪಾಲ, ಕಳ್ಳಿ , ಆಫೀಮು ಮೊದಲಾದ ತೀಕ್ಣ ಸಸ್ಯ ದ್ರವ್ಯಗಳನ್ನು ಶುದ್ದೀಕರಿಸಿ ಔಷಧಗಳಿಗಾಗಿ ಯಾವುದೇ ದುಃಷ್ಪರಿಣಾಮಗಳಾಗದಂತೆ ಬಳಸುತ್ತಾರೆ. ಆದರೆ ಅಡಿಕೆಯು ಅತ್ಯಂತ ತೀಕ್ಷ್ಣ ವರ್ಗಕ್ಕೆ ಸೇರದೆ 'ಸುಗಂಧ ಪಂಚಕ'ಗಳಲ್ಲಿ ಒಂದಾದ ರಸಾಯನ ಫಲವಾಗಿದ್ದು ಅದರಲ್ಲಿರುವ  ಸೊಕ್ಕು ಹಾಗು ಚೊಗರು ಗುಣ (ಟ್ಯಾನಿನ್) ಅದರ ಪರೋಕ್ಷ ಗುಣಗಳೇ ಆಗಿವೆ. ಅವೆರಡೂ ಇಲ್ಲದೇ ಹೋಗಿದ್ದರೆ ಅಡಿಕೆಯು ಇತರ ಅನೇಕ ಸಸ್ಯ ಬೀಜಗಳಂತೆ ನಿರುಪಯೋಗಿ ಆಗಿರುತ್ತದೆ. ಅಡಿಕೆಯ ಔಷಧಿಯ ಗುಣಗಳಿಗಾಗಿ ಅದನ್ನು ಆಹಾರ ನಂತರ ಹಾಗೂ ಪೂರ್ವದ ನಿತ್ಯ ಸೇವನ ಯೋಗ್ಯವಾಗಿ ತಾಂಬೂಲದೊಂದಿಗೆ ಸೇವಿಸಲು ವಿಧಿಸಿದ್ದಾರೆ (contracted; show full)ತ್ರೀಯರ ರಕ್ತರ್ಶಸ್ಸಿಗೂ 'ಪೂಗಪಾಕ'ಲೇಹದ ಸೇವನೆಯು  ಹೇಳಲ್ಪಟ್ಟಿದೆ. ಭೈಷಜ ರತ್ನಾವಳಿಯಲ್ಲಿ 'ಪೂಗಖಂಡ'ದ ಉಲ್ಲೇಖವಿದೆ. ಗದನಿಗ್ರಹಕದಲ್ಲಿ ಹೇಳಲ್ಪಟ್ಟ 'ಬೃಹನ್ಮೂಲಾಸ'ವು ಕ್ಷಯರೋಗ, ದಮ್ಮು, ಆಮವಾತ, ಪಾಂಡುರೋಗ, ಪ್ಲೀಹ, ಉದರರೋಗ, ಕ್ರಿಮಿರೋಗ, ಗುಲ್ಮ, ಪ್ರಮೇಹ ರೋಗಗಳಿಗೆ ಹಿತಕಾರಿ. ಜಠರಾಗ್ನಿವರ್ಧಕ 'ಲೋದ್ರಾಸವ'ವೂ ವಿವಿಧ ಪ್ರಮೇಹಗಳಿಗೂ ಗುಣಕಾರಿಯಾಗಿದ್ದು ಇವುಗಳಲ್ಲಿ ನಿಶ್ಚಿತ ಪ್ರಮಾಣದಲ್ಲಿ  ಅಡಿಕೆ ಸೇರಿದೆ. ಅಡಿಕೆಯು  ಉದ್ವೇಗವುಂಟು ಮಾಡುತ್ತದೆಯಾದರೂ ಅದರಲ್ಲಿ ರಕ್ತದ ಒತ್ತಡ ಕಡಿಮೆ  ಮಾಡುವ ಗುಣವಿದೆ. ವೀಳ್ಯೆದೆಲೆ ಮತ್ತಿತರ ವಸ್ತುಗಳು ಸೇರಿದಾಗ ಶಾಮಕವಾಗಿ ವರ್ದಿಸುತ್ತದೆ.